ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯರ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಮೊದಲನೆಯ ತಲೆಮಾರಿನ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರನ್ನು 2005 ರಲ್ಲಿ ಬಿಡುಗಡೆಗೊಳಿಸಿದ್ದು, ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರನ್ನು ಕಳೆದ ವರ್ಷ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ನಮ್ಮ ದೇಶದ ಮಾರುತಿ ಸುಜುಕಿ ಸಂಸ್ಥೆಯು ಮೇ 2019ರಲ್ಲಿ 17, 039 ಯೂನಿಟ್ ಸ್ವಿಫ್ಟ್ ಕಾರುಗಳನ್ನು ದೇಶದಲ್ಲಿರುವ ಎಲ್ಲಾ ಡೀಲರ್‍‍ಗಳಿಗೆ ರವಾನಿಸಲಾಗಿದೆ, ಇದರಿಂದಲೇ ತಿಳಿಯುತ್ತೆ ಈ ಕಾರಿನ ಜನಪ್ರೀಯತೆಯು ಎಷ್ಟರ ಮಟ್ಟಿಗಿದೆ ಎಂದು. ಹಾಗಯೆ 16,394 ಯೂನಿಟ್ ಆಲ್ಟೋ ಕಾರು ಮತ್ತು 16,196 ಯೂನಿಟ್ ಡಿಜೈರ್ ಕಾರುಗಳನ್ನು ಡೀಲರ್‍‍ಗಳಿಗೆ ಸಾಗಿಸಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಬಿಡುಗಡೆಗೊಂಡಾಗಿನಿಂದಲೂ ಗ್ರಾಹಕರಲ್ಲಿ ಹಾಟ್ ಫೇವರೇಟ್ ಹ್ಯಾಚ್‍ಬ್ಯಾಕ್ ಎಂಬ ಖ್ಯಾತಿಯನ್ನು ಪಡೆದಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರು 2018ರ 'ಇಂಡಿಯನ್ ಕಾರ್ ಆಫ್ ದಿ ಇಯರ್' ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಕಳೆದ ವರ್ಷ ಈ ಪ್ರಶಸ್ತಿಯನ್ನು ಹ್ಯುಂಡೈ ವೆರ್ನಾ ಸೆಡಾನ್ ಕಾರು ತನ್ನದಾಗಿಸಿಕೊಂಡಿತ್ತು. ಇಂದಿಗೂ ಸಹ ಹೆಚ್ಚಿನ ಜನಪ್ರಿಯತೆಯನ್ನು ಈ ಕಾರು ಪಡೆದುಕೊಳ್ಳುತ್ತಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಈ ಪ್ರಶಸ್ತಿಯನ್ನು ಪಡೆಯಲು ಮಾರುತಿ ಸುಜುಕಿ ಸ್ವಿಫ್ಟ್ ಹ್ಯುಂಡೈ ಸ್ಯಾಂಟ್ರೋ, ಮಾರುತಿ ಎರ್ಟಿಗಾ, ಹೋಂಡಾ ಅಮೇಜ್, ಟೊಯೊಟಾ ಯಾರಿಸ್, ಮಹೀಂದ್ರಾ ಮರಾಜೊ, ಮಹೀಂದ್ರಾ ಆಲ್ಟುರಾಸ್ ಮತ್ತು ಹೋಂಡಾ ಬಿಎರ್‍-ವಿ ಕಾರುಗಳಿಗೆ ಮಾರಾಟದಲ್ಲಿ ಪೈಪೋಟಿಯನ್ನು ನೀಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಐಸಿಒಟಿವೈ ಪ್ರಶಸ್ತಿಗಳ 14 ನೇ ಆವೃತ್ತಿಯು 18 ಹಿರಿಯ ಆಟೋಮೋಟಿವ್ ಜರ್ನಲಿಸ್ಟ್ ಗಳ ಬೆಂಚ್ ಅನ್ನು ಹೊಂದಿತ್ತು. ಐಸಿಒಟಿವೈ 2019 ಪ್ರಶಸ್ತಿಯನ್ನು ಜೆ.ಕೆ. ಟೈರ್ ಅಧ್ಯಕ್ಷ ಮತ್ತು ಎಂಡಿ ಯಿಂದ ಮಾರುತಿ ಸುಜುಕಿಯ ಎಂಡಿ ಮತ್ತು ಸಿಇಒ ಕೆನಿಚಿ ಆಯುಕಾವಾಗೆ ವಹಿಸಲಾಯಿತು, ಡಾ. ರಘುಪತಿ ಸಿಂಘಾನಿಯಾ, ಅವರು ತೀರ್ಪುಗಾರರ ಗೌರವಾನ್ವಿತ ಸದಸ್ಯರಾಗಿದ್ದರು.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಇನ್ನು ಪ್ರಶಸ್ತಿ ವಿಜೇತ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಹೇಳುವುದಾದರೆ 2005ರಲ್ಲಿ ಬಿಡುಗಡೆಗೊಂಡ ಮೊದಲ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕಾರು 2010ರ ವೇಳೆಗೆ 50000 ಯೂನಿಟ್ ಮಾರಾಟಗೊಂಡು ಮೊದಲನೆಯ ಮೈಲಿಗಲ್ಲನ್ನು ತಲುಪಿತ್ತು. ನಂತರ 2016ರ ವೇಳೆಗೆ 1.5 ಮಿಲಿಯನ್ ಯೂನಿಟ್ ಮಾರಾಟಗೊಂಡು ಎರಡನೆಯ ಮೈಲಿಗಲ್ಲನ್ನು ತಲುಪಿತ್ತು. ಆದರೆ ಇದೀಗ ಹೊಸ ತಲೆಮಾರಿನ ಸ್ವಿಫ್ಟ್ ಕಾರಿನ ಬಿಡುಗಡೆಯ ನಂತರ ಒಟ್ಟಾರೆಯಾಗಿ 2.2 ಮಿಲಿಯನ್ ಯೂನಿಟ್‍ ಗಿಂತಲೂ ಹೆಚ್ಚಾಗಿ ಮಾರಾಟಗೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಐದನೇ ತಲೆಮಾರಿನ ಹರ್ಟೆಕ್ಟ್ (Heartect) ತಳಹದಿಯಲ್ಲಿ ನೂತನ ಸ್ವಿಫ್ಟ್ ನಿರ್ಮಾಣ ಮಾಡಲಾಗಿದ್ದು, ಇದು ಹೆಚ್ಚು ಶಕ್ತಿಶಾಲಿ, ಬಿಗಿತವನ್ನು ಪಡೆಯಲಿದೆ. ಜೊತೆಗೆ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಎಂಜಿನ್ ಸಾಮರ್ಥ್ಯ

ಹೊಸ ಸ್ವಿಫ್ಟ್ ವಿನೂತನ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗಳು 83 ಬಿಎಚ್‌ಪಿ ಮತ್ತು 115ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಆವೃತ್ತಿಯು 74 ಬಿಎಚ್‌ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಜೊತಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ಡಿಜೈರ್ ಮತ್ತು ಬಲೆನೊ ಕಾರುಗಳಿಂತಲೂ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಕಾರಿನ ಒಳ ಮತ್ತು ಹೊರ ವಿನ್ಯಾಸ

ಸ್ಪೋರ್ಟಿ ಇಂಟಿರಿಯರ್ ಲುಕ್ ಪಡೆದಿರುವ ಹೊಸ ಸ್ವಿಫ್ಟ್ ಕಾರುಗಳು ಅತ್ಯಾಕರ್ಷಕ ಹೆಕ್ಷಾಗೊನಲ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ನ್ಯೂ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಎಲ್‌ಇಡಿ ಸಿಗ್ನಿಚರ್ ಟೈಲ್ ಲೈಟ್ ಕೂಡಾ ನೀಡಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಇನ್ನು ಸ್ಮಾರ್ಟ್ ಕನೆಕ್ಟಿವಿಟಿಗೂ ಹೊಸ ಕಾರುಗಳಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಇಂಚಿನ ಇನ್ಪೋಟೈನ್‌ಮೆಂಟ್, ಆಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, ಮಿರರ್ ಲಿಂಕ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸಿಸ್ಟಂ ಒದಗಿಸಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

ಸುರಕ್ಷಾ ಸಾಧನಗಳು

ಎಂಜಿನ್ ಸ್ಟಾರ್ಟ್ ಆ್ಯಂಡ್ ಸ್ಟಾಪ್ ಬಟನ್ ಒದಗಿಸಲಾಗಿದ್ದು, ಆಟೋ ಹೆಡ್‌ಲ್ಯಾಂಪ್, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಆಪರೇಟಿಂಗ್ ರಿಯರ್ ವ್ಯೂವ್ ಮಿರರ್, ಎಬಿಎಸ್ ಸೇರಿದಂತೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಭಾರತೀಯ ಅಚ್ಚುಮೆಚ್ಚಿನ ಹ್ಯಾಚ್‍ಬ್ಯಾಕ್ ಕಾರು

2018ರ ಸ್ವಿಫ್ಟ್ ಕಾರಿನ ಬೆಲೆಗಳನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯನ್ನು ರೂ. 4.99 ಲಕ್ಷಕ್ಕೆ ಮತ್ತು ಟಾಪ್ ಕಾರು ಮಾದರಿಯನ್ನು ರೂ. 8.39 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಥರ್ಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರುಗಳನ್ನು ಅಭಿವೃದ್ಧಿ ಮಾಡಿದೆ.

Most Read Articles

Kannada
English summary
Maruti Suzuki Swift Is The Indian's Favorite Hatchback. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X