ಬಿಡುಗಡೆಯಾಯ್ತು ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್

ರೆನಾಲ್ಟ್ ಇಂಡಿಯಾ, ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ತನ್ನ ಹೊಸ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಈ ಟೀಸರ್‍‍ನಲ್ಲಿ ರೆನಾಲ್ಟ್ ಕ್ವಿಡ್‍‍ನ ಮೊದಲ ನೋಟವನ್ನು ಕಾಣಬಹುದು. ಈ ಫೇಸ್‍‍ಲಿಫ್ಟ್ ಕಾರ್ ಅನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

ಬಿಡುಗಡೆಯಾಯ್ತು ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್

ಟೀಸರ್‍‍‍ನಲ್ಲಿ ಕಾಣುವಂತೆ ರೆನಾಲ್ಟ್ ಕ್ವಿಡ್ ಫೇ‍‍ಸ್‍‍ಲಿಫ್ಟ್ ತನ್ನ ವಿನ್ಯಾಸವನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಸಿಟಿ ಕೆ-ಜೆ ಕಾರಿನಿಂದ ಪಡೆದಿದೆ. ಈ ವಿನ್ಯಾಸಗಳಲ್ಲಿ ಹೊಸ ಡ್ಯೂಯಲ್ ಹೆಡ್‍‍ಲ್ಯಾಂಪ್, ಮೇಲ್ಭಾಗದಲ್ಲಿ ಎಲ್‍ಇ‍‍ಡಿ ಡಿ‍ಆರ್‍ಎಲ್ ಹಾಗೂ ಕೆಳಭಾಗದಲ್ಲಿ ಮುಖ್ಯವಾದ ಲೈಟಿಂಗ್ ಯುನಿಟ್‍‍ಗಳಿವೆ.

ಮುಂಭಾಗದಲ್ಲಿರುವ ಗ್ರಿಲ್‍‍ನಲ್ಲಿ ತೆಳುವಾದ ಕ್ರೋಮ್ ಅಳವಡಿಸಲಾಗಿದೆ. ಮುಂಭಾಗದಲ್ಲಿರುವ ಎರಡೂ ಬದಿಗಳಲ್ಲಿ ಎಲ್‍ಇ‍‍ಡಿ ಡಿಆರ್‍ಎಲ್‍‍ಗಳಿವೆ. ಮುಂಭಾಗದಲ್ಲಿರುವ ಬಂಪರ್‍‍ನ ಎರಡೂ ಬದಿಯಲ್ಲಿ ಹೆಡ್‍‍ಲ್ಯಾಂಪ್ ಕ್ಲಸ್ಟರ್‍‍ಗಳಿವೆ.

ಬಿಡುಗಡೆಯಾಯ್ತು ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್

ಮಧ್ಯ ಭಾಗದಲ್ಲಿ ಸಮನಾಗಿರುವ ಏರ್ ಇನ್‍‍ಟೇಕ್‍‍ಗಳಿವೆ. ಹಿಂಭಾಗದಲ್ಲಿ ಚಿಕ್ಕ ಎಲ್‍ಇ‍‍ಡಿ ಟೇಲ್ ಲೈಟ್‍‍ಗಳಿದ್ದು, ಇವುಗಳ ಜೊತೆಗೆ ಬಂಪರ್‍‍ನ ಎರಡೂ ಕಡೆ ರಿಫ್ಲೆಕ್ಟರ್‍‍ಗಳಿವೆ. ಮುಂಭಾಗದ ಬಂಪರ್‍‍ನಲ್ಲಿರುವ ಹೌಸಿಂಗ್‍‍ಗಳು ಆರೇಂಜ್ ಕಲರ್‍‍ನಲ್ಲಿವೆ.

ಬಿಡುಗಡೆಯಾಯ್ತು ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್

ಒ‍ಆರ್‍‍ವಿ‍ಎಂ‍‍ಗಳೂ ಸಹ ಆರೇಂಜ್ ಕಲರ್‍‍ನಲ್ಲಿವೆ. ಇದರಿಂದಾಗಿ ಈ ಕಾರು ಕ್ಲೈಂಬರ್ ಕಾರಿನ ಟಾಪ್ ಎಂಡ್‍ ಮಾದರಿಯಂತೆ ಕಾಣುತ್ತದೆ. ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರು ಹಲವಾರು ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್

ಇದರ ಜೊತೆಗೆ ಇಂಟಿರಿಯರ್‍‍ನಲ್ಲಿರುವ ಕ್ಯಾಬಿನ್ ಸ್ಪೇಸ್ ಅನ್ನು ಪರಿಷ್ಕರಿಸಲಾಗಿದೆ. ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರು ಟ್ಯಾಕೋ ಮೀಟರ್ ಹೊಂದಿರುವ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ.

ಬಿಡುಗಡೆಯಾಯ್ತು ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್

ಇದರ ಜೊತೆಗೆ ಆಂಡ್ರಾಯಿಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಹೊಂದಿರುವ 8.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಹೊಸ ಸ್ಟಿಯರಿಂಗ್ ವ್ಹೀಲ್ ಹಾಗೂ ಇನ್ನಿತರ ಎಕ್ವಿಪ್‍‍ಮೆಂಟ್‍‍ಗಳಿವೆ.

ಬಿಡುಗಡೆಯಾಯ್ತು ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್

ರೆನಾಲ್ಟ್ ಕ್ವಿಡ್‍‍ನ ಫೇಸ್‍‍ಲಿಫ್ಟ್ ಕಾರ್ ಅನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಕಾರು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಾರು ಹೊಂದಿರುವ ಎಂಜಿನ್ ಅನ್ನು ಹೊಂದಿರಲಿದೆ. 800 ಸಿಸಿಯ ಪೆಟ್ರೋಲ್ ಎಂಜಿನ್ 54 ಬಿಹೆಚ್‍‍ಪಿ ಪವರ್ ಉತ್ಪಾದಿಸಿದರೆ, 1.0 ಲೀಟರಿನ ಪೆಟ್ರೋಲ್ ಎಂಜಿನ್ 68 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್

ಎರಡೂ ಎಂಜಿನ್‍‍ಗಳಲ್ಲಿ 5 ಸ್ಪೀಡ್‍‍ನ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. 1.0 ಲೀಟರಿನ ಎಂಜಿನ್‍‍ನಲ್ಲಿ ಎ‍ಎಂಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ರೆನಾಲ್ಟ್ ಕ್ವಿಡ್‍‍ನಲ್ಲಿರುವ ಎಂಜಿನ್‍‍ಗಳು ಬಿ‍ಎಸ್ 4 ಆಗಿವೆ. ರೆನಾಲ್ಟ್ ಕಂಪನಿಯು 2020ರ ಏಪ್ರಿಲ್ 1ಕ್ಕೆ ಮುಂಚೆ ಬಿ‍ಎಸ್ 6 ಎಂಜಿನ್‍‍ಗಳನ್ನು ತನ್ನ ಸರಣಿಯಲ್ಲಿರುವ ಎಲ್ಲಾ ವಾಹನಗಳಲ್ಲೂ ಅಳವಡಿಸಲಿದೆ.

ಬಿಡುಗಡೆಯಾಯ್ತು ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿನ ಮೊದಲ ಟೀಸರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರ್ ಅನ್ನು ಮುಂದಿನ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ ಈ ಕಾರು ಮಾರುತಿ ಸುಜುಕಿಯ ಎಸ್ - ಪ್ರೆಸ್ಸೊ ಕಾರಿಗೆ ಪೈಪೋಟಿ ನೀಡಲಿದೆ. ಈ ಹೊಸ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.3 ಲಕ್ಷದಿಂದ 3.5 ಲಕ್ಷಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
New Renault Kwid Facelift First Teaser Video Released Ahead Of Launch: Watch It Here! - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X