ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಮಿಟ್ಸುಬಿಷಿ ಕಂಪನಿಯು ತನ್ನ ಹೊಸ ತಲೆಮಾರಿನ ಪಜೆರೋ ಸ್ಪೋರ್ಟ್ ನವೀಕೃತ ಆವೃತ್ತಿಯನ್ನು ಅನಾವರಣಗೊಳಿಸಿದೆ. ಹೊಸ ಎಸ್‍‍ಯು‍‍ವಿಯನ್ನು ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಗೊಳಿಸುವುದಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ನವೀಕೃತ ಪಜೆರೋ ಎಸ್‍‍ಯು‍‍ವಿಯ ಒಳಭಾಗ ಹಾಗೂ ಹೊರಭಾಗದಲ್ಲಿ ಹಲವು ಹೊಸ ವಿನ್ಯಾಸಗಳಿವೆ.

ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಹೊಸ ಪಜೆರೊ ಸ್ಪೋರ್ಟ್ ನವೀಕೃತ ಎಸ್‌ಯುವಿಯ ಮುಂಭಾಗವನ್ನು ನವೀಕರಿಸಲಾಗಿದ್ದು, ಪರಿಷ್ಕೃತ ಕ್ರೋಮ್ ಗ್ರಿಲ್‌ನೊಂದಿಗೆ ಫಾಸ್ಕಿಯಾವನ್ನು ಹೊಂದಿದೆ. ಮುಂಭಾಗದಲ್ಲಿ ಹೊಸ ಬಂಪರ್ ಅನ್ನು ಸಹ ಹೊಂದಿದೆ. ಇದರ ಜೊತೆಗೆ ಫಾಗ್ ಲ್ಯಾಂಪ್ ಹಾಗೂ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳನ್ನು ಹೊಂದಿದೆ.

ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಎಸ್‍‍ಯು‍‍ವಿಯ ಹಿಂಭಾಗದಲ್ಲಿಯೂ ಬದಲಾವಣೆಗಳಾಗಿವೆ. ನವೀಕೃತ ಪಜೆರೋ ಸ್ಪೋರ್ಟ್ ಹಿಂಭಾಗದಲ್ಲಿ ಹೊಸ ಬಂಪರ್ ಹಾಗೂ ಟ್ವೀಕ್ಡ್ ಟೇಲ್ ಲ್ಯಾಂಪ್‌ಗಳಿವೆ. ಇದರ ಜೊತೆಗೆ ಹೊಸ ಅಲಾಯ್ ವ್ಹೀಲ್‍ಗಳನ್ನು ಒಳಗೊಂಡಿದೆ. ಕ್ಯಾಬಿನ್ ಗ್ಲಾಪ್ ಬ್ಲಾಕ್ ಹಾಗೂ ಗ್ರೇ ಬಣ್ಣವನ್ನು ಹೊಂದಿದ್ದು, ಜೊತೆಗೆ ಸಿಲ್ವರ್ ಇನ್ಸರ್ಟ್‍‍ಗಳನ್ನು ಹೊಂದಿದೆ.

ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಮರುವಿನ್ಯಾಸಗೊಳಿಸಲಾದ ಸೆಂಟ್ರಲ್ ಕನ್ಸೋಲ್, ಡೋರ್ ಪ್ಯಾಡ್‌ ಹಾಗೂ ಹ್ಯಾಂಡಲ್‌ಗಳ ಮೇಲೆ ಸಾಫ್ಟ್ ಮೆಟಿರಿಯಲ್‍‍ಗಳಿವೆ. ಹೊಸ ಪಜೆರೋ ಸ್ಪೋರ್ಟ್ ಫೇಸ್‌ಲಿಫ್ಟ್ ಈಗ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಇಂಟಿರಿಯರ್‍‍ಹಲ್ಲಿ 8 ಇಂಚಿನ ಎಂಐಡಿ, ಡ್ಯುಯಲ್ ಜೋನ್ ಏರ್ ಕಂಡಿಷನರ್, ಪವರ್ ಟೇಲ್‌ಗೇಟ್‍‍ಗಳಿದ್ದು, ಇವುಗಳನ್ನು ಮೊಬೈಲ್ ಆ್ಯಪ್ ಮೂಲಕವೂ ನಿರ್ವಹಿಸಬಹುದು. ವಾಹನವು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ.

ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

7 ಏರ್‌ಬ್ಯಾಗ್, ಲೇನ್ ಚೇಂಜ್ ಅಸಿಸ್ಟ್, ರೇರ್ ಟ್ರಾಫಿಕ್ ಅಲರ್ಟ್ ಸಿಸ್ಟಂ, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸಿಸ್ಟಂ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಮಿಟ್ಸುಬಿಷಿ ಪಜೆರೋ ಸ್ಪೋರ್ಟ್ ನವೀಕೃತ ಎಸ್‍‍ಯು‍‍ವಿ 2.4-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 180 ಬಿಹೆಚ್‌ಪಿ ಪವರ್ ಹಾಗೂ 430 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಈ ಎಂಜಿನ್‍‍ನಲ್ಲಿ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. 4ಡಬ್ಲ್ಯುಡಿ ವ್ಯವಸ್ಥೆಯನ್ನು ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುತ್ತದೆ. 2020ರ ಮಿಟ್ಸುಬಿಷಿ, ಪಜೆರೋ ಸ್ಪೋರ್ಟ್ ಎಸ್‍‍ಯು‍‍ವಿಯನ್ನು 90ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಆದರೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಕಂಪನಿಯು, ಸದ್ಯಕ್ಕೆ ಹಳೆ ತಲೆಮಾರಿನ ಪಜೆರೋ ಸ್ಪೋರ್ಟ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಐದು ಮಾದರಿಗಳಲ್ಲಿ ಮಾರಾಟ ಮಾಡುತ್ತಿದೆ. ಎಲ್ಲಾ ಮಾದರಿಗಳಲ್ಲೂ 2.5ಲೀಟರ್ ಡೀಸೆಲ್ ಎಂಜಿನ್ ಇದ್ದು, ಈ ಎಂಜಿನ್ 176 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತವೆ. ಪಜೆರೋ ಸ್ಪೋರ್ಟ್ 2.5 ಎಟಿ ಹಾಗೂ ಪಜೆರೋ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಎಟಿಗಳು, 350 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಪಜೆರೊ ಸ್ಪೋರ್ಟ್ 2.5 ಎಂಟಿ, ಪಜೆರೊ ಸ್ಪೋರ್ಟ್ ಲಿಮಿಟೆಡ್ ಆವೃತ್ತಿ ಹಾಗೂ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಎಂಟಿಗಳು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಇದರ ಜೊತೆಗೆ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ ಆಯ್ಕೆಗಳಿವೆ. ವಾಹನಗಳ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.28.35 ಲಕ್ಷಗಳಿಂದ ರೂ.30 ಲಕ್ಷಗಳವರೆಗೆ ಇದೆ.

ಅನಾವರಣಗೊಂಡ ಮಿಟ್ಸುಬಿಷಿ ಪಜೆರೋ ನವೀಕೃತ ಆವೃತ್ತಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಪ್ರತಿ ವಾಹನವನ್ನು ನವೀಕರಿಸುವ ಅಗತ್ಯವಿದೆ. ಭಾರತದಲ್ಲಿ ಲಭ್ಯವಿರುವ ಪಜೆರೋ ವಾಹನಗಳಿಗೆ ಈ ನವೀಕರಣಗಳು ತೀರಾ ಅಗತ್ಯವಾಗಿದ್ದವು. ಭಾರತವು ವಿಶ್ವದ ಅತಿದೊಡ್ಡ ವಾಹನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆದ ಕಾರಣ ಹೊಸ ತಲೆಮಾರಿನ ವಾಹನಗಳನ್ನು ಮಿಟ್ಸುಬಿಷಿ ಭಾರತದಲ್ಲೂ ಬಿಡುಗಡೆಗೊಳಿಸಬೇಕು.

Most Read Articles

Kannada
English summary
Mitsubishi Pajero Sport Facelift Revealed — Details And All You Need To Know - Read in kannada
Story first published: Tuesday, July 30, 2019, 16:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X