ಸತತ ನಾಲ್ಕನೇ ತಿಂಗಳು ನಂ.1 ಎಸ್‍ಯುವಿ ಸ್ಥಾನದಲ್ಲಿ ಮುಂದುವರೆದ ಹ್ಯುಂಡೈ ಕ್ರೆಟಾ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಎರಡನೇ ತಲೆಮಾರಿನ ಕ್ರೆಟಾ ಎಸ್‍ಯುವಿಯನ್ನು 2020ರ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಕ್ರೆಟಾ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತು.

ಸತತ ನಾಲ್ಕನೇ ತಿಂಗಳು ನಂ.1 ಎಸ್‍ಯುವಿ ಸ್ಥಾನದಲ್ಲಿ ಮುಂದುವರೆದ ಹ್ಯುಂಡೈ ಕ್ರೆಟಾ

ಎರಡನೇ ತಲೆಮಾರಿನ ಕ್ರೆಟಾ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕ್ರೆಟಾ ಎಸ್‍ಯುವಿಯು ಎಸ್‍‍ಯುವಿ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿದೆ. 2020ರ ಕ್ರೆಟಾ ಎಸ್‍ಯುವಿಯನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ಹ್ಯುಂಡೈ ಕ್ರೆಟಾ ಮಿಡ್ ಎಸ್‍ಯುವಿಯು ಕಿಯಾ ಸೆಲ್ಟೋಸ್ ಮಾದರಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತದೆ.

ಸತತ ನಾಲ್ಕನೇ ತಿಂಗಳು ನಂ.1 ಎಸ್‍ಯುವಿ ಸ್ಥಾನದಲ್ಲಿ ಮುಂದುವರೆದ ಹ್ಯುಂಡೈ ಕ್ರೆಟಾ

2020ರ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಹೊಸ ವಿನ್ಯಾಸ ಮತ್ತು ಹೆಚ್ಚಿನ ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿದೆ. ಇದರಿಂದ ಬಿಡುಗಡೆಯಾದ ಐದು ತಿಂಗಳಲ್ಲಿ 65,000 ಬುಕ್ಕಿಂಗ್ ಗಳನ್ನು ದಾಖಲಿಸಿದೆ. ಇನ್ನು ನಾಲ್ಕು ತಿಂಗಳಲ್ಲಿ 20,000 ಕ್ಕೂ ಹೆಚ್ಚು ಯುನಿಟ್ ಗಳನ್ನು ವಿತರಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸತತ ನಾಲ್ಕನೇ ತಿಂಗಳು ನಂ.1 ಎಸ್‍ಯುವಿ ಸ್ಥಾನದಲ್ಲಿ ಮುಂದುವರೆದ ಹ್ಯುಂಡೈ ಕ್ರೆಟಾ

2015ರಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯನ್ನು ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಿದ್ದರು. ಸುಮಾರು ಐದು ವರ್ಷಗಳಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಐದು ಲಕ್ಷ ಯುನಿ‍‍ಟ್‍‍ಗಳು ಮಾರಾಟಗೊಂಡು ಹೊಸ ಮೈಲುಗಲ್ಲನ್ನು ಸೃಷ್ಟಿಸಿದರು.

ಸತತ ನಾಲ್ಕನೇ ತಿಂಗಳು ನಂ.1 ಎಸ್‍ಯುವಿ ಸ್ಥಾನದಲ್ಲಿ ಮುಂದುವರೆದ ಹ್ಯುಂಡೈ ಕ್ರೆಟಾ

ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ ಎಸ್‍ಯುವಿಯನ್ನು ವಿಶ್ವದಾದ್ಯಂತ 88 ದೇಶಗಳಿಗೆ ರಫ್ತು ಮಾಡಲಾಗಿದ್ದು, ಕಳೆದ ತಿಂಗಳು ಇದು ಭಾರತದಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿಯಾಗಿದೆ. ಭಾರತದ ಎಸ್‍ಯುವಿ ವಿಭಾಗದಲ್ಲಿ ಸತತ ನಾಲ್ಕು ತಿಂಗಳುಗಳಿಂದ ಅತಿ ಹೆಚ್ಚು ಮಾರಾಟವಾದ ಮಾದರಿ ಇದಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸತತ ನಾಲ್ಕನೇ ತಿಂಗಳು ನಂ.1 ಎಸ್‍ಯುವಿ ಸ್ಥಾನದಲ್ಲಿ ಮುಂದುವರೆದ ಹ್ಯುಂಡೈ ಕ್ರೆಟಾ

2020ರ ಆಗಸ್ಟ್ ತಿಂಗಳಲ್ಲಿ ಹ್ಯುಂಡೈ ಕ್ರೆಟಾ 11,758 ಯುನಿ‍‍ಟ್‍‍ಗಳು ಮಾರಾಟವಾಗಿವೆ. ಇನ್ನು ಪ್ರತಿಸ್ಪರ್ಧಿ ಕಿಯಾ ಸೆಲ್ಟೋಸ್ ಮಾದರಿಯ 10,655 ಯುನಿ‍‍ಟ್‍‍ಗಳು ಮಾರಾಟವಾಗಿವೆ. ಹ್ಯುಂಡೈ ಕ್ರೆಟಾ ಸಹೋದರ ಎಂದೇ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಹೇಳಬಹುದು.

ಸತತ ನಾಲ್ಕನೇ ತಿಂಗಳು ನಂ.1 ಎಸ್‍ಯುವಿ ಸ್ಥಾನದಲ್ಲಿ ಮುಂದುವರೆದ ಹ್ಯುಂಡೈ ಕ್ರೆಟಾ

ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಮತ್ತು ಕ್ರೆಟಾ ಎಸ್‍ಯುವಿ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದಾರೆ. ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍‍ಯುವಿಯಲ್ಲಿ ಹೊಸ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂನಲ್ಲಿ ವಾಯ್ಸ್ ಕಮಾಂಡ್ ಹಾಗೂ ಬ್ಲೂಲಿಂಕ್ ಕನೆಕ್ಟಿವಿಟಿ ಫೀಚರ್‍‍ಗಳಿರಲಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸತತ ನಾಲ್ಕನೇ ತಿಂಗಳು ನಂ.1 ಎಸ್‍ಯುವಿ ಸ್ಥಾನದಲ್ಲಿ ಮುಂದುವರೆದ ಹ್ಯುಂಡೈ ಕ್ರೆಟಾ

ಈ ಎಸ್‍‍ಯುವಿಯಲ್ಲಿರುವ ಸನ್‍‍ರೂಫ್ ವಾಯ್ಸ್ ಕಮಾಂಡ್‍‍ನಿಂದ ಕಾರ್ಯನಿರ್ವಹಿಸುತ್ತದೆ. ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟ್, ಡ್ಯುಯಲ್ ಹೋಸ್ ಚಿಮ್ನಿ, ರಿಮೋಟ್ ಎಂಜಿನ್ ಸ್ಟಾರ್ಟ್ ಅಪ್, ಕ್ರೂಸ್ ಕಂಟ್ರೋಲ್, ಏರ್ ಪ್ಯೂರಿಫೈಯರ್, ವೈರ್‍‍ಲೆಸ್ ಚಾರ್ಜರ್ ಮತ್ತು ಇನ್ನಿತರ ಫೀಚರ್ ಗಳನ್ನು ಒಳಗೊಂಡಿದೆ,

ಸತತ ನಾಲ್ಕನೇ ತಿಂಗಳು ನಂ.1 ಎಸ್‍ಯುವಿ ಸ್ಥಾನದಲ್ಲಿ ಮುಂದುವರೆದ ಹ್ಯುಂಡೈ ಕ್ರೆಟಾ

ಈ ಜನಪ್ರಿಯ 2020ರ ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2020 Hyundai Creta Is The Most Sold SUV For 4th Month In A Row. Read In Kannada.
Story first published: Wednesday, September 2, 2020, 15:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X