ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಭಾರತದ ಟೋಲ್‍ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳ ಟೋಲ್ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಇದನ್ನು ಭಾರತದೆಲ್ಲೆಡೆ ಜಾರಿಗೆ ತರಲಾಗುತ್ತಿದೆ. ಡಿಸೆಂಬರ್ 1ರಿಂದ ಕಡ್ಡಾಯವಾಗ ಬೇಕಿದ್ದ ಫಾಸ್ಟ್‌ಟ್ಯಾಗ್ ಅನ್ನು ಹೆಚ್ಚಿನ ಜನರು ಖರೀದಿಸದ ಕಾರಣಕ್ಕೆ ಒಂದು ತಿಂಗಳ ಕಾಲ ಮುಂದೂಡಲಾಗಿದೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಫಾಸ್ಟ್‌ಟ್ಯಾಗ್ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲವೆಂದು ಹೇಳಲಾಗಿತ್ತು. ಆದರೆ ಈಗ ಆಗುತ್ತಿರುವುದೇ ಬೇರೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಯಾವ ಉದ್ದೇಶಕ್ಕೆ ಫಾಸ್ಟ್‌ಟ್ಯಾಗ್‍‍ಗಳನ್ನು ಬಿಡುಗಡೆಗೊಳಿಸಲಾಗಿತ್ತೋ ಆ ಉದ್ದೇಶವೇ ಈಗ ವಿಫಲವಾಗಿದೆ. ಫಾಸ್ಟ್‌ಟ್ಯಾಗ್‍‍ಗಳನ್ನು ಹೊಂದಿರುವ ಕಾರು, ಬಸ್ಸುಗಳು ಗಂಟೆಗಟ್ಟಲೇ ಟೋಲ್‍‍ಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿವೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಇದು ಭಾರತದ ಯಾವುದೋ ರಾಜ್ಯದಲ್ಲಿ ನಡೆಯುತ್ತಿರುವ ಸಂಗತಿಯಲ್ಲ. ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆ. ಜನರು ಟೋಲ್‍‍ಗಳಲ್ಲಿ ಉಂಟಾಗಿರುವ ಅವಾಂತರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್‍‍ರವರು ಸಹ ಟ್ವಿಟರ್‍‍ನಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ವಿಶ್ವೇಶ್ವರ ಭಟ್‍‍ರವರು ಕೆಂಪೇಗೌಡ ಅಂತರ್‍‍ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಟೋಲ್ ಪ್ಲಾಜಾದಲ್ಲಿ ಸಿಲುಕಿದ್ದರು.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಈ ಬಗ್ಗೆ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರನ್ನು ಟ್ಯಾಗ್ ಮಾಡಿ, 15 ನಿಮಿಷದಿಂದ ಟೋಲ್‍‍ನಲ್ಲಿ ಸಿಲುಕಿದ್ದು, ಇದರಿಂದ ಹೊರ ಬರಲು ಇನ್ನೂ 20 ನಿಮಿಷಗಳಾದರೂ ಬೇಕಾಗಬಹುದು. ಎಷ್ಟು ಜನ ತಡವಾಗಿ ತಲುಪಿ ವಿಮಾನಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ತಿಳಿಯದು. ದಿನನಿತ್ಯದ ಈ ಸಮಸ್ಯೆಯನ್ನು ಬಗೆಹರಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಗಣೇಶ್‌ಭಟ್ ಎಂಬುವವರು ಟ್ವೀಟ್ ಮಾಡಿ, ವಿಮಾನ ನಿಲ್ದಾಣಕ್ಕೆ ಹೋಗುವವರು ಹಾಗೂ ಅಲ್ಲಿಂದ ಬರುವವರು ಹೆಚ್ಚು ಕಾಲ ಟೋಲ್ ಪ್ಲಾಜಾದಲ್ಲಿ ಕಾಯುವ ಬಗ್ಗೆ ದೂರು ನೀಡಿದ್ದಾರೆ. ವಿಮಾನ ನಿಲ್ದಾಣದ ಬಳಿಯಿರುವ ಟೋಲ್ ಪ್ಲಾಜಾ ನರಕವಾಗಿದೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಇದನ್ನು ನೋಡಿಕೊಳ್ಳುತ್ತಿರುವ ಕಂಪನಿಯು ಕೆಲಸಕ್ಕೆ ಬಾರದ ಕಂಪನಿಯಾಗಿದ್ದು, ಪ್ರತಿ ಬಾರಿ ಅರ್ಧ ಗಂಟೆಯಿಂದ 45 ನಿಮಿಷಗಳವರೆಗೆ ಕಾಯಬೇಕಾಗಿದೆ. ಎನ್‍‍ಹೆಚ್‍ಎ‍ಐ ಈ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾದಹಳ್ಳಿ ಬಳಿಯಿರುವ 10 ಹೈಬ್ರಿಡ್ ಲೇನ್‌ಗಳ ಟೋಲ್ ಪ್ಲಾಜಾದಲ್ಲಿ ಕೇವಲ ಮೂರು ಸೆಕೆಂಡುಗಳು ಮಾತ್ರ ಕಾಯಬೇಕೆಂದು ಹೇಳಿದೆ. ಎನ್‌ಎಚ್‌ಎಐನ ಪ್ರಕಾರ, ಫಾಸ್ಟ್‌ಟ್ಯಾಗ್ ಜಾರಿಗೆ ಬಂದ ಡಿಸೆಂಬರ್ 15ರ ನಂತರ ಹೊಸಕೋಟೆ, ನೆಲಮಂಗಲ ಹಾಗೂ ಉಳಿದ ಟೋಲ್‍ ಪ್ಲಾಜಾಗಳಲ್ಲಿ ಕಾಯುವ ಸಮಯವು 3ರಿಂದ 5 ನಿಮಿಷಗಳಾಗಿದೆ.

ಫಾಸ್ಟ್‌ಟ್ಯಾಗ್ ಜಾರಿಗೆ ಬಂದರೂ ಮುಗಿಯದ ಗೋಳು..!

ಆದರೆ ಈ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಬೇರೆ ಅಭಿಪ್ರಾಯವನ್ನು ನೀಡುತ್ತಿದ್ದಾರೆ. ಅವರ ಪ್ರಕಾರ ಸಾದಹಳ್ಳಿ ಟೋಲ್ ಪ್ಲಾಜಾದಿಂದ ಹೊರ ಬರಲು ಸುಮಾರು 10ರಿಂದ 15 ನಿಮಿಷಗಳಿಗಿಂತ ಹೆಚ್ಚು ಸಮಯ ಕಾಯಬೇಕಾಗಿದೆ.

Most Read Articles

Kannada
English summary
Fastags Bangalore airport toll cause chaos long waiting period. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X