ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಹ್ಯುಂಡೈ ಕಂಪನಿಯು ತನ್ನ ಐ20 ಹ್ಯಾಚ್‌ಬ್ಯಾಕ್ ಕಾರನ್ನು ಮೊದಲ ಬಾರಿಗೆ 2014ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಕಾರು ಹ್ಯಾಚ್ ಬ್ಯಾಕ್ ಸೆಗ್ ಮೇಂಟಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಹ್ಯುಂಡೈ ಕಂಪನಿಯು ಈ ಕಾರನ್ನು ಹಲವಾರು ಬಾರಿ ಅಪ್ ಡೇಟ್ ಮಾಡಿ ಫೇಸ್‌ಲಿಫ್ಟ್‌ ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ. ನಾವು ಇತ್ತೀಚಿಗೆ ಮೂರನೇ ತಲೆಮಾರಿನ ಐ 20 ಹ್ಯಾಚ್‌ಬ್ಯಾಕ್ ಕಾರನ್ನು ವೀಕ್ಷಿಸಿದೆವು. ಈ ಕಾರಿನ ಫಸ್ಟ್ ಲುಕ್ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಎಕ್ಸ್ ಟಿರಿಯರ್ ಹಾಗೂ ಡಿಸೈನ್

ಮೊದಲಿಗೆ ಹೆಚ್ಚು ಏರೋ ಡೈನಾಮಿಕ್ ಆಗಿರುವ ಈ ಕಾರಿನ ಮುಂಭಾಗದ ಬಗ್ಗೆ ಹೇಳುವುದಾದರೆ ಈ ಕಾರಿನ ಮುಂಭಾಗದಲ್ಲಿರುವ ಗ್ರಿಲ್ ಈ ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಈ ಕಾರಿನಲ್ಲಿ ಹೈ ಹಾಗೂ ಲೋ ಬೀಮ್ ಗಳಿಗಾಗಿ ಎಲ್ಇಡಿ ಪ್ರೊಜೆಕ್ಟರ್ ಸೆಟಪ್ ಹೊಂದಿರುವ ಸ್ಲೀಕ್ ಆದ ಹೆಡ್‌ಲೈಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಇದರ ಜೊತೆಗೆ ಈ ಕಾರು ಹ್ಯಾಲೊಜೆನ್ ಬಲ್ಬ್ ಹೊಂದಿರುವ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಗಳನ್ನು ಸಹ ಹೊಂದಿದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಈ ಕಾರಿನ ಸ್ಪೋರ್ಟ್‌ನೆಸ್ ಹೆಚ್ಚಿಸಲು ಫ್ರಂಟ್ ಲಿಪ್ ಸ್ಪ್ಲಿಟರ್ ಅನ್ನು ನೀಡಲಾಗಿದೆ. ಈ ಕಾರಿನಲ್ಲಿ ಲೋಗೋವನ್ನು ಹೊರತುಪಡಿಸಿ ಬೇರೆ ಯಾವುದೇ ಭಾಗಗಳು ಕ್ರೋಮ್ ಅಂಶಗಳನ್ನು ಹೊಂದಿಲ್ಲ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಇನ್ನು ಸೈಡ್ ಪ್ರೊಫೈಲ್ ನಲ್ಲಿ ಈ ಹ್ಯಾಚ್‌ಬ್ಯಾಕ್‌ ಕಾರಿಗೆ ಸೂಕ್ತವಾಗಿರುವ ಡ್ಯುಯಲ್-ಟೋನ್ ಐದು-ಸ್ಪೋಕ್ ನ 16-ಇಂಚಿನ ಅಲಾಯ್ ವ್ಹೀಲ್ ಹಾಗೂ ಇಂಟಿಗ್ರೇಟೆಡ್ ಎಲ್ಇಡಿ ಇಂಡಿಕೇಟರ್ ಹೊಂದಿರುವ ಕಪ್ಪು ಬಣ್ಣದ ಒಆರ್ ವಿಎಂಗಳನ್ನು ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಈ ಕಾರು ಡೋರ್ ಹ್ಯಾಂಡಲ್‌ ಹಾಗೂ ವಿಂಡೋಗಳ ಸುತ್ತಲೂ ಕ್ರೋಮ್‌ ಅಂಶಗಳನ್ನು ಹೊಂದಿದೆ. ಹೊಸ ಐ 20 ಕಾರಿನಲ್ಲಿ ಕಪ್ಪು ರೂಫ್ ಹಾಗೂ ಪ್ರೀಮಿಯಂ ಟಚ್ ಹೊಂದಿರುವ ಸನ್‌ರೂಫ್ ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಈ ಕಾರಿನ ಹಿಂಭಾಗವು ಝಡ್ ಶೇಪಿನಲ್ಲಿ ಎಲ್ಇಡಿ ಅಂಶವನ್ನು ಹೊಂದಿರುವ ಸ್ಲೀಕ್ ಆದ ಟೇಲ್‌ಲೈಟ್ ಯುನಿಟ್ ಅನ್ನು ಹೊಂದಿದೆ. ಈ ಹ್ಯಾಚ್‌ಬ್ಯಾಕ್ ನಲ್ಲಿ ವಾಷರ್ ಹೊಂದಿರುವ ಹಿಂಭಾಗದ ವೈಪರ್ ಅನ್ನು ಸಹ ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಈ ಕಾರಿನಲ್ಲಿರುವ ಶಾರ್ಕ್ ಫಿನ್ ಆಂಟೆನಾ ಹಾಗೂ ಫೇಕ್ ರೇರ್ ಡಿಫ್ಯೂಸರ್ ಗಳು ಹೊಸ ಐ 20 ಹ್ಯಾಚ್ ಬ್ಯಾಕ್ ಕಾರಿನ ಸ್ಪೋರ್ಟಿ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಇಂಟಿರಿಯರ್ ಹಾಗೂ ಫೀಚರ್

ಹೊಸ ಐ 20 ಕಾರಿನ ಇಂಟಿರಿಯರ್ ರೆಡ್ ಹೈ ಲೈಟ್ ಗಳೊಂದಿಗೆ ಕಪ್ಪು ಬಣ್ಣವನ್ನು ಹೊಂದಿದೆ. ಈ ಕಾರಿನ ಇಂಟಿರಿಯರ್ ನಲ್ಲಿ ಡ್ಯಾಶ್‌ಬೋರ್ಡ್,ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುವ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಹಾಗೂ ಬೂಟ್‌ನಲ್ಲಿ ಸಬ್ ವೂಫರ್ ಹೊಂದಿರುವ ಏಳು-ಸ್ಪೀಕರ್ ಬೋಸ್ ಸಿಸ್ಟಂಗಳನ್ನು ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹೆಚ್ಚು ಗ್ರಿಪ್ ಅನ್ನು ಹೊಂದಿದೆ. ಈ ಸ್ಟೀಯರಿಂಗ್ ವ್ಹೀಲ್ ಎಡಭಾಗದಲ್ಲಿ ಇನ್ಫೋಟೇನ್‌ಮೆಂಟ್ ಸಿಸ್ಟಂಗಳನ್ನು ಕಂಟ್ರೋಲ್ ಮಾಡಲು ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್ ಹಾಗೂ ಇನ್ನೊಂದು ಬದಿಯಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಕ್ರೂಸ್ ಕಂಟ್ರೋಲ್ ಗಳನ್ನು ಕಂಟ್ರೋಲ್ ಮಾಡುವ ಬಟನ್ ಗಳಿವೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಈ ಕಾರಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಹೊಸ ಯಾಂಟಿ ಕ್ಲಾಕ್ ವೈಸ್ ಡೈರೆಕ್ಷನ್ ನಲ್ಲಿ ರೋಟೆಟ್ ಆಗುವ ಟ್ಯಾಕೋಮೀಟರ್ ಗೆ ಅಡ್ಜಸ್ಟ್ ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಮಧ್ಯದಲ್ಲಿರುವ ಎಂಐಡಿ ಸ್ಕ್ರೀನ್ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಅನ್ನು ಬೆಂಬಲಿಸುವುದರ ಜೊತೆಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಈ ಕಾರಿನಲ್ಲಿ ಕಪ್ಪು ಬಣ್ಣದ ಸೀಟುಗಳನ್ನು ನೀಡಲಾಗಿದೆ. ಮುಂಭಾಗದ ಸೀಟುಗಳು ಮ್ಯಾನುವಲ್ ಆಗಿದ್ದು ಚಾಲಕನ ಸೀಟಿನಲ್ಲಿ ಮಾತ್ರ ಹೈಟ್ ಅಡ್ಜಸ್ಟ್ ಮಾಡಿಕೊಳ್ಳಬಹುದು. ಮುಂಭಾಗದ ಆಸನಗಳು ಸೈಡ್ ಬೋಲ್ ಸ್ಟರ್‌ಗಳನ್ನು ಹೊಂದಿವೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಎರಡನೇ ಸಾಲು ಆರಾಮದಾಯಕವಾಗಿದ್ದು, ರೇರ್ ಎಸಿ ವೆಂಟ್ ಗಳನ್ನು ನೀಡಲಾಗಿದೆ. ಇದರಿಂದಾಗಿ ಕ್ಯಾಬಿನ್ ಬೇಗ ಕೂಲ್ ಆಗುತ್ತದೆ. ಹಿಂಭಾಗದಲ್ಲಿ 88 ಎಂಎಂ ಲೆಗ್ ರೂಂ ನೀಡಲಾಗಿದೆ. ಇದರಿಂದ ಹೈಟ್ ಇರುವ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ ಸಿಗಲಿದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಸನ್‌ರೂಫ್ ಚಿಕ್ಕದಾಗಿರುವ ಕಾರಣಕ್ಕೆ ಹಿಂಭಾಗದ ಪ್ರಯಾಣಿಕರಿಗೆ ಸ್ಪಷ್ಟವಾದ ನೋಟ ಸಿಗುವುದಿಲ್ಲ. ಈ ಕಾರು ಹಳೆಯ ಕಾರಿಗಿಂತ 26 ಲೀಟರ್ ಹೆಚ್ಚು ಬೂಟ್ ಅಂದರೆ 311 ಲೀಟರ್ ನಷ್ಟು ಬೂಟ್ ಅನ್ನು ಹೊಂದಿದೆ. ಲಗೇಜ್ ಗಳಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾದಲ್ಲಿ 60:40 ಸ್ಪ್ಲಿಟ್ ಅನ್ನು ಸಹ ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಎಂಜಿನ್ ಆಯ್ಕೆಗಳು

ಹೊಸ ಐ 20 ಕಾರಿನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಗಳನ್ನು ಅಳವಡಿಸಲಾಗಿದೆ. 1-ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಡಿಸಿಟಿ ಅಥವಾ ಆರು-ಸ್ಪೀಡಿನ ಐಎಂಟಿ ಟ್ರಾನ್ಸ್ ಮಿಷನ್ ನೀಡಲಾಗುವುದು.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಇನ್ನು 1.2-ಲೀಟರಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿರುವ ಎನ್‌ಎ ಕಪ್ಪಾ ಎಂಜಿನ್ 88 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, ಐದು-ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಹೊಂದಿರುವ ಎಂಜಿನ್ 83 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

1.5-ಲೀಟರಿನ ಡೀಸೆಲ್ ಎಂಜಿನ್ 100 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಎಂಜಿನ್ ನಲ್ಲಿ ಆರು-ಸ್ಪೀಡಿನ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಲುಕ್ ರಿವ್ಯೂ: ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಲಿದೆಯೇ ಈ ಹೊಸ ಕಾರು?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಹ್ಯುಂಡೈ ಐ 20 ಹಳೆ ತಲೆಮಾರಿನ ಕಾರಿಗಿಂತ ಸ್ಪೋರ್ಟಿಯಾಗಿ ಕಾಣುತ್ತದೆ. ಈ ಹ್ಯಾಚ್‌ಬ್ಯಾಕ್ ಕಾರು ಶಾರ್ಪ್ ಎಡ್ಜ್ ಗಳನ್ನು ಹೊಂದಿ ಹೆಚ್ಚು ಏರೋಡೈನಾಮಿಕ್ ಆಗಿದೆ. ಈ ಹೊಸ ಕಾರು ಹಳೆಯ ಮಾದರಿಗೆ ಹೊಲಿಸಿದರೆ ಹೆಚ್ಚು ವಿಶಾಲವಾಗಿದೆ.

Most Read Articles

Kannada
English summary
2020 New Hyundai i20 first look review. Read in Kannada.
Story first published: Thursday, November 5, 2020, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X