ಬೆಂಗಳೂರಿನ ಟೊಯೊಟಾ ಡೀಲರ್‍ ಬಳಿ ಕಾಣಿಸಿಕೊಂಡ ಗ್ಲಾಂಝಾ - ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ

ಟೊಯೊಟಾ ಮತ್ತು ಮಾರುತಿ ಸುಜುಕಿ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿ ಮಾಡುತ್ತಿರುವ ಗ್ಲಾಂಝಾ ಕಾರು ಬಿಡುಗಡೆಗಾಗಿ ಇನ್ನು ಕೆಲ್ವೇ ದಿನಗಳು ಬಾಕಿ ಇದ್ದು, ಮಾಹಿತಿಗಳ ಪ್ರಕಾರ ಜೂನ್ 6, 2019ರಂದು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದರಿಂದಾಗಿ ಸಧ್ಯಕ್ಕೆ ದೇಶದಲ್ಲಿರುವ ಟೊಯೊಟಾ ಡೀಲರ್‍ ಯಾರ್ಡ್ ಅನು ತಲುಪುತ್ತಿದ್ದು, ನಮ್ಮ ಬೆಂಗಳೂರಿನಲ್ಲಿರುವ ಟೊಯೊಟಾ ಡೀಲರ್‍ ಯಾರ್ಡ್‍ನಲ್ಲಿ ಕೂಡಾ ಕಾಣಿಸಿಕೊಂಡಿದೆ.

ಬೆಂಗಳೂರಿನ ಟೊಯೊಟಾ ಡೀಲರ್‍ ಬಳಿ ಕಾಣಿಸಿಕೊಂಡ ಗ್ಲಾಂಝಾ - ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ

ಮಾರುತಿ ಸುಜುಕಿ ಬಲೆನೊ ಕಾರಿಗಿಂತಲೂ ಟೊಯೊಟಾ ಗ್ಲ್ಯಾಂಝ, ವಿನ್ಯಾಸದಲ್ಲಿ ಕೊಂಚ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿರಲಿದ್ದು, ಮಾರುತಿ ಸುಜುಕಿ ಬ್ಯಾಡ್ಜಿಂಗ್ ಮೊದಲು ಟೊಯೊಟಾ ಬ್ಯಾಡ್ಜಿಂಗ್ ಅನ್ನು ನೀಡಿದ್ದಾರೆ ಅಂತಲೇ ಹೇಳಬಹುದು. ಈ ಕಾರು ಟೊಯೊಟಾ ಮತ್ತು ಮಾರುತಿ ಸುಜುಕಿ ಸಾಂಸ್ಥೆಗಳು ಜಂಟಿಯಾಗಿ ನಿರ್ಮಾಣವಗುತ್ತಿರುವ ಮೊದಲನೆಯೆ ಕಾರಾಗಿದ್ದು, ಭವಿಷ್ಯದಲ್ಲಿ ಇನ್ನು ಹಲವಾರು ಕಾರುಗಳನ್ನು ಬಿಡುಗಡೆ ಮಾಡಲಿವೆ.

ಬೆಂಗಳೂರಿನ ಟೊಯೊಟಾ ಡೀಲರ್‍ ಬಳಿ ಕಾಣಿಸಿಕೊಂಡ ಗ್ಲಾಂಝಾ - ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ

ಮಾಹಿತಿ ಪ್ರಕಾರ, ಹೊಸ ಗ್ಲಾಂಝ್ ಕಾರು ಸ್ಮಾರ್ಟ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಅನಾವರಣಗೊಳ್ಳಲಿದ್ದು, 2020ರ ಎಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್- 6 ನಿಯಮಗಳಿಗೆ ಅನುಗುಣವಾಗಿ ಹೊಸ ಕಾರನ್ನು ಉನ್ನತಿಕರಿಸಲಾಗಿದೆ.

ಬೆಂಗಳೂರಿನ ಟೊಯೊಟಾ ಡೀಲರ್‍ ಬಳಿ ಕಾಣಿಸಿಕೊಂಡ ಗ್ಲಾಂಝಾ - ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ

ಮೊನ್ನೆಯಷ್ಟೆ ಕಾರಿನ ಇಂಟೀರಿಯರ್ ಚಿತ್ರಗಳು ಸಹ ಸೋರಿಕೆಯಾಗಿದ್ದು, ಸೋರಿಕೆಯಾಗಿರುವ ಚಿತ್ರಗಳ ಪ್ರಕಾರ, ಬಿಡುಗಡೆಯಾಗಿರುವ ಹ್ಯಾಚ್‍ಬ್ಯಾಕ್ ನ ಕ್ಯಾಬಿನ್ ಮಾರುತಿ ಬಲೆನೋದಂತೆಯೇ ಇರಲಿದ್ದು, ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಎಲ್ಲಾ ಫೀಚರ್ ಗಳೂ ಬಲೆನೋ ರೀತಿಯಲ್ಲಿಯೇ ಇರಲಿದ್ದು, ಸ್ಟೀಯರಿಂಗ್‍ನಲ್ಲಿ ಅಳವಡಿಸಿದ್ದ ಮಾರುತಿ ಬ್ಯಾಡ್ಜ್ ಬದಲಿಗೆ ಟೊಯೊಟಾ ಬ್ಯಾಡ್ಜ್ ಬರಲಿದೆ. ಟೊಯೊಟಾ ಗ್ಲಾಂಝಾದ ಇಂಟಿರಿಯರ್ ಮಾರುತಿ ಬಲೆನೋದಂತೆಯೇ ಇರಲಿದ್ದು, ಇದರಲ್ಲಿ ಗುಣಮಟ್ಟ ಮತ್ತು ಕ್ಯಾಬಿನ್ ನ ಫಿನಿಷಿಂಗ್‍ಗಳೂ ಸೇರಿವೆ.

ಬೆಂಗಳೂರಿನ ಟೊಯೊಟಾ ಡೀಲರ್‍ ಬಳಿ ಕಾಣಿಸಿಕೊಂಡ ಗ್ಲಾಂಝಾ - ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ

ಬಲೆನೋ ವಾಹನದಲ್ಲಿದ್ದಂತಹ ಫೀಚರ್‍‍ಗಳಾದ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಹೊಂದಿರುವ ಸ್ಮಾರ್ಟ್ ಸ್ಟುಡಿಯೋ ಇನ್ಫೊಟೇನ್ ಮೆಂಟ್ ಸಿಸ್ಟಂಗಳನ್ನು ಗ್ಲಾಂಝಾ ಸಹ ಹೊಂದಲಿದೆ. ಆದರೆ ಇನ್ಫೋ ಟೇನ್ ಮೆಂಟ್ ಸಿಸ್ಟಂ ನ ಮೇಲೆ ಮಾರುತಿ ಸುಜುಕಿ ಲೋಗೋ ಬದಲು ಟೊಯೊಟಾ ಲೋಗೋ ಇರಲಿದೆ.

ಬೆಂಗಳೂರಿನ ಟೊಯೊಟಾ ಡೀಲರ್‍ ಬಳಿ ಕಾಣಿಸಿಕೊಂಡ ಗ್ಲಾಂಝಾ - ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ

ಇನ್ನು ಎಕ್ಸ್ ಟೀರಿಯರ್ ಸಹ ಬಲೆನೋದ ಡಿಸೈನ್ ಮತ್ತು ಸ್ಟೈಲ್ ಹೊಂದಿರಲಿದೆ. ಆದರೆ ಟೊಯೊಟಾ ಕಂಪನಿಯು ಮುಂಭಾಗದಲ್ಲಿರುವ ಗ್ರಿಲ್ ಅನ್ನು ತನ್ನ ಲೋಗೋವನ್ನು ಅಳವಡಿಸುವ ಸಲುವಾಗಿ ಸ್ವಲ್ಪ ಮಟ್ಟಿಗೆ ತಿರುಚಿದೆ.

ಬೆಂಗಳೂರಿನ ಟೊಯೊಟಾ ಡೀಲರ್‍ ಬಳಿ ಕಾಣಿಸಿಕೊಂಡ ಗ್ಲಾಂಝಾ - ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ

ಟೊಯೊಟಾ ಗ್ಲಾಂಝಾ ವಾಹನವನ್ನು, ಬಲೆನೋದ ಟಾಪ್ ಮಾದರಿಗಳ ರೀತಿಯಲ್ಲಿ ಜೆಟಾ ಮತ್ತು ಆಲ್ಫಾ ಎಂಬ ಕೇವಲ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ. ಗ್ಲಾಂಝಾ ಹ್ಯಾಚ್ ಬ್ಯಾಕ್, ಬಲೆನೋ ಹೊಂದಿದ್ದ ಎಂಜಿನ್ ಮತ್ತು ವಿಶೇಷತೆಗಳನ್ನೇ ಹೊಂದಿರಲಿದೆ. ಇದರಲ್ಲಿ 1.2 ಲೀಟರಿನ ಬಿಎಸ್6 ನಿಯಮಕ್ಕೆ ಹೊಂದಿಕೊಳ್ಳುವ 83 ಬಿಹೆಚ್‍ಪಿ ಮತ್ತು 124 ಎನ್ಎಂ ಟಾರ್ಕ್ ಉತ್ಪಾದಿಸುವ, 5 ಸ್ಪೀಡಿನ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಪೆಟ್ರೋಲ್ ಎಂಜಿನ್ ಇರಲಿದೆ.

ಬೆಂಗಳೂರಿನ ಟೊಯೊಟಾ ಡೀಲರ್‍ ಬಳಿ ಕಾಣಿಸಿಕೊಂಡ ಗ್ಲಾಂಝಾ - ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ

ಬಲೆನೋ ಹ್ಯಾಚ್‍ಬ್ಯಾಕ್ ವಾಹನದಲ್ಲಿದ್ದ ಫೀಚರ್ ಗಳನ್ನೆ ಟೊಯೊಟಾ ಗ್ಲಾಂಝಾದಲ್ಲೂ ಮುಂದುವರೆಸಲಾಗಿದೆ. ಅವುಗಳೆಂದರೆ ಎಲ್ಇಡಿ ಹೆಡ್ ಲ್ಯಾಂಪ್ಯ್ಸ್, ಎಲ್ಇಡಿ ಡಿಆರ್‍ಎಲ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಇಬಿಡಿ ಹೊಂದಿರುವ ಎಬಿಎಸ್, ಚಾಲಕರಿಗೆ ಮತ್ತು ಪ್ರಯಾಣಿಕರಿಗಾಗಿ ಏರ್ ಬ್ಯಾಗ್ಸ್, ಸೀಟ್ ಬೆಲ್ಟ್ ರಿಮ್ಯಾಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ನೀಡುವ ಸಿಸ್ಟಂಗಳನ್ನು ಒಳಗೊಂಡಿದೆ.

ಬೆಂಗಳೂರಿನ ಟೊಯೊಟಾ ಡೀಲರ್‍ ಬಳಿ ಕಾಣಿಸಿಕೊಂಡ ಗ್ಲಾಂಝಾ - ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ

ಮಾರುತಿ ಬಲೆನೋ ಮತ್ತು ಟೊಯೊಟಾ ಗ್ಲಾಂಝಾ ನಡುವೆ ಇರುವ ವ್ಯತ್ಯಾಸವೆಂದರೆ ವಾರಂಟಿ ಮಾತ್ರ. ಟೊಯೊಟಾ ಗ್ಲಾಂಝಾ ವಾಹನಕ್ಕೆ ಮೂರು ವರ್ಷಗಳ ಅಥವಾ 1 ಲಕ್ಷ ಕಿ.ಮೀಗಳ ವಾರಂಟಿ ನೀಡುತ್ತದೆ. ಇದರ ಜೊತೆಗೆ 5 ವರ್ಷಗಳ ಎಕ್ಸ್ ಟೆಂಡೆಡ್ ವಾರಂಟಿಯನ್ನು ನೀಡುತ್ತದೆ. ಟೊಯೊಟಾ ಗ್ಲಾಂಝಾ ವಾಹನವನ್ನು ಗುಜರಾತ್ ನಲ್ಲಿರುವ ಸುಜುಕಿ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಇದೇ ಘಟಕದಲ್ಲಿಯೇ ಬಲೆನೋ ವಾಹನವನ್ನು ಉತ್ಪಾದಿಸಿ , ಮಾರುತಿ ಸುಜುಕಿ ಕಂಪನಿಗೆ ಪೂರೈಕೆ ಮಾಡಲಾಗುತ್ತಿತ್ತು.

Most Read Articles

Kannada
Read more on ಟೊಯೊಟಾ toyota
English summary
Exclusive: Toyota Glanza Spy Images At Toyota Dealership Ahead Of Launch. Read In Kannada
Story first published: Thursday, May 9, 2019, 17:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X