Just In
Don't Miss!
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Finance
ಮಾರ್ಚ್ 04ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- News
ಮಗಳ ಶಿರಚ್ಛೇದ ಮಾಡಿ, ರುಂಡದೊಂದಿಗೆ ಪೊಲೀಸರಿಗೆ ಶರಣಾದ ತಂದೆ
- Movies
ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಿಡ್‍ನೈಟ್ ಸರ್‍ಪ್ರೈಸ್ ಕೊಡುಗೆ ಘೋಷಿಸಿದ ಫೋರ್ಡ್
ವರ್ಷದ ಕೊನೆಯ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿರುವ ಬಹುತೇಕ ಆಟೋ ಮೊಬೈಲ್ ಕಂಪನಿಗಳು ಹಲವಾರು ರಿಯಾಯಿತಿಗಳನ್ನು ಹಾಗೂ ಆಫರ್‍ಗಳನ್ನು ನೀಡುತ್ತಿವೆ. ಈಗ ಫೋರ್ಡ್ ಕಂಪನಿಯು ಸಹ ಹೊಸ ಆಫರ್‍ವೊಂದನ್ನು ನೀಡುತ್ತಿದೆ.

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗಾಗಿ ಮೆಗಾ ಸೇಲ್ಸ್ ಮಿಡ್‍ನೈಟ್ ಸರ್‍ಪ್ರೈಸ್ ಕೊಡುಗೆಯನ್ನು ಘೋಷಿಸಿದೆ. ಈ ಕೊಡುಗೆಯನ್ನು ಫೋರ್ಡ್ ಗ್ರಾಹಕರು ದೇಶಾದ್ಯಂತವಿರುವ ಫೋರ್ಡ್ ಮಳಿಗೆಗಳಲ್ಲಿ ಡಿಸೆಂಬರ್ 6ರಿಂದ ಡಿಸೆಂಬರ್ 8ರವರೆಗೆ ಪಡೆಯಬಹುದು.

ಈ ಅವಧಿಯಲ್ಲಿ ಫೋರ್ಡ್ ಡೀಲರ್‍ಶಿಪ್‍ಗಳು ಬೆಳಿಗ್ಗೆ 9 ಗಂಟೆಯಿಂದ ಮಧ್ಯರಾತ್ರಿವರೆಗೂ ತೆರೆದಿರುತ್ತವೆ. ಇದರಿಂದಾಗಿ ಗ್ರಾಹಕರಿಗೆ ಫೋರ್ಡ್ ಕಾರುಗಳನ್ನು ಟೆಸ್ಟ್ ಡ್ರೈವ್ ಮಾಡಲು ಹಾಗೂ ಕಾರುಗಳನ್ನು ಬುಕ್ಕಿಂಗ್ ಮಾಡಲು ಅನುಕೂಲವಾಗಲಿದೆ.

ಈ ಅವಧಿಯಲ್ಲಿ ಕಾರುಗಳನ್ನು ಬುಕ್ಕಿಂಗ್ ಮಾಡುವ ಗ್ರಾಹಕರು ಡಿಜಿಟಲ್ ಸ್ಕ್ರಾಚ್ ಕಾರ್ಡ್‍ಗಳನ್ನು ಪಡೆಯಲಿದ್ದಾರೆ. ಇದರಿಂದಾಗಿ ಕಾರುಗಳ ವಿತರಣೆ ಪಡೆಯುವ ವೇಳೆಯಲ್ಲಿ ಖಚಿತವಾದ ಬಹುಮಾನಗಳನ್ನು ಪಡೆಯಲಿದ್ದಾರೆ.

ಈ ಬಹುಮಾನಗಳಲ್ಲಿ ಹೋಂ ಅಪ್ಲೈಯನ್ಸ್, ಎಲ್‍ಇಡಿ ಟಿವಿ, ಸ್ಮಾರ್ಟ್ ಫೋನ್ ಹಾಗೂ ಕುಟುಂಬದೊಂದಿಗೆ ಲಂಡನ್‍ನಲ್ಲಿ ರಜಾ ದಿನ ಕಳೆಯುವ ಅವಕಾಶಗಳು ದೊರೆಯಲಿವೆ. ಈ ಕೊಡುಗೆಗಳನ್ನು ಫೋರ್ಡ್ ಕಂಪನಿಯಲ್ಲಿರುವ ಎಲ್ಲಾ ವಾಹನಗಳ ಮೇಲೆ ನೀಡಲಾಗುವುದು.

ಈ ವಾಹನಗಳಲ್ಲಿ ಫಿಗೊ, ಆಸ್ಪೈರ್, ಫ್ರೀ ಸ್ಟೈಲ್, ಇಕೊ ಸ್ಪೋರ್ಟ್ ಹಾಗೂ ಎಂಡೀವರ್ ಕಾರುಗಳು ಸೇರಿವೆ. ಡಿಸೆಂಬರ್ ತಿಂಗಳಿನಲ್ಲಿ ಫೋರ್ಡ್ ಕಾರುಗಳನ್ನು ಬುಕ್ಕಿಂಗ್ ಮಾಡುವ ಗ್ರಾಹಕರ ಪೈಕಿ ಒಬ್ಬರನ್ನು ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿ ಅವರಿಗೆ ಹೊಸ ಇಕೊ ಸ್ಪೋರ್ಟ್ ಬಾಬರ್ ಕಾರ್ ಅನ್ನು ವಿತರಿಸಲಾಗುವುದು.

ಈ ಲಕ್ಕಿ ಡಿಪ್‍ನ ಡ್ರಾ ಮುಂದಿನ ವರ್ಷದ ಫೆಬ್ರವರಿ 14ರಂದು ನಡೆಯಲಿದೆ. ಇದರ ಜೊತೆಗೆ ಫೋರ್ಡ್ ಕಂಪನಿಯು ಡಿಸೆಂಬರ್ 6ರಿಂದ ಡಿಸೆಂಬರ್ 8ರವರೆಗೆ ಕಾರುಗಳನ್ನು ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಹಲವಾರು ಬಹುಮಾನಗಳನ್ನು ನೀಡಲಿದೆ.

ಈ ಕೊಡುಗೆಯಿಂದಾಗಿ ಫೋರ್ಡ್ ಕಂಪನಿಯು ಹೊಸ ಗ್ರಾಹಕರನ್ನು ಸೆಳೆಯುವ ಸಾಧ್ಯತೆಗಳಿವೆ. ಸದ್ಯಕ್ಕೆ ಫೋರ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಸರಣಿಯ ಕಾರುಗಳನ್ನು ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಡೇಟ್‍ಗೊಳಿಸುತ್ತಿದೆ.

ಇತ್ತೀಚಿಗೆ ಫೋರ್ಡ್ ಕಂಪನಿಯ ಹೊಸ ಇಕೊ ಸ್ಪೋರ್ಟ್ ಬಿಎಸ್ 6 ಕಾರ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಭಾರತದಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಫೋರ್ಡ್ ಕಂಪನಿಯು ಮಹೀಂದ್ರಾ ಕಂಪನಿಯ ಜೊತೆಗೆ ಕೈಜೋಡಿಸಲಿದೆ.

ಈ ಒಪ್ಪಂದದ ಭಾಗವಾಗಿ ಎರಡೂ ಕಂಪನಿಗಳು ಏಳು ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಿವೆ. ಎರಡೂ ಕಂಪನಿಗಳೂ ಸೇರಿ ಮರಾಸೋ ಆಧಾರಿತ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಲಿವೆ. ಇದರೊಂದಿಗೆ ಈ ಹಿಂದೆ ಫೋರ್ಡ್ ಕಂಪನಿಯು ಸ್ವಂತವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗದ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲು ಫೋರ್ಡ್ ಕಂಪನಿಗೆ ಅವಕಾಶ ದೊರೆತಿದೆ.