ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಪ್ಯಾಸ್ಸೆಂಜರ್ ವಾಹನಗಳಿಂದ ಜನಪ್ರೀಯತೆಯನ್ನು ಪಡೆದುಕೊಂಳ್ಳುತ್ತಿದೆ. ಹ್ಯುಂಡೈ ಸಂಸ್ಥೆಯು 2013ರ ಸೆಪೆಟೆಂಬರ್ ತಿಂಗಳಿನಲ್ಲಿ ತಮ್ಮ ಗ್ಯಾಂಡ್ ಐ10 ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಸುಮಾರು 6 ವರ್ಷಗಳಲಿ 7 ಲಕ್ಷಕ್ಕು ಅಧಿಕವಾದ ಕಾರುಗಳು ಮಾರಾಟಗೊಂಡಿವೆ ಎನ್ನಲಾಗಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಜುಲೈ 2014ರಲ್ಲಿ ಅಂದರೆ ಬಿಡುಗಡೆಗೊಂಡ ಕೇವಲ 10 ತಿಂಗಳಿನಲ್ಲಿ ಸುಮಾರು 1 ಲಕ್ಷದ ಗ್ರ್ಯಾಂಡ್ ಐ10 ಕಾರುಗಳು ಮಾರಾಟಗೊಂಡಿದ್ದು, ಮಾರುಕಟ್ಟೆಯಲ್ಲಿರುವ ಮತ್ತೊಂದು ಜನಪ್ರಿಯ ಹ್ಯಾಚ್‍ಬ್ಯಾಕ್ ಕಾರಾದ ಮಾರುತಿ ಸುಜುಕಿ ಸ್ವಿಫ್ಟ್ ಗೆ ಪೈಪೋಟಿ ನೀಡುತ್ತಿದೆ. ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಕಾರು ಹೆಚ್ಚು ವೈಶಿಷ್ಟ್ಯತೆಯನ್ನು ಪಡೆದುಕೊಂಡಿರುವ ಕಾರಣ ಗ್ರಾಹಕರು ಇದನ್ನು ಖರೀಸಿದಲು ಮುಂದಾಗುತ್ತಿದ್ದಾರೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಹ್ಯುಂಡೈ ಗ್ರ್ಯಾಂಡ್ ಐ10 ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 4.97 ಲಕ್ಷದ ಪ್ರಾರಂಭಿಕ ಬೆಲಯನ್ನು ಪಡೆದುಕೊಂಡಿದ್ದು, ಸ್ಟಾರ್ ಡಸ್ಟ್, ಫೈರಿ ರೆಡ್, ಟೈಫೂನ್ ಸಿಲ್ವರ್, ಮಾರಿಯಾನ ಬ್ಲೂ, ಪೋಲಾರ್ ವೈಟ್ ಮತ್ತು ಫ್ಲೇಮ್ ಆರೆಂಜ್ ಎಂಬ ಆರು ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಮತ್ತು 1.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿರುವ ಗ್ರ್ಯಾಂಡ್ ಐ10 ಕಾರುಗಳು 5-ಸ್ಪೀಡ್ ಆಟೋಮ್ಯಾಟಿಕ್ ಮತ್ತು 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ್ದು, ಚಾಲಕ ಮತ್ತು ಮುಂಭಾಗದ ಸಹ ಪ್ರಯಾಣಿಕನ ಬಳಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯವನ್ನು ಪಡೆದುಕೊಂಡಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಜೊತೆಗೆ ಸುರಕ್ಷಾ ಸೌಲಭ್ಯಗಳ ವಿಭಾಗದಲ್ಲೂ ಇತರೆ ಹ್ಯಾಚ್‌ಬ್ಯಾಕ್ ಕಾರುಗಳಿಂತ ಭಿನ್ನವಾಗಿರುವ ಗ್ರ್ಯಾಂಡ್ ಐ10 ಕಾರುಗಳು ಎಬಿಎಸ್, ಫಾಗ್ ಲ್ಯಾಂಪ್, ಆ್ಯಂಟಿ ಥೆಫ್ಟ್ ಸಿಸ್ಟಂ ಸೇರಿದಂತೆ 256-ಲೀಟರ್ ಬೂಟ್ ಸ್ಪೆಸ್‌ನೊಂದಿಗೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಲಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಇವುಗಳ ಜೊತೆಗೆ ಮೊದಲ ಬಾರಿಗೆ ಹ್ಯುಂಡೈ ಗ್ರ್ಯಾಂಡ್ ಐ10 ಕಾರು ಮೊದಲ ಬಾರಿಗೆ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್‍‍ನ ವೇಳೆ ಕಾಣಿಸಿಕೊಂಡಿದೆ. 2013ರಲ್ಲಿ ಬಿಡುಗಡೆಗೊಂಡ ಈ ಕಾರು ಎರಡು ವರ್ಷಗಳ ಹಿಂದೆ ಜಾಗತಿಕವಾಗಿ ನವೀಕರಣವನ್ನು ಪಡೆದುಕೊಂಡಿತ್ತು. ಇದೀಗ ಸಂಸ್ಥೆಯು ಈ ಕಾರಿಗೆ ಹೊಸ ಫ್ಲಾಟ್‍‍ಫಾರ್ಮ್ ಅನ್ನು ಹೊಸ ಚಾಸಿಸ್‍‍ನ ಅಡಿಯಲ್ಲಿ ನಿರ್ಮಿಸುತ್ತಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಮುಂಭಾಗದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೆಕ್ಸಾಗನಲ್ ಗ್ರಿಲ್, ಕ್ರೋಮ್ ಅಕ್ಕ್ಸೆಂಟ್ ಮತ್ತು ಸ್ಪೋರ್ಟಿ ಬಂಪರ್‍‍‍ಗಳನ್ನು ನೀಡಲಾಗಿದೆ. ಆದರೆ ಕೊರಿಯಾ ದೇಶದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರಿನ ಹೊರಭಾಗದಲ್ಲಿ ಎಲ್ಇಡಿ ಡಿಆರ್‍ಎಲ್ ಅನ್ನು ಪಡೆದುಕೊಂಡಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಭಾರತದಲ್ಲಿ ಕಾಣಿಸಿಕೊಂಡ ಕಾರಿನಲ್ಲಿ ಹ್ಯಾಲೊಗನ್ ಹೆಡ್‍‍ಲ್ಯಾಂಪ್ಸ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಹಿಂಭಾಗದಲ್ಲಿಯು ಬದಲಾವಣೆಯನ್ನು ಕಾಣಬಹುದಾಗಿದ್ದು, ಅಗಲವಾದ ಟೈಲ್‍‍ಲ್ಯಾಂಪ್ಸ್, ಹೊಸ ಬಾಗಿಲುಗಳು ಮತ್ತು ಕಾರಿನ ಟಾಪ್ ಸ್ಪೆಕ್ ಮಾಡಲ್‍‍ನಲ್ಲಿ 15 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಕಾರಿನ ಹೊರ ಭಾಗವು ಈ ಬಾರಿ ವಿಶಾಲವಾಗಿರಲಿದ್ದು, ಸೌರರ್ಯವಂತವಾದ ಲೆಗ್‍ರೂಂ ಮತ್ತು ಹೆಡ್‍‍ರೂಂ ಅನ್ನು ನೀಡಲಾಗಿದೆ. ಇದಲ್ಲದೇ ಲೆದರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್, ಹೊಸ ಇನ್ಸ್ಟ್ರೂಮೆಂಟ್ ಕ್ಲಸ್ಟರ್‍‍ನೊಂಡಿಗೆ ಮಲ್ಟಿ ಇನ್ಫಾರ್‍‍ಮೇಶನ್ ಡಿಸ್ಪ್ಲೆ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ಸಪೋರ್ಟ್ ಮಾಡಬಲ್ಲ ಟಚ್‍‍‍ಸ್ಕ್ರೀನ್ ಇನ್ಫೋ‍‍ಟೈನ್ಮೆಂಟ್ ಸಿಸ್ಟಮ್ ಅನ್ನು ನೀಡಲಿದೆ ಎಂಬ ಭರವಸೆ ಇದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಎಂಜಿನ್ ಸಾಮರ್ಥ್ಯ ಬಿಡುಗಡೆಗೊಳ್ಳಲಿರುವ ಮುಂದಿನ ತಲೆಮಾರಿನ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ತಾಂತ್ರಿಕ ಅಂಶಗಳಾ ಬಗ್ಗೆ ಮಾಹಿತಿ ಇನ್ನು ಬಹಿರಂಗಗೊಂಡಿಲ್ಲ. ಆದರೆ ಹಿಂದಿನ ತಲೆಮಾರಿನಲ್ಲಿ ಬಳಸಲಾದ ಎಂಜಿನ್ ಅನ್ನು ಬಳಸಲಾಗಲಿದೆ ಎಂಬ ಭರವಸೆಯಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹ್ಯುಂಡೈ ಗ್ರ್ಯಾಂಡ್ ಐ10

ಹಿಂದಿನ ತಲೆಮಾರು ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ 1.2 ಲೀಟರ್ 4ಸಿಸ್ಲೆಂಡರ್ ಕಪ್ಪಾ ಪೆಟ್ರೋಲ್ ಎಂಜಿನ್‍‍ಗಳು, 83 ಬಿಹೆಚ್‍‍ಪಿ ಮತ್ತು 113.6 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಲ್ಲದೇ 1.2 ಲೀಟರ್ ಯು2 ಸಿಆರ್‍‍ಡಿಐ ಡೀಸೆಲ್ ಎಂಜಿನ್‍‍ಗಳು 75ಬಿಹೆಚ್‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Source: GaadiWaadi

Most Read Articles

Kannada
English summary
Maruti Swift Rival Hyundai Grand i10 Achieves 7 Lakh Sales Milestone In India. Read In Kannada
Story first published: Saturday, March 30, 2019, 9:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X