ಆಸ್ಟನ್ ಮಾರ್ಟಿನ್ ಕಾರು ಚಲಾಯಿಸಿದ ಜೇಮ್ಸ್ ಬಾಂಡ್

ಬಾಂಡ್ 25 ಚಿತ್ರದ ನಿರ್ಮಾಪಕರಾದ ಇಯಾನ್ ಪ್ರೊಡಕ್ಷನ್ಸ್ ಹಾಗೂ ಮೆಟ್ರೋ ಗೋಲ್ಡ್ ವಿನ್ ಮೇಯರ್, ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿದ್ದರು. ಈ ವೀಡಿಯೊದಲ್ಲಿ ಬ್ರಿಟಿಷ್ ನಟ ಡೇನಿಯಲ್ ಕ್ರೇಗ್, ದೃಶ್ಯವೊಂದರಲ್ಲಿ ನಟಿಸುವ ಮುನ್ನ ಆಸ್ಟನ್ ಮಾರ್ಟಿನ್ ಕಾರ್ ಅನ್ನು ಚಲಾಯಿಸಿಕೊಂಡು ಬಂದು, ಕಾರಿನಿಂದ ಇಳಿದು ಹೋಗುತ್ತಿರುವುದನ್ನು ಕಾಣಬಹುದು. ಡೇನಿಯಲ್ ಕ್ರೇಗ್ ಚಾಲನೆ ಮಾಡಿದ ಕಾರು ಆಸ್ಟನ್ ಮಾರ್ಟಿನ್ ಸೀರಿಸ್2 ವಿ8 ವಾಂಟೇಜ್ ಆಗಿತ್ತು.

ಆಸ್ಟನ್ ಮಾರ್ಟಿನ್ ಕಾರು ಚಲಾಯಿಸಿದ ಜೇಮ್ಸ್ ಬಾಂಡ್

ವೀಡಿಯೊದಲ್ಲಿ ಕಾರಿನ ಹಿಂಭಾಗದ ಭಾಗವನ್ನು ಮಾತ್ರ ತೋರಿಸಲಾಗಿದೆ. ಆದರೆ ಈ ಚಿತ್ರದ ಪ್ರಚಾರಕ್ಕಾಗಿ ಬಳಸಿರುವ ಫೋಟೋಗಳು, ಜೇಮ್ಸ್ ಬಾಂಡ್ ಪಾತ್ರದಲ್ಲಿರುವ ಡೇನಿಯಲ್ ಕ್ರೇಗ್ ಕಾರಿನ ಮುಂಭಾಗದಲ್ಲಿರುವ ಚಿತ್ರಗಳನ್ನು ಬಹಿರಂಗಪಡಿಸಿವೆ. ಜೇಮ್ಸ್ ಬಾಂಡ್ ಅವರ ಅಧಿಕೃತ ಟ್ವಿಟರ್‍ ಖಾತೆಯಲ್ಲಿ ಡೇನಿಯಲ್ ಕ್ರೇಗ್ ಆಸ್ಟನ್ ಮಾರ್ಟಿನ್ ವಿ8 ಕಾರ್ ಅನ್ನು ಚಾಲನೆ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿಲಾಗಿದೆ. ವೀಡಿಯೊವನ್ನು @ಡೇನಿಯಲ್ ಕ್ರೇಗ್, #ಬಾಂಡ್ 25 ಹಾಗೂ @ಆಸ್ಟನ್‍‍ಮಾರ್ಟಿನ್ ವಿ8 ಎಂದು ಟ್ಯಾಗ್ ಮಾಡಲಾಗಿದೆ.

ಆಸ್ಟನ್ ಮಾರ್ಟಿನ್ ಕಾರು ಚಲಾಯಿಸಿದ ಜೇಮ್ಸ್ ಬಾಂಡ್

ಡೇನಿಯಲ್ ಕ್ರೇಗ್ ಆಸ್ಟನ್ ಮಾರ್ಟಿನ್ ಮುಂದೆ ನಡೆದು ಕೊಂಡು ಹೋಗುತ್ತಿರುವ ಮತ್ತೊಂದು ಚಿತ್ರವನ್ನು ಶೇರ್ ಮಾಡಲಾಗಿದ್ದು, ಆ ಚಿತ್ರಕ್ಕೆ 007 ಸ್ಟಾರ್ ಡೇನಿಯಲ್ ಕ್ರೇಗ್, ನಿರ್ದೇಶಕ ಕ್ಯಾರಿ ಫುಕುನಾಗಾ ಹಾಗೂ # ಬಾಂಡ್ 25 ಸಿಬ್ಬಂದಿ ಇಂದು ಸೂರ್ಯನ ಬೆಳಕಿನಲ್ಲಿ ಹೊರಟಿದ್ದು, ವೈಟ್‍‍ಹಾಲ್ ಸೇರಿದಂತೆ ಲಂಡನ್ನಿನ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಯಿತು. ಅಲ್ಲಿ ಡೇನಿಯಲ್ ಕ್ರೇಗ್ ಕ್ಲಾಸಿಕ್ @ಆಸ್ಟನ್ ಮಾರ್ಟಿನ್ ವಿ8 ಚಲಾಯಿಸುವ ದೃಶ್ಯವನ್ನು ಮೊದಲ ಬಾರಿಗೆ ಬಾಂಡ್ ಸಿನಿಮಾದಲ್ಲಿ ದಿ ಲಿವಿಂಗ್ ಡೇಲೈಟ್ಸ್‌ನಲ್ಲಿ ಚಿತ್ರಿಕರಿಸಲಾಯಿತು ಎಂಬ ಶೀರ್ಷಿಕೆ ನೀಡಲಾಗಿದೆ.

ಆಸ್ಟನ್ ಮಾರ್ಟಿನ್ ಕಾರು ಚಲಾಯಿಸಿದ ಜೇಮ್ಸ್ ಬಾಂಡ್

ಬಾಂಡ್ 25 ಸಿನಿಮಾದಲ್ಲಿರುವ ಆಸ್ಟನ್ ಮಾರ್ಟಿನ್ ಕಾರು, ಸೀರಿಸ್2 ವಿ8ನ 3 ಮಾದರಿಗಳ ಪೈಕಿ ಒಂದಾಗಿದೆ. ಆಸ್ಟನ್ ಮಾರ್ಟಿನ್ ಡಿಬಿ5 ಹಾಗೂ ಇತ್ತೀಚೆಗೆ ಅನಾವರಣಗೊಂಡ ಆಸ್ಟನ್ ಮಾರ್ಟಿನ್ ವಲ್ಹಲ್ಲಾ ಉಳಿದ ಎರಡು ಮಾದರಿಗಳಾಗಿವೆ. ಸಂಪೂರ್ಣವಾಗಿ ಕೈಯಿಂದ ನಿರ್ಮಿಸಲಾದ ಆಸ್ಟನ್ ಮಾರ್ಟಿನ್ ವಿ8 ನಿರ್ಮಿಸಲು 1,200 ಗಂಟೆಗಳಷ್ಟು ಸಮಯವನ್ನು ತೆಗೆದುಕೊಳ್ಳಲಾಗಿದೆ. ಮೂಲ ಕಾರು 5.3 ಲೀಟರ್ ವಿ8 ಎಂಜಿನ್ ಹೊಂದಿದ್ದು, 390 ಬಿಹೆಚ್‌ಪಿ ಪವರ್ ಉತ್ಪಾದಿಸುವಂತೆ ಟ್ಯೂನ್ ಮಾಡಲಾಗಿದೆ.

ಆಸ್ಟನ್ ಮಾರ್ಟಿನ್ ಕಾರು ಚಲಾಯಿಸಿದ ಜೇಮ್ಸ್ ಬಾಂಡ್

1986ರಲ್ಲಿ ಆಸ್ಟನ್ ಮಾರ್ಟಿನ್ 402 ಬಿ‍‍ಹೆಚ್‍‍ಪಿ ಉತ್ಪಾದಿಸುವ ಹೆಚ್ಚುವರಿ ಆಡ್-ಆನ್ ಪ್ಯಾಕ್ ಅನ್ನು ಪರಿಚಯಿಸಿತ್ತು. ಬಾಂಡ್ 25 ಚಿತ್ರವನ್ನು 2020ರ ಏಪ್ರಿಲ್ 8 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಚಿತ್ರದಲ್ಲಿ ಜೇಮ್ಸ್ ಬಾಂಡ್ ಪಾತ್ರದಲ್ಲಿ ಡೇನಿಯಲ್ ಕ್ರೇಗ್, ಖಳ ನಾಯಕನಾಗಿ ರಾಮಿ ಮಾಲಿಕ್, ಎಂ ಆಗಿ ರಾಲ್ಫ್ ಫಿಯೆನ್ನೆಸ್, ಈವ್ ಮನಿಪೆನ್ನಿಯಾಗಿ ನವೋಮಿ ಹ್ಯಾರಿಸ್ ಹಾಗೂ ಕ್ಯೂ ಪಾತ್ರದಲ್ಲಿ ಬೆನ್ ವಿಶಾವ್‍‍ರವರು ನಟಿಸಿದ್ದಾರೆ.

ಸೀರಿಸ್2 ವಿ8 ವಾಂಟೇಜ್, ಆಸ್ಟನ್ ಮಾರ್ಟಿನ್ ನಿರ್ಮಿಸಿದ ಸಂಪೂರ್ಣ ಕ್ಲಾಸಿಕ್ ಕಾರ್ ಆಗಿದೆ. 1987ರ ಬ್ಲಾಕ್ ಬಸ್ಟರ್ ಚಿತ್ರ ದಿ ಲಿವಿಂಗ್ ಡೇಲೈಟ್ಸ್ ನಲ್ಲಿ ಜೇಮ್ಸ್ ಬಾಂಡ್ ಆಗಿ ನಟಿಸಿದ್ದ ತಿಮೋತಿ ಡಾಲ್ಟನ್‍‍ರವರಿಂದ ಈ ಕಾರು ಜನಪ್ರಿಯವಾಗಿತ್ತು.

ಆಸ್ಟನ್ ಮಾರ್ಟಿನ್ ಕಾರು ಚಲಾಯಿಸಿದ ಜೇಮ್ಸ್ ಬಾಂಡ್

ಈ ವಿಂಟೇಜ್ ಕಾರ್ ಅನ್ನು ಕೆಲವು ದಿನಗಳವರೆಗೆ ಚಲಾಯಿಸಬಹುದೆಂದು ನಾವು ಬಯಸುತ್ತೇವೆ. ಬಾಂಡ್ 25 ಚಿತ್ರವು ಆಸ್ಟನ್ ಮಾರ್ಟಿನ್ ಸೀರಿಸ್2 ವಿ8 ವಾಂಟೇಜ್‌ ಕಾರಿಗೆ ಸಾಕಷ್ಟು ನ್ಯಾಯ ಒದಗಿಸುತ್ತದೆ ಎಂದು ನಾವು ಭಾವಿಸುತ್ತೇವೆ.

Most Read Articles

Kannada
English summary
James Bond Drives A Classic Aston Martin In Bond 25 — A Tribute To The Living Daylights - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X