Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಂಜಿ ಹೆಕ್ಟರ್ ಕಾರಿನ ಉತ್ಪಾದನೆ ಶುರು - ಟೆಸ್ಟ್ ಡ್ರೈವ್ ಕೂಡಾ ಲಭ್ಯ
ಮೋರಿಸ್ ಗ್ಯಾರೇಜೆಸ್ ಅಂದರೇ ಎಂಜಿ ಮೋಟಾರ್ಸ್ ಸಂಸ್ಥೆಯು ಮೇ ತಿಂಗಳಿನಲ್ಲಿ ತಮ್ಮ ಮೊದಲ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಮಾಹಿತಿಗಳ ಪ್ರಕಾರ್ ಈ ಕಾರಿನ ಉತ್ಪಾದನೆಯನ್ನು ಸಂಸ್ಥೆಯು ಪ್ರಾರಂಭಿಸಲಾಗಿದೆ. ಹಾಗೆಯೆ ಹೊಸ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಟೆಸ್ಟ್ ಡ್ರೈವ್ ಮಾಡುವ ಅವಕಾಶವನ್ನು ಸಹ ದೇಶದಲ್ಲಿರುವ ಕೆಲ ಡೀಲರ್‍ಗಳು ಪ್ರಾರಂಭಿಸಿದ್ದಾರೆ.

ಹೌದು, ಗುಜರಾತ್‍ನಲ್ಲಿನ ವಡೋದರ ಸಮೀಪದಲ್ಲಿರುವ ಹಲೊಲ್ ಪ್ಲಾಂಟ್‍ನಲ್ಲಿ ಎಂಜಿ ಹೆಕ್ಟರ್ ಕಾರಿನ ಉತ್ಪಾದನೆಯನ್ನು ಶುರು ಮಾಡಲಾಗಿದ್ದು, ಈ ಕುರಿತಾದ ಸಮಾರಂಭದಲ್ಲಿ ಸಂಸ್ಥೆಯು ಡೀಲರ್‍ಗಳನ್ನು ಕರೆಸಿ ಪ್ಲಾಂಟ್ ಅನ್ನು ತೋರಿಸಲಾಗಿದೆ. ಮತ್ತು ವಡೋದರನಲ್ಲಿರುವ ಡೀಲರ್‍ಗಳಿಗೆ ಈಗಾಗಲೆ ಹೊಸ ಹೆಕ್ಟರ್ ಕಾರುಗಳನ್ನು ನೀಡಲಗಿದ್ದು, ಖರೀದಿಸಲಿ ಬಯಸುವ ಗ್ರಾಹರಿಗೆ ಟೆಸ್ಟ್ ಡ್ರೈವ್ ಕೂಡಾ ನೀಡಲು ಹೇಳಿದ್ದಾರೆ.

ಸದ್ಯ ತನ್ನ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಎಂಜಿ ಮೋಟಾರ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಸಿದ್ದಗೊಳಿಸಿ ಮಾರಾಟಕ್ಕೆ ಅಣಿಯಾಗುತ್ತಿದೆ. ಹೀಗಾಗಿ ಮೊದಲ ಹಂತದಲ್ಲಿ ಬಿಡುಗಡೆಯಾಗುವ ಹೆಕ್ಟರ್ ಎಸ್‌ಯುವಿಯನ್ನು ಮೊನ್ನೆಯಷ್ಟೇ ಅನಾವರಣಗೊಳಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಹೊಸ ಕಾರಿನ ಉತ್ಪಾದನೆಗೆ ಇದೇ ತಿಂಗಳು 29ರಿಂದ ಅಧಿಕೃತವಾಗಿ ಚಾಲನೆ ನೀಡಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಹೀಗಾಗಿ ಹೊಸ ಕಾರುನ್ನು ಯಾವುದೇ ಮಸುಕು ಇಲ್ಲದೆಯೇ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು ದೇಶದ ಪ್ರಮುಖ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದ್ದು, ಇ-ಸಿಮ್ ಪ್ರೇರಿತ ಗೂಗಲ್ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂ ಪಡೆದುಕೊಂಡ ದೇಶದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಬೃಹತ್ ಬಂಡವಾಳದೊಂದಿಗೆ ಕಳೆದ ವರ್ಷವಷ್ಟೇ ತನ್ನ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದಲ್ಲೇ ಇದೀಗ ಬಿಡುಗಡೆಯಾಗಲಿರುವ ಮೊದಲ ಕಾರನ್ನು ಅನಾವರಣಗೊಳಿಸಿ ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.
ಹೆಕ್ಟರ್ ಹೆಸರಿನಲ್ಲಿ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲಿರುವ ಹೊಸ ಎಂಜಿ ಮೋಟಾರ್ ಸಂಸ್ಥೆಯ ಹೊಸ ಕಾರು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯಲ್ಲೇ ಬಾಡಿ ಕಿಟ್ ಹೊಂದಿದ್ದು, 2019ರ ಮಧ್ಯಂತರದಲ್ಲಿ ಹೊಸ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 ಎಂಜಿನ್ ಸೌಲಭ್ಯ ಹೊಂದಿರುವ ಹೊಸ ಹೆಕ್ಟರ್ ಕಾರು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ಪಡೆದುಕೊಂಡಿದೆ.

ಈ ಮೂಲಕ ಪೆಟ್ರೋಲ್ ಆವೃತ್ತಿಯು 160-ಬಿಎಚ್‌ಪಿ, 200-ಎನ್ಎಂ ಉತ್ಪಾದಿಸಿದ್ದಲ್ಲಿ ಡೀಸೆಲ್ ಆವೃತ್ತಿಯು 170-ಬಿಎಚ್‌ಪಿ, 340-ಎನ್ಎಂ ಟಾರ್ಕ್ ಉತ್ಪಾದನೆ ಸಾಮಾರ್ಥ್ಯ ಹೊಂದಿದ್ದು, ಕಾರಿನ ಬೆಲೆಗಳು ಕೂಡಾ ಆಕರ್ಷಕವಾಗಿರಲಿವೆ ಎನ್ನಲಾಗಿದೆ.

ಹೆಕ್ಟರ್ ಕಾರು ಸದ್ಯ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ವುಲಿಂಗ್ ಅಲ್ಮಾಜ್ ಹೆಸರಿನೊಂದಿಗೆ ಮತ್ತು ಚೀನಾದಲ್ಲಿ ಬಾಔನ್ 530 ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರು ಕೆಲವು ತಾಂತ್ರಿಕ ಬದಲಾವಣೆಗಳೊಂದಿಗೆ ಭಾರತದಲ್ಲಿ ಹೆಕ್ಟರ್ ಹೆಸರಿನೊಂದಿಗೆ ರಸ್ತೆಗಿಳಿಯುತ್ತಿದೆ. ಇದು ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ಸೌಲಭ್ಯ ಹೊಂದಿದ್ದು, ಸಿ ಸೆಗ್ಮೆಂಟ್ ಎಸ್‌ಯುವಿ ಆವೃತ್ತಿಗಳಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಕಾರಿನ ಬೆಲೆಗಳು(ಅಂದಾಜು)
ಎಂಜಿ ಮೋಟಾರ್ ಹೆಕ್ಟರ್ ಕಾರುಗಳು ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಗ್ರಾಹಕರ ಬೇಡಿಕೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ಹ್ಯಾಚ್‌ಬ್ಯಾಕ್. ಸೆಡಾನ್, ಎಸ್‌ಯುವಿ ಕಾರುಗಳನ್ನು ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಅಭಿವೃದ್ದಿ ಮಾಡಲಿರುವ ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಮಾಡಿದ್ದು, 2019ರ ಎರಡನೇ ತ್ರೈಮಾಸಿಕ ಅವಧಿಗೆ ತನ್ನ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ SAIC ಸಂಸ್ಥೆಯು ಸುಳಿವು ನೀಡಿದೆ.

ಇದಕ್ಕಾಗಿಯೇ ಗುಜರಾತ್‌ನಲ್ಲಿ 170 ಎಕರೆ ಭೂಮಿಯನ್ನು ಕೂಡಾ ಖರೀದಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಹೊಸ ಕಾರು ಉತ್ಪಾದನಾ ಘಟಕಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿಯೊಂದಿಗೆ ಭಾರತದಲ್ಲಿ ಹಲವು ಕಾರು ಉತ್ಪಾದನಾ ಸಂಸ್ಥೆಗಳಿಗೆ ಪ್ರಬಲ ಪೈಪೋಟಿ ನೀಡಲು ಯೋಜನೆ ರೂಪಿಸಿದೆ.
Source: Rushlane