Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಟ್ಸನ್ ಮತ್ತು ನಿನ್ಸಾಸ್ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್
ಕೋವಿಡ್-19 ಪರಿಣಾಮ ಕಾರು ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಪ್ರಮುಖ ಆಟೋ ಕಂಪನಿಗಳು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವಾಹನ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಆಫರ್‌ಗಳು ಮತ್ತು ಸರಳ ಸಾಲ ಸೌಲಭ್ಯಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

ಲಾಕ್‌ಡೌನ್‌ನಿಂದಾಗಿ ಏಪ್ರಿಲ್, ಮೇ ಮತ್ತು ಜೂನ್ ಅವಧಿಯಲ್ಲಿ ಭಾರೀ ಪ್ರಮಾಣದ ಮಾರಾಟ ಕುಸಿತ ಕಂಡಿದ್ದ ಆಟೋ ಕಂಪನಿಗಳು ಜುಲೈ ಮತ್ತು ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟದಲ್ಲಿ ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿಟ್ಟುಕೊಂಡಿವೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಪ್ರಮುಖ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ನಿಸ್ಸಾನ್ ಮತ್ತು ದಟ್ಸನ್ ಕೂಡಾ ಗರಿಷ್ಠ ಆಫರ್ ಘೋಷಣೆ ಮಾಡಿದೆ.

ನಿಸ್ಸಾನ್ ಮತ್ತು ದಟ್ಸನ್ ಕಂಪನಿಗಳು ವಿವಿಧ ಕಾರುಗಳ ಖರೀದಿ ಮೇಲೆ ಕನಿಷ್ಠ ರೂ.29,500ರಿಂದ ಗರಿಷ್ಠ ರೂ. 75 ಸಾವಿರದಷ್ಟು ಆಫರ್ ಲಭ್ಯವಿರಲಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್, ಲೊಯಾಲಿಟಿ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಆಕ್ಸೆಸರಿಸ್‌ಗಳ ಮೇಲೆ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಭಾರತದಲ್ಲಿ ಜಂಟಿಯಾಗಿ ಕಾರು ಉತ್ಪಾದನೆ ಮತ್ತು ಮಾರಾಟ ಸೌಲಭ್ಯವನ್ನು ಹೊಂದಿರುವ ನಿಸ್ಸಾನ್ ಮತ್ತು ದಟ್ಸನ್ ಕಂಪನಿಗಳು ಪೆಟ್ರೋಲ್ ಕಾರು ಮಾದರಿಗಳ ಮಾರಾಟವನ್ನು ಮಾತ್ರ ಹೊಂದಿದ್ದು, ಬಿಎಸ್-6 ಎಮಿಷನ್ ಜಾರಿ ನಂತರ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಕಾರು ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ನಿಸ್ಸಾನ್ ಮತ್ತು ದಟ್ಸನ್ ನೀಡುತ್ತಿರುವ ಹೊಸ ಡಿಸ್ಕೌಂಟ್ ಆಫರ್‌ಗಳು ಈ ತಿಂಗಳ 15ರ ತನಕ ಮಾತ್ರವೇ ಲಭ್ಯವಿದ್ದು, ಕೆಲವು ಆಫರ್‌ಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾವಣೆಯಾಗುವ ಸಾಧ್ಯತೆಗಳಿವೆ. ಹಾಗಾದ್ರೆ ನಿಸ್ಸಾನ್ ಮತ್ತು ದಟ್ಸನ್ ನಿರ್ಮಾಣದ ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದ ಡಿಸ್ಕೌಂಟ್ ಲಭ್ಯವಿದೆ ಎಂಬುವುದನ್ನು ನೋಡೋಣ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಿಕ್ಸ್ ಕಂಪ್ಯಾಕ್ಟ್ ಎಸ್‌ಯುವಿ
ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಿಕ್ಸ್ ಕಾರಿನ ಮೇಲೆ ರೂ.75 ಸಾವಿರದಷ್ಟು ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ನಲ್ಲಿ ರೂ.40 ಸಾವಿರ ಎಕ್ಸ್‌ಚೆಂಜ್ ಆಫರ್, ರೂ.10 ಸಾವಿರ ಲೊಯಾಲಿಟಿ ಆಫರ್, ರೂ.10 ಸಾವಿರ ಕಾರ್ಪೊರೇಟ್ ಆಫರ್ ಮತ್ತು ರೂ.15 ಸಾವಿರದಷ್ಟು ವಿವಿಧ ಆಕ್ಸೆಸರಿಸ್‌ಗಳ ಮೇಲೆ ಆಫರ್ ನೀಡುತ್ತದೆ.

ಕಿಕ್ಸ್ ಕಾರು 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.49 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 14.49 ಲಕ್ಷ ಬೆಲೆ ಹೊಂದಿದೆ.
MOST READ: ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..!

ಇನ್ನು ದಟ್ಸನ್ ಕಂಪನಿಯು ರೆಡಿ ಗೊ ಹ್ಯಾಚ್‌ಬ್ಯಾಕ್ ಮತ್ತು ರೆಡಿ ಗೊ ಪ್ಲಸ್ ಎಂಟ್ರಿ ಲೆವಲ್ ಎಂಪಿವಿ ಕಾರಿನ ಮೇಲೆ ಕ್ರಮವಾಗಿ ರೂ.29,500 ಮತ್ತು ರೂ.49,500 ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳು ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್ ಮತ್ತು ಕಾರ್ಪೊರೇಟ್ ರಿಯಾಯ್ತಿಗಳನ್ನು ಪಡೆದುಕೊಂಡಿದೆ.