ಭಾರೀ ಕುಸಿತ ಕಂಡ ಹೊಸ ಕಾರು ಮಾರಾಟ

ಪ್ರಯಾಣಿಕ ಕಾರುಗಳ ಸೆಗ್ ಮೆಂಟಿನ ಮಾರುಕಟ್ಟೆಯು ಈ ಆರ್ಥಿಕ ವರ್ಷದ ಮೊದಲ ತಿಂಗಳಿನಲ್ಲಿ ಭಾರೀ ಕುಸಿತ ಕಂಡಿದೆ. ಏಪ್ರಿಲ್ 2018ಕ್ಕೆ ಹೋಲಿಸಿದರೆ ಏಪ್ರಿಲ್ 2019ರಲ್ಲಿ 16.7% ನಷ್ಟು ಕುಸಿತ ಉಂಟಾಗಿದೆ. ಹೋಂಡಾ ಕಂಪನಿಯನ್ನು ಹೊರತುಪಡಿಸಿ ಬಹುತೇಕ ಕಾರು ಉತ್ಪಾದಕ ಸಂಸ್ಥೆಗಳು ಈ ಬಾರಿ ಮಾರಾಟದಲ್ಲಿ ಕುಸಿತ ಕಂಡಿವೆ.

ಭಾರೀ ಕುಸಿತ ಕಂಡ ಹೊಸ ಕಾರು ಮಾರಾಟ

ಹೋಂಡಾ ಕಂಪನಿಯು ಕಳೆದ ವರ್ಷದ ಏಪ್ರಿಲ್ ನಲ್ಲಿ 9,143 ಯೂನಿಟ್ ಗಳನ್ನು ಮಾರಾಟ ಮಾಡಿದ್ದರೆ, ಈ ಬಾರಿ 11,272 ಕಾರುಗಳನ್ನು ಮಾರಾಟ ಮಾಡಿ 23% ರಷ್ಟು ಏರಿಕೆ ಕಂಡಿದೆ. ಹೋಂಡಾ ಮೋಟಾರ್ಸ್ ನ ಮಾರಾಟದಲ್ಲಿ ಸಿಂಹಪಾಲು ಹೊಂದಿರುವ ಅಮೇಜ್ ಕಾರನ್ನು ಕಳೆದ ವರ್ಷದ ಏಪ್ರಿಲ್ ನಲ್ಲಿ ಮಾರಾಟ ಮಾಡಲಾಗಿರಲಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಯು ಈ ಬಾರಿ ಕೇವಲ 1,31,385 ಕಾರುಗಳನ್ನು ಮಾರಾಟ ಮಾಡುವ ಮೂಲಕ 19.6% ಕುಸಿತ ಕಂಡಿದೆ.

ಭಾರೀ ಕುಸಿತ ಕಂಡ ಹೊಸ ಕಾರು ಮಾರಾಟ

ನೆಕ್ಸಾ ಪ್ರಿಮೀಯಂಗಳು ವಿತರಣೆ ಮಾಡಲು ವಿಫಲವಾಗಿದ್ದು ಇದಕ್ಕೆ ಮುಖ್ಯ ಕಾರಣವಾಗಿದೆ. ಬಹುತೇಕವಾಗಿ ಬಲೆನೋ ಕಾರುಗಳನ್ನು ಮಾತ್ರವೇ ಮಾರಾಟ ಮಾಡುವ ನೆಕ್ಸಾ ಈ ಬಾರಿ 28% ನಷ್ಟು ಕುಸಿತ ಕಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಾರುತಿ ಕಂಪನಿಯು 2% ನಷ್ಟು ಮಾರುಕಟ್ಟೆಯಲ್ಲಿನ ಶೇರುಗಳನ್ನು ಕಳೆದುಕೊಂಡಿದೆ.

ಭಾರೀ ಕುಸಿತ ಕಂಡ ಹೊಸ ಕಾರು ಮಾರಾಟ

ಆದರೂ ಸಹ ಮಾರುತಿ ಕಂಪನಿಯು ಮಾರುಕಟ್ಟೆಯಲ್ಲಿನ 53.5% ರಷ್ಟು ಶೇರುಗಳನ್ನು ಹೊಂದಿದೆ. ಮಾರುತಿ ಕಂಪನಿಯ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ತನ್ನ ಮಾರುಕಟ್ಟೆಯನ್ನು 1.3% ರಷ್ಟು ಹೆಚ್ಚಿಸಿಕೊಂಡು ಈಗ 17.7% ಶೇರುಗಳನ್ನು ಹೊಂದಿದೆ. ಆದರೆ ಮಾರಾಟದಲ್ಲಿ ಶೇ.10ರಷ್ಟು ಕುಸಿತ ಕಂಡು 42,005 ಕಾರುಗಳನ್ನು ಮಾರಾಟ ಮಾಡಿದೆ.

ಭಾರೀ ಕುಸಿತ ಕಂಡ ಹೊಸ ಕಾರು ಮಾರಾಟ

ಈ ಪೈಕಿ ಹೆಚ್ಚು ಕುಸಿತ ಕಂಡ ಕಂಪನಿಯೆಂದರೆ ಮಹೀಂದ್ರಾ. ತನ್ನ ಮಾರಾಟದಲ್ಲಿ 8% ನಷ್ಟು ಕುಸಿತ ಕಂಡಿದೆ. ಸುಪ್ರೋ ಮತ್ತು ಮಾಕ್ಸಿಮೋ ಮಾದರಿಗಳನ್ನು ಹೊರತುಪಡಿಸಿ 18,901 ಕಾರುಗಳನ್ನು ಮಾರಾಟ ಮಾಡಿದೆ. ಹೊಸದಾಗ ಬಿಡುಗಡೆಯಾಗಿರುವ ಎಕ್ಸ್ ಯುವಿ 300 ಸಬ್4ಎಂ ಎಸ್‍ಯುವಿ ಸ್ವಲ್ಪ ಮಟ್ಟಿಗೆ ಮಾರಾಟವಾಗಿ ಮಹೀಂದ್ರಾ ಕಂಪನಿಯ ಮಾರಾಟವು ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಾಣುವುದನ್ನು ತಪ್ಪಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಟಾಟಾ ಮೋಟಾರ್ಸ್ 26%, ಫೋಕ್ಸ್ ವ್ಯಾಗನ್ 36%, ಎಫ್‍ಸಿಎ 36.2%, ರೆನಾಲ್ಟ್ 16% ಮತ್ತು ಟೊಯೊಟಾ 22% ಕುಸಿತ ದಾಖಲಿಸಿವೆ.

ಕಂಪನಿಗಳು ಏಪ್ರಿಲ್ 2019

ಏಪ್ರಿಲ್ 2018

ವ್ಯತ್ಯಾಸ (%)

ಮಾರುತಿ

1,31,385

1,63,434

-19.6

ಹ್ಯುಂಡೈ

42,005

46,735

-10

ಮಹೀಂದ್ರಾ

18,901

20,450

-8

ಟಾಟಾ 12,695

17,235

-26

ಹೋಂಡಾ

11,272

9,143

23

ಟೊಯೊಟಾ 10,112

13,037

-22

ಫೋರ್ಡ್ 6,515

7,428

-12

ರೆನಾಲ್ಟ್ 6,256

7,422

-16

ಫೋಕ್ಸ್ ವ್ಯಾಗನ್ 1,995

3,109

-36

ದಟ್ಸನ್ 1,509

2,809

-46

ಜೀಪ್ 1,204

1,908

-37

ಸ್ಕೋಡಾ 1,126

1,400

-20

ನಿಸ್ಸಾನ್ 518

717

-28

ಫಿಯೆಟ್ 54

65

-17

ಭಾರೀ ಕುಸಿತ ಕಂಡ ಹೊಸ ಕಾರು ಮಾರಾಟ

ನಿಸ್ಸಾನ್ ಕಂಪನಿಯ ದಟ್ಸನ್ ಶೇ.42.5% ಕುಸಿತ ದಾಖಲಿಸಿದೆ. ಹೊಸದಾಗಿ ಬಿಡುಗಡೆಗೊಳಿಸಲಾಗಿರುವ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್ ಒವರ್ ಮತ್ತು ದಟ್ಸನ್ ಗೋ ಕಾರುಗಳಿದ್ದರೂ ಸಹ ನಿಸ್ಸಾನ್ ಕಂಪನಿಯು ಕೇವಲ 2,027 ಕಾರುಗಳನ್ನು ಮಾರಾಟ ಮಾಡಿದೆ.

MOST READ: ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

ಭಾರೀ ಕುಸಿತ ಕಂಡ ಹೊಸ ಕಾರು ಮಾರಾಟ

ಕಾರುಗಳ ಮಾರಾಟದ ಕುಸಿತದ ಕಾರಣದಿಂದಾಗಿ 3,000ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದ್ದರೆ, 205 ಡೀಲರ್ ಗಳು ದೇಶಾದ್ಯಂತ ಇರುವ 300ಕ್ಕೂ ಹೆಚ್ಚು ಔಟ್ ಲೆಟ್ ಗಳನ್ನು ಮುಚ್ಚಿದ್ದಾರೆ. ಒಟ್ಟಾರೆಯಾಗಿ ದೇಶದ ಆಟೋ ಮೊಬೈಲ್ ಇಂಡಸ್ಟ್ರಿಗೆ ರೂ. 2,000 ಕೋಟಿಗಳಿಗೂ ಹೆಚ್ಚು ನಷ್ಟವಾಗಿದೆ. ನಿಸ್ಸಾನ್ ಕಂಪನಿಯ 30ಕ್ಕೂ ಹೆಚ್ಚು ಡೀಲರ್ ಗಳು, ಹ್ಯುಂಡೈ ನ 20ಕ್ಕೂ ಹೆಚ್ಚು ಡೀಲರ್ ಗಳು, ಟಾಟಾ, ಹೋಂಡಾ, ಮಾರುತಿ, ಮಹೀಂದ್ರಾ ಕಂಪನಿಗಳ ಸುಮಾರು 10 ಕ್ಕೂ ಹೆಚ್ಚು ಡೀಲರ್ ಗಳು ಔಟ್ ಲೆಟ್ ಗಳನ್ನು ಮುಚ್ಚಿದ್ದಾರೆ.

ಭಾರೀ ಕುಸಿತ ಕಂಡ ಹೊಸ ಕಾರು ಮಾರಾಟ

ಕಾರುಗಳ ಮಾರಾಟದಲ್ಲಿನ ಕುಸಿತವು ಪ್ರತಿ ತಿಂಗಳೂ ಹೆಚ್ಚುತ್ತಲೇ ಇದ್ದು, ಈಗ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳಿಂದಲೂ ಯಾವುದೇ ಪ್ರಯೋಜನವಾಗಿಲ್ಲ. ಮಾರಾಟದಲ್ಲಿನ ಕುಸಿತದ ಹೊರತಾಗಿ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಕಾರುಗಳ ವಿನಿಮಯ ದರಗಳು, ಸರ್ಕಾರದ ಹೊಸ ಸುರಕ್ಷತಾ ನಿಯಮಗಳು ಹಾಗೂ ಮಾಲಿನ್ಯ ನಿಯಮಗಳು ಕಾರು ತಯಾರಕರು ಹೆಚ್ಚು ಲಾಭಪಡೆಯಲು ಅಡ್ಡಿಯಾಗಿವೆ. ಇದೆಲ್ಲಾ ಸವಾಲುಗಳನ್ನು ಎದುರಿಸಿ ಕಾರು ಉದ್ಯಮ ಯಾವಾಗ ಲಾಭದತ್ತ ಮುನ್ನಡೆಯುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ.

Most Read Articles

Kannada
English summary
Car sales decline in April 2019 – Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X