ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಮಹೀಂದ್ರಾ ನಿರ್ಮಾಣದ ಹೊಚ್ಚ ಹೊಸ ಎಕ್ಸ್‌ಯುವಿ300 ಕಾರು ಇದೇ ತಿಂಗಳು 14ರಂದು ಬಿಡುಗಡೆಯಾಗುತ್ತಿದ್ದು, ಈಗಾಗಾಲೇ ಹೊಸ ಕಾರು ಖರೀದಿಗಾಗಿ ರೂ.20 ಸಾವಿರಕ್ಕೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭ ಮಾಡಲಾಗಿದೆ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಬುಕ್ಕಿಂಗ್ ಆರಂಭ ಮಾಡಿ ಇನ್ನು ಕೂಡಾ ಒಂದು ವಾರವಾಗಿಲ್ಲ ಆಗಲೇ 5 ಸಾವಿರ ಗ್ರಾಹಕರು ಮುಂಗಡ ಪಾವತಿಸಿ ಹೊಸ ಕಾರು ಖರೀದಿಗೆ ಕಾಯ್ದುಕುಳಿತಿದ್ದಾರೆ. ಬಿಡುಗಡೆಗು ಮುನ್ನವೇ ಈ ಕಾರಿನ ಖ್ರೀದಿಗಾಗಿ ಬೇಡಿಕೆಯು ಹೆಚ್ಚುತ್ತಿದ್ದು, ಇಲ್ಲಿಯವರೆಗು ಸುಮಾರು 4 ಸಾವಿರಕ್ಕು ಅಧಿಕ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ವಿಶೇಷ ವಿನ್ಯಾಸ ಮತ್ತು ಬಲಿಷ್ಠವಾದ ತಾಂತ್ರಿಕ ಸೌಲಭ್ಯ ಹೊತ್ತುಬರುತ್ತಿರುವ ಎಕ್ಸ್‌ಯುವಿ300 ಕಾರು ಹೆಸರಿಗೆ ತಕ್ಕಂತೆ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿ ಹೊರಹೊಮ್ಮುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವುದಲ್ಲದೇ ಇದುವರೆಗೂ ಮಹೀಂದ್ರಾ ನಿರ್ಮಾಣ ಯಾವುದೇ ಕಾರಿನಲ್ಲಿ ಇರದ ಕೆಲವೇ ವಿಶೇಷ ಸೌಲಭ್ಯಗಳು ಈ ಕಾರಿನಲ್ಲಿದ್ದು, ದಕ್ಷಿಣ ಕೊರಿಯಾದ ಸ್ಯಾಂಗ್‌ಯಾಂಗ್ ಸಂಸ್ಥೆಯ ಜೊತೆಗೂಡಿ ಮಹೀಂದ್ರಾ ಸಂಸ್ಥೆಯು ಹೊಸ ಕಾರನ್ನು ಅಭಿವೃದ್ಧಿಗೊಳಿಸಿದೆ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಸ್ಯಾಂಗ್‌ಯಾಂಗ್ ನಿರ್ಮಾಣದ ಜನಪ್ರಿಯ ಟಿವೊಲಿ ಕಾರಿನ ಮಾದರಿಯಲ್ಲೇ ದೇಶಿಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಎಕ್ಸ್‌ಯುವಿ300 ಕಾರುನ್ನು ನಿರ್ಮಾಣ ಮಾಡಲಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಯುವಿ300 ಕಾರು ಪ್ರೀಮಿಯಂ ಸೌಲಭ್ಯವುಳ್ಳ 5 ಆಸನದ ಕಾರು ಮಾದರಿಯಾಗಿದೆ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೊಸ ಎಕ್ಸ್‌ಯುವಿ300 ಕಾರು ಡಿಸೇಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಾಗಲಿದ್ದು, ಡಿಸೇಲ್ ಕಾರುಗಳು 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿವೆ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಹಾಗೆಯೇ ಪೆಟ್ರೋಲ್ ಮಾದರಿಯು ಸಹ 1.2-ಲೀಟರ್ ಎಂಜಿನ್‌ನೊಂದಿಗೆ 110-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಇದರೊಂದಿಗೆ ಡಿಸೇಲ್ ವರ್ಷನ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ವರ್ಷನ್‌ ಕಾರುಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಸುರಕ್ಷಾ ಸೌಲಭ್ಯಗಳು

ಹೊಸ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳನ್ನು ಸಹ ಪ್ರಮುಖ ಆಕರ್ಷಣೆಯಾಗಿದ್ದು, ಅಪೋಲೋ ನಿರ್ಮಾಣದ 17-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್‌ನೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಮೊದಲ ಬಾರಿಗೆ ನೀಡಲಾಗಿರುತ್ತಿರುವ 7 ಏರ್‌ಬ್ಯಾಗ್ ಸೌಲಭ್ಯ ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಇನ್ನುಳಿದಂತೆ ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವಿದ್ದು, ಸಬ್ ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರ ಆಕರ್ಷಣೆ ಮಾಡುವಲ್ಲಿ ಯಶಸ್ವಿಯಾಗಲಿವೆ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಜೊತೆಗೆ ಹೊಸ ಕಾರಿನಲ್ಲಿ ಗ್ರಾಹಕರು ನಿರೀಕ್ಷಿಸಬಹುದಾದ ಮತ್ತಷ್ಟು ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಟೋನ್ ಇಂಟಿರಿಯರ್, ಇನ್ಫೋಟೈನ್ಮೆಂಟ್ ಸಿಸ್ಟಂ, ಎಸಿ ವೆಂಟ್ಸ್ ಮತ್ತು ಸ್ಟೀರಿಂಗ್ ವ್ಹೀಲ್‍ನ ಮೇಲೆ ಸಿಲ್ವರ್ ಆಕ್ಸೆಂಟ್‍‍ಗಳನ್ನು ಸಹ ಅಳವಡಿಸಲಾಗಿದೆ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಡ್ಯುಯಲ್ ಟೋನ್ ಇಂಟಿರಿಯರ್ ಅನ್ನು ಹೊರತುಪಡಿಸಿ ಮಹೀಂದ್ರಾ ಎಕ್ಸ್‌ಯುವಿ300 ಕಾರಿನಲ್ಲಿ ದೊಡ್ಡದಾದ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದ್ದು, ಇದು ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಆಯ್ಕೆಯನ್ನು ಪಡೆಯಬಹುದಲ್ಲದೇ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್‍‍ಗಳನ್ನು ಸಹ ಪಡೆದಿದೆ.

ನಾಳೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಗ್ಗೆ ಫುಲ್ ಡಿಟೇಲ್ಸ್...

ಇನ್ನುಳಿದಂತೆ ಎಕ್ಸ್‌ಯುವಿ300 ಕಾರು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಸೆಂಟ್ರಲ್ ಮಲ್ಟಿ ಇನ್ಫಾರ್ಮೇಷನ್ ಡಿಸ್ಪ್ಲೇ ಹೊಂದಿರುವ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಸ್ಟಾರ್ಟ್/ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್, ಸನ್‍‍ರೂಫ್ ಮತ್ತು ಹಿಂಬದಿಯ ಸವಾರರ ಸೀಟ್‍‍ಗಳಿಗೆ ಸೆಂಟ್ರಲ್ ಆರ್ಮ್‍ರೆಸ್ಟ್ ವೈಶಿಷ್ಟ್ಯತೆಗಳನ್ನ ಪಡೆದುಕೊಂಡಿದೆ.

ಕಾರಿನ ಬೆಲೆಗಳು(ಅಂದಾಜು)

ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪ್ಯಾಕ್ಟ್ ಎಸ್‌ಯುವಿಗಳಿಂತೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಎಕ್ಸ್‌ಯುವಿ300 ಕಾರುಗಳ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 12 ಲಕ್ಷ ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Things To Know About New Mahindra XUV300. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X