ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ಭಾರತದ ಆಟೊ ಮೊಬೈಲ್ ಉದ್ಯಮವು ಕಳೆದ ಕೆಲವು ತಿಂಗಳುಗಳಿಂದ ನಿಧಾನಗತಿಯ ಪ್ರಗತಿಯನ್ನು ದಾಖಲಿಸಿ ನಷ್ಟವನ್ನು ಅನುಭವಿಸುತ್ತಿದೆ. 2018ರ ಕೊನೆಯ ಭಾಗದಲ್ಲಿ ಆರಂಭವಾದ ನಿಧಾನಗತಿಯ ಪ್ರಗತಿಯು ಇಂದಿನವರೆಗೂ ಮುಂದುವರೆದಿದೆ.

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ನಿಧಾನಗತಿಯ ಕಾರಣದಿಂದಾಗಿ ಆರ್ಥಿಕ ಹಿಂಜರಿತದ ಭೀತಿಯನ್ನು ಎದುರಿಸುತ್ತಿದೆ. ಇದು ನಿರುದ್ಯೋಗ ಸಮಸ್ಯೆಗೂ ಕಾರಣವಾಗುವ ಸಾಧ್ಯತೆಗಳಿವೆ. ಮಾರಾಟದಲ್ಲಿನ ಕುಸಿತದ ಪರಿಣಾಮವಾಗಿ ಬಹುತೇಕ ವಾಹನ ಕಂಪನಿಗಳು ಆರ್ಥಿಕ ನಷ್ಟವನ್ನು ಎದುರಿಸುತ್ತಿವೆ.

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ಅನೇಕ ಕಂಪನಿಗಳ ಮಾರಾಟ ಪ್ರಮಾಣ ಕುಸಿದಿರುವ ಕಾರಣ ಅನೇಕ ಡೀಲರ್‍‍ಗಳು ತಮ್ಮ ಡೀಲರ್‍‍ಶಿಪ್‍‍ಗಳನ್ನು ಮುಚ್ಚುತ್ತಿದ್ದಾರೆ. ವಾಹನ ತಯಾರಕ ಕಂಪನಿಗಳಿಂದಲೂ ಅನೇಕ ಜನರನ್ನು ತೆಗೆದುಹಾಕಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮತ್ತಷ್ಟು ಜನರನ್ನು ತೆಗೆದುಹಾಕಬಹುದೆಂಬ ಭೀತಿ ಎದುರಾಗಿದೆ.

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ಭಾರತದ ಆಟೋಮೊಬೈಲ್ ಉದ್ಯಮದಲ್ಲಿ ಎದುರಾಗಿರುವ ಪರಿಸ್ಥಿತಿಯು ಸಮಸ್ಯೆಯಾಗಿದೆ ಎಂದು ಹೇಳಿರುವ ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮಖ್ವಾಲ್ ಈ ಸಮಸ್ಯೆಯನ್ನು ಸುಲಭವಾಗಿ ಸರಿಪಡಿಸಬಹುದು ಎಂದು ಹೇಳಿದ್ದಾರೆ.

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ನಿನ್ನೆ ನಡೆದ ಆಟೋಮೋಟಿವ್ ಸಲಕರಣೆ ತಯಾರಕರ ಸಂಘದ (ಎಸಿಎಂಎ) ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅರ್ಜುನ್ ರಾಮ್ ಮಕ್ವಾಲ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂಸತ್ತಿನ ಅಧಿವೇಶನವನ್ನು 370ನೇ ವಿಧಿಯಂತಹ ದೊಡ್ಡ ಸಮಸ್ಯೆಯನ್ನೇ ಪರಿಹರಿಸಲು ಸಾಧ್ಯವಾಗುವುದಾರೆ, ಇನ್ನು ವಾಹನ ಉದ್ಯಮದಲ್ಲಿನ ಕುಸಿತದ ಸಣ್ಣ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಲಾಗುವುದು ಎಂದು ಹೇಳಿದರು.

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ವಾಹನ ಉದ್ಯಮದ ಸಮಸ್ಯೆಗಳನ್ನು ಹಣಕಾಸು ಸಚಿವರು, ಪ್ರಧಾನ ಮಂತ್ರಿಗಳ ಬಳ ಚರ್ಚಿಸಲಾಗುವುದು. 5 ಟ್ರಿಲಿಯನ್ ಡಾಲರ್‍‍ಗಳ ಆರ್ಥಿಕ ವ್ಯವಸ್ಥೆಯ ಗುರಿಯನ್ನಿಟ್ಟು ಕೊಂಡಿರುವಾಗ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು.

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ಈ ಸಮಸ್ಯೆಯ ಬಗ್ಗೆ ನೀವು ಚಿಂತೆ ಮಾಡಬೇಡಿ ಎಂದು ತಿಳಿಸಿದ ಸಚಿವರು, ವಾಹನ ಉದ್ಯಮವು ರಫ್ತು ಮಾಡಲು ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ದೇಶಿಯ ಆಟೋಮೊಬೈಲ್ ಉದ್ಯಮವು ಸುಮಾರು ಒಂದು ವರ್ಷದಿಂದ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ.

MOST READ: ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ಈ ಸಮಸ್ಯೆಯನ್ನು ಬಗೆಹರಿಸಲು ಜಿಎಸ್‌ಟಿಯನ್ನು ಕಡಿಮೆ ಮಾಡುವಂತೆ ವಾಹನ ತಯಾರಕ ಕಂಪನಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ಕೇಂದ್ರ ಸರ್ಕಾರವು ಸದ್ಯಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ವಾಹನಗಳ ಮೇಲೆ 28%ನಷ್ಟು ಜಿಎಸ್‍‍ಟಿ ವಿಧಿಸುತ್ತಿದೆ. ಈ ಪ್ರಮಾಣವನ್ನು 18%ಗೆ ಇಳಿಸುವಂತೆ ಒತ್ತಾಯಿಸಲಾಗುತ್ತಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ಆದರೆ ಆಟೋಮೊಬೈಲ್ ಉದ್ಯಮದ ಕುಸಿತಕ್ಕೆ ಇದೊಂದೇ ಕಾರಣವೆಂದು ಹೇಳಲು ಸಾಧ್ಯವಿಲ್ಲ. ತೈಲ ಬೆಲೆ ಏರಿಕೆ, ಹಣದುಬ್ಬರ ಹಾಗೂ ರಿಜಿಸ್ಟ್ರೇಷನ್ ಶುಲ್ಕ ಸೇರಿದಂತೆ ಹಲವಾರು ಕಾರಣಗಳಿವೆ. ಕೇಂದ್ರ ಸರ್ಕಾರವು ಪರಿಸರದ ಮೇಲೆ ಯಾವುದೇ ಪರಿಣಾಮ ಬೀರದ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿದೆ.

MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ಈ ಕಾರಣಕ್ಕಾಗಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬೇಕೆ ಅಥವಾ ಇಂಧನ ವಾಹನಗಳನ್ನು ಖರೀದಿಸಬೇಕೆ ಎಂಬ ಗೊಂದಲದಲ್ಲಿದ್ದಾರೆ. ವಾಹನಗಳ ಮಾರಾಟ ಕುಸಿತಕ್ಕೆ ಮುಖ್ಯ ಕಾರಣವೆಂದರೆ ಹೊಸ ಬಿಎಸ್ 6 ಮಾಲಿನ್ಯ ನಿಯಮ. ಈ ಹೊಸ ನಿಯಮವು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ಈ ಹಿಂದೆ ಬಿಎಸ್ 3 ನಿಯಮದಿಂದ ಬಿಎಸ್ 4 ನಿಯಮಗಳಿಗೆ ಬದಲಾಗುವಾಗಲೂ ಸಹ ಅನೇಕ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿತ್ತು. ವಾಹನ ಮಾರಾಟದ ಈ ಕುಸಿತವನ್ನು ಸಂಭವನೀಯ ಕಾರಣವೆಂದು ಪರಿಗಣಿಸಲಾಗುತ್ತಿದೆ. ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಈ ಸಮಸ್ಯೆಗಳು ಬಗೆಹರಿದು, ದೇಶದ ಆಟೋಮೊಬೈಲ್ ಉದ್ಯಮವು ಮತ್ತೆ ಚೇತರಿಸಿಕೊಳ್ಳಲಿದೆ ಎಂದು ವಾಹನ ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Most Read Articles

Kannada
English summary
Auto sector problem is minor, will be resolved soon says Central Minister - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more