ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ದೇಶಿಯ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳಿಗೆ ಬೇಡಿಕೆಯು ಅಧಿಕವಾಗುತ್ತಿರುವ ಕಾರಣ ಹಲವಾರು ವಾಹನ ತಯಾರಕ ಸಂಸ್ಥೆಗಳು ಇದೇ ಸೆಗ್ಮೆಂಟ್‍‍ನಲ್ಲಿ ಕಾರುಗಳನ್ನು ಉತ್ಪಾದನೆ ಮಾಡುತ್ತಿದೆ. ಆದರೆ ಈಗಾಗಲೆ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳ ಸೆಗ್ಮೆಂಟ್‍‍ನಲ್ಲಿ ಮುಂಚುಣಿಯನ್ನು ಸಾಧಿಸುತ್ತಿರುವ ಮಾರುತಿ ಸುಜುಕಿ ವಿಟಾರ ಬ್ರೆಝಾ ಕಾರುಗಳು ಹೆಚ್ಚಿನ ಮಾರಾಟವನ್ನು ಕಾಣುತ್ತಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರುಗಳಿಗೆ ಪೈಪೋಟಿ ನೀಡಲು ಮಹೀಂದ್ರಾ ಸಂಸ್ಥೆಯು ತಮ್ಮ ಎಕ್ಸ್ಯುವಿ300 ಕಾರನ್ನು ಬಿಡುಗಡೆ ಮಾಡಲಾಗಿದ್ದು, ಎಕ್ಯುವಿ300 ಕಾರಿನಲ್ಲಿರುವ ವೈಶಿಷ್ಟ್ಯತೆಗಳುಗೆ ಗ್ರಾಹಕರು ಮನಸ್ಸೋತು ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೆ ಅಲ್ಲದೆಯೆ ಹ್ಯುಂಡೈ ಸಂಸ್ಥೆಯು ಕೂಡಾ ಶೀಘ್ರವೇ ತಮ್ಮ ವೆನ್ಯೂ ಎಸ್‍ಯುವಿ ಕಾರನ್ನು ಸಹ ಬಿಡುಗಡೆ ಮಾಡಲಿದೆ. ಆದರೆ ಮಾರುತಿ ಸುಜುಕಿ ಸಂಸ್ಥೆಯು ಮಾತ್ರ ಸಧ್ಯಕ್ಕೆ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಬ್ರೆಝಾ ಕಾರುಗಳ ಮಾರಾಟವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಎರಡು ಹೊಸ ಟೀಸರ್‍‍‍ಗಳನ್ನು ಬಿಡುಗಡೆ ಮಾಡಲಾಗಿದೆ.

ಯಾವುದೇ ವಸ್ತುಗಳನ್ನು ಮಾರಾಟ ಮಾಡಬೇಕೆಂದರೆ ಮೊದಲು ಅದು ಹೆಚ್ಚಿನ ಮಂದಿಗೆ ತಲುಪಬೇಕು, ಆದುದರಿಂದ ಸಂಸ್ಥೆಗಳು ಮಾಧ್ಯಮಗಳಲ್ಲಿ ಜಾಹಿರಾತುಗಳನ್ನು ನೀಡುತ್ತಿರುತ್ತವೆ. ಹೀಗೆಯೆ ಇದೀಗ ಮಾರುತಿ ಸುಜುಕಿ ಸಂಸ್ಥೆ ಕೂಡಾ ತಮ್ಮ ಬ್ರೆಝಾ ಕಾರಿನ ಜಾಹಿರಾತುಗಳನ್ನು ಬಿಡುಗಡೆ ಮಾಡಲಾಗಿದೆ.

ಬಿಡುಗಡೆಯಾದ ಎರಡೂ ಜಾಹಿರಾತುಗಳಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಬ್ರೆಝ ಕಾರಿನ ರೈಡಿಂಗ್ ಅನುಭವದ ಬಗ್ಗೆ ಹೇಳಿವೆ. ಅಂದರೆ ಮಾರುತಿ ಸುಜುಕಿ ಬ್ರೆಝಾ ಕಾರುಗಳು ಚಾಲಕರಿಗೆ ರೈಡಿಂಗ್ ವೇಳೆ ಮತ್ತು ನಿಯಂತ್ರಿಸಲು ಹಾಗು ನಿಭಾಯಿಸಲು ಬಹಳ ಮೃದುವಾದುದ್ದು ಎಂದು ಹೇಳಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಇನ್ನು 2020ರ ಆರಂಭದಲ್ಲಿ ಹೊಸ ಮಾದರಿಯ ಬ್ರೆಝಾ ಕಾರುಗಳನ್ನು ಮಾರುತಿ ಸುಜುಕಿ ಸಂಸ್ಥೆಯು ಭಾರತದಲ್ಲಿ ಬಿಡುಗಡೆಗೊಳಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಕಾರಿನ ಉತ್ಪಾದನೆಯನ್ನು ಕೂಡಾ ಪ್ರಾರಂಭಿಸಿರುವುದಾಗಿ ಸಂಸ್ಥೆಯು ಬಹಿರಂಗಗೊಳಿಸಿದ್ದು, ಹಂಗೇರಿಯಲ್ಲಿರುವ ಸುಜುಕಿ ಸಂಸ್ಥೆಯ ಮುಖ್ಯ ಕಾರು ಉತ್ಪಾದನಾ ಘಟಕದಲ್ಲಿ ಹೊಸ ವಿಟಾರಾ ಕಾರುಗಳಿಗೆ ಫೈನಲ್ ಟಚ್ ನೀಡಲಾಗುತ್ತಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಹೀಗಾಗಿ ಹೊಸ ವಿಟಾರಾ ಬ್ರೆಝಾ ಕಾರಿನಲ್ಲಿ ಈ ಬಾರಿ ಮರುವಿನ್ಯಾಸ ಮಾಡಲಾದ ಗ್ರಿಲ್ ಮತ್ತು ಬಂಪರ್‍‍ನಲ್ಲಿ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಮುಂಭಾಗದಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್ ಅನ್ನು ಒದಗಿಸಲಾಗಿದ್ದು, ಹೊಸ ಸೀಟ್ ಫ್ಯಾಬ್ರಿಕ್ ಹಾಗು ಸ್ಮಾರ್ಟ್‍ಸ್ಟೂಡಿಯೋ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗುತ್ತಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನ ವಿಟಾರಾ ಗ್ರ್ಯಾಂಡ್ ಮಾರಾಟದಲ್ಲಿ ಆದ ಹಿನ್ನಡೆಯನ್ನು ಹೊಸ ಕಾರಿನ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಬರಲಿರುವ ಹ್ಯುಂಡೈ ಕ್ರೆಟಾ 7 ಸೀಟರ್ ಮತ್ತು ಮಾರಾಟಕ್ಕೆ ಲಭ್ಯವಿರುವ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಈ ಕಾರು ತೀವ್ರ ಪೈಪೋಟಿ ನೀಡಲಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಮಿಡ್ ರೇಂಜ್ ಎಸ್‍ಯುವಿ ಕಾರು ಮಾದರಿ ಇದಾಗಿದ್ದು, 2020ರ ಆರಂಭದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸುವ ಮಾರುತಿ ಸುಜುಕಿಯ ಹೊಸ ಎಸ್‍ಯುವಿ ಕಾರು ಅನ್ನು ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕೂಡಾ ನಡೆಸಲಾಗಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಕಾರಿನ ಬೆಲೆಯನ್ನು ರೂ. 12 ಲಕ್ಷ ದಿಂದ ರೂ. 16 ಲಕ್ಷದೊಳಗೆ ನಿರ್ಧರಿಸಲಿದ್ದಾರೆ. ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ವಿಟಾರಾ ಕಾರಿನ ಪೆಟ್ರೋಲ್ ಆವೃತ್ತಿಯು 1.0-ಲೀಟರ್ ಮತ್ತು 1.4 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 140-ಬಿಹೆಚ್‍ಪಿ ಮತ್ತು 230-ಎನ್ಎಂ ಟಾರ್ಕ್ಅನ್ನು ಉತ್ಪಾದಿಸುತ್ತೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಆದ್ರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರುಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಹಾಗೆಯೇ ವಿಟಾರಾ ಕಾರಿನ ಡೀಸೆಲ್ ಆವೃತ್ತಿಯು ಎಸ್ ಕ್ರಾಸ್ ಕಾರಿನ ಮಾದರಿಯಲ್ಲಿ 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 118-ಬಿಹೆಚ್‍ಪಿ ಮತ್ತು 320-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಗೆ ಜೋಡಣೆ ಇರಲಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಇದಲ್ಲದೇ ಹೊಸ ರೂಪದ ವಿಟಾರಾ ಕಾರುಗಳು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, 7ಸೀಟರ್ ವಿನ್ಯಾಸದೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು 6 ಏರ್‍‍ಬ್ಯಾಗ್ ಗಳನ್ನು ಬಳಸಲಾಗಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬ್ರೆಝಾ ಕಾರಿನ ಹೊಸ ಟೀಸರ್‍‍ಗಳು.. ಇಲ್ಲಿದೆ ನೋಡಿ ವಿಡಿಯೋ

ಇದರಿಂದಾಗಿ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದೆಂದು ನೀರಿಕ್ಷೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರಿಮಿಯಂ ಕಾರು ಮಾರಾಟ ವಿಭಾಗದಲ್ಲಿನ ಕೊರತೆಯನ್ನು ನಿಗಿಸಲು ಈ ಕಾರನ್ನು ನಿರ್ಮಾಣಗೊಳಿಸುತ್ತಿದ್ದು, ಕ್ರೇಟಾ ಫೇಸ್‌ಲಿಫ್ಟ್, ಎಕ್ಸ್‌ಯುವಿ 500, ಟಾಟಾ ಹ್ಯಾರಿಯರ್, ನಿಸ್ಸಾನ್ ಕಿಕ್ಸ್ ಕಾರುಗಳಿಗೂ ಇದು ಪೈಪೋಟಿ ನೀಡಲಿದೆ.

Most Read Articles

Kannada
English summary
Maruti Brezza compact SUV’s new TVCs out! Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X