ದೇಶದಲ್ಲಿ ಇಷ್ಟೊಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ದೇಶದೆಲ್ಲೆಡೆ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಡ್ರೈವಿಂಗ್ ಲೈಸೆನ್ಸ್ ಅಪ್ಲಿಕೇಷನ್‍ಗಳನ್ನು ಆರ್‍‍ಟಿಒನಲ್ಲಿ ದಾಖಲಾಗುತ್ತಿದೆ. ಹಾಗೆಯೇ ಪ್ರಪಂಚದೆಲ್ಲೆಡೆ ಅತೀ ಸುಲಭವಾದ ವಿಧಾನದಲ್ಲಿ ಡ್ರೈವಿಂಗ್ ಲೈಸೆನ್ಸ್ ದೊರೆಯುವ ದೇಶವೆಂದರೆ ಅದು ನಮ್ಮ ಭಾರತ ಎಂದು ಕೂಡಾ ಹೇಳಲಾಗುತ್ತಿದೆ. ಶಾಕಿಂಗ್ ವಿಚಾರ ಅಂದರೆ ನಮ್ಮ ದೇಶದಲ್ಲಿ ಲರ್ನರ್ ಲೈಸೆನ್ಸ್ ಇಲ್ಲದೆಯೆ ಡೈರೆಕ್ಟಾಗಿ ಡ್ರೈವಿಂಗ್ ಲೈಸೆನ್ಸ್ ಪಡೆದಿರುವವರನ್ನು ನಮ್ಮ ಸುತ್ತಮುತ್ತಲು ನಾವು ಕಂಡಿರುತ್ತವೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಹೀಗಾಗಿ ಸಧ್ಯ ದೇಶದಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರ ಮೇಲೆ ಕೇಂದ್ರ ಸರ್ಕಾರವು ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ದೇಶದಲ್ಲಿ ಎಷ್ಟು ಮಂದಿ ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದ್ದಿದಾರೆ ಎಂಬುದರ ಬಗ್ಗೆ ಶಾಕಿಂಗ್ ವಿಚಾರವನ್ನು ಹೊರ ಹಾಕಿದೆ. ಶೇಕಡಾ 30ರಷ್ಟು ಮಂದಿ ನಕಲಿ ಡ್ರೈವಿಂಗ್ ಲೈಸೆನ್ಸ್ ಬಳಸುತ್ತಿದ್ದಾರೆ ಎಂದು ಬಹಿರಂಗವಾಗಿದ್ದು, ನಕಲಿ ಲೈಸೆನ್ಸ್ ಮೇಲೆ ಹದ್ದಿನಕಣ್ಣು ಈಡಲಾಗುತ್ತಿದೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಈ ಕುರಿತಾಗಿ ಮಾತನಾಡಿದ ನಿತಿನ್ ಗಡ್ಕರಿಯವರು ಬೇರೆ ಎಲ್ಲಿಯೂ ಕಾಣಲಾಗದ ಸುಲಭ ವಿಧಾನದಿಂದ ನಮ್ಮ ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದಾಗಿದೆ. ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಗಮನಿಸಿದ್ದಲ್ಲಿ, ಡ್ರೈವಿಂಗ್ ಲೈಸೆನ್ಸ್ ಹೊಂದಿದರವ ಭಾವ ಚಿತ್ರಗಳು ಬೇರೆಯೇ ಆಗಿರುತ್ತದೆ. ದೇಶದಲ್ಲಿರುವ ಹಲವಾರು ಚಾಲಕರು ಕಾನೂನು ಬಾಹಿರವಾಗಿ ವಾಹನವನ್ನು ಚಲಾವಣೆ ಮಾಡುತ್ತಿದ್ದಾರೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಹೀಗೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವವರು ಪೊಲೀಸರ ಹತ್ತಿರ ಸಿಕ್ಕಿಬಿದ್ದಲ್ಲಿ ಕೇವಲ ರೂ.50 ಅಥವಾ ರೂ. 100 ಕೊಟ್ಟು ಅಲ್ಲಿಂದ ಯಾವುದೇ ಚಲನ್ ಇಲ್ಲದೆಯೆ ಎಸ್ಕೇಪ್ ಆಗಿಬಿಡುತ್ತೇವೆ ಎಂಬ ಧೈರ್ಯದಿಂದ್ದಾರೆ. ಇಂತಹ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವವರಿಂದ ಪ್ರತೀ ವರ್ಷ ದೇಶದಲ್ಲಿ ಸುಮಾರು 1,50,000 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸಹ ಅವರು ಹೇಳಿದ್ದಾರೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಈ ರೀತಿಯಾದ ವಾಹನ ಉಲ್ಲಂಘನೇ ಮಾಡುವವರಿಗೆ ಕಠಿಣವಾದ ಕಾನೂನನ್ನು ಕೇಂದ್ರ ಸರ್ಕಾರವು ಕೆಲ ದಿನಗಳ ಹಿಂದಷ್ಟೆ ಜಾರಿ ಮಾಡಲಾಗಿದ್ದು, ನಕಲಿ ಡ್ರೈವಿಂಗ್ ಲೈಸೆನ್ಸ್ ಗಳ ಬಳಕೆಯನ್ನು ತಡೆಗಟ್ಟಲು ಸರ್ಕಾರವು ಹೊಸ ಯೋಜನೆಯನ್ನು ಸಹ ಶೀಘ್ರದಲ್ಲಿಯೆ ಪ್ರಾರಂಭಿಸಲಿದ್ದಾರೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇವುಗಳ ಜೊತೆಗೆ ಕಳೆದ 2 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ವಾಹನಗಳ ದತ್ತಾಂಶ ಶೇಖರಣೆ ಮತ್ತು ಸುರಕ್ಷೆಯ ಸಂಬಂಧ ಇದೀಗ ಮತ್ತೊಂದು ವಿನೂತನ ಯೋಜನೆಯೊಂದನ್ನು ಜಾರಿಗೆ ತರಲಾಗುತ್ತಿದೆ. ಈ ಹಿಂದೆಯೆ ಡ್ರೈವಿಂಗ್ ಲೈಸೆನ್ಸ್ ಮತ್ತು ನೋಂದಣಿ ಪ್ರಮಾಣಪತ್ರಗಳು ಏಕರೂಪದಲ್ಲಿ ವಿತರಣೆ ನಡೆಯಲಿದೆ ಎಂದು ಹೇಳಲಾಗಿತ್ತು.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಹೊಸ ಯೋಜನೆಯ ಪ್ರಕಾರ, ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹಾಗೂ ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ) ವಿತರಣೆಯು ಒಂದೇ ತೆರನಾಗಿರಲಿದ್ದು, ಬಣ್ಣ, ವಿನ್ಯಾಸ, ಗಾತ್ರ, ಭದ್ರತಾ ವೈಶಿಷ್ಟ್ಯ ಎಲ್ಲವೂ ಒಂದೇ ರೀತಿಯಾಗಿರುತ್ತದೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಹೊಸ ಯೋಜನೆಯಿಂದ ಏನು ಲಾಭ?

ಏಕರೂಪದ ಡಿಎಲ್ ಮತ್ತು ಆರ್‌ಸಿ ಸೌಲಭ್ಯದಿಂದ ವಾಹನ ಸವಾರರಿಗೆ ಗರಿಷ್ಠ ಲಾಭಗಳಿದ್ದು, ಸ್ಮಾರ್ಟ್‌ ಕಾರ್ಡ್ ರೂಪದಲ್ಲಿರುವ ಬರಲಿರುವ ಹೊಸ ಡಿಎಲ್‌ ಮತ್ತು ಆರ್‌ಸಿಗಳಲ್ಲಿ ಮೈಕ್ರೋ ಚಿಪ್‌ಗಳನ್ನು ಅಳವಡಿಸಲಾಗಿರುತ್ತದೆ. ಕಾರ್ಡ್‌ನಲ್ಲಿರುವ ಕ್ಯೂ ಆರ್‌ ಕೋಡ್‌ಗಳು ವಾಹನ ಮಾಲೀಕರ ಸಂಪೂರ್ಣ ಡೇಟಾ ಹೊಂದಿರಲಿದ್ದು, ಎನ್‌ಎಫ್‌ಸಿ (ನಿಯರ್ ಫೀಲ್ಡ್‌ ಕಮ್ಯುನಿಕೇಶನ್‌) ವೈಶಿಷ್ಟ್ಯತೆ ಮೂಲಕ ಮೆಟ್ರೋ ಮತ್ತು ಎಟಿಎಂ ಕಾರ್ಡ್‌ಗಳ ರೀತಿಯಲ್ಲಿ ಬಳಸಬಹುದಾಗಿದೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಇದರಿಂದ ಟ್ರಾಫಿಕ್‌ ಪೊಲೀಸರು ವಿಶೇಷ ಸಾಧನಗಳ ಮೂಲಕ (ಹ್ಯಾಂಡ್‌ಹೆಲ್ಡ್‌ ಡಿವೈಸಸ್‌) ಈ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದಾಗಿದ್ದು, ನಕಲಿ ಡಿಎಲ್ ಮತ್ತು ಆರ್‌ಸಿ ಹಾವಳಿಗೂ ಇದರಿಂದ ಬ್ರೇಕ್ ಹಾಕಬಹುದಾಗಿದೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಇದಲ್ಲದೇ ಹೊಸ ಯೋಜನೆಯಿಂದ ವಾಹನಗಳ ಡೇಟಾ ಸಂಗ್ರಹಣೆಗೂ ಸಹಕಾರಿಯಾಗಲಿದ್ದು, ವಾಹನ ಮಾದರಿ, ಎಂಜಿನ್ ವೈಶಿಷ್ಟ್ಯತೆ, ಮಾಲೀಕರ ವಿವರಣೆ ಮತ್ತು ಕಾರು ಬಳಕೆಯ ವಿಧಾನ(ವ್ಯಯಕ್ತಿಕ ಮತ್ತು ವಾಣಿಜ್ಯ) ಸೇರಿದಂತೆ ಹಲವು ಮಾಹಿತಿಗಳು ಒಂದೇ ಸೂರಿನಡಿ ಲಭ್ಯವಾಗುತ್ತೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಸವಾರರಿಗೆ ತಪ್ಪಲಿದೆ ಕಿರಿಕಿರಿ..!

ಸದ್ಯ ಟ್ರಾಫಿಕ್ ಪೊಲೀಸರು ನಿಮ್ಮ ವಾಹನಗಳನ್ನು ತಪಾಸಣೆ ಮಾಡುವಾಗ ವಾಹನದ ಪ್ರತಿಯೊಂದು ದಾಖಲೆಗಳನ್ನು ಕೇಳುವುದು ಕಾಮನ್. ಆದ್ರೆ ಏಕರೂಪದ ಡಿಎಲ್ ಮತ್ತು ಆರ್‌ಸಿ ಬಂದ ಮೇಲೆ ವಾಹನಗಳ ದಾಖಲೆಯನ್ನು ಇಟ್ಟುಕೊಂಡು ತಿರುಗುವುದು ತಪ್ಪಲಿದೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಮಾಹಿತಿಯೆಂತೆ, ದೇಶಾದ್ಯಂತ ಪ್ರತಿದಿನ ಸುಮಾರು 32,000 ಡಿಎಲ್‌ಗಳ ವಿತರಣೆ/ ನವೀಕರಣ ನಡೆಯುತ್ತಿದ್ದು, 43,000 ವಾಹನಗಳ ನೋಂದಣಿ ನಡೆಯುತ್ತದೆ. ಇನ್ನು ಮುಂದೆ ನವೀಕರಣಗೊಳ್ಳುವ ಎಲ್ಲ ಡಿಎಲ್‌ ಮತ್ತು ಆರ್‌ಸಿಗಳನ್ನು ಹೊಸ ನಿಯಮಕ್ಕೆ ಬದಲಾಯಿಸಲಾಗುತ್ತದೆ ಎಂದಿದ್ದಾರೆ.

ದೇಶದಲ್ಲಿ ಇಷ್ಟೋಂದು ನಕಲಿ ಡ್ರೈವಿಂಗ್ ಲೈಸೆನ್ಸ್ ಇದ್ಯಾ.!?

ಒಟ್ಟಿನಲ್ಲಿ ಎನ್‌ಎಫ್‌ಸಿ ವೈಶಿಷ್ಟ್ಯದ ಮೂಲಕ ಡಿಎಲ್‌ ಅಥವಾ ಆರ್‌ಸಿಯನ್ನು ಪೊಲೀಸರ ಬಳಿಯಿರುವ ಸಾಧನಕ್ಕೆ ಸ್ಪರ್ಶಿಸಿದ ಕೂಡಲೇ ವಾಹನದ ಪ್ರತಿಯೊಂದು ವಿವರಣೆ ದೊರೆಯುವಂತೆ ಹೊಸ ಸೌಲಭ್ಯವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಮುಂದಿನ ಜುಲೈ ಹೊತ್ತಿಗೆ ಪ್ರತಿ ವಾಹನ ಮಾಲೀಕರ ಬಳಿಯೂ ಹೊಸ ಡಿಎಲ್ ಮತ್ತು ಆರ್‌ಸಿ ಕಡ್ಡಾಯವಾಗಿರಬೇಕಿದೆ.

Most Read Articles

Kannada
English summary
Driving License India 30 Percent Fake Says Nitin Gadkari. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more