Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೆಟ್ರೋಲ್‍ಗಿಂತಲೂ ಡೀಸೆಲ್ ಮಾದರಿಯ ಟೊಯೊಟಾ ಫಾರ್ಚೂನರ್ ಕಾರುಗಳು ಹೆಚ್ಚು ಸೇಲ್ ಆಗ್ತಿದ್ಯಂತೆ
ಟೊಯೊಟಾ ಫಾರ್ಚೂನರ್ ಈ ಕಾರಿನ ಹೆಸರು ಯಾರು ತಾನೇ ಕೇಳಿರೊದಿಲ್ಲ. ಭಾರತದಲ್ಲಿನ ಬಹುತೇಕ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಈ ಕಾರನ್ನು ಹೊಂದಿದ್ದಾರೆ. ಕಾರಣ ಇದರಲ್ಲಿರುವ ಐಷಾರಾಮಿ ಸೌಲತ್ತುಗಳಿಗೆ ತಲೆಬಾಗಿ ಇಂದಿಗೂ ಸಹ ಕೆಲ ಸೆಲೆಬ್ರಿಟಿಗಳು ಇದನ್ನು ಖರೀದಿಸುತ್ತಿದ್ದಾರೆ.

ಟೊಯೊಟಾ ಫಾರ್ಚೂನರ್ ಕಾರು ಬಿಡುಗಡೆಗೊಂಡು ಸುಮಾರು 10 ವರ್ಷಗಳಾದರೂ ಇಂದಿಗೂ ಸಹ ತನ್ನ ಸೆಗ್ಮೆಂಟ್‍ನಲ್ಲಿ ಮೊದಲ ಸ್ಥಾವನನ್ನು ಪಡೆದುಕೊಂಡಿದೆ. ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಈ ಹಣಕಾಸಿನ ವರ್ಷದಲ್ಲಿ ಸುಮಾರುಬ್ 21,141 ಯೂನಿಟ್ ಫಾರ್ಚುನರ್ ಕಾರುಗಳನ್ನು ಮಾರಾಟ ಮಾಡಿದೆ. ಮಾರಾಟಗೊಂಡ ಇಷ್ಟು ಕಾರುಗಳಲ್ಲಿ ಗ್ರಾಹಕರು ಡೀಸೆಲ್ ಮಾದರಿಯ ಕಾರುಗಳನ್ನೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸುತ್ತಿದೆ.

ಹೌದು, ಈ ಹಣಕಾಸು ವರ್ಷದಲ್ಲಿ ಮಾರಾಟವಾದ 21,141 ಯೂನಿಟ್ ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ 20,948 ಡೀಸೆಲ್ ಮಾದರಿಗಳು ಮಾರಟಗೊಂಡಿದ್ದು, ಇನ್ನುಳಿದ 193 ಯೂನಿಟ್‍ಗಳು ಪೆಟ್ರೋಲ್ ಮಾದರಿಯದಾಗಿದೆ. ಅಂದರೆ ಶೇಕಡ 99 ರಷ್ಟು ಡೀಸೆಲ್ ಮಾದರಿಯ ಕಾರುಗಳು ಮಾರಾಟವಾದರೆ ಕೇವಲ 1ರಷ್ಟು ಮಾತ್ರ ಪೆಟ್ರೋಲ್ ಮಾದರಿಯ ಕಾರುಗಳು ಮಾರಾಟವಾಗಿದೆ.

ಇದಕ್ಕೆ ಕಾರಣ.?
ಹೆಚ್ಚು ತೂಕ ಮತ್ತು ವಿಷಾಲವಾದ ಆಕಾರವನ್ನು ಪಡೆದ ಈ ಫುಲ್ ಸೈಜ್ ಪ್ರೀಮಿಯಂ ಎಸ್‍ಯುವಿ ಕಾರುಗಳು ಹೆಚ್ಚಿನ ಮೈಲೇಜ್ ಅನ್ನು ನೀಡಬೇಕಾದರೆ, ಡೀಸೆಲ್ ಮಾದರಿಗಳನ್ನು ಆಯ್ದುಕೊಂಡರೆ ಅದು ಸುಲಭವಾಗುತ್ತೆ. ಆದರೆ ಇದೀಗ ಮಿಡ್ ಸೈಜ್ ಎಸ್‍ಯುವಿ ಕಾರುಗಳಲ್ಲಿ ಮಾತ್ರ ಸಮಾಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು ಮಾರಾಟವಾಗುತ್ತಿದೆ ಎನ್ನಬಹುದು.

ಫುಲ್-ಸೈಜ್ ಪ್ರೀಮಿಯಂ ಎಸ್‍ಯುವಿ ಕಾರುಗಳ ಸೆಗ್ಮೆಂಟ್ ಮಾರಾಟದಲ್ಲಿ ಮೊದಲನೆಯ ಸ್ಥಾನವನು ಟೊಯೊಟಾ ಫಾರ್ಚುನರ್ ಪಡೆದರೆ, ಫೋರ್ಡ್ ಎಂಡೀವರ್ ಎರಡನೆಯ ಸ್ಥಾನ, ಮಹೀಂದ್ರಾದ ಆಲ್ಟುರಾಸ್ ಜಿ4 ಮೂರನೆಯ ಸ್ಥಾನ ಇನ್ನುಳಿದಂತೆ ಕೊನೆಯ ಸ್ಥಾನದಲ್ಲಿ ಫೋಕ್ಸ್‌ವ್ಯಾಗನ್ ಟಿಗ್ವಾನ್ ಹಾಗು ಇಸುಝು ಎಂಯು-ಎಕ್ಸ್ ಕಾರುಗಳಿವೆ.

ಟೊಯೊಟಾ ಕಾರಿನ ಬೆಲೆ
ಎಸ್‌ಯುವಿಗಳಲ್ಲೇ ವಿಶೇಷ ಎನ್ನಿಸಿರುವ ಫಾರ್ಚೂನರ್ ಕಾರು 7 ಸೀಟರ್ ವಿನ್ಯಾಸದೊಂದಿಗೆ ಈ ಕಾರಿನ ಬೇಸ್ ವೇರೆಯಂಟ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 28 ಲಕ್ಷದ ಬೆಲೆಯನ್ನು ಮತ್ತು ಈ ಕಾರಿನ ಟಾಪ್ ವೇರಿಯೆಂಟ್ ರೂ. 33.60 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.
ಟೊಯೊಟಾ ಫಾರ್ಚುನರ್ ಪ್ರೀಮಿಯಂ ಎಸ್‍ಯುವಿ ಕಾರು 2.8-ಲೀಟರ್ ಡಿಸೇಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ. ಈ ಮೂಲಕ ಡೀಸೆಲ್ ಎಂಜಿನ್ ಮಾದರಿಯು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 174.5 ಬಿಎಚ್‌ಪಿ ಮತ್ತು 420 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಇನ್ನು 6-ಸ್ಪೀಡ್ ಆಟೋಮ್ಯಾಟಿಕ್ ಮಾದರಿಯ ಡಿಸೇಲ್ ಎಂಜಿನ್ ಮಾದರಿಯು 450 ಎನ್ಎಂ ಉತ್ಪಾದಿಸುತ್ತೆ. ಹಾಗೆಯೇ, ಪೆಟ್ರೋಲ್ ಎಂಜಿನ್ ಪ್ರೇರಿತ ಕಾರು 164 ಬಿಎಚ್‌ಪಿ ಮತ್ತು 245 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.
ಬಲಿಷ್ಠ ಎಂಜಿನ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿರುವ ಫಾರ್ಚೂನರ್ ಎಸ್‌ಯುವಿಯು, ಪೆಟ್ರೋಲ್ ಎಂಜಿನ್ ಮೂಲಕ ಪ್ರತಿ ಲೀಟರ್‌ಗೆ 10ಕಿ.ಮಿ ಮೈಲೇಜ್ ನೀಡಿದಲ್ಲಿ ಡಿಸೇಲ್ ಎಂಜಿನ್ ಪ್ರೇರಣೆಯೊಂದಿಗೆ ಪ್ರತಿ ಲೀಟರ್‌ಗೆ 12 ರಿಂದ 14 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಫಾರ್ಚೂನರ್ ಪ್ರೀಮಿಯಂ ಮತ್ತು ಲಗ್ಷುರಿ ವೈಶಿಷ್ಟ್ಯತೆಯುಳ್ಳ ಗರಿಷ್ಠ ಮಟ್ಟದ ಇಂಟೀರಿಯರ್ ಸೌಲಭ್ಯಗಳೊಂದಿಗೆ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಪ್ಪು ಮತ್ತು ಕಂದು ಬಣ್ಣದ ಡ್ಯುಯಲ್ ಟೋನ್ ಕ್ಯಾಬಿನ್‌ಗಳು ಕಾರಿನ ಅಂದವನ್ನು ಹೆಚ್ಚಿಸಿವೆ. ಜೊತೆಗೆ ಕಾರಿನ ಡ್ಯಾಶ್‌ಬೋರ್ಡ್ ಸಿಲ್ವರ್ ಮಾದರಿಯೊಂದಿಗೆ ಮರದ ಟ್ರಿಮ್ ಹೊಂದಿರುವುದು ಕಾರಿನ ಐಷಾರಾಮಿ ಸೌಲಭ್ಯದ ಪ್ರಮುಖ ಆಕರ್ಷಣೆಯಾಗಿದೆ.

ಫಾರ್ಚೂನರ್ ಕಾರಿನಲ್ಲಿ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆ ನೇವಿಗೆಷನ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆಟೋ ರಿಯರ್ ಕೂಲರ್, ಕ್ರೂಸ್ ಕಂಟ್ರೋಲ್, ದೊಡ್ಡದಾದ ಎಂಐಡಿ, ಕೂಲ್ಡ್ ಅಪರ್ ಗ್ರೋವ್ ಬಾಕ್ಸ್ ಮತ್ತು ಆಯ್ಕೆ ರೂಪದಲ್ಲಿರುವ ಕ್ರೋಮ್ ಲೇಪಿತ ಕೂಲ್-ಬ್ಲೂ ಕಾಂಬಿಮೀಟರ್ ಸೌಲಭ್ಯವಿದೆ. ಇವುಗಳಲ್ಲಿ ಎರಡು ಪ್ರಮುಖ ಡ್ರೈವಿಂಗ್ ಮೋಡ್‌ಗಳಿದ್ದು, ಇಕೋ ಮತ್ತು ಪವರ್ ಮೂಲಕ ಎಲ್ಲಾ ಅವಧಿಯಲ್ಲೂ ಗರಿಷ್ಠ ಇಂಧನ ದಕ್ಷತೆ ಕಾಯ್ದುಕೊಳ್ಳಬಹುದಾಗಿದೆ.

ಫಾರ್ಚೂನರ್‌ನಲ್ಲಿ ಪ್ರಯಾಣಿಕರಿಗೆ ಅನೂಕರವಾಗುವ ಹಲವು ವಿಶೇಷ ಸೌಲಭ್ಯವಿದ್ದು, ಮೃದವಾದ ದಿಂಬುಗಳು, ಮೆಟಾಲಿಕ್ ಅಸೆಂಟ್ಸ್ ಜೊತೆ ವುಡ್ ಗ್ರೈನ್ ಪ್ಯಾಟರ್ನ್ ಸೌಲಭ್ಯಗಳು ಕಾರಿನ ಪ್ರಯಾಣಕ್ಕೆ ಮತ್ತಷ್ಟು ಮೆರಗು ತರಲಿವೆ. ಕಾರಿನಲ್ಲಿ 7 ಜನ ಅರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, ಎರಡನೇ ಮತ್ತು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೂ ಗರಿಷ್ಠ ಸುರಕ್ಷಾ ಸೌಲಭ್ಯಗಳಿದ್ದು, ದೂರದ ಪ್ರಯಾಣದಲ್ಲೂ ನಿಮಗೆ ಯಾವುದೇ ಬೇಸರ ತರಿಸದು.

ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಏಳು ಏರ್‌ಬ್ಯಾಗ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಜೊತೆ ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವಲ್ಲದೆ ಎಬಿಎಸ್ ಜೊತೆ ಇಬಿಡಿ ಮತ್ತು ಡೌನ್‌ಹಿಲ್ ಅಸಿಸ್ಟ್ ಕಂಟ್ರೋಲ್(4ಡಬ್ಲ್ಯೂಡಿ ವೇರಿಯೆಂಟ್‌ಗಳಲ್ಲಿ ಮಾತ್ರ) ಸೌಲಭ್ಯವಿದೆ.