Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹೀಂದ್ರಾ ಕಾರು ಖರೀದಿ ಮೇಲೆ ಭರ್ಜರಿ ರಿಯಾಯಿತಿಗಳು
ಕಳೆದ ಕೆಲವು ತಿಂಗಳುಗಳಿಂದ ಕಾರು ಹಾಗೂ ಬೈಕುಗಳ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಮಾರಾಟಕ್ಕೆ ಚೇತರಿಕೆ ನೀಡುವ ಸಲುವಾಗಿ ಬಹುತೇಕ ವಾಹನ ಕಂಪನಿಗಳು ಭಾರೀ ಪ್ರಮಾಣದಲ್ಲಿ ರಿಯಾಯಿತಿಗಳನ್ನು ನೀಡುತ್ತಿವೆ.

ಮಹೀಂದ್ರಾ ಕಂಪನಿಯು ಸಹ ಹಲವಾರು ರಿಯಾಯಿತಿಗಳನ್ನು ನೀಡುತ್ತಿದೆ. ಹೊಸ ಉತ್ಪನ್ನಗಳಾದ ಎಕ್ಸ್ ಯುವಿ 300 ಮತ್ತು ಅಲ್ಟುರಾಸ್ ಜಿ4 ಹೊರತುಪಡಿಸಿ, ತನ್ನ ಬೇರೆಲ್ಲಾ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ. ಮಹೀಂದ್ರಾ ಕಂಪನಿಯು ಜೂನ್ ತಿಂಗಳಿನಲ್ಲಿ ನೀಡುತ್ತಿರುವ ರಿಯಾಯಿತಿಗಳ ಬಗ್ಗೆ ತಿಳಿದುಕೊಳ್ಳೊಣ.

ಮಹೀಂದ್ರಾ ಕೆಯುವಿ 100
ರೂ.73,000 ರವರೆಗೆ ರಿಯಾಯಿತಿ
ಮಹೀಂದ್ರಾ ಕೆಯುವಿ100 ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಏಕೈಕ ಮೈಕ್ರೊ ಎಸ್‍ಯುವಿ ವಾಹನವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಬಗೆಯ ಎಂಜಿನ್‍ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ತನ್ನ ವಿನ್ಯಾಸದಿಂದಾಗಿ ಈ ವಾಹನವು ಜನರ ಗಮನವನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಹೊಂದಿದೆ. ಇದು ವಿವಿಧ ಬಗೆಯ ಗಾತ್ರಗಳಲ್ಲಿ ದೊರೆಯಲಿದೆ.

ಗಾತ್ರಕ್ಕೆ ತಕ್ಕಂತೆ ರೂ.73,000ಗಳವರೆಗೆ ರಿಯಾಯಿತಿ ದೊರೆಯಲಿದೆ. ಮೂಲ ಮಾದರಿಯಾದ ಕೆ2 ವಾಹನದ ಮೇಲೆ 15,000ರೂ.ಗಳ ರಿಯಾಯಿತಿ ಮತ್ತು ಕೆ4 ಗಾತ್ರದ ಮೇಲೆ 21,000ರೂ.ಗಳ ರಿಯಾಯಿತಿ ದೊರೆಯಲಿದೆ. ಟಾಪ್ ಮಾದರಿಯ ಕೆ6 ಮತ್ತು ಕೆ8 ವಾಹನಗಳ ಮೇಲೆ 35,000ರೂ.ಗಳ ರಿಯಾಯಿತಿ ದೊರೆಯಲಿದೆ. ಇದರ ಜೊತೆಗೆ ಮಹೀಂದ್ರಾ ಕಂಪನಿಯು ವಿನಿಮಯಕ್ಕಾಗಿ 29,000 ರೂ.ಗಳ ಹೆಚ್ಚುವರಿ ರಿಯಾಯಿತಿಯ ಜೊತೆಗೆ ಕಾರ್ಪೋರೇಟ್ ಬೋನಸ್‍ಗಾಗಿ ರೂ.4,000 ಹಾಗೂ ಬಿಡಿಭಾಗಗಳ ಮೇಲೆ ರೂ.5,000ಗಳ ರಿಯಾಯಿತಿ ನೀಡಲಿದೆ.

ಮಹೀಂದ್ರಾ ಟಿಯುವಿ 300
82,500 ರೂ.ಗಳವರೆಗೆ ರಿಯಾಯಿತಿ
ಮಹೀಂದ್ರಾ ಕಂಪನಿಯ ಒರಟು ರೂಪದ ಸಬ್ 4 ಮೀಟರಿನ ಎಸ್‍ಯುವಿ ಕಾರಿನಲ್ಲಿ ಲಾಡರ್ ಫ್ರೇಂ ಚಾಸೀಸ್ ಅಳವಡಿಸಲಾಗಿದೆ. ಇತ್ತೀಚಿಗಷ್ಟೇ ಪರಿಷ್ಕೃತ ಆವೃತ್ತಿಯ ಟಿಯುವಿ300 ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಆವೃತ್ತಿಯ ಬಿಡುಗಡೆಗೆ ಮುಂಚೆಯಿದ್ದ ಟಿಯುವಿ300 ವಾಹನಗಳಿಗೆ ಮಾತ್ರ ರಿಯಾಯಿತಿ ದೊರೆಯಲಿದೆ. ಮಹೀಂದ್ರಾ ರೂ.58,000ಗಳಷ್ಟು ಭಾರೀ ರಿಯಾಯಿತಿಯನ್ನು ಟಿಯುವಿ300 ಕಾರಿನ ಎಲ್ಲಾ ಮಾದರಿಯ ವಾಹನಗಳ ಮೇಲೆ ನೀಡಲಿದೆ.

ವಿನಿಮಯಕ್ಕಾಗಿ 15,000ರೂ.ಗಳ ಹೆಚ್ಚುವರಿ ಬೋನಸ್ ನೀಡಲಾಗುವುದು. ಇದರ ಜೊತೆಗೆ ಕಂಪನಿಯ ಬಿಡಿಭಾಗಗಳ ಮೇಲೆ ರೂ.5,000 ರಿಯಾಯಿತಿ ಹಾಗೂ ಕಾರ್ಪೋರೇಟ್ ಬೋನಸ್‍ಗಾಗಿ ರೂ.4,500 ರಿಯಾಯಿತಿ ಸೇರಿದಂತೆ ಒಟ್ಟಾರೆಯಾಗಿ ರೂ.82,500ದವರೆಗೆ ರಿಯಾಯಿತಿ ನೀಡಲಾಗುವುದು.

ಮಹೀಂದ್ರಾ ಟಿಯುವಿ300 ಪ್ಲಸ್
ರೂ.69,500 ರೂ.ಗಳವರೆಗೆ ರಿಯಾಯಿತಿ
ಮಹೀಂದ್ರಾ 7 ಸೀಟರ್‍ನ ಎಕ್ಸ್ ಟೆಂಡೆಡ್ ವ್ಹೀಲ್ ಬೇಸ್ ಹೊಂದಿರುವ ಟಿಯುವಿ300 ಕಾರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ, ಈ ವಾಹನಕ್ಕೆ ಟಿಯುವಿ 300 ಪ್ಲಸ್ ಎಂಬ ಹೆಸರೂ ಸಹ ಇದೆ. ಈ ವಾಹನದ ಮೇಲೆ ಈ ತಿಂಗಳಿನಲ್ಲಿ ರೂ.69,500ಗಳವರೆಗೆ ರಿಯಾಯಿತಿ ದೊರೆಯಲಿದೆ.

ಈ ವಾಹನದ ಮೇಲೆ ರೂ.40,000ಗಳ ನಗದು ರಿಯಾಯಿತಿ ಹಾಗೂ ವಿನಿಮಯಕ್ಕೆ ರೂ.25,000ಗಳ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ. ಇದರ ಜೊತೆಗೆ ಬಿಡಿಭಾಗಗಳ ಮೇಲೆ ರೂ.5,000 ಹಾಗೂ ರೂ.4,500ಗಳ ಕಾರ್ಪೋರೇಟ್ ಬೋನಸ್ ರಿಯಾಯಿತಿ ನೀಡಲಾಗುವುದು.

ಮಹೀಂದ್ರಾ ಬೊಲೆರೋ ಪವರ್ ಪ್ಲಸ್
ರೂ.29,000 ಗಳವರೆಗೆ ರಿಯಾಯಿತಿ
ಮಹೀಂದ್ರಾ ಬೊಲೆರೋ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಬೊಲೆರೋ ಪವರ್ ಪ್ಲಸ್ ವಾಹನದ ಮೇಲೆ 29,000 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ರಿಯಾಯಿತಿಯು ರೂ.11,500ಗಳ ಕ್ಯಾಶ್‍ಬ್ಯಾಕ್ ರೂಪದಲ್ಲಿ, ರೂ.3,500 ಬಿಡಿಭಾಗಗಳ ಮೇಲೆ ಅಥವಾ ರೂ.15,000ಗಳನ್ನು ಡೈರೆಕ್ಟ್ ಕ್ಯಾಶ್‍ಬ್ಯಾಕ್ ಆಗಿ ನೀಡಲಾಗುವುದು. ವಿನಿಮಯದ ಮೇಲೆ ರೂ.10,000ಗಳ ಜೊತೆಗೆ, ರೂ.4,000ಗಳ ಕಾರ್ಪೋರೇಟ್ ಬೋನಸ್ ರಿಯಾಯಿತಿ ನೀಡಲಾಗುವುದು.
MOST READ: ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಮಹೀಂದ್ರಾ ಮರಜೋ
70,000 ರೂ.ಗಳವರೆಗೆ ರಿಯಾಯಿತಿ
ಮರಾಜೋ ಕಾರ್ ಅನ್ನು ಮಹೀಂದ್ರಾ ಕಂಪನಿಯು ಅಂತರ್‍ರಾಷ್ಟ್ರೀಯ ಮಟ್ಟದ ಬಿಡಿಭಾಗಗಳನ್ನು ಬಳಸಿ ಅಭಿವೃದ್ಧಿಪಡಿಸಿದೆ. ಈ ಎಂಪಿವಿ ಕಾರಿನ ಮೇಲೆ ರೂ.65,000ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ವಾಹನದ ಮೇಲೆ ಮೊದಲ ವರ್ಷದ ಇನ್ಶೂರೆನ್ಸ್ ಅನ್ನು ಉಚಿತವಾಗಿ ನೀಡುವುದರ ಜೊತೆಗೆ ವಿನಿಮಯಕ್ಕಾಗಿ ಎಂ6 ಹಾಗೂ ಎಂ8 ಕಾರುಗಳ ಮೇಲೆ ರೂ.40,000ಗಳ ರಿಯಾಯಿತಿ ನೀಡಲಾಗುವುದು. ಎಂ2 ಹಾಗೂ ಎಂ4 ಮಾದರಿಯ ವಾಹನಗಳ ಮೇಲೆ ರೂ.15,000ಗಳವರೆಗೆ ವಿನಿಮಯ ರಿಯಾಯಿತಿ ನೀಡಲಾಗುವುದು. ಈ ಕಾರಿನ ಎಲ್ಲಾ ಮಾದರಿಗಳ ಮೇಲೂ ರೂ.7,000ಗಳ ಕಾರ್ಪೋರೇಟ್ ಬೋನಸ್ ರಿಯಾಯಿತಿ ನೀಡಲಾಗುವುದು.
MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರುಗಳ ಕಲರವ..!

ಮಹೀಂದ್ರಾ ಸ್ಕಾರ್ಪಿಯೋ
ರೂ.75,000 ಗಳವರೆಗೆ ರಿಯಾಯಿತಿ
ಜನಪ್ರಿಯ ಸ್ಕಾರ್ಪಿಯೋ ಮೇಲೆಯೂ ಜೂನ್ ತಿಂಗಳಿನಲ್ಲಿ ರಿಯಾಯಿತಿ ನೀಡಲಾಗುವುದು. ಸ್ಕಾರ್ಪಿಯೋ ಎಸ್‍ಯುವಿ ಮೇಲೆ ರೂ.75,000ಗಳವರೆಗೆ ರಿಯಾಯಿತಿ ನೀಡಲಾಗುವುದು. ಇದರಲ್ಲಿ ರೂ.35,000 ನಗದು ರಿಯಾಯಿತಿಯಾಗಿರಲಿದೆ. 25,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ವಿನಿಮಯದ ಮೇಲೆ ನೀಡಲಾಗುವುದು. ಬಿಡಿಭಾಗಗಳ ಮೇಲೆ ರೂ.10,000 ಹಾಗೂ ಕಾರ್ಪೋರೇಟ್ ಬೋನಸ್‍ಗಾಗಿ ರೂ.5,000 ನೀಡಲಾಗುವುದು.
MOST READ: ಫಿಲ್ಮಿ ಸ್ಟೈಲ್‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್

ಮಹೀಂದ್ರಾ ಎಕ್ಸ್ ಯುವಿ500
ರೂ.70,000 ಗಳವರೆಗೆ ರಿಯಾಯಿತಿ
ಮಹೀಂದ್ರಾ ಎಕ್ಸ್ ಯುವಿ 500 ಆಕರ್ಷಕ ಲುಕ್ ಹೊಂದಿದ್ದು, ಫ್ಯಾಮಿಲಿ ಒರಿಯಂಟ್ ಕಾರ್ ಆಗಿದ್ದು, ಈ ಸೆಗ್‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಕಾರ್ ಆಗಿದೆ. ಈ ಸೆಗ್‍ಮೆಂಟಿನಲ್ಲಿ ಟಾಟಾ ಹ್ಯಾರಿಯರ್ ಹಾಗೂ ಜೀಪ್ ಕಂಪಾಸ್ ಕಾರುಗಳಿಂದ ಪೈಪೋಟಿಯನ್ನು ಎದುರಿಸುತ್ತಿದೆ. ರೂ.26,000ಗಳ ನಗದು ರಿಯಾಯಿತಿ ಮತ್ತು ರೂ.26,000ಗಳ ಹೆಚ್ಚುವರಿ ರಿಯಾಯಿತಿಯನ್ನು ವಿನಿಮಯಗಳ ಮೇಲೆ ನೀಡುತ್ತದೆ. ಇದರ ಜೊತೆಗೆ ಬಿಡಿಭಾಗಗಳ ಮೇಲೆ ರೂ.10,000 ಹಾಗೂ ಕಾರ್ಪೋರೇಟ್ ಬೋನಸ್‍ಗಾಗಿ ರೂ.9,000 ರಿಯಾಯಿತಿ ನೀಡಲಿದೆ.