ರಾಜ್ಯದಲ್ಲಿ 2019ರ ಅಂತ್ಯಕ್ಕೆ ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ನಿಟ್ಟಿನಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕರ್ನಾಟಕ ಸರ್ಕಾರವು ಸಹ ಇದೇ ನಿಟ್ಟಿನಲ್ಲಿ ಹಲವು ಹೊಸ ಯೋಜನೆಗಳೊಂದಿಗೆ ಸಾರಿಗೆ ವಲಯದಲ್ಲಿ ಮಹತ್ವದ ಬದಲಾವಣೆಗಳಿಗೆ ಹಸಿರು ನಿಶಾನೆ ತೋರಿದೆ.

ರಾಜ್ಯದಲ್ಲಿ 2019ರ ಅಂತ್ಯಕ್ಕೆ ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಹೌದು, ಕರ್ನಾಟಕ ಸರ್ಕಾರವು ಇ-ಸಂಚಾರವನ್ನು ಉತ್ತೇಜಿಸಲು ಈಗಾಗಲೇ ಕೆಲವು ಯೋಜನೆಗಳು ಜಾರಿಗೊಳಿಸಿದ್ದು, ವಿದ್ಯುತ್ ವಾಹನಗಳ ಖರೀದಿಗೆ ಸಬ್ಸಡಿ ಸೇರಿದಂತೆ ಅಗತ್ಯವಿರುವ ಕಡೆಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯುವ ಮೂಲಕ ಇವಿ ವಾಹನಗಳ ಖರೀದಿದಾರರಿಗೆ ಭರ್ಜರಿ ಆಫರ್ ನೀಡುತ್ತಿದೆ. ಜೊತೆಗೆ ರಾಜ್ಯ ಸರ್ಕಾರದ ಸಿಬ್ಬಂದಿ ಬಳಸುವ ಶೇಕಡಾ.50 ರಷ್ಟು ವಾಹನಗಳನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನಾಗಿ 2019ರ ಅಂತ್ಯದ ಒಳಗಾಗಿ ಪರಿವರ್ತಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲಾಗಿದೆ.

ರಾಜ್ಯದಲ್ಲಿ 2019ರ ಅಂತ್ಯಕ್ಕೆ ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಜೊತೆಗೆ 3 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಯೊಂದಿಗೆ ಸಾರ್ವಜನಿಕ ಸಾರಿಗೆ ವಲಯದಲ್ಲೂ ಭಾರೀ ಬದಲಾವಣೆ ತರಲಾಗುತ್ತಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಬೆಂಗಳೂರಿನ ರಸ್ತೆಗಳು ಎಲೆಕ್ಟ್ರಿಕ್ ಬಸ್‌ಗಳ ಮಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಬೆಂಗಳೂರಿನ ಜನತೆಯ ಜೀವಾಳವಾಗಿರುವ ಬಿಎಂಟಿಸಿ ಸಂಸ್ಥೆಯು ಹೊಸ ಬದಲಾವಣೆಗಳೊಂದಿಗೆ ವಿಶ್ವದರ್ಜೆ ಸೇವೆಗಳನ್ನು ನೀಡಲು ಸಜ್ಜಾಗುತ್ತಿದ್ದು, ಮಾಲಿನ್ಯ ಉತ್ಪಾದನೆಯಲ್ಲಿ ದೊಡ್ಡ ಪಾಲು ಹೊಂದಿರುವ ಸಾಂಪ್ರಾದಾಯಿಕ ಡೀಸೆಲ್ ಬಸ್‌ಗಳಿಗೆ ಗುಡ್ ಬೈ ಹೇಳುವುದು ಖಚಿತವಾಗಿದೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಈ ಸಂಬಂಧ ಕರ್ನಾಟಕ ಸರ್ಕಾರವು ಇ-ವಾಹನ ಉತ್ತೇಜನ ನೀತಿಯನ್ನು ಸಹ ಜಾರಿಗೊಳಿಸಿದ್ದು, ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಪ್ರಮಾಣವನ್ನು ಹೆಚ್ಚಳ ಮಾಡುವುದಕ್ಕಾಗಿ ಆಟೋ ಸಂಸ್ಥೆಗಳಿಗೆ ಭರ್ಜರಿ ಆಫರ್ ನೀಡುತ್ತಿದೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಕರ್ನಾಟಕದ ಯಾವುದೇ ಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕಗಳನ್ನು ತೆರೆಯುವ ಆಟೋ ಸಂಸ್ಥೆಗಳಿಗೆ ಇಂತಿಷ್ಟು ವರ್ಷಗಳ ತನಕ ತೆರಿಗೆ ವಿನಾಯ್ತಿ ಮತ್ತು ಕಡಿಮೆ ಅವಧಿಯಲ್ಲಿ ಪೂರ್ಣಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಘೋಷಣೆ ಮಾಡಿದೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಬೆಂಗಳೂರಿನಲ್ಲಿ ನಡೆದ 'ಭವಿಷ್ಯದ ಸಂಚಾರ ಪ್ರದರ್ಶನ (ಎಫ್‍ಎಂಎಸ್) ಸಮ್ಮೇಳನ-2019' ಉದ್ಘಾಟಿಸಿ ಮಾತನಾಡಿದ ಮಧ್ಯಮ ಮತ್ತು ಭಾರೀ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರು, ಸಿಲಿಕಾನ್ ಬೆಂಗಳೂರು ದೇಶದ ಐಟಿ ರಾಜಧಾನಿಯಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲೂ ದೇಶದ ಗಮನಸೆಳೆಯಲಿದೆ ಎಂದಿದ್ದಾರೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಹಾಗೆಯೇ ವಿದ್ಯುತ್ ಚಾಲಿತ ಮತ್ತು ಸುಸ್ಥಿರ ಸಂಚಾರಕ್ಕಾಗಿ ಕರ್ನಾಟಕ ನೀತಿ ಚೌಕಟ್ಟು, ವಿದ್ಯುತ್ ವಾಹನಗಳು, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಬ್ಯಾಟರಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಇತರ ರಾಜ್ಯಗಳಿಗೆ ಮಾದರಿಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ದೇಶಾದ್ಯಂತ ಸದ್ಯಕ್ಕೆ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಸುಮಾರು ರೂ.2 ಲಕ್ಷ ಕೋಟಿ ಹೂಡಿಕೆಯಾಗಿದ್ದು, ಇದರಲ್ಲಿ ವಿಶ್ವದ ಮೂರು ಪ್ರಮುಖ ದೇಶಗಳ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ ಎಂದು ಹೇಳಿರುವ ಸಚಿವ ಕೆ.ಜೆ.ಜಾರ್ಜ್ ಅವರು ವಿದ್ಯುತ್ ಚಾಲಿತ ವಾಹನಗಳ ಉತ್ಪಾದಿಸುವ ಸಂಸ್ಥೆಗಳಿಗೆ ಸರ್ಕಾರದಿಂದ ಗರಿಷ್ಠ ಪ್ರೋತ್ಸಾಹ ನೀಡಲಿದೆ ಎಂದಿದ್ದಾರೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಇನ್ನು ಉತ್ತಮ ವಾತಾವರಣ ಹಾಗೂ ಉತ್ತಮ ಪರಿಸರ ನಿರ್ಮಾಣಕ್ಕೆ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಅತ್ಯಂತ ಮುಖ್ಯವಾಗಿದ್ದು, ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಕಾದ ಚಾರ್ಜಿಂಗ್ ಸ್ಟೆಷನ್ ನಿರ್ಮಾಣಕ್ಕೂ ಹೆಚ್ಚಿನ ಒತ್ತುನೀಡಲಾಗುತ್ತಿದೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಬೆಂಗಳೂರಿನಲ್ಲಿ ಪ್ರಸ್ತುತ ನಾಲ್ಕು ಕಡೆಗಳಲ್ಲಿ ಮಾತ್ರ ಸಾರ್ವಜನಿಕವಾಗಿ ಬಳಕೆ ಮಾಡಬಹುದಾದ ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ 1 ವರ್ಷಗಳ ಅವಧಿಯೊಳಗೆ ನಗರದ ವಿವಿಧಡೆ 150 ಹೊಸ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಇನ್ಮುಂದೆ ಅರ್ಪಾಟ್‌ಮೆಂಟ್‌ಗಳಿಗೆ ಹೊಸ ರೂಲ್ಸ್

ಹೌದು, ಇನ್ಮುಂದೆ ವಸತಿ ಸಮುಚ್ಚಯಗಳಲ್ಲಿ ಶೇ.10ರಷ್ಟು ಜಾಗವನ್ನು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ತೆರೆಯಲು ಮೀಸಲು ಇರಿಸಬೇಕೆಂಬ ಹೊಸ ನಿಯಮಗಳನ್ನು ಜಾರಿ ಮಾಡಲು ಚಿಂತಿಸಲಾಗಿದ್ದು, ಈ ಕುರಿತಂತೆ ಸದ್ಯದಲ್ಲೇ ಅಧಿಕೃತ ನಿಯಮ ಜಾರಿಯಾಗಲಿದೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ವಸತಿ ಸಮುಚ್ಚಯಗಳಲ್ಲಿ ಶೇ.10ರಷ್ಟು ಜಾಗ ಮೀಸಲು ಇರಿಸುವ ಕುರಿತಂತೆ ಮಾತನಾಡಿರುವ ಕೈಗಾರಿಕೆ ಅಭಿವೃದ್ದಿ ನಿಗಮದ ಆಯುಕ್ತರಾದ ದರ್ಪಣ್ ಜೈನ್ ಅವರು, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಕೆಲವು ಕಠಿಣ ನಿರ್ಧಾರಗಳು ಅಗತ್ಯ ಎಂದಿದ್ದಾರೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ಇದೇ ವೇಳೆ ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಶಿಖಾ ಅವರು, ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಚೆನ್ನೈ ನಡುವೆಯು ಅಗತ್ಯ ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡುವ ಯೋಜನೆಯಿದೆ ಎಂದಿದ್ದಾರೆ.

ಸರ್ಕಾರಿ ವಲಯದಲ್ಲಿ ಶೇ.50ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಪಕ್ಕಾ..!

ರಾಜ್ಯ ಸರ್ಕಾರದ ಹೊಸ ಯೋಜನೆಯನ್ನು ಸ್ವಾಗತಿಸಿರುವ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳಾದ ಮಹೀಂದ್ರಾ ಎಲೆಕ್ಟ್ರಿಕ್, ಎಥೆರ್ ಎರ್ನಜಿ, ಇ-ಟ್ರಿಯೊ, ಸನ್ ಮೊಬಿಲಿಟಿ, ಮಾರುತಿ ಸುಜುಕಿ, ಅಶೋಕ್ ಲೇಲ್ಯಾಂಡ್ ಮತ್ತು ಟೊಯೊಟಾ ಸಂಸ್ಥೆಗಳು ಕರ್ನಾಟಕ ಸರ್ಕಾರದೊಂದಿಗೆ ಕೈ ಜೋಡಿಸಿದ್ದು, ಮುಂದಿನ 2 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 31 ಸಾವಿರ ಕೋಟಿ ಹೂಡಿಕೆ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿವೆ.

Most Read Articles

Kannada
English summary
50 Per cent Of Government Run Vehicles In Bangalore Will Be Electric By End Of 2019: Karnataka Minister George.
Story first published: Friday, March 1, 2019, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more