Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾದ ಸಿಎನ್‍ಜಿ ಆಧಾರಿತ ಹ್ಯುಂಡೈ ಗ್ರ್ಯಾಂಡ್ ಐ10
ದಕ್ಷಿಣ ಕೊರಿಯಾ ಮೂಲದ ಪ್ಯಾಸೆಂಜರ್ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಜನಪ್ರಿಯ ಗ್ರ್ಯಾಂಡ್ ಐ10 ಕಾರಿನ ಸಿಎನ್‍ಜಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 6.39 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಮಿಡ್-ಸ್ಪೆಕ್ ವೇರಿಯಂಟ್ ಆದ 'ಮ್ಯಾಗ್ಮಾ'ನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಈ ಹಿಂದಯೆ ಹ್ಯುಂಡೈ ಸಂಸ್ಥೆಯು ಸಿಎನ್‍ಜಿ ಆಧಾರಿತ ವಾಹನಗಳನ್ನು ಕೇವಲ ಟ್ಯಾಕ್ಸಿ ಆಪರೇಟರ್‍ಗಳಿಗೆ ಸೀಮಿತವಾಗಿದ್ದು, ಇದೀಗ ಹ್ಯುಂಡೈ ಸಂಸ್ಥೆಯು ಸ್ವಂತ ಬಳಕೆದಾರರಿಗೆ ಕೂಡಾ ಲಭ್ಯವಾಗುವ ಹಾಗೆ ಮಾಡಿದೆ. ಹ್ಯುಂಡೈ ಸಂಸ್ಥೆಯಲ್ಲಿ ಹೊಸದಾಗಿ ಬಿಡುಗಡೆಗೊಂಡ ಸ್ಯಾಂಟ್ರೋ ಕಾರು ಕೂಡಾ ಸಿಎನ್‍ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಸ್ಟ್ಯಾಂಡರ್ಡ್ ಪೆಟ್ರೋಲ್ ಆಧಾರಿತ ಮ್ಯಾಗ್ಮಾ ವೇರಿಯೆಂಟ್ ಹಾಗು ಸಿಎನ್‍ಜಿ ಆಯ್ಕೆಗೆ ಹೋಲಿಸಿದರೆ ಬೆಲೆಯನಲ್ಲಿ ಸುಮಾರು ರೂ. 67,000ದ ವ್ಯತ್ಯಾಸ ಇದೆ. ಸಿಎನ್‍ಜಿ ಎಂಜಿನ್ ಅನ್ನು ಹೊರತು ಪಡಿಸಿ ಈ ಕಾರಿನಲ್ಲಿ ಬೇರಾವುದೇ ಬದಲಾವಣೆಗಳನ್ನು ಮಾಡಲಿಲ್ಲವಾಗಿದೆ.

ಎಂಜಿನ್ ಸಾಮರ್ಥ್ಯ
ಸಿಎನ್‍ಜಿ ಆಧಾರಿತ ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳು 1.2 ಲೀಟರ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 66 ಬಿಹೆಚ್‍ಪಿ ಹಾಗು 98 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಪೆಟ್ರೋಲ್ ಆಧಾರಿತ ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳು 1.2 ಲೀಟರ್ 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82 ಬಿಹೆಚ್‍ಪಿ ಮತ್ತು 110ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

ಹ್ಯುಂಡೈ ಸಂಸ್ಥೆಯು 2013ರ ಸೆಪೆಟೆಂಬರ್ ತಿಂಗಳಿನಲ್ಲಿ ತಮ್ಮ ಗ್ಯಾಂಡ್ ಐ10 ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಸುಮಾರು 6 ವರ್ಷಗಳಲಿ 7 ಲಕ್ಷಕ್ಕು ಅಧಿಕವಾದ ಕಾರುಗಳು ಮಾರಾಟಗೊಂಡಿವೆ ಎನ್ನಲಾಗಿದೆ.

ಜುಲೈ 2014ರಲ್ಲಿ ಅಂದರೆ ಬಿಡುಗಡೆಗೊಂಡ ಕೇವಲ 10 ತಿಂಗಳಿನಲ್ಲಿ ಸುಮಾರು 1 ಲಕ್ಷದ ಗ್ರ್ಯಾಂಡ್ ಐ10 ಕಾರುಗಳು ಮಾರಾಟಗೊಂಡಿದ್ದು, ಮಾರುಕಟ್ಟೆಯಲ್ಲಿರುವ ಮತ್ತೊಂದು ಜನಪ್ರಿಯ ಹ್ಯಾಚ್‍ಬ್ಯಾಕ್ ಕಾರಾದ ಮಾರುತಿ ಸುಜುಕಿ ಸ್ವಿಫ್ಟ್ ಗೆ ಪೈಪೋಟಿ ನೀಡುತ್ತಿದೆ. ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಕಾರು ಹೆಚ್ಚು ವೈಶಿಷ್ಟ್ಯತೆಯನ್ನು ಪಡೆದುಕೊಂಡಿರುವ ಕಾರಣ ಗ್ರಾಹಕರು ಇದನ್ನು ಖರೀಸಿದಲು ಮುಂದಾಗುತ್ತಿದ್ದಾರೆ.

ಲಭ್ಯವಿರುವ ಬಣ್ಣಗಳು
ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳು ಸ್ಟಾರ್ ಡಸ್ಟ್, ಫೈರಿ ರೆಡ್, ಟೈಫೂನ್ ಸಿಲ್ವರ್, ಮಾರಿಯಾನ ಬ್ಲೂ, ಪೋಲಾರ್ ವೈಟ್ ಮತ್ತು ಫ್ಲೇಮ್ ಆರೆಂಜ್ ಎಂಬ ಆರು ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಜೊತೆಗೆ ಸುರಕ್ಷಾ ಸೌಲಭ್ಯಗಳ ವಿಭಾಗದಲ್ಲೂ ಇತರೆ ಹ್ಯಾಚ್‌ಬ್ಯಾಕ್ ಕಾರುಗಳಿಂತ ಭಿನ್ನವಾಗಿರುವ ಗ್ರ್ಯಾಂಡ್ ಐ10 ಕಾರುಗಳು ಎಬಿಎಸ್, ಫಾಗ್ ಲ್ಯಾಂಪ್, ಆ್ಯಂಟಿ ಥೆಫ್ಟ್ ಸಿಸ್ಟಂ ಸೇರಿದಂತೆ 256-ಲೀಟರ್ ಬೂಟ್ ಸ್ಪೆಸ್‌ನೊಂದಿಗೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಲಿದೆ.

ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಮುಂಭಾಗದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೆಕ್ಸಾಗನಲ್ ಗ್ರಿಲ್, ಕ್ರೋಮ್ ಅಕ್ಕ್ಸೆಂಟ್ ಮತ್ತು ಸ್ಪೋರ್ಟಿ ಬಂಪರ್‍ಗಳನ್ನು ನೀಡಲಾಗಿದೆ. ಆದರೆ ಕೊರಿಯಾ ದೇಶದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರಿನ ಹೊರಭಾಗದಲ್ಲಿ ಎಲ್ಇಡಿ ಡಿಆರ್‍ಎಲ್ ಅನ್ನು ಪಡೆದುಕೊಂಡಿದೆ.