ಬಿಎಸ್-6 ಎಂಜಿನ್ ಪ್ರೇರಿತ ಬಾಸ್ ಸರಣಿ ಟ್ರಕ್ ಬಿಡುಗಡೆಗೊಳಿಸಿದ ಅಶೋಕ್ ಲೇಲ್ಯಾಂಡ್

ಜನಪ್ರಿಯ ವಾಣಿಜ್ಯ ವಾಹನಗಳ ಉತ್ಪಾದನಾ ಕಂಪನಿಯಾಗಿರುವ ಅಶೋಕ್ ಲೇಲ್ಯಾಂಡ್ ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ವಾಣಿಜ್ಯ ವಾಹನಗಳನ್ನು ಹೊಸ ಎಮಿಷನ್ ನಿಯಮ ಅನುಸಾರವಾಗಿ ಮಾರಾಟ ಮಾಡುತ್ತಿದ್ದು, ಇದೀಗ ಬಾಸ್ ಸರಣಿ ಟ್ರಕ್ ಮಾದರಿಗಳನ್ನು ಸಹ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಬಿಡುಗಡೆ ಮಾಡಿದೆ.

ಬಿಎಸ್-6 ಎಂಜಿನ್ ಪ್ರೇರಿತ ಅಶೋಕ್ ಲೇಲ್ಯಾಂಡ್ ಬಾಸ್ ಟ್ರಕ್ ಬಿಡುಗಡೆ

ಅಶೋಕ್ ಲೇಲ್ಯಾಂಡ್ ಕಂಪನಿಯು ಬಾಸ್ ಟ್ರಕ್ ಮಾದರಿಯನ್ನು ಗ್ರಾಹಕರ ಬೇಡಿಕೆಯೆಂತೆ ಎಲ್ಇ ಮತ್ತು ಎಲ್ಎಕ್ಸ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಇಂಟರ್‌ಮಿಡಿಯಟ್ ಕಮರ್ಷಿಯಲ್ ವೆಹಿಕಲ್ ವಿಭಾಗದಲ್ಲಿ ಈ ವಾಹನಗಳು ಮಾರಾಟಗೊಳ್ಳಲಿವೆ. ಹೊಸ ಬಾಸ್ ರೇಂಜ್ ಟ್ರಕ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 18 ಲಕ್ಷ ಬೆಲೆ ಹೊಂದಿದ್ದು, ಆರಂಭಿಕ ಮಾದರಿಗಳು 11.1 ಟನ್ ನಿಂದ ಹೈ ಎಂಡ್ ಮಾದರಿಗಳು 14.05 ಟನ್ ವರೆಗಿನ ಲೋಡ್ ಸಾಮರ್ಥ್ಯ ಹೊಂದಿದೆ.

ಬಿಎಸ್-6 ಎಂಜಿನ್ ಪ್ರೇರಿತ ಅಶೋಕ್ ಲೇಲ್ಯಾಂಡ್ ಬಾಸ್ ಟ್ರಕ್ ಬಿಡುಗಡೆ

ಗ್ರಾಹಕರು ಹೊಸ ಬಾಸ್ ಟ್ರಕ್ ಮಾದರಿಗಳನ್ನು ಬಳಕೆಯ ಆಧಾರದ 14 ಅಡಿಗಳಿಂದ 24 ಅಡಿಗಳ ತನಕ ಲೋಡ್ ಬೇ ಸೌಲಭ್ಯವನ್ನು ಸಂಯೋಜನೆಗೊಳಿಸಬಹುದಾಗಿದ್ದು, ಬಾಡಿ ವಿನ್ಯಾಸವನ್ನು ಸಹ ಗ್ರಾಹಕರ ಬೇಡಿಕೆಯೆಂತೆ ಬದಲಾವಣೆ ಮಾಡಿಕೊಡಲಾಗುತ್ತದೆ.

ಬಿಎಸ್-6 ಎಂಜಿನ್ ಪ್ರೇರಿತ ಅಶೋಕ್ ಲೇಲ್ಯಾಂಡ್ ಬಾಸ್ ಟ್ರಕ್ ಬಿಡುಗಡೆ

ಬಾಸ್ ಸರಣಿ ಟ್ರಕ್‌ಗಳಲ್ಲಿ ಹೈ ಸೈಡ್ ಡೆಕ್, ಡ್ರಾಪ್ ಸೈಡ್ ಡೆಕ್, ಕ್ಯಾಬ್ ಚಾಸಿಸ್, ಕಂಟೈನರ್ ಮತ್ತು ಟಿಪ್ಪರ್ ಮಾದರಿಯ ಬಾಡಿ ವಿನ್ಯಾಸಗಳನ್ನು ಹೊಂದಿದ್ದು, ಟ್ರಕ್ ಬಾಡಿ ವಿನ್ಯಾಸವು ಪಾರ್ಸೆಲ್ ಮತ್ತು ಕೊರಿಯರ್, ಪೌಲ್ಟ್ರಿ, ಅಗ್ರಿ ಪೆರಿಶೆಬಲ್, ಇ-ಕಾಮರ್ಸ್, ಆಟೋ ಪಾರ್ಟ್ಸ್ ಮಾದರಿಗಳನ್ನು ಸಾಗಿಸಲು ಅನುಕೂಲಕರವಾಗಿವೆ.

ಬಿಎಸ್-6 ಎಂಜಿನ್ ಪ್ರೇರಿತ ಅಶೋಕ್ ಲೇಲ್ಯಾಂಡ್ ಬಾಸ್ ಟ್ರಕ್ ಬಿಡುಗಡೆ

ಜೊತೆಗೆ ಹೊಸ ವಾಹನಗಳ ಮೂಲಕ ಚಾಲಕನ ಭಾಗದಲ್ಲಿನ ಸುರಕ್ಷಾ ಕ್ರಮಗಳನ್ನು ಹೆಚ್ಚಿರುವ ಕಂಪನಿಯು ಹಲವಾರು ಡಿಜಿಟಲ್ ಸೌಲಭ್ಯಗಳನ್ನು ನೀಡಿದ್ದು, ಐ-ಅಲರ್ಟ್, ರಿಮೋಟ್ ಡಯಾಗ್ನೋಸ್ಟಿಕ್ಸ್ ನಂತಹ ಪ್ರಮುಖ ಫೀಚರ್ಸ್‌ಗಳನ್ನು ಅಳವಡಿಸಿದೆ. ಹಾಗೆಯೇ ಹೊಸ ಟ್ರಕ್‌ಗಳಲ್ಲಿ ಎರಡು ಮಾದರಿಯ ಕ್ಯಾಬಿನ್ ಲೇಔಟ್‌ಗಳನ್ನು ಆಯ್ಕೆ ಮಾಡಬಹುದಾದ ಅವಕಾಶವಿದ್ದು, ಚಾಲಕನಿಗೆ ಅರಾಯದಾಯಕ ಆಸನ ಸೌಲಭ್ಯಗಳನ್ನು ಒದಗಿಸುತ್ತವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬಿಎಸ್-6 ಎಂಜಿನ್ ಪ್ರೇರಿತ ಅಶೋಕ್ ಲೇಲ್ಯಾಂಡ್ ಬಾಸ್ ಟ್ರಕ್ ಬಿಡುಗಡೆ

ಅಶೋಕ್ ಲೇಲ್ಯಾಂಡ್ ಕಂಪನಿಯು ಹೊಸ ಬಾಸ್ ಟ್ರಕ್ ಮಾದರಿಗಳಲ್ಲಿ ಬಿಎಸ್-6 ವೈಶಿಷ್ಟ್ಯತೆಯ ನಾಲ್ಕು ಸಿಲಿಂಡರ್ ಹೊಂದಿರುವ ಕಾಮನ್-ರೈಲ್ ಟರ್ಬೋ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, ಹೊಸ ಎಂಜಿನ್ ಮಾದರಿಯು ಐ-ಜೆನ್6 ಟೆಕ್ನಾಲಜಿ ಪ್ರೇರಣೆ ಹೊಂದಿದೆ.

ಬಿಎಸ್-6 ಎಂಜಿನ್ ಪ್ರೇರಿತ ಅಶೋಕ್ ಲೇಲ್ಯಾಂಡ್ ಬಾಸ್ ಟ್ರಕ್ ಬಿಡುಗಡೆ

ಹೊಸ ಎಂಜಿನ್ ಮೂಲಕ 149-ಬಿಎಚ್‌ಪಿ, 450-ಎನ್ಎಂ ಟಾರ್ಕ್ ಉತ್ಪಾದನಾ ಗುಣಗಹೊಂದಿರುವ ಹೊಸ ಎಂಜಿನ್ ಮಾದರಿಯು ಬಿಎಸ್-4 ಮಾದರಿಗಿಂತಲೂ ಶೇ.7 ರಷ್ಟು ಹೆಚ್ಚು ಇಂಧನ ದಕ್ಷತೆಯೊಂದಿಗೆ ಶೇ. 5 ರಷ್ಟು ಟೈರ್ ಲೈಫ್ ವಿಸ್ತರಣೆಯೊಂದಿಗೆ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತವೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಬಿಎಸ್-6 ಎಂಜಿನ್ ಪ್ರೇರಿತ ಅಶೋಕ್ ಲೇಲ್ಯಾಂಡ್ ಬಾಸ್ ಟ್ರಕ್ ಬಿಡುಗಡೆ

ಇನ್ನು ಹೊಸ ಟ್ರಕ್‌ಗಳ ಖರೀದಿ ಮೇಲೆ ನಾಲ್ಕು ವರ್ಷ ಅಥವಾ 4 ಲಕ್ಷ ಕಿ.ಮೀ ಗಳ ಆಧಾರದ ಮೇಲೆ ವಾರಂಟಿ ಪಡೆದುಕೊಳ್ಳಬಹುದಾಗಿದ್ದು, ಬೇಡಿಕೆಗೆ ಅನುಗುಣವಾಗಿ 6 ವರ್ಷಗಳಿಗೂ ವಿಸ್ತರಣೆ ಮಾಡಿಕೊಳ್ಳಬಹುದು. ಇದರೊಂದಿಗೆ ಟ್ರಕ್ ಮಾರಾಟದ ನಂತರ ಗ್ರಾಹಕರ ಸೇವೆಗಳ ಮೇಲೂ ಅಶೋಕ್ ಲೇಲ್ಯಾಂಡ್ ಹೆಚ್ಚು ಗಮನಹರಿಸಿದ್ದು, 3 ಸಾವಿರಕ್ಕೂ ಅಧಿಕ ಟಚ್‌ಪಾಯಿಂಟ್‌ಗಳ ಮೂಲಕ 24x7 ಮಾದರಿಯಲ್ಲಿ ತ್ವರಿತ ಸೇವೆಗಳನ್ನು ಒದಗಿಸಲಿದೆ.

Most Read Articles

Kannada
English summary
Ashok Leyland Boss LX & LE BS6 ICV Launched In India. Read in Kannada.
Story first published: Friday, October 23, 2020, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X