1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

ಭಾರತೀಯ ಆಟೋ ಉದ್ಯಮದಲ್ಲಿ ಕೆಲವು ತಿಂಗಳ ಹಿಂದಿನಿಂದ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಲಾಗುತ್ತಿದ್ದು, ಹೊಸ ನಿಯಮಗಳಿಂದಾಗಿ ವಾಹನ ಬೆಲೆ ಮತ್ತು ಇಂಧನ ಬೆಲೆಗಳು ಗಗನಮುಖಿಯಾಗುತ್ತಿವೆ. ಇದರಿಂದಾಗಿ ಹೊಸ ವಾಹನ ಮಾರಾಟವು ಕೂಡಾ ಕುಸಿತ ಕಂಡಿದ್ದು, ಅನಿವಾರ್ಯವಾಗಿ ಉದ್ಯೋಗಿಗಳ ಪ್ರಮಾಣವನ್ನು ಕಡಿತಮಾಡಲಾಗುತ್ತಿದೆ.

1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

ಕಳೆದ 18 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ಆಟೋ ಉದ್ಯಮ ಭಾರೀ ಹಿನ್ನಡೆ ಅನುಭವಿಸಿದ್ದು, ಬಹುತೇಕ ಆಟೋ ಉದ್ಯಮ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿವೆ. 2019ರ ಆರಂಭದಿಂದ ಹೊಸ ವಾಹನಗಳ ಮಾರಾಟದಲ್ಲಿ ಗರಿಷ್ಠ ಇಳಿಕೆ ದಾಖಲಾಗುತ್ತಿದ್ದು, ಇದುವರೆಗೂ ಆಟೋ ಉದ್ಯಮವು ಚೇತರಿಕೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಟೋ ಉದ್ಯಮವನ್ನೇ ನಂಬಿಕೊಂಡಿದ್ದ ಬೀಡಿಭಾಗಗಳ ತಯಾರಿಕಾ ಸಂಸ್ಥೆಗಳು ಕದ ಮುಚ್ಚುವ ಪರಿಸ್ಥಿತಿ ಎದುರಾಗಿದೆ.

1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

ಹೌದು, ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಹರಸಾಹಸ ಪಡುತ್ತಿದ್ದು, ಹೊಸ ವಾಹನಗಳ ಉತ್ಪಾದನಾ ಪ್ರಕ್ರಿಯೆಯು ಕೂಡಾ ಕುಂಟುತ್ತಾ ಸಾಗಿದೆ.

1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

ಹೀಗಿರುವಾಗ ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ, ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಯನ್ನು ತಾತ್ಕಲಿಕವಾಗಿ ಬಂದ್ ಮಾಡಿದಲ್ಲಿ, ಇನ್ನು ಕೆಲವು ಆಟೋ ಸಂಸ್ಥೆಗಳು ಉದ್ಯೋಗಿಗಳ ಸಂಖ್ಯೆಗೆ ಕತ್ತರಿ ಹಾಕುತ್ತಿವೆ.

1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

ಈಗಾಗಲೇ ಬೀಡಿಭಾಗಗಳ ಉತ್ಪಾದನಾ ವಲಯದಲ್ಲಿ ಪರೋಕ್ಷವಾಗಿ ಬರೋಬ್ಬರಿ 10 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದು, ಇದೇ ಮೊದಲ ಬಾರಿಗೆ ನಿಸ್ಸಾನ್ ಇಂಡಿಯಾ ಸಂಸ್ಥೆಯು ಅಧಿಕೃತವಾಗಿ 1,700 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸೂಚನೆ ನೀಡಿದೆ. ಇದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದ್ದು, ಬೇರೆ ಬೇರೆ ಆಟೋ ಸಂಸ್ಥೆಗಳಲ್ಲೂ ಉದ್ಯೋಗ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಕಡಿತವಾಗುವ ನೀರಿಕ್ಷೆಯದೆ.

1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

2019ರ ಅವಧಿಯಲ್ಲಿ ಭಾರತೀಯ ಆಟೋ ಉತ್ಪಾದನಾ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದ್ದು, ಹೊಸ ವಾಹನ ಮಾರಾಟದಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟ ಅನುಭವಿಸಿವೆ. ಅದರಲ್ಲೂ ಕಳೆದ ಏಪ್ರಿಲ್ ಮತ್ತು ಮೇ ಅವಧಿಯಲ್ಲಿನ ಹೊಸ ವಾಹನಗಳ ಮಾರಾಟವು ಪ್ರಮಾಣವು ಕಳೆದ 18 ವರ್ಷಗಳಲ್ಲೇ ಮೊದಲ ಬಾರಿಗೆ ತೀವ್ರ ಕುಸಿತ ಕಂಡಿತ್ತು.

1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇದರಿಂದ ಮಾರಾಟವಾಗದೇ ಉಳಿದ ಸ್ಟಾಕ್ ಇದೀಗ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಿದ್ದು, ಬಹುತೇಕ ಆಟೋ ಸಂಸ್ಥೆಗಳು ತಮ್ಮ ಹೊಸ ವಾಹನಗಳ ಉತ್ಪಾದನೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಿ ಸ್ಟಾಕ್ ಕರಗಿಸಲು ಪ್ರಯತ್ನದಲ್ಲಿವೆ.

1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

ಸದ್ಯ ಮಾರುಕಟ್ಟೆಯಲ್ಲಿ ಲೋಕಸಭಾ ಚುನಾವಣೆ ನಂತರ ಹೊಸ ವಾಹನಗಳ ಮಾರಾಟ ಪ್ರಕ್ರಿಯೆಯಲ್ಲಿ ಚೇತರಿಕೆ ಕಂಡುಬರುತ್ತಿದ್ದರೂ ಸಹ ಸ್ಟಾಕ್ ಪ್ರಮಾಣ ಮಾತ್ರ ಹಾಗೆಯೇ ಇದೆ. ಈ ನಿಟ್ಟಿನಲ್ಲಿ ಬಹುತೇಕ ಕಾರು ಸಂಸ್ಥೆಗಳು ವಿವಿಧ ಮಾದರಿಯ ಆಫರ್ ನೀಡುವ ಮೂಲಕ ಮಾರಾಟದ ಸಂಖ್ಯೆಗಳನ್ನು ಹೆಚ್ಚಿಸುವತ್ತ ಗಮನಹರಿಸಿದ್ದು, ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಗಳು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.

1,700 ಉದ್ಯೋಗಿಗಳನ್ನು ತೆಗೆದುಹಾಕಲು ನಿಸ್ಸಾನ್ ಇಂಡಿಯಾ ಪ್ಲ್ಯಾನ್

ಇದರೊಂದಿಗೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನ ಮಾರಾಟ ನಿಷೇಧವಾಗಿ ಬಿಎಸ್-6 ನಿಯಮವು ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲೂ ಕೂಡಾ ಬಹುತೇಕ ಗ್ರಾಹಕರು ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ವಾಹನಗಳನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬಿಎಸ್-6 ವಾಹನ ಖರೀದಿಯ ಯೋಜನೆಯಲ್ಲಿರುವುದರಿಂದ ವಾಹನ ಉತ್ಪಾದನಾ ಸಂಸ್ಥೆಗಳು ಸಹ ಎಚ್ಚರಿಕೆಯ ಹೆಜ್ಜೆಯೊಂದಿಗೆ ಸ್ಟಾಕ್ ಪ್ರಮಾಣವನ್ನು ಮುಂದುವರಿಸುತ್ತಿದ್ದು, ಉದ್ಯೋಗ ಭದ್ರತೆಯೇ ಇಲ್ಲದಂತಾಗಿದೆ.

Most Read Articles

Kannada
English summary
Nissan Motor India is planning to reduce the headcount in the country by over 1,700 this fiscal.
Story first published: Saturday, July 27, 2019, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X