ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರೆನಾಲ್ಟ್ ಕ್ವಿಡ್

ಫ್ರೆಂಚ್ ಮೂಲದ ವಾಹನ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಕಂಪನಿಯು ತನ್ನ 2020ರ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಬಿಎಸ್-6 ಮಾದರಿಯನ್ನು ಪುಣೆಯಲ್ಲಿ ಸ್ಪಾಟ್ ಟೆಸ್ಟ್ ಮಾಡಿದೆ. ಈ ಹ್ಯಾಚ್‍‍ಬ್ಯಾಕ್ ಸ್ಪಾಟ್ ಟೆಸ್ಟ್ ನಡೆಸುವ ಸ್ಪೈ ವೀಡಿಯೋವನ್ನು ಏರಿಯಾ ಆಫ್ ಇಂಟರೆಸ್ಟ್ ಯೂಟ್ಯೂಬ್‍‍ನಲ್ಲಿ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್

ಸ್ಪೈ ವೀಡಿಯೋದಲ್ಲಿ 2020ರ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಹ್ಯಾಚ್‍ಬ್ಯಾಕ್‍‍ನ ಕೆಲವು ಮಾಹಿತಿಗಳು ಬಹಿರಂಗವಾಗಿವೆ. ಹೊಸ ಕ್ವಿಡ್ ಫೇಸ್‍‍ಲಿಫ್ಟ್ ಬಿಎಸ್-6 ಎಂಜಿನ್ ಅನ್ನು ಟೆಸ್ಟ್ ಮಾಡುತ್ತಿರುವುದು ಸ್ಪೈ ವೀಡಿಯೋದಿಂದ ಕಂಡು ಬಂದಿದೆ. ಅಂದ ಹಾಗೆ ಈಗ ಸ್ಪಾಟ್ ಟೆಸ್ಟ್ ಮಾಡಿರುವುದು ಕ್ವಿಡ್ ಕ್ಲೈಂಬರ್ ಮಾದರಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹ್ಯಾಚ್‍‍ಬ್ಯಾಕ್‍‍ನಂತೆ ಈ ಹೊಸ ಕಾರ್ ಸಹ 14 ಇಂಚಿನ ಟಯರ್‍‍ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್

2020ರ ರೆನಾಲ್ಟ್ ಕ್ವಿಡ್‍‍ನ ಸ್ಪೈ ಚಿತ್ರಗಳಲ್ಲಿ ವಾಹನದ ಹಿಂಭಾಗದಲ್ಲಿ ಮಾಲಿನ್ಯ ಟೆಸ್ಟ್ ನಡೆಸುವ ಉಪಕರಣಗಳನ್ನು ಅಳವಡಿಸಲಾಗಿದೆ. ಮುಂದಿನ ವರ್ಷದಲ್ಲಿ ಜಾರಿಗೆ ಬರಲಿರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಈ ಹ್ಯಾಚ್‍‍ಬ್ಯಾಕ್ ಅನ್ನು ಅಭಿವೃದ್ದಿಪಡಿಸಲಾಗಿದೆ ಎಂಬುದು ಸ್ಪೈ ಚಿತ್ರ ಮತ್ತು ವೀಡಿಯೋದಿಂದ ತಿಳಿದುಬರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್

ರೆನಾಲ್ಟ್ ಹ್ಯಾಚ್‍ಬ್ಯಾಕ್ ಸ್ಪೈ ವೀಡಿಯೋದ ಪ್ರಕಾರ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಂತೆ 1.0 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಪ್ರಸ್ತುತ ಕ್ವಿಡ್ ಹ್ಯಾಚ್‍‍ಬ್ಯಾಕ್‍‍ನ ಎಂಜಿನ್ 67 ಬಿ‍‍ಹೆಚ್‍‍ಪಿ ಪವರ್ ಮತ್ತು 91 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಹ್ಯಾ‍‍ಚ್‍ಬ್ಯಾಕ್‍ನ ಎಂಜಿನ್ ಪರ್ಫಾಮೆನ್ಸ್ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನೂ ಬಹಿರಂಗಗೊಂಡಿಲ್ಲ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್

2020ರ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಸ್ಪೈ ಚಿತ್ರದಲ್ಲಿ ಕಂಡುಬಂದ ಪ್ರಕಾರ ಹಿಂಭಾಗದ ಬಂಪರ್ ಅನ್ನು ನವೀಕರಿಸಲಾಗಿದೆ. ಹೊಸ ಕ್ವಿಡ್‍‍ನ ಮುಂಭಾಗದಲ್ಲಿ. ಹೊಸ ಬಂಪರ್, ಹೊಸ ಹೆಡ್‍‍ಲ್ಯಾಂಪ್, ಮುಂಭಾಗದ ಎಲ್‍ಇಡಿ ಸೆ‍ಟ್ಅಪ್‍‍ಗಳಿವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್

2020ರ ಕ್ವಿಡ್ ಅನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮುಂದಿನ ವರ್ಷ ದೆಹಲಿಯಲ್ಲಿ ನಡೆಯುವ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿರುವ ರೆನಾಲ್ಟ್ ಕ್ವಿಡ್ 12 ರೂಪಾಂತರಗಳಲ್ಲಿ ಲಭ್ಯವಿದೆ. ಎಲ್ಲಾ ರೂಪಾಂತರಗಳಲ್ಲಿ ಪೆಟ್ರೋಲ್ ಎಂಜಿನ್‍ಗಳನ್ನು ಅಳವಡಿಸಲಾಗಿದೆ. ಈ ಎಂಜಿನ್‍‍ಗಳು 799 ಸಿಸಿ ಎಂಜಿನ್ 53 ಬಿ‍‍ಹೆಚ್‍‍ಪಿ ಪವರ್ ಮತ್ತು 72 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.0 ಲೀಟರ್ ಎಂಜಿನ್ 67 ಬಿ‍‍ಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್

ಪ್ರಸ್ತುತ ರೆನಾಲ್ಟ್ ಕ್ವಿಡ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.83 ಲಕ್ಷದಿಂದ ರೂ.4.92 ಲಕ್ಷಗಳಾಗಿದೆ. 2020ರ ರೆನಾಲ್ಟ್ ಕ್ವಿಡ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.25 ಲಕ್ಷದಿಂದ ರೂ.5.55 ಲಕ್ಷಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್

ಸ್ಪೈ ಚಿತ್ರ ಮತ್ತು ವೀಡಿಯೋಗಳಿಂದ ಕೆಲವು ಮಾಹಿತಿಗಳು ಮಾತ್ರ ಬಹಿರಂಗವಾಗಿವೆ. 2020ರ ಕ್ವಿಡ್ ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆಯಾದ ನಂತರ ಮಾರುತಿ ಸುಜುಕಿ ಆಲ್ಟೊ ಮತ್ತು ಆಲ್ಟೊ ಕೆ10 ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರುಗಳಿಗೆ ಪೈಪೋಟಿ ನೀಡಲಿದೆ.

Source: Area of Interest/YouTube

Most Read Articles

Kannada
English summary
Renault Kwid Facelift BS-VI Spotted Testing Ahead Of India Launch: Spy Pics & Video - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X