ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಮಾರುತಿ ಸುಜುಕಿ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಉತ್ತಮವಾದ ಮತ್ತು ಬಹುತೇಕ ಅಯ್ಕೆಗಳುಳ್ಳ ವಾಹನಗಳನ್ನು ಹಲವಾರು ವರ್ಷಗಳಿಂದ ನೀಡುತ್ತಲೇ ಬಂದಿದೆ. ಹೀಗಾಗಿ ಪ್ರತೀ ತಿಂಗಳ ಟಾಪ್ 10 ಕಾರು ಮಾರಾಟದಲ್ಲಿ ಸುಮಾರು 6 ಕಾರುಗಳು ಮಾರುತಿ ಸುಜುಕಿ ಸಂಸ್ಥೆಯದ್ದೇ ಆಗಿದೆ.

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಆಲ್ಟೋ, ಸ್ವಿಫ್ಟ್, ಸೆಲೆರಿಯೊ ಮತ್ತು ವ್ಯಾಗನ್ ಆರ್ ಹ್ಯಾಚ್‍ಬ್ಯಾಕ್ ಕಾರುಗಳು ಪ್ರತೀ ತಿಂಗಳಿಗೆ ಸುಮಾರು 3 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಕಳೆದ ವರ್ಷ ಸ್ವಿಫ್ಟ್ ಕಾರು ಕಾರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದು, ಇದೀಗ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಲು ಡಿಜೈರ್ ಸೆಡಾನ್ ಕಾರು ಮಾರಾಟದಲ್ಲಿ ಹೊಸ ಧಾಖಲೆಯನ್ನು ಸೃಷ್ಠಿಸಿದೆ.

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಹೌದು, ಸುಮಾರು 10 ವರ್ಷಗಳ ಹಿಂದೆ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಡಿಜೈರ್ ಕಾರು ಇಲ್ಲಿಯ ವರೆಗೂ 19 ಲಕ್ಷಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ ಎಂದು ವರದಿಯೊಂದು ತಿಳಿಸಿದೆ. ಸಬ್-ಕಾಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲಿ ಬೇರೆ ವಾಹನ ತಯಾರಕ ಸಂಸ್ಥೆಗಳ ಕಾರುಗಳು ಇದ್ದರೂ ಸಹ ಡಿಜೈರ್ ಕಾರುಗಳಿಗೆ ಗ್ರಾಹಕರು ತಮ್ಮ ಒಲವನ್ನು ತೋರುತ್ತಿದ್ದಾರೆ ಎಂದು ಹೇಳಬಹುದು.

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

2018-19ರ ಹಣಕಾರು ವರ್ಷದಲ್ಲಿ 2.5 ಲಕ್ಷದ ಸಬ್ ಕಾಂಪ್ಯಾಕ್ಟ್ ಡಿಜೈರ್ ಕಾರುಗಳನ್ನು ಮಾರುತಿ ಸುಜುಕಿ ಸಂಸ್ಥೆಯು ಮಾರಾಟ ಮಾಡಿದೆಯಂತೆ. ಅಂದರೆ ಲೆಕಕ್ಕೆ ಪ್ರತೀ ತಿಂಗಳಿಗೆ ಸುಮಾರು 21,000 ಯೂನಿಟ್ ಮಾರಾಟವಾಗುತ್ತಿದೆ ಎಂದು ವರಿದಿ ಹೇಳುತ್ತಿದ್ದು, ಡಿಜೈರ್ ಕಾರು ಮಾರಾಟವು ಮಾರುಕಟ್ಟೆಯಲ್ಲಿನ ಸಂಸ್ಥೆಯ ಶೇರ್ ಅನ್ನು ಸಹ ಅಧಿಕಗೊಳಿಸಿದೆ ಎಂದರೇ ತಪ್ಪಾಗುವುದಿಲ್ಲ.

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಹೊಸ ಧಾಖಲೆಯನ್ನು ಸೃಷ್ಠಿಸಲು ಡಿಜೈರ್ ಕಾರು ಸಹಕಾರಿಯಾಗಿದ್ದು, ಡಿಜೈರ್ ಕಾರಿನ ಉತ್ಪಾದನೆಯೊಂದಿಗೆ ನಾವು ಮೊದಲ ಬಾರಿಗೆ ಕಾಂಪ್ಯಾಕ್ಟ್ ಸೆಡಾನ್ ಕಾರಿನ ಜರ್ನಿಯನ್ನು ಪ್ರಾರಂಭಿಸಿದೆವು. ಮಾರಾಟವಾಗಿರುವ ಸಂಖ್ಯೆಯನ್ನು ಗಮಿಸಿದರೆ ಪ್ರತೀ ಎಅರ್ಡು ನಿಮಿಷಕ್ಕೊಂದು ಡಿಜೈರ್ ಕಾರುಗಳು ಮಾರಾಟವಾಗುತ್ತಿದೆ. ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕರಾದ ಶಶಾಂಕ್ ಶ್ರೀವಾಸ್ತವರಾವರು ಹೇಳಿಕೊಂಡಿದ್ದಾರೆ.

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಡಿಜೈರ್ ಕಾರುಗಳು ಸ್ವಂತ ಬಳಕೆಗೆ ಮಾತ್ರವಲ್ಲದೆ ಕ್ಯಾಬ್ ಆಪರೇಟರ್‍‍ಗಳು ಕೂಡಾ ಹೆಚ್ಚು ಬಳಸುವ ಕಾರಾಗಿದ್ದು, ಓಲಾ ಮತ್ತು ಊಬರ್ ಕ್ಯಾಬ್ ಸರ್ವಿಸ್‍‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕೆಲ ದಿನಗಳ ನಂತರ ಎರಡನೆಯ ತಲೆಮಾರಿನ ಡಿಜೈರ್ ಟೂರ್ ಕಾರನ್ನು ಬಿಡುಗಡೆಗೊಳಿಸಿ ಕೇವಲ ಕ್ಯಾಬ್ ಚಾಲಕರಿಗೆ ಸಹಾಯವಾಗುವಂತೆ ತಯಾರು ಮಾಡಲಾಗಿದೆ.

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಸದ್ಯ ಮಾರುಕಟ್ಟೆಯಲ್ಲಿ ಟೂರಿಸ್ಟ್ ಮತ್ತು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳ ವಿಭಾಗದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಡಿಜೈರ್ ಟೂರ್ ಎಸ್ ಕಾರಿಗೆ ಸಾಕಷ್ಟು ಬೇಡಿಕೆಯಿದ್ದು, ಕಾಲಕ್ಕೆ ತಕ್ಕಂತೆ ಹೊಸ ಕಾರಿನಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಜೊತೆಗೆ 2019ರ ಅಕ್ಟೋಬರ್ 1ರಿಂದ ಜಾರಿಯಾಗುತ್ತಿರುವ ಹೊಸ ನಿಯಮದ ಪ್ರಕಾರ ಪ್ರತಿ ಹೊಸ ಕಾರು ಉತ್ಪನ್ನಗಳು ಸಹ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಬೇಕಿದ್ದು, ಇಲ್ಲವಾದಲ್ಲಿ ಅಂತಹ ಕಾರು ಮಾದರಿಗಳ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

2019ರ ಡಿಜೈರ್ ಟೂರ್ ಎಸ್ ಕಾರಿನಲ್ಲಿ ಈ ಬಾರಿ ಹಲವು ಹೊಸ ಸುರಕ್ಷಾ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಎಬಿಎಸ್ ಜೊತೆಗೆ ಇಬಿಡಿ, ಡ್ರೈವರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಹೈ ಸ್ಪೀಡ್ ಅಲರ್ಟ್ ಸೇರಿದಂತೆ ಇನ್ನು ಕೆಲವು ಹೊಸ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಚಾಲಕನ ಜೊತೆಗೆ ಪ್ರಯಾಣಿಕರಿಗೂ ಹೆಚ್ಚಿನ ಸುರಕ್ಷತೆ ಸಿಗಲಿದೆ.

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಕಾರಿನ ಬೆಲೆಯಲ್ಲಿ ಹೆಚ್ಚಳ

ಈ ಬಾರಿ ಡಿಜೈರ್ ಟೂರ್ ಎಸ್ ಬೆಲೆಯು ತುಸು ದುಬಾರಿ ಎನ್ನಿಸಲಿದ್ದು, ಹೊಸ ಸುರಕ್ಷಾ ಸೌಲಭ್ಯಗಳನ್ನು ಒದಗಿಸಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಕಾರಿನ ಬೆಲೆಯು ಸೌಲಭ್ಯಕ್ಕೆ ಅನುಗುಣವಾಗಿ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.5.60 ಲಕ್ಷದಿಂದ ರೂ.6.60 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

MOST READ: ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಖತರ್ನಾಕ್ ಖದೀಮ

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಎಂಜಿನ್ ಸಾಮರ್ಥ್ಯ

ಮೂರನೆಯ ತಲೆಮಾರಿನ ಡಿಸೈರ್ ಕಾರುಗಳು 1.2 ಲೀಟರ್ ಕೇ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82 ಬಿಹೆಚ್‍ಪಿ ಮತ್ತು 113ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಪ್ರತೀ 2 ನಿಮಿಷಕ್ಕೊಂದು ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟವಾಗ್ತಿದ್ಯಂತೆ.!

ಇನ್ನು ಡೀಸೆಲ್ ಮಾದರಿಯ ಡಿಜೈರ್ ಕಾರುಗಳು 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಎಂಜಿನ್ ಸಹಾಯದಿಂದ 74ಬಿಹೆಚ್‍ಪಿ ಮತ್ತು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮಾದರಿಗಳಂತೆಯೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‍ಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Source: NDTV Auto

Most Read Articles

Kannada
English summary
Maruti Suzuki Sold Around 19 Lakh Dezire Cars In 10 Years. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more