ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ಹೊಸ ವಾಹನಗಳನ್ನು ಖರೀದಿಸಲು ಬಯಸುತ್ತಿದ್ದೀರಾ ? ಹಾಗಾದರೆ ಹೆಚ್ಚುವರಿ ರಿಜಿಸ್ಟ್ರೇಷನ್ ಶುಲ್ಕ ತೆರಲು ಸಿದ್ದರಾಗಿರಿ. ಇಂಟರ್‍‍ನಲ್ ಕಂಬಸ್ಜನ್ (ಐಸಿ) ಎಂಜಿನ್‌ಗಳನ್ನು ಬಳಸುವ ಎಲ್ಲಾ ರೀತಿಯ ವಾಹನಗಳ ರಿಜಿಸ್ಟ್ರೇಷನ್ ಹಾಗೂ ರಿ-ರಿಜಿಸ್ಟ್ರೇಷನ್ ಶುಲ್ಕಗಳನ್ನು 25%ನಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರವು ಮುಂದಾಗಿದೆ.

ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ಆದ ಕಾರಣ ಮುಂಬರುವ ತಿಂಗಳುಗಳಲ್ಲಿ ಪೆಟ್ರೋಲ್, ಡೀಸೆಲ್ ಎಂಜಿನ್ ಕಾರು ಹಾಗೂ ಬೈಕುಗಳ ಬೆಲೆಯು ಹೆಚ್ಚಾಗಲಿದೆ. ಇಂಟರ್‍‍ನಲ್ ಕಂಬಸ್ಜರ್ ಎಂಜಿನ್‍‍ಗಳೆಂದರೆ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಎಲ್‌ಪಿಜಿಯಲ್ಲಿ ಚಲಿಸುವ ವಾಹನಗಳು. ನೋಂದಣಿ ಶುಲ್ಕಗಳ ಹೆಚ್ಚಳವು ಎಲೆಕ್ಟ್ರಿಕ್ ವಾಹನಗಳಿಗೆ ಅನ್ವಯಿಸುವುದಿಲ್ಲ.

ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ಎಲೆಕ್ಟ್ರಿಕ್ ವಾಹನಗಳು ರಸ್ತೆ ತೆರಿಗೆಯಿಂದಲೂ ವಿನಾಯಿತಿ ಪಡೆದಿವೆ. ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಜನಪ್ರಿಯಗೊಳಿಸಲು ಹಾಗೂ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ಬಳಕೆಯನ್ನು ಕಡಿಮೆಗೊಳಿಸಲು ಈ ಕ್ರಮ ಕೈಗೊಂಡಿದೆ.

ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ನೋಂದಣಿ ಶುಲ್ಕ ಹೆಚ್ಚಳದ ಬಗ್ಗೆ ಹೇಳುವುದಾದರೆ, ಸರ್ಕಾರವು ದ್ವಿಚಕ್ರ ವಾಹನಗಳ ಶುಲ್ಕವನ್ನು ಪ್ರಸ್ತುತವಿರುವ ರೂ.50ಗಳಿಂದ, ರೂ.1,000ಗಳಿಗೆ ಹೆಚ್ಚಿಸಲಿದೆ. ಅಂದರೆ 20 ಪಟ್ಟು ಹೆಚ್ಚಳವಾಗಲಿದೆ. ಸದ್ಯಕ್ಕೆ ಕಾರುಗಳ ನೋಂದಣಿ ಶುಲ್ಕವು ರೂ.500ಗಳಿದ್ದು, ಇದನ್ನು ರೂ.5,000ಗಳಿಗೆ ಹೆಚ್ಚಿಸಲಾಗುವುದು.

ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ಅಂದರೆ ಪ್ರಸ್ತುತ ಬೆಲೆಗಿಂತ 10 ಪಟ್ಟು ಹೆಚ್ಚಾಗಲಿದೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ. ವಾಹನಗಳನ್ನು ರಿ-ರಿಜಿಸ್ಟ್ರೇಷನ್ ಮಾಡಿಸುವುದು ಅಂದರೆ ಉಪಯೋಗಿಸಿದ ಕಾರುಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ಖರೀದಿಸುವ ನೋಂದಣಿ ಶುಲ್ಕದಲ್ಲಿಯೂ ತೀವ್ರ ಏರಿಕೆಯಾಗಲಿದೆ.

ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಸದ್ಯಕ್ಕೆ ದ್ವಿಚಕ್ರ ವಾಹನಗಳ ಮರು ನೋಂದಣಿ ಶುಲ್ಕದ ಬೆಲೆ ರೂ.50ಗಳಾಗಿದ್ದು, ಇದನ್ನು ರೂ.2,000ಗಳಿಗೆ ಏರಿಸಲಾಗುವುದು. ಸದ್ಯದ ದರಕ್ಕಿಂತ 40 ಪಟ್ಟು ಹೆಚ್ಚಾಗಲಿದೆ. ಕಾರುಗಳ ಮರು ನೋಂದಣಿ ಶುಲ್ಕವನ್ನು ರೂ.600ಗಳಿಂದ ರೂ.15,000ಗಳಿಗೆ ಅಂದರೆ 25%ನಷ್ಟು ಏರಿಸಲಾಗುವುದು.

ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ಉಪಯೋಗಿಸಿದ ಕಾರುಗಳ ನೋಂದಣಿಗಾಗಿ ರೂ.15,000 ಹಾಗೂ ದ್ವಿಚಕ್ರ ವಾಹನಗಳ ನೋಂದಣಿ ಶುಲ್ಕವಾಗಿ ರೂ.2,000ಗಳನ್ನು ಪಾವತಿಸಬೇಕಾಗುತ್ತದೆ. ಹೊಸ ನೋಂದಣಿ ಶುಲ್ಕಗಳು ಮುಂದಿನ 30 ರಿಂದ 45 ದಿನಗಳಲ್ಲಿ ಜಾರಿಗೆ ಬರಲಿವೆ ಎಂದು ಹೆಸರೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ತಿಳಿಸಿದ್ದಾರೆ.

ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ಟೈಮ್ಸ್ ಆಫ್ ಇಂಡಿಯಾ ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ 40-45 ದಿನಗಳಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸುವ ಮೊದಲು ನಾವು ಎಲ್ಲರಿಂದ ಪ್ರತಿಕ್ರಿಯೆ ಕೋರಿದ್ದೇವೆ. ವಾಣಿಜ್ಯ ವಾಹನಗಳಿಗೆ, ವಿಶೇಷವಾಗಿ ಟ್ರಕ್‌ಗಳು, ಬಸ್‌ಗಳು ಮತ್ತು ಇತರ ಭಾರೀ ವಾಹನಗಳಿಗೆ ನವೀಕರಣ ಶುಲ್ಕವನ್ನು ಸುಮಾರು 27 ಪಟ್ಟು ಹೆಚ್ಚಿಸುವ ಪ್ರಸ್ತಾವನೆಯು 15 ವರ್ಷ ಹಳೆಯದಾದ ವಾಹನಗಳನ್ನು ಜನರು ಬಳಸದಂತೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.

ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ಸರ್ಕಾರದ ಈ ನಿರ್ಧಾರವು ಕಾರು ಮಾರುಕಟ್ಟೆಯು ತೀವ್ರ ಕುಸಿತವನ್ನು ಅನುಭವಿಸುತ್ತಿರುವ ಸಮಯದಲ್ಲಿ ಬಂದಿದೆ. ಮಾರಾಟವಾಗದೇ ಉಳಿದಿರುವ 60,000 ಕೋಟಿ ಮೌಲ್ಯದ ಕಾರು ಹಾಗೂ ದ್ವಿಚಕ್ರ ವಾಹನಗಳಿಂದಾಗಿ ವಿತರಕರು, ವಾಹನ ತಯಾರಕರು ಹಾಗೂ ವಾಹನ ಬಿಡಿಭಾಗಗಳ ತಯಾರಕರ ಮೇಲೆ ತೀವ್ರ ಒತ್ತಡ ಉಂಟಾಗುತ್ತಿದೆ.

ಕೇಂದ್ರದಿಂದ ಹೊಸ ನೀತಿ: ವಾಹನ ಖರೀದಿ ಇನ್ಮುಂದೆ ಸುಲಭವಲ್ಲ

ಅನೇಕ ಡೀಲರ್‍‍ಗಳು ಅಂಗಡಿಯನ್ನು ಮುಚ್ಚಿದ್ದು ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ. ವಾಹನ ಬಿಡಿಭಾಗಗಳ ತಯಾರಕರ ಪ್ರಕಾರ, ಬೇಡಿಕೆಯು ಹೆಚ್ಚಾಗದಿದ್ದರೆ ಸುಮಾರು 10 ಲಕ್ಷ ಉದ್ಯೋಗಗಳು ಕಡಿತಗೊಳ್ಳಲಿವೆ. ಕಾರು ತಯಾರಕ ಕಂಪನಿಗಳು ಉತ್ಪಾದನೆಯನ್ನು ನಿಧಾನಗೊಳಿಸಿ, ವಾಹನಗಳ ಬಿಡುಗಡೆಯನ್ನು ಮುಂದೂಡುತ್ತಿವೆ.

Source:ಟೈಮ್ಸ್ ಆಫ್ ಇಂಡಿಯಾ

Most Read Articles

Kannada
English summary
Government to increase registration charges on cars & two wheelers by 25 times! - Read in kannada
Story first published: Saturday, July 27, 2019, 18:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X