ಬಿಡುಗಡೆಗೆ ಸಿದ್ಧವಾಗಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5

ನಾಲ್ಕನೇ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5 ದೇಶಿಯ ಮಾರುಕಟ್ಟೆಯಲ್ಲಿ 16ನೇ ಮೇ 2019ರಂದು ಬಿಡುಗಡೆಯಾಗಲಿದೆ. ಎಕ್ಸ್5 ಬಿಎಂಡಬ್ಲ್ಯು ವಿನ ಫ್ಲಾಗ್ ಶಿಪ್ ಆಗಿದ್ದು, ಈ ನಾಲ್ಕನೇ ತಲೆಮಾರಿನ ಮಾದರಿಯನ್ನು ಜೂನ್ 2018ರಂದು ಅನಾವರಣಗೊಳಿಸಲಾಗಿತ್ತು. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನವೆಂಬರ್ 2018 ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಭಾರತದಲ್ಲಿ ಬಿಡುಗಡೆಯಾಗುವ ಕಾಲ ಸನ್ನಿಹಿತವಾಗಿದೆ.

ಬಿಡುಗಡೆಗೆ ಸಿದ್ಧವಾಗಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5

ಹೊಸ ಬಿಎಂಡಬ್ಲ್ಯು ಎಕ್ಸ್5 ಈಗಿರುವ ವಾಹನಕ್ಕಿಂತ ವಿಭಿನ್ನವಾಗಿದೆ. ಮುಂಭಾಗದಲ್ಲಿರುವ ಬಿಎಂಡಬ್ಲ್ಯು ಚಿಹ್ನೆಯ ಕೆಳಭಾಗದಲ್ಲಿರುವ ಗ್ರಿಲ್ ಗಳು ಪ್ರತಿ ಬಾರಿ ಹೊಸ ಕಾರುಗಳ ಬಿಡುಗಡೆಯಾದಾಗಲೂ ದೊಡ್ಡದಾಗುತ್ತಾ ಬರುತ್ತಿವೆ. ಈ ಗ್ರಿಲ್ ನ ಎರಡೂ ಬದಿಯಲ್ಲಿ ಟ್ವಿನ್ ಎಲ್ಇಡಿ ಹೆಡ್ ಲ್ಯಾಂಪ್ ಗಳಿವೆ. ಮುಂಭಾಗದಲ್ಲಿರುವ ಬಂಪರ್ ಹೊಸ ವಿನ್ಯಾಸವನ್ನು ಹೊಂದಿದ್ದು, ದೊಡ್ಡ ಏರ್ ಡ್ಯಾಂ ಮತ್ತು ದೊಡ್ಡದಾದ ಫಾಗ್ ಲ್ಯಾಂಪ್ ಗಳಿವೆ.

ಬಿಡುಗಡೆಗೆ ಸಿದ್ಧವಾಗಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5

ಎಲ್ಇಡಿ ಫಾಗ್ ಲ್ಯಾಂಪ್ ಗಳು ರೆಕ್ಟಾಗ್ಯುಲರ್ ಶೇಪ್ ನಲ್ಲಿದ್ದು, ಕಾಂಪ್ಯಾಕ್ಟ್ ಸೈಜ್ ಹೊಂದಿವೆ. ಸೈಡಿನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ, ಆದರೆ ಹೊಸದಾಗಿ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಸೈಡ್ ಪ್ರೊಫೈಲ್ ಈಗಿರುವ ಬಿಎಂಡಬ್ಲ್ಯು ಎಕ್ಸ್ 5 ವಿನ್ಯಾಸಗಳನ್ನೇ ಹೊಂದಿದೆ.

ಬಿಡುಗಡೆಗೆ ಸಿದ್ಧವಾಗಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5

ಹಿಂಭಾಗದಲ್ಲಿ ಟೇಲ್ ಲೈಟ್ಸ್ ಗಳನ್ನು ಮರು ವಿನ್ಯಾಸಗೊಳಿಸಲಾಗಿದೆ ಮತ್ತು ಹೊಸ ಬಂಪರ್ ಅಳವಡಿಸಲಾಗಿದೆ. ಹಿಂಭಾಗದ ಬಂಪರ್ ಮೇಲೆ ಸ್ಕಫ್ ಪ್ಲೇಟ್ ಹಾಕಲಾಗಿದ್ದು, ಕ್ರೋಮ್ ಬಣ್ಣದಲ್ಲಿರುವ ಡ್ಯುಯಲ್ ಎಕ್ಸಾಸ್ಟ್ ಔಟ್ ಲೆಟ್ ಅಳವಡಿಸಲಾಗಿದೆ.

ಬಿಡುಗಡೆಗೆ ಸಿದ್ಧವಾಗಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5

ಮೊದಲೇ ಹೇಳಿದಂತೆ ಬಿಎಂಡಬ್ಲ್ಯು ಎಕ್ಸ್ 5 ಮಾರ್ಕ್ಸ್ ನ, ಫ್ಲಾಗ್ ಶಿಪ್ ಎಸ್‍ಯುವಿ ಯಾಗಿದ್ದು, ಹೆಸರಿಗೆ ತಕ್ಕಂತೆ ಒಳ ವಿನ್ಯಾಸವನ್ನುಸಿದ್ಧಪಡಿಸಲಾಗಿದೆ. ಹೊಸ ಬಿಎಂಡಬ್ಲ್ಯು ಎಕ್ಸ್5 ಡ್ಯುಯಲ್ ಟೋನ್ ಇಂಟಿರಿಯರ್ ಡ್ಯಾಶ್ ಬೋರ್ಡ್ ಅನ್ನು ರಿ-ಡಿಸೈನ್ ಮಾಡಲಾಗಿದ್ದು, ಟಚ್ ಸ್ಕ್ರೀನ್ ಇನ್ಪೊ‍‍‍‍‍‍‍ಟೈನ್ ಮೆಂಟ್ ಸಿಸ್ಟಮ್ ನೀಡಲಾಗಿದ್ದು, ಇದು ವೆಹಿಕುಲರ್ ಸಿಸ್ಟಮ್ ಗಳನ್ನು ಕಂಟ್ರೋಲ್ ಮಾಡುವ ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಮತ್ತು ಇನ್ಫೊಟೈನ್ ಮೆಂಟ್ ಯೂನಿಟ್ ಒಳಗೊಂಡಿದೆ, ಇವುಗಳನ್ನು ಟಚ್ ಸ್ಕ್ರೀನ್ ನಿಂದ ಕಂಟ್ರೋಲ್ ಮಾಡಬಹುದು.

MUST READ: ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಕಾರಿನ ಮಾಹಿತಿ ಬಹಿರಂಗ

ಬಿಡುಗಡೆಗೆ ಸಿದ್ಧವಾಗಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5

ನಾಲ್ಕನೇ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್ 5, ಆರು ಸಿಲಿಂಡರ್ ನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳನ್ನು ಹೊಂದಿದೆ. ಅಂತರ್ ರಾಷ್ಟ್ರಿಯ ಮಾರುಕಟ್ಟೆಗಳಿಗಾಗಿ ವಿ8 ಪೆಟ್ರೋಲ್ ಎಂಜಿನ್ ಹೊಂದಿದೆ. ದೇಶಿಯ ಮಾರುಕಟ್ಟೆಗಾಗಿ ಹೊಸ ಬಿಎಂಡಬ್ಲ್ಯು ಬಹುಷಃ 3.0 ಲೀಟರಿನ 6 ಸಿಲಿಂಡರಿನ ಡೀಸೆಲ್ ಎಂಜಿನ್ ಹೊಂದಲಿದ್ದು, 261 ಬಿಹೆಚ್‍ಪಿ ಮತ್ತು 620 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. 8 ಸ್ಪೀಡಿನ ಆಟೊ ಮ್ಯಾಟಿಕ್ ಟ್ರಾನ್ಸ್ ಮಿಷನ್ ಎಲ್ಲಾ ನಾಲ್ಕು ವ್ಹೀಲ್ ಗಳನ್ನು ಬಿಎಂಡಬ್ಲ್ಯುವಿನ ಎಕ್ಸ್ ಡ್ರೈವ್ ಸಿಸ್ಟಂ ನಲ್ಲಿ ಚಲಾಯಿಸುತ್ತದೆ.

ಬಿಡುಗಡೆಗೆ ಸಿದ್ಧವಾಗಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5

ನಾಲ್ಕನೇ ತಲೆಮಾರಿನ ಬಿಎಂಡಬ್ಲ್ಯು ಗಾತ್ರದಲ್ಲಿ ಮೂರನೇ ತಲೆಮಾರಿನ ಮಾದರಿಗಿಂತ ಸ್ವಲ್ಪ ದೊಡ್ಡದಾಗಿದ್ದು, 4,922 ಎಂಎಂ ಉದ್ದ, 2,004 ಎಂಎಂ ಅಗಲ ಮತ್ತು 1,745 ಎಂಎಂ ಎತ್ತರವಾಗಿದೆ. ಅದರ ವ್ಹೀಲ್ ಬೇಸ್ 2,975 ಎಂಎಂ ಗಾತ್ರ ಹೊಂದಿದೆ.

ಬಿಡುಗಡೆಗೆ ಸಿದ್ಧವಾಗಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಎಷ್ಟೆ ಸ್ಪರ್ಧೆ ಇದ್ದರೂ ಮೂರನೇ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್ 5 ಯಶಸ್ವಿಯಾಗಿತ್ತು. ಅದಕ್ಕಿಂತ ಹೆಚ್ಚು ಫೀಚರ್ಸ್, ಲಾರ್ಜ್ ಡೈಮೆಂಷನ್ ಮತ್ತು ಲುಕ್ ಗಳನ್ನು ಹೊಂದಿರುವ ನಾಲ್ಕನೇ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್ 5 ಸಹ ಯಶಸ್ವಿಯಾಗುವುದೆಂಬ ನಿರೀಕ್ಷೆ ಇದೆ.

Most Read Articles

Kannada
English summary
BMW X5 Launch Date: The Fourth-Generation BMW X5 Is Set To Be Launched In India - Read in Kannada
Story first published: Thursday, April 25, 2019, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X