ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

ಬಿಎಂ‍ಡಬ್ಲ್ಯು, ಎಂ5 ಕಾಂಪಿಟೇಷನ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು ಎಂ 5 ಕಾಂಪಿಟೀಷನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.54 ಕೋಟಿಗಳಾಗಿದೆ. ಹೊಸ ಎಂ5 ಕಾಂಪಿಟೀಷನ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಸೆಡಾನ್‍‍‍ಗಳಲ್ಲಿ ಒಂದಾಗಿದೆ.

ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

ಹೊಸ ಬಿಎಂಡಬ್ಲ್ಯು ಎಂ 5 ಕಾಂಪಿಡೇಷನ್ ಸ್ಟ್ಯಾಂಡರ್ಡ್ ಎಂ5 ಸೆಡಾನ್‍ ಜರ್ಮನ್ ಬ್ರ್ಯಾಂಡ್ ಆಗಿದೆ. ಹೆಚ್ಚು ಕಾರ್ಯಕ್ಷಮತೆ ಹೊಂದಿರುವುದರಿಂದ ಎಂ5 ಕಾಂಪಿಡೇಷನ್ ಕಾಸ್ಮೆಟಿಕ್ ಮತ್ತು ಹಲವಾರು ಮ್ಯಾಕಾನಿಕಲ್ ಬದಲಾವಣೆಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

ಹೊಸ ಬಿಎಂಡಬ್ಲ್ಯು ಎಂ 5 ಕಾಂಪಿಟೇಷನ್ ಕಾರಿನಲ್ಲಿ ಬ್ಲ್ಯಾಕ್ ಕ್ರೋಮ್ ಟೈಲ್‍‍ಪೈಪ್‍‍ಗಳೊಂದಿಗೆ ಹೊಸ ಎಂ ಸ್ಪೋರ್ಟ್ ಎಕ್ಸ್ ಹಾಸ್ಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ವೈ-ಸ್ಪೋಕ್ ಡ್ಯುಯಲ್ ಕಲರ್ ವ್ಹೀಲ್‍‍ಗಳು, ಫೆಂಡರ್‍‍ಗಳ ಮೇಲೆ ಎಂ ಗಿಲ್ಸ್, ಹಿಂಭಾಗದಲ್ಲಿ ಸ್ಫಾಯ್ಲರ್ ಮತ್ತು ಸುತ್ತಲೂ 'ಕಾಂಪಿಟೀಷನ್' ಬ್ಯಾಡ್ಜಿಂಗ್ ಹೊಂದಿದೆ.

ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

ಹೊಸ ಬಿ‍ಎಂಡಬ್ಲ್ಯು ಇಂಟಿರಿಯರ್‍‍ನಲ್ಲಿ ಎಂ ಮಲ್ಟಿಫಂಕ್ಷನ್ ಸ್ಪೋರ್ಟ್ಸ್ ಸೀಟು‍‍ಗಳೊಂದಿಗೆ ಆಕರ್ಷಕವಾದ ಎಂ5 ಲೋಗೊ ಬ್ಲ್ಯಾಕ್ ಔಟ್ ಸೀಟ್ ಬೆಲ್ಟ್ , ಲೆಥರ್ ಅಪ್ಹೋಲ್ಸ್ಟರಿ, ಕ್ರೋಮ್ ಡೀಟೆಲಿಂಗ್‍‍ನೊಂದಿಗೆ ಸ್ಟೀರಿಂಗ್ ವ್ಹೀಲ್, ಸ್ಟೇನ್ಲೆಸ್ ಸ್ಟೀಲ್ ಫೂಟ್ ಪೆಡಲ್ ಮತ್ತು ಕೆಂಪು ಬಣ್ಣದ ಸ್ಟ್ರಾಟ್/ಸ್ಟಾಪ್ ಬಟನ್ ಅನ್ನು ಅಳವಡಿಸಿದ್ದಾರೆ.

ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

ಹೊಸ ಬಿ‍ಎಂಡಬ್ಲ್ಯು ಕಾರು ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಇನ್-ಬಿಲ್ಟ್ 3ಡಿ ನ್ಯಾವಿಗೇಷನ್, ಹೆಡ್ಸ್-ಅಪ್ ಡಿಸ್‍‍ಪ್ಲೇ, ವೈರ್‍‍ಲೆಸ್ ಚಾರ್ಜಿಂಗ್ ಮತ್ತು ಆ್ಯಪಲ್ ಕಾರ್‍‍ಪ್ಲೇ, ಬಿ‍ಎಂಡಬ್ಲ್ಯು ಡಿಸ್‍‍ಪ್ಲೇ ಕೀ ಮತ್ತು ಗೆಸ್ಚರ್ ಕಂಟ್ರೋಲ್‍‍ನೊಂದಿಗೆ 10.25 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ 7.0 ಇಂಚಿನ ಇನ್ಸ್ ಟ್ರೋಮೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

ಹೊಸ ಬಿಎಂಡಬ್ಲ್ಯು ಎಂ 5 ಕಾಂಪಿಟೇಷನ್ ಕಾರಿನಲ್ಲಿ ಇರುವ ಇತರ ವೈಶಿಷ್ಟ್ಯಗಳು ಅಂದರೆ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ 600-ವ್ಯಾಟ್ ಹೊಂದಿರುವ 16 ಸ್ಪೀಕರ್‍, ರೇರ್‍‍ವ್ಯೂ ಕ್ಯಾಮೆರಾ, ಪಾರ್ಕಿಂಗ್ ಡಿಸ್ಟೆನ್ಸ್ ಕಂಟ್ರೋಲ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

2019ರ ಬಿಎಂ‍ಡಬ್ಲ್ಯು ಎಂ 5 ಕಾಂಪಿಟೇಷನ್ ಕಾರು 4.4 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ 8 ಪೆಟ್ರೋಲ್ ಎಂಜಿನ್ 6,000 ಆರ್‍‍ಪಿಎಂನಲ್ಲಿ 625 ಬಿ‍ಎಚ್‍ಪಿ ಪವರ್( ಸ್ಟ್ಯಾಂಡರ್ಡ್ ಗಿಂತ 25 ಬಿ‍‍ಎಚ್‍‍ಪಿ ಹೆಚ್ಚು) ಮತ್ತು 1,800-5,800 ಆರ್‍‍ಪಿಎಂ ನಡುವೆ 750 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

ಎಂಜಿನ್‍‍ನೊಂದಿಗೆ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋ‍‍ಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿದ್ದಾರೆ. ಈ ಕಾರು 3.3 ಸೆಕೆಂಡ್‍‍ಗಳಲ್ಲಿ ಪ್ರತಿಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಮತ್ತು ಪ್ರತಿಗಂಟೆಗೆ 200 ಕಿ.ಮೀ ಅನ್ನು 10.8 ಸೆಕೆಂಡ್‍ಗಳಲ್ಲಿ ಚಲಿಸುತ್ತದೆ(ಇದರೆಡು ಸ್ಟ್ಯಾಡಂರ್ಡ್ ಗಿಂತಲೂ 0.3 ಸೆಕೆಂಡ್‍‍ಗಳ ವೇಗ ಹೊಂದಿದೆ)

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

ಬಿಎಂಡಬ್ಲ್ಯು ಎಂ5 ಕಾಂಪಿಟೇಷನ್ 7 ಮಿ.ಮೀ ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ. ಈ ಕಾರು ಹೆಚ್ಚು ಸುಧಾರಿತ ಎಂಜಿನ್ ಮೌಂಡ್ ಹೊಂದಿದೆ, ಶೇ.10 ಸಸ್ಪೆಂಶನ್ ಸೆಟ್‍ಅಪ್ ಮತ್ತು ಮುಂಭಾಗದ ಎಕ್ಸಲ್ ಹೈ-ಸ್ಪೀಡ್ ಸಾಮರ್ಥ್ಯವನ್ನು ಹೊಂದಿದೆ. ಎಂವಿ 5 ಕಾಂಪಿಟೇಷನ್ ಆ್ಯಂಟಿ-ರೋಲ್ ಬಾರ್‍‍ಗಳ ಮೂರು ಡ್ರೈವಿಂಗ್ ಮೋಡ್‍‍ಗಳನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಬಿಎಂ‍ಡಬ್ಲ್ಯು ಎಂ5 ಕಾಂಪಿಟೇಷನ್

ಬಿ‍ಎಂಡಬ್ಲ್ಯು ಎಂ5 ಕಾಂಪಿಡೇಷನ್ ಸೆಡಾನ್ ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿರುವ ಕಾರುಗಳಲ್ಲಿ ಒಂದಾಗಿದೆ. ಎಂ2 ಕಾಂಪಿಟೇಷನ್ ಬಳಿಕ ಜರ್ಮನಿಯ ಕಾರು ತಯಾರಕರು ಕಾಂಪಿಟೇಷನ್ ಮಾದರಿಯ ಕಾರನ್ನು ಎರಡನೇ ಬಾರಿ ಬಿಡುಗಡೆಗೊಳಿಸುತ್ತಿದ್ದಾರೆ. ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಷನ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್-ಎಎಂಜಿ ಇ 63 ಎಸ್ ಕಾರಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
BMW M5 Competition Launched In India: Priced At Rs 1.54 Crore - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X