ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹೊಸ ವಾಹನಗಳ ಸಂಖ್ಯೆಯಿಂದಾಗಿ ಪಾರ್ಕಿಂಗ್ ಸಮಸ್ಯೆ ತಲೆ ನೋವಾಗಿ ಪರಿಣಮಿಸಿದ್ದು, ಸಾರ್ವಜನಿಕ ಪ್ರದೇಶಗಳಲ್ಲೇ ವಾಹನ ನಿಲುಗಡೆಯಿಂದಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಬೇಕಾಬಿಟ್ಟಿ ವಾಹನ ನಿಲುಗಡೆಯನ್ನು ತಡೆಯಲು ಹೊಸ ನಿಯಮವೊಂದನ್ನು ಜಾರಿಗೆ ತರವಾಗುತ್ತಿದ್ದು, ಗರಿಷ್ಠ 10 ಸಾವಿರ ತನಕ ದಂಡವಿಧಿಸಲು ನಿರ್ಧರಿಸಲಾಗಿದೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ಹೌದು, ಮುಂಬೈ ಮಹಾನಗರ ಪಾಲಿಕೆಯು(ಬಿಎಂಸಿ) ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವ ವಾಹನ ಮಾಲೀಕರಿಗೆ ರೂ. 1 ಸಾವಿರದಿಂದ ರೂ.10 ಸಾವಿರ ತನಕ ದಂಡ ವಿಧಿಸುವ ಹೊಸ ನಿಯಮವೊಂದನ್ನು ಜಾರಿಗೆ ತರಲು ನಿರ್ಧರಿಸಿದ್ದು, ಮುಂದಿನ ತಿಂಗಳು ಜುಲೈ 7ರಿಂದಲೇ ನೋ ಪಾರ್ಕಿಂಗ್ ಜಾಗಗಳಲ್ಲಿ ನಿಲುಗಡೆಯಾಗುವ ವಾಹನಗಳಿಗೆ ಭರ್ಜರಿ ದಂಡ ಬೀಳಲಿದೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ನೋ ಪಾರ್ಕಿಂಗ್ ಪ್ರದೇಶ ಮತ್ತು ವಾಹನ ಮಾದರಿಗಳಿಗೆ ಅನುಗುಣವಾಗಿ ದಂಡದ ಮೊತ್ತದ ನಿರ್ಧಾರವಾಗಲಿದ್ದು, ಇ-ಚಲನ್ ಮೂಲಕವೇ ದಂಡವಿಧಿಸುವುದಾಗಿ ಮುಂಬೈ ಮಹಾನಗರ ಪಾಲಿಕೆಯು ಹೊಸ ಸುತ್ತೋಲೆ ಹೊರಡಿಸಿದೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ಹಾಗೆಯೇ ಮುಂಬೈ ನಗರದ ಪ್ರಮುಖ ಪ್ರದೇಶಗಳನ್ನು ಗುರುತಿಸಿರುವ ಮಹಾನಗರ ಪಾಲಿಕೆಯು ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕ ಮೊತ್ತದ ದಂಡ ವಿಧಿಸಲು ಸೂಚಿಸಲಾಗಿದ್ದು, ಪದೇ ಪದೇ ನಿಯಮ ಉಲ್ಲಂಘಿಸುವ ವಾಹನಗಳನ್ನು ಟ್ರಾಫಿಕ್ ಪೊಲೀಸರೇ ಜಪ್ತಿ ಮಾಡಲಿದ್ದಾರೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ನೋ ಪಾರ್ಕಿಂಗ್‌ನಲ್ಲಿ ವಾಹನಗಳ ನಿಲುಗಡೆಯಿಂದಾಗಿ ಸಾರ್ವಜನಿಕರಿಗೆ ಹೆಚ್ಚು ಕಿರಿಕಿರಿಯಾಗುತ್ತಿರುವುದಲ್ಲದೇ, ಟ್ರಾಫಿಕ್ ಸಮಸ್ಯೆಗೂ ಕೂಡಾ ಇದು ಪ್ರಮುಖ ಕಾರಣವಾಗಿದೆ. ಪ್ರಮುಖ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಕಾರುಗಳನ್ನು ನಿಲುಗಡೆ ಮಾಡಿದಾಗ ಸಂಚಾರ ದಟ್ಟಣೆ ಹೆಚ್ಚಲಿದ್ದು, ಕೆಲವು ಬಾರಿ ತುರ್ತು ಸೇವಾ ವಾಹನಗಳ ಓಡಾಟಕ್ಕೂ ಇದು ತೊಂದರೆ ಉಂಟುಮಾಡುತ್ತವೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ಇದರಿಂದ ಸದ್ಯ ಚಾಲ್ತಿಯಲ್ಲಿರುವ ದಂಡದ ಮೊತ್ತವನ್ನು ರೂ.1 ಸಾವಿರದಿಂದ ರೂ.10 ಸಾವಿರ ತನಕ ದಂಡವಿಧಿಸಲು ನಿರ್ಧರಿಸಲಾಗಿದ್ದು, ಈಗಲಾದರೂ ಮುಂಬೈ ನಂತಹ ಬೃಹತ್ ಮಾಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆಯ್ಯಾ ಎಂದು ಕಾಯ್ದುನೋಡಬೇಕಿದೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ಇನ್ನು ಮುಂಬೈ ನಗರದಲ್ಲಿ ನೋ ಪಾರ್ಕಿಂಗ್‌ಗೆ ಅಧಿಕವಾಗಿ ದಂಡವಿಧಿಸಲು ಮುಂದಾಗಿದ್ದರೆ ನಮ್ಮ ಬೆಂಗಳೂರಿನಲ್ಲೂ ಸಹ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಹೊಸ ಕ್ರಮವೊಂದನ್ನು ಜಾರಿಗೆ ತರಲಾಗಿದೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ಹೊಸ ವಾಹನಗಳಿಂತ ಹೆಚ್ಚು ಕೆಟ್ಟನಿಂತ ವಾಹನಗಳಿಂದಲೇ ಟ್ರಾಫಿಕ್ ಕಿರಿಕಿರಿ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಇದಕ್ಕೆ ಮುಕ್ತಿ ನೀಡಲು ಮುಂದಾಗಿರುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಕೆಟ್ಟವಾಹನಗಳನ್ನು ಪಾರ್ಕ್ ಮಾಡುವ ಮಾಲೀಕರಿಗೆ ಭರ್ಜರಿಯಾಗಿ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟನಿಂತ ವಾಹನಗಳನ್ನು ಪಾರ್ಕ್ ಮಾಡುವ ವಾಹನ ಮಾಲೀಕರಿಗೆ ಗಂಟೆ ಲೆಕ್ಕದಲ್ಲಿ ದಂಡ ಹಾಕಲು ಮುಂದಾಗಿರುವ ಟ್ರಾಫಿಕ್ ಪೊಲೀಸರು ಈ ಸಂಬಂಧ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ಗಂಟೆ ಲೆಕ್ಕದಲ್ಲಿ ಬೀಳುತ್ತೆ ಫೈನ್

ಸಾರ್ವಜನಿಕ ಪ್ರದೇಶಗಳಲ್ಲಿ ಕೆಟ್ಟುನಿಂತ ವಾಹನಗಳನ್ನು ಪಾರ್ಕ್ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ವಾಹನ ಮಾಲೀಕರಿಗೆ ಪ್ರತಿ ಗಂಟೆಗೆ ರೂ.50 ಅಂತೆ ದಂಡ ವಸೂಲಿ ಮಾಡಲು ನಿರ್ಧರಿಸಲಾಗಿದ್ದು, ದಿನ ಪೂರ್ತಿ ಪಾರ್ಕ್ ಮಾಡಿದ್ದೇ ಆದರಲ್ಲಿ ಬರೋಬ್ಬರಿ ರೂ. 1,200 ದಂಡ ತೆರಬೇಕಾಗುತ್ತೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ತಿಂಗಳ ಲೆಕ್ಕದಲ್ಲಿ ಕೆಟ್ಟ ವಾಹನವು ಸಾರ್ವಜನಿಕ ರಸ್ತೆಗಳ ಬದಿಯಲ್ಲಿ ಪಾರ್ಕ್ ಮಾಡಿದ್ದೇ ಆದಲ್ಲಿ ದಂಡದ ಮೊತ್ತವು ರೂ.36 ಸಾವಿರ ದಾಟಲಿದ್ದು, ಕೆಟ್ಟ ವಾಹನವನ್ನು ರೀಪೆರಿ ಮಾಡಿ ಬಳಕೆ ಮಾಡಬೇಕು ಇಲ್ಲವೇ ಗುಜುರಿಗೆ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ಇದರ ಹೊರತಾಗಿ ಸ್ವಂತ ಪಾರ್ಕಿಂಗ್ ಸ್ಥಳವಿದ್ದಲ್ಲಿ ಮಾತ್ರವೇ ಕೆಟ್ಟು ನಿಂತ ವಾಹನಗಳ ಮೇಲೆ ಹಾಕುವ ದಂಡದಿಂದ ತಪ್ಪಿಸಿಕೊಳ್ಳಬಹುದಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿ ಹೋಗುವ ವಾಹನ ಮಾಲೀಕರು ಭರ್ಜರಿ ದಂಡ ತೆರಬೇಕಾಗುತ್ತೆ.

ನೋ ಪಾರ್ಕಿಂಗ್‌ನಲ್ಲಿ ಇನ್ಮುಂದೆ ವಾಹನ ನಿಲುಗಡೆ ಮಾಡಿದ್ರೆ 10 ಸಾವಿರ ದಂಡ..!

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಬೆಂಗಳೂರಿನಲ್ಲಿರುವ ಬಹುತೇಕ ಗ್ಯಾರೇಜ್ ಮಾಲೀಕರು ರೀಪೇರಿಗೆ ಬರುವ ವಾಹನಗಳನ್ನು ಸಾರ್ವಜನಿಕ ರಸ್ತೆಗಳನ್ನೇ ಆಕ್ರಮಿಸಿಕೊಂಡು ಪುಟ್‌ಪಾತ್‌ಗಳನ್ನೇ ತಮ್ಮ ವರ್ಕ್‌ಶಾಪ್ ಮಾಡಿಕೊಂಡಿರುತ್ತಾರೆ. ಇದರಿಂದ ಇದೀಗ ಜಾರಿಗೆ ಬಂದಿರುವ ಹೊಸ ರೂಲ್ಸ್‌ ಈ ಎಲ್ಲಾ ಕಿರಿಕಿರಿಗೆ ಬ್ರೇಕ್ ಹಾಕುತ್ತಿದೆ.

Most Read Articles

Kannada
English summary
BMC Decides To Charge Rs 10,000 As Illegal Parking Fine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X