ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ದೇಶಾದ್ಯಂತ ಬಿಎಸ್-6 ಪ್ರೇರಿತ ವಾಹನಗಳನ್ನು ಕಡ್ಡಾಯಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸುತ್ತಿದ್ದು, ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ಎಂಜಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ಕಳೆದ ತಿಂಗಳ ಹಿಂದಷ್ಟೇ ಬಿಎಸ್-6 ಪ್ರೇರಿತ ಬಲೆನೊ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದೀಗ ತನ್ನ ಮತ್ತೆರಡು ಜನಪ್ರಿಯ ಆವೃತ್ತಿಗಳಾದ ಸ್ವಿಫ್ಟ್ ಮತ್ತು ವ್ಯಾಗನ್‌ಆರ್ ಕಾರುಗಳ ಪೆಟ್ರೋಲ್ ಮಾದರಿಯನ್ನು ಹೊಸ ನಿಯಮಗಳಿಗೆ ಉನ್ನತಿಕರಿಸಿ ಬಿಡುಗಡೆ ಮಾಡಿದೆ.

ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ಹೊಸ ನಿಯಮದಿಂದಾಗಿ ಸ್ವಿಫ್ಟ್ ಮತ್ತು ವ್ಯಾಗನ್ಆರ್ ಪೆಟ್ರೋಲ್ ಮಾದರಿಗಳಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳಾಗಿದ್ದು, ಸುಧಾರಿತ ಎಂಜಿನ್ ಜೊತೆಗೆ ಕೆಲವು ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯವಾಗಿ ಜೋಡಣೆ ಮಾಡಲಾಗಿದೆ.

ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ಹೀಗಾಗಿ ಈ ಹಿಂದಿಗಿಂತಲೂ ಉತ್ತಮ ಪರ್ಫಾಮೆನ್ಸ್ ಪಡೆದುಕೊಂಡಿರುವ ಹೊಸ ಬಿಎಸ್-6 ಕಾರುಗಳಲ್ಲಿ ಡ್ಯುಯಲ್ ಚಾನೆಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಹೈ ಸ್ಪೀಡ್ ಅಲರ್ಟ್ ಸೇರಿದಂತೆ ಕೆಲವು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ಜೊತೆಗೆ ಹೊಸ ಎಂಜಿನ್‌ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಶೇ.25ರಷ್ಟು ಕಡಿತವಾಗಿದ್ದು, ಈ ಹಿಂದಿಗಿಂತಲೂ ಶೇ.10ರಿಂದ ಶೇ.15 ರಷ್ಟು ಹೆಚ್ಚು ಮೈಲೇಜ್ ನೀಡುವ ಮೂಲಕ ಮತ್ತಷ್ಟು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ. ಹಾಗೆಯೇ ಬಿಎಸ್-6 ನಿಯಮದಿಂದಾಗಿ ಹೊಸ ಕಾರುಗಳ ಬೆಲೆಯೂ ಕೂಡಾ ತುಸು ದುಬಾರಿಯಾಗಿದ್ದು, ಸುಧಾರಿತ ಎಂಜಿನ್ ಮತ್ತು ಕೆಲವು ಸ್ಟ್ಯಾಂಡರ್ಡ್ ಸುರಕ್ಷಾ ಸೌಲಭ್ಯಗಳನ್ನು ಹೊರತುಪಡಿಸಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ.

ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ಕಾರಿನ ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)

ಈ ಹಿಂದೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.99 ಲಕ್ಷದಿಂದ ರೂ.7.85 ಲಕ್ಷ ಬೆಲೆ ಹೊಂದಿದ್ದ ಸ್ವಿಫ್ಟ್ ಪೆಟ್ರೋಲ್ ಆವೃತ್ತಿಯು ಬಿಎಸ್-6 ಎಂಜಿನ್ ಉನ್ನತಿಕರಣದ ನಂತರ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.14 ಲಕ್ಷದಿಂದ ರೂ. 8.89 ಲಕ್ಷ ಬೆಲೆ ಹೊಂದಿದೆ.

ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ಅದೇ ರೀತಿಯಾಗಿ ಈ ಹಿಂದೆ ರೂ. 4.34 ಲಕ್ಷದಿಂದ ರೂ. 5.33 ಲಕ್ಷ ಬೆಲೆ ಹೊಂದಿದ್ದ ವ್ಯಾಗನ್‌ಆರ್ ಪೆಟ್ರೋಲ್ ಮಾದರಿಯು ಬಿಎಸ್-6 ಎಂಜಿನ್ ನಂತರ ರೂ. 5.10 ಲಕ್ಷದಿಂದ ರೂ. 5.91 ಲಕ್ಷ ಹೊಸ ಬೆಲೆ ಪಡೆದುಕೊಂಡಿದೆ.

ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ಎಂಜಿನ್ ಸಾಮಾರ್ಥ್ಯ

ಬಿಎಸ್-6 ನಿಯಮಕ್ಕೆ ಉನ್ನತಿಕರಣಗೊಂಡಿರುವ ವ್ಯಾಗನ್‌ಆರ್ ಪೆಟ್ರೋಲ್ ಮತ್ತು ಸ್ವಿಫ್ಟ್ ಪೆಟ್ರೋಲ್ ಆವೃತ್ತಿಗಳು ಈ ಹಿಂದಿನಂತೆಯೇ 1.2-ಲೀಟರ್ ಕೆ12ಬಿ ಎಂಜಿನ್ ಹೊಂದಿದ್ದು, ಎರಡು ಮಾದರಿಯಲ್ಲೂ ಗ್ರಾಹಕರ ಬೇಡಿಕೆಯೆಂತೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋ ಗೇರ್ ಶಿಫ್ಟ್ ಆಯ್ಕೆಯನ್ನು ಒದಗಿಸಲಾಗಿದೆ.

ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ಇನ್ನು ಕೇಂದ್ರ ಸರ್ಕಾರವು ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಬಿಎಸ್-4 ಎಂಜಿನ್ ವಾಹನಗಳ ಮಾರಾಟವನ್ನು ನಿಷೇಧಿಸಿ 2020ರ ಏಪ್ರಿಲ್ 1ರಿಂದಲೇ ಬಿಎಸ್-6 ವಾಹನಗಳ ಮಾರಾಟವನ್ನು ಕಡ್ಡಾಯಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಇತರೆ ಕಾರು ಉತ್ಪಾದನಾ ಸಂಸ್ಥೆಗಳಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಎಂಜಿನ್‌ಗಳನ್ನು ಈಗಲೇ ಬಿಡುಗಡೆಗೊಳಿಸುತ್ತಿದೆ.

MOST READ:ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬಿಎಸ್-6 ಪ್ರೇರಿತ ಸ್ವಿಫ್ಟ್ ಪೆಟ್ರೋಲ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ವರ್ಷನ್ ಬಿಡುಗಡೆ

ಇದರೊಂದಿಗೆ ಬಿಎಸ್-6 ವಾಹನಗಳ ಬೆಲೆಯು ಕೂಡಾ ದುಬಾರಿ ಎನ್ನಿಸಲಿದ್ದು, ಬಿಎಸ್-4 ವಾಹನಗಳ ಬೆಲೆಗಳಿಂತ ಬಿಎಸ್-6 ವಾಹನಗಳ ಬೆಲೆಯೂ ಸರಾಸರಿಯಾಗಿ ರೂ.80 ಸಾವಿರದಿಂದ ರೂ. 2.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

Most Read Articles

Kannada
English summary
Maruti Suzuki Launches BS-VI Compliant Swift And Wagon R. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X