ಶೀಘ್ರವೇ ಬೆಂಗಳೂರಿನಲ್ಲಿ ಸಂಚರಿಸಲಿದೆ 500 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‍ಗಳು

ಒಂದು ಕಡೆ ಕೇಂದ್ರ ಸರ್ಕಾರವು ಇನ್ನು ಕೆಲವೇ ವರ್ಷಗಳಲ್ಲಿ ಬಹುತೇಕವಾಗಿ ಎಲೆಕ್ಟ್ರಿಕ್ ವಾಹನಗಳೇ ಸಂಚರಿಸಬೇಕೆಂಬ ಯೋಜನೆಯನ್ನು ಮಾಡುತ್ತಿದ್ದು, ಮತ್ತೊಂದು ಕಡೆ ಹಲವಾರು ರಾಜ್ಯಗಳ ಸಾರಿಗೆ ಇಲಾಖೆಯು ಕೂಡಾ ತಮ್ಮಲ್ಲಿರುವ ಇಂಧನ ಆಧಾರಿತ ಪಬ್ಲಿಕ್ ಟ್ರಾನ್ಸ್ ಪೋರ್ಟ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಬೇಕು ಎಂದು ತೀರ್ಮಾನ ಮಾಡಲಾಗಿದೆ.

ಶೀಘ್ರವೇ ಬೆಂಗಳೂರಿನಲ್ಲಿ ಸಂಚರಿಸಲಿದೆ 500 ಎಲೆಕ್ಟ್ರಿಕ್ ಬಸ್‍ಗಳು

ಏಕೆಂದರೆ ಪ್ರೈವೇಟ್ ವಾಹನಗಳು ಅಧಿಕವಾಗುತ್ತಾ ಹೋದಲ್ಲಿ ಟ್ರಾಫಿಕ್ ಸಮಸ್ಯೆಯಂತು ಕಡಿಮೆಯಾಗುವುದಿಲ್ಲ. ಇನ್ನು ಹಲವಾರು ನಗರಗಳಲ್ಲಿ ಮೆಟ್ರೋ ಸಂಚಾರವು ಪ್ರಾರಂಭವಾಗುವುದರ ಜೊತೆಗೆ ಟ್ರಾಫಿಕ್ ಸಮಸ್ಯೆಗಳು ಕಡಿಮೆಯಾಗುತ್ತಿದೆ. ಇನ್ನು ಇಂಧನ ಆಧಾರಿತ ವಾಹನಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳನ್ನು ಬಳಸಬೇಕಿದೆ.

ಶೀಘ್ರವೇ ಬೆಂಗಳೂರಿನಲ್ಲಿ ಸಂಚರಿಸಲಿದೆ 500 ಎಲೆಕ್ಟ್ರಿಕ್ ಬಸ್‍ಗಳು

ಹೀಗಾಗಿ ನಮ್ಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕೂಡಾ ತಮ್ಮಲ್ಲಿರುವ ಇಂಧನ ಆಧಾರಿತ ಬಿಎಂಟಿಸಿ ಬಸ್‍ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ 2030ರೊಳಗೆ ಎಲೆಕ್ಟ್ರಿಕ್ ಮಾದರಿಯ ಬಿಎಂಟಿಸಿ ಬಸ್ಸುಗಳ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ವರದಿಗಳು ಹೇಳುತ್ತಿದೆ.

ಶೀಘ್ರವೇ ಬೆಂಗಳೂರಿನಲ್ಲಿ ಸಂಚರಿಸಲಿದೆ 500 ಎಲೆಕ್ಟ್ರಿಕ್ ಬಸ್‍ಗಳು

ಈ ಹೊಸ ಯೋಜನೆಯ ಕುರಿತಾಗಿ ಅಧಿಕಾರಿಗಳು ತಾವು ಮಾಲಿನ್ಯ ಉಂಟು ಮಾಡುತ್ತಿರುವ ಡೀಸೆಲ್ ಆಧಾರಿತ ಬಸ್‍ಗಳನ್ನು ಸ್ಥಗಿತಗೊಳಿಸಿ, ಎಲೆಕ್ಟ್ರಿಕ್ ಬಸ್ಸುಗಳನ್ನು ಬಳಸುವ ಬಗ್ಗೆ ಹೇಳಿಕೊಂಡಿದ್ದು, ಮೊದಲನೆಯದಾಗಿ ಮುಂದಿನ ಮೂರು ವರ್ಷದಲ್ಲಿ ಸುಮಾರು 1500 ಎಲೆಕ್ಟ್ರಿಕ್ ಬಸ್ಸುಗಳನ್ನು ಬಿಡುಗಡೆ ರಸ್ತೆಗಿಳಿಸಲಿದೆ.

ಶೀಘ್ರವೇ ಬೆಂಗಳೂರಿನಲ್ಲಿ ಸಂಚರಿಸಲಿದೆ 500 ಎಲೆಕ್ಟ್ರಿಕ್ ಬಸ್‍ಗಳು

ರಸ್ತೆಗಳಿಯಲಿರುವ 1500 ಹೊಸ ಎಲೆಕ್ಟ್ರಿಕ್ ಬಸ್ಸುಗಳಲ್ಲಿ 100 ಎಸಿ ಬಸ್ (20 ಏರ್‍‍ಪೋರ್ಟ್ ಬಸ್, 80 ಇನ್ನಿತರೆ ಎಸಿ ಸರ್ವೀಸ್ ಬಸ್) ಹಾಗು 400 ಎಸಿ ರಹಿತ ಎಲೆಕ್ಟ್ರಿಕ್ ಬಸ್ಸುಗಳನ್ನು ಮೊದಲ ಒಂದು ವರ್ಷದಲ್ಲಿ ನಿರ್ಮಾಣ ಮಾಡುವುದಾಗಿ ಹೇಳಿಹೊಂಡಿದೆ. ಈಗಿರುವ ಡೀಸೆಲ್ ಆಧಾರಿತ ಬಸ್ಸುಗಳನ್ನು ಸ್ಥಗಿತಗೊಳಿಸಲು ಕೊಂಚ ಸಮಯ ಬೇಕಾಗಬಹುದು.

ಶೀಘ್ರವೇ ಬೆಂಗಳೂರಿನಲ್ಲಿ ಸಂಚರಿಸಲಿದೆ 500 ಎಲೆಕ್ಟ್ರಿಕ್ ಬಸ್‍ಗಳು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಬಿಎಂಟಿಸಿಯು 3,067 ಬಿಎಸ್ -3 ಮತ್ತು 3,423 ಬಿಎಸ್-4 ವಾಹನಗಳನ್ನು ಹೊಂದಿದೆ. ಆದಾಗ್ಯೂ, ಕೇಂದ್ರವು 2020 ರ ಏಪ್ರಿಲ್‌ನಲ್ಲಿ ಹೊರಸೂಸುವಿಕೆಯ ಮಾನದಂಡವನ್ನು ಬಿಎಸ್-4ಯಿಂದ ಬಿಎಸ್-6ಗೆ ಅಪ್‌ಗ್ರೇಡ್ ಮಾಡುತ್ತದೆ. ಬಿಎಂಟಿಸಿಯು 80 ಇ-ಬಸ್‌ಗಳನ್ನು ಲೀಸ್ ಆಧಾರದ ಮೇಲೆ ಖರೀದಿಸುವ ಯೋಜನೆಯನ್ನು ತಿರಸ್ಕರಿಸಿ ಅವುಗಳನ್ನು ಖರೀದಿ ಮಾಡಬೇಕೆಂದು ಡಿಸಿ ತಮ್ಮಣ್ಣರವರು ಒತಾಯಿಸಿದರು. ಇದರಿಂದಾಗಿ ಬಿಎಂಟಿಸಿಗೆ ರೂ. 75 ಕೋಟಿಯ ನಷ್ಟ ಉಂಟಾಯಿತು.

ಶೀಘ್ರವೇ ಬೆಂಗಳೂರಿನಲ್ಲಿ ಸಂಚರಿಸಲಿದೆ 500 ಎಲೆಕ್ಟ್ರಿಕ್ ಬಸ್‍ಗಳು

ಪಿಪಿಎಲ್ ಮಾಡಲ್‍ಗಳ ಮುಖಾಂತರ ಫೇಮ್-2 ಸಬ್ಸಿಡಿಯನ್ನು ನೀಡಾಲಾಗುತ್ತಿದ್ದು, ಬಿಎಂಟಿಸಿಯು 500 ಬಸ್ಸುಗಳನ್ನು ಲೀಸ್‍ ಮಾದರಿಯಲ್ಲಿ ಖರೀದಿಸಲಿದೆ. ಲೀಸ್ ಮಾಡಲ್‍ನ ಅಡಿಯಲ್ಲಿ ಆಯ್ದ ಆಪರೇಟರ್ ಅರ್ಹ ಡ್ರೈವರ್‌ಗಳೊಂದಿಗೆ ಬಸ್‌ಗಳನ್ನು ಒದಗಿಸಬೇಕಾಗುತ್ತದೆ ಮತ್ತು ನಿರ್ದಿಷ್ಟ ಅವಧಿಗೆ ಬಿಎಂಟಿಸಿ ಒದಗಿಸುವ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ನಿಗಮವು ಪ್ರತಿ ಬಸ್‌ನಲ್ಲಿ ಕಂಡಕ್ಟರ್‌ನನ್ನು ನಿಯೋಜಿಸುತ್ತದೆ.

ಶೀಘ್ರವೇ ಬೆಂಗಳೂರಿನಲ್ಲಿ ಸಂಚರಿಸಲಿದೆ 500 ಎಲೆಕ್ಟ್ರಿಕ್ ಬಸ್‍ಗಳು

ನಿರ್ವಾಹಕರು ಬೆಂಗಳೂರಿನಲ್ಲಿ ಬಸ್ಸುಗಳನ್ನು ನೋಂದಾಯಿಸಿಕೊಳ್ಳಬೇಕು ಮತ್ತು ವಾಹನಗಳ ನಿರ್ವಹಣೆ, ಮೂಲಸೌಕರ್ಯಗಳನ್ನು ವಿಧಿಸುವುದು ಮತ್ತು ಕಾರ್ಯಾಚರಣಾ ವೆಚ್ಚಗಳಾದ ಟೈರ್, ಬಿಡಿಭಾಗಗಳು, ಲೂಬ್ರಿಕಂಟ್‍ಗಳು ಮತ್ತು ಚಾಲಕರು ಹಾಗು ನಿರ್ವಹಣಾ ಸಿಬ್ಬಂದಿಗಳ ವೇತನವನ್ನು ಭರಿಸಬೇಕಾಗುತ್ತದೆ. ಬಿಎಂಟಿಸಿಯು ಪಡೆಯಲಿರುವ ಇ-ಬಸ್ಸುಗಳಿಗೆ ವಿದ್ಯುತ್ ಶುಲ್ಕವನ್ನು ಬಿಎಂಟಿಸಿಯೇ ಪಾವತಿಸಲಿದೆ.

ಶೀಘ್ರವೇ ಬೆಂಗಳೂರಿನಲ್ಲಿ ಸಂಚರಿಸಲಿದೆ 500 ಎಲೆಕ್ಟ್ರಿಕ್ ಬಸ್‍ಗಳು

ಸಿಎನ್‌ಜಿ ಬಸ್‌ಗಳಂತಹ ಪರಿಸರ ಸ್ನೇಹಿ ವಾಹನಗಳನ್ನು ಮಾತ್ರ ಸೇರಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬಿಎಂಟಿಸಿಗೆ ಸೂಚಿನೆಯನ್ನು ನೀಡಿದೆ. ಆದಾಗ್ಯೂ, ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸುವುದು, ಅದರ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ನಿಗಮದ ಕಳಪೆ ಆರ್ಥಿಕ ಸ್ಥಿತಿ ಇ-ಬಸ್‌ಗಳ ವಿಸ್ತರಣೆಗೆ ಅಡ್ಡಿಯಾಗುವ ಸಾಧ್ಯತೆಯಿದೆ.

Source: ETAuto

Most Read Articles

Kannada
English summary
Electric Buses India BMTC To Convert Entire Fleet To Electric By 2030. Read In Kannada
Story first published: Friday, July 12, 2019, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more