ಬಿಡುಗಡೆಯಾಯಿತು ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5

ಬಿಎಂಡಬ್ಲ್ಯು ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಸ್‍‍ಯು‍‍ವಿಯನ್ನು ಬಿಡುಗಡೆಗೊಳಿಸಿದೆ. ನಾಲ್ಕನೇ ತಲೆಮಾರಿನ 2019ರ ಬಿಎಂಡಬ್ಲ್ಯು ಎಕ್ಸ್ 5 ನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.72.90 ಲಕ್ಷಗಳಾಗಿದೆ.

ಬಿಡುಗಡೆಯಾಯಿತು ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5

ಹೊಸ ಬಿಎಂಡಬ್ಲ್ಯು ಎಕ್ಸ್5 ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಮಾದರಿಗಳಲ್ಲಿ ಲಭ್ಯವಿರುತ್ತದೆ. ಡೀಸೆಲ್ ಮಾದರಿಯಲ್ಲಿ ಎಕ್ಸ್ ಡ್ರೈವ್ 30ಡಿ ಸ್ಪೋರ್ಟ್ಸ್ ಮತ್ತು ಎಕ್ಸ್ ಡ್ರೈವ್ 30ಡಿ ಎಕ್ಸ್ ಲೈನ್ ಎಂಬ ವಿಧಗಳಿವೆ. ಪೆಟ್ರೋಲ್ ಮಾದರಿಯಲ್ಲಿರುವ ಟಾಪ್ ಎಂಡ್‍ ಎಕ್ಸ್ ಡ್ರೈವ್ 40ಐ ಎಂ ಸ್ಪೋರ್ಟ್ ವಾಹನವನ್ನು ಬಿಡುಗಡೆ ಮಾಡಲಾಗಿದ್ದರೂ ಈ ವರ್ಷದ ಕೊನೆಯಲ್ಲಿ ಮಾರಾಟ ಮಾಡಲಾಗುವುದು. ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5 ವಾಹನವನ್ನು ಸಿ‍ಎಲ್‍ಎ‍ಆರ್ ಪ್ಲಾಟ್‍‍ಫಾರಂ ಮೇಲೆ ಆಧಾರಿತವಾಗಿದೆ.

ಬಿಡುಗಡೆಯಾಯಿತು ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5

ಇದೇ ಪ್ಲಾಟ್‍‍ಫಾರಂನಲ್ಲಿ ತಯಾರಾಗಿರುವ 5 ಸೀರಿಸ್, 7 ಸೀರಿಸ್ ಮತ್ತು ಎಕ್ಸ್ 3 ಮಾದರಿಗಳ ಮಾರಾಟವನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾಡಲಾಗುತ್ತಿದೆ. ಹೊಸ ತಲೆಮಾರಿನ ಬಿ‍ಎಂ‍‍ಡಬ್ಲ್ಯು ಎಕ್ಸ್5 ವಾಹನವು ಹಳೆ ತಲೆಮಾರಿನ ವಾಹನಗಳಿಗಿಂತ ಹೆಚ್ಚು ಉದ್ದ, ಎತ್ತರ ಮತ್ತು ಅಗಲವನ್ನು ಹೊಂದಿದೆ.

ಬಿಡುಗಡೆಯಾಯಿತು ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5

ಹಳೆ ತಲೆಮಾರಿನ ವಾಹನಗಳಿಗೆ ಹೋಲಿಸಿದರೆ ಹೊಸದಾದ, ಹೆಚ್ಚುವರಿಯಾದ ಫೀಚರ್‍‍ಗಳನ್ನು ಹೊಂದಿದೆ. ಬಿ‍ಎಂ‍‍ಡಬ್ಲ್ಯು ಎಕ್ಸ್5 ಗಾತ್ರದ ಬಗ್ಗೆ ಹೇಳುವುದಾದರೆ - 35 ಎಂಎಂ ಉದ್ದ, 32 ಎಂಎಂ ಅಗಲ ಮತ್ತು 11 ಎಂಎಂ ಎತ್ತರವನ್ನು ಹೊಂದಿದೆ.

ಬಿಡುಗಡೆಯಾಯಿತು ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5

ಬಿ‍ಎಂ‍‍ಡಬ್ಲ್ಯು ಎಕ್ಸ್5 ನ ವ್ಹೀಲ್ ಬೇಸ್, 42 ಎಂಎಂ ನಷ್ಟು ಜಾಸ್ತಿಯಾಗಿದ್ದು, ಈಗ 2975 ಎಂಎಂ ನಷ್ಟಿದೆ. ಗಾತ್ರ ಜಾಸ್ತಿಯಾದಂತೆ ಕ್ಯಾಬಿನ್ ಸ್ಪೇಸ್ ಕೂಡ ಜಾಸ್ತಿಯಾಗಿದೆ. ಬಿ‍ಎಂ‍‍ಡಬ್ಲ್ಯು ಎಕ್ಸ್5 ನ ಬೂಟ್ ಸ್ಪೇಸ್ 645 ಲೀಟರ್‍‍ನಷ್ಟೆ ಇರಲಿದೆ, ಸೀಟುಗಳನ್ನು ಮಡುಚಿದರೆ 1,640 ಲೀಟರ್ ಬೂಟ್ ಸ್ಪೇಸ್ ಸಿಗಲಿದೆ. ಇನ್ನೂ ಡಿಸೈನ್ ಬಗ್ಗೆ ಹೇಳುವುದಾದರೆ, ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5 ದೊಡ್ಡದಾದ ಗ್ರಿಲ್ ಹೊಂದಿದೆ. ಮುಂದೆ ಇರುವ ಬಂಪರ್‍‍ಗಳನ್ನು ಮಾರ್ಪಡಿಸಲಾಗಿದ್ದು, ದೊಡ್ಡ ಏರ್ ವೆಂಟ್ ಮತ್ತು ಇಂಟಿಗ್ರೇಟೆಡ್ ಫಾಗ್ ಲ್ಯಾಂಪ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯಿತು ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5

ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5 ವಾಹನದಲ್ಲಿ ಎಕ್ಸ್ ಶೇಪಿನ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ಸ್ ಗಳ ಜೊತೆಗೆ ಎಲ್‍ಇ‍‍ಡಿ ಡಿ‍ಆರ್‍ಎಲ್ ಗಳಿವೆ. ಈ ವಾಹನದಲ್ಲಿ 3 ಡಿ ಸಿಗ್ನೆಚರ್‍‍ನ ಎಲ್‍ಇ‍‍ಡಿ ಟೇಲ್ ಲೈಟ್‍‍ಗಳಿವೆ.

ಬಿಡುಗಡೆಯಾಯಿತು ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5

ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5 ವಾಹನದಲ್ಲಿ ಅನೇಕ ಫೀಚರ್‍‍ಗಳಿವೆ, ಅವುಗಳೆಂದರೆ ಬಿ‍ಎಂ‍‍ಡಬ್ಲ್ಯು ಕಾಕ್‍‍ಪಿಟ್ ಪ್ರೊಫೆಶನಲ್ ಡಿಸ್‍‍ಪ್ಲೇ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಅಳವಡಿಸಲಾಗಿರುವ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಲೆದರ್ ಅಪ್‍‍ಹೊಲ್‍‍ಸ್ಟರಿ, ವೈರ್‍‍ಲೆಸ್ ಚಾರ್ಜಿಂಗ್, 4 ಝೋನ್ ಕ್ಲೈಮೇಟ್ ಕಂಟ್ರೋಲ್, ಪನೊರಾಮಿಕ್ ಸನ್‍‍ರೂಫ್, ಆಂಬಿಯಂಟ್ ಲೈಟಿಂಗ್ ಮತ್ತು ಹಿಂಬದಿಯ ಪ್ರಯಾಣಿಕರಿಗಾಗಿ ಸ್ಕ್ರೀನ್‍‍ಗಳನ್ನು ಅಳವಡಿಸಲಾಗಿದೆ.

MOST READ: ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ಬಿಡುಗಡೆಯಾಯಿತು ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5

ಇನ್ನೂ ಇದರಲ್ಲಿರುವ ಮೆಕಾನಿಕಲ್‍‍ಗಳ ಬಗ್ಗೆ ಹೇಳುವುದಾದರೆ, ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5 3.0 ಲೀಟರಿನ 6 ಸಿಲಿಂಡರಿನ ಡೀಸೆಲ್ ಎಂಜಿನ್ ಹೊಂದಿದ್ದು, 261 ಬಿ‍‍ಹೆಚ್‍‍ಪಿ ಮತ್ತು 620 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ. ಎಕ್ಸ್ ಡ್ರೈವ್ 40ಐ ಎಂ ಸ್ಪೋರ್ಟ್ ಮಾದರಿಯು 3.0 ಲೀಟರಿನ 6 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಹೊಂದಿದ್ದು, 340 ಬಿ‍‍ಹೆಚ್‍‍ಪಿ ಮತ್ತು 450 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ. ಎರಡೂ ಮಾದರಿಗಳಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಮಾದರಿಗಳು ಬೆಲೆಗಳು*

ಎಕ್ಸ್ ಡ್ರೈವ್ 30ಡಿ ಸ್ಪೋರ್ಟ್ ರೂ 72.90 ಲಕ್ಷ

ಎಕ್ಸ್ ಡ್ರೈವ್ 30ಡಿ ಎಕ್ಸ್ ಲೈನ್

ರೂ 82.40 ಲಕ್ಷ
ಎಕ್ಸ್ ಡ್ರೈವ್ 40ಐ ಎಂ ಸ್ಪೋರ್ಟ್ ರೂ 82.40 ಲಕ್ಷ

* ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರದಂತೆ ಇವೆ.

ಬಿಡುಗಡೆಯಾಯಿತು ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈ ಹಿಂದಿನ ತಲೆಮಾರಿನ ವಾಹನಗಳಿಗೆ ಹೋಲಿಸಿದರೆ, ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5 ವಾಹನವನ್ನು ಅತ್ಯುತ್ತಮವಾಗಿ ಅಪ್‍‍ಡೇಟ್ ಮಾಡಲಾಗಿದೆ. ಸದ್ಯಕ್ಕೆ ಈ ವಾಹನದ ಡೀಸೆಲ್ ಎಂಜಿನ್ ಮಾದರಿಯನ್ನು ಮಾತ್ರ ಮಾರಾಟ ಮಾಡಲಾಗುವುದು, ಕೆಲವು ದಿನಗಳ ನಂತರ ಪೆಟ್ರೋಲ್ ಮಾದರಿಯನ್ನು ಮಾರಾಟ ಮಾಡಲಾಗುವುದು. ದೇಶೀಯ ಮಾರುಕಟ್ಟೆಯಲ್ಲಿ ಬಿ‍ಎಂ‍‍ಡಬ್ಲ್ಯು ಎಕ್ಸ್5 ವಾಹನವು ಮರ್ಸಿಡಿಸ್ ಬೆಂಜ್ ಜಿ‍ಎಲ್‍ಇ ಮತ್ತು ಆಡಿ ಕ್ಯೂ7 ವಾಹನಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
All-New BMW X5 Launched In India — Prices Start At Rs 72.90 Lakh - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X