ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿನ ಆಟೋಮೊಬೈಲ್ ಉದ್ಯಮವು ನಿಧಾನಗತಿಯ ಪ್ರಗತಿಯನ್ನು ಕಾಣುತ್ತಿದೆ. ಬಹುತೇಕ ಎಲ್ಲಾ ಕಂಪನಿಗಳ ಮಾರಾಟವು ಕುಸಿತವನ್ನು ಕಾಣುತ್ತಿದೆ. ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನ ಸೇರಿದಂತೆ ಎಲ್ಲಾ ವಾಹನಗಳ ಮಾರಾಟವು ಕುಸಿತವಾಗಿದೆ.

ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

ಆಟೋಮೊಬೈಲ್ ಉದ್ಯಮದಲ್ಲಿನ ಕುಸಿತಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುವೆಂದರೆ ಆರ್ಥಿಕ ಹಿಂಜರಿತ, ಹೆಚ್ಚಿನ ಪ್ರಮಾಣದ ಜಿ‍ಎಸ್‍‍ಟಿ ತೆರಿಗೆ, ಒಲಾ ಹಾಗೂ ಉಬರ್ ಕಂಪನಿಗಳ ಪೈಪೋಟಿ, ಟ್ರಾಫಿಕ್ ಸಮಸ್ಯೆ ಹಾಗೂ 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿ‍ಎಸ್ 6 ಮಾಲಿನ್ಯ ನಿಯಮಗಳು.

ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

ಕುಸಿದಿರುವ ವಾಹನಗಳ ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರವು ಮಾತ್ರವಲ್ಲದೇ ಹಲವಾರು ರಾಜ್ಯ ಸರ್ಕಾರಗಳೂ ಸಹ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ.

ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

ಗೋವಾ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾಹನಗಳ ಮಾರಾಟವನ್ನು ಉತ್ತೇಜಿಸುವ ಸಲುವಾಗಿ ಗೋವಾ ಸರ್ಕಾರವು ರಸ್ತೆ ತೆರಿಗೆಯನ್ನು 50%ನಷ್ಟು ಕಡಿತಗೊಳಿಸಲಿದೆ. ನಿನ್ನೆ ಗೋವಾ ಸರ್ಕಾರವು ಈ ಸಂಬಂಧ ನಿರ್ಣಯವನ್ನು ಕೈಗೊಂಡಿದೆ.

ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

ಗೋವಾ ಸರ್ಕಾರವು ಅಕ್ಟೋಬರ್‍‍ನಿಂದ ಮುಂದಿನ ಮೂರು ತಿಂಗಳವರೆಗೆ ರಸ್ತೆ ತೆರಿಗೆಯನ್ನು 50%ನಷ್ಟು ಕಡಿತಗೊಳಿಸಲಿದೆ. ಇದರಿಂದ ವಾಹನಗಳ ಮಾರಾಟವು ಏರಿಕೆಯಾಗಬಹುದೆಂದು ನಿರೀಕ್ಷಿಸುತ್ತಿದೆ. ಈ ಬಗ್ಗೆ ಗೋವಾದ ಸಾರಿಗೆ ಸಚಿವ ಮೌವಿನ್ ಕುಟಿನೊರವರು ಮಾತನಾಡಿದ್ದಾರೆ.

ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

ಪ್ರತಿದಿನ ವಾಹನಗಳ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಜಾಹೀರಾತುಗಳನ್ನು ನೀಡಲಾಗುತ್ತಿದೆ. ಅದರಂತೆ ವಾಹನಗಳ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಗೋವಾದಲ್ಲಿ ರಸ್ತೆ ತೆರಿಗೆಯನ್ನು ಕಡಿತಗೊಳಿಸಲಾಗುವುದು ಎಂದು ಮೌವಿನ್ ಕುಟಿನೊರವರು ಹೇಳಿದರು.

ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರದ ಈ ನಿರ್ಧಾರದಿಂದಾಗಿ ವಾಹನಗಳ ಮಾರಾಟವು ಹೆಚ್ಚಾಗುವ ಸಾಧ್ಯತೆಗಳಿವೆ ಎಂದ ಸಚಿವರು, ರಸ್ತೆ ತೆರಿಗೆಯನ್ನು ಕಡಿತಗೊಳಿಸುವ ಸಂಬಂಧದ ಕಡತವನ್ನು ಅನುಮೋದನೆಗೆ ಕಳುಹಿಸಲಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ರಸ್ತೆ ತೆರಿಗೆಯನ್ನು ಕಡಿಮೆ ಮಾಡಲಾಗುವುದು ಎಂದು ಹೇಳಿದರು. ವಾಹನಗಳ ಮಾರಾಟವು ಗೋವಾದಲ್ಲಿಯೂ ಸಹ ಗಣನೀಯವಾಗಿ ಕುಸಿದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಜನರ ಖರೀದಿಸುವ ಶಕ್ತಿಯು ಕುಸಿದಿದೆ. ಜಿ‍ಎಸ್‍‍ಟಿ ತೆರಿಗೆ ದರವು ಇದರ ಕಾರಣಗಳಲ್ಲಿ ಒಂದಾಗಿದೆ. ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಗೋವಾದಲ್ಲಿನ ವಾಹನಗಳ ಮಾರಾಟವು 15%ನಷ್ಟು ಕುಸಿದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ವಾಹನ ಮಾರಾಟ ಹೆಚ್ಚಳಕ್ಕೆ ರಸ್ತೆ ತೆರಿಗೆ ಕಡಿಮೆಗೊಳಿಸಲಿದೆ ಈ ರಾಜ್ಯ

2019ರ ಏಪ್ರಿಲ್ - ಜುಲೈ ತಿಂಗಳ ಅವಧಿಯಲ್ಲಿ 19,485 ವಾಹನಗಳ ಮಾರಾಟವಾಗಿದ್ದರೆ, 2018ರ ಏಪ್ರಿಲ್ - ಜುಲೈ ತಿಂಗಳ ಅವಧಿಯಲ್ಲಿ 22,480 ವಾಹನಗಳು ಮಾರಾಟವಾಗಿದ್ದವು. ಗೋವಾ ಸರ್ಕಾರದ ಈ ನಿರ್ಧಾರದಿಂದ ವಾಹನಗಳ ಮಾರಾಟ ಪ್ರಮಾಣವು ಹೆಚ್ಚಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Government Action to Increase Vehicle Sales - Read in Kannada
Story first published: Tuesday, October 1, 2019, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X