2021ರಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಆಡಿ ಕಾರುಗಳು

ಜರ್ಮನಿಯ ಐಷಾರಾಮಿ ಕಾರು ತಯಾರಕ ಆಡಿ ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆಗಳನ್ನು ಹೆಚ್ಚಿಸಲಿದೆ ಎಂದು ಆಡಿ ಹೇಳಿದೆ. ಆಡಿ ಕಂಪನಿ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲಾ ಆಡಿ ಕಾರುಗಳ ಬೆಲೆಗಳು ಶೇ.ರಷ್ಟು ಹೆಚ್ಚಾಗುತ್ತವೆ.

2021ರಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಆಡಿ ಕಾರುಗಳು

ಜರ್ಮನಿ ಮೂಲದ ಆಡಿ ಕಂಪನಿಯ ಪ್ರಕಾರ, ರೂಪಾಯಿ ಮೌಲ್ಯ ಕುಸಿಯುವಿಕೆ ಮತ್ತು ಇತರ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ತನ್ನ ಎಲ್ಲಾ ಕಾರುಗಳ ಬೆಲೆಯನ್ನು ಏರಿಸಲಾಗುತ್ತದೆ. ಕಂಪನಿಯು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಮತ್ತು ಸೆಡಾನ್ ವಿಭಾಗಗಳಲ್ಲಿ ಜನಪ್ರಿಯ ಮಾದರಿಗಳನ್ನು ಹೊಂದಿದ್ದಾರೆ. 2021ರ ಆರಂಭದಿಂದ ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕಾರುಗಳು ಮತ್ತಷ್ಟು ದುಬಾರಿಯಾಗಿರಲಿವೆ

2021ರಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಆಡಿ ಕಾರುಗಳು

ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲಾನ್ ಅವರು ಮಾತನಾಡಿ, ಆಡಿ ಇಂಡಿಯಾ ಕಂಪನಿಯು ಸದಾ ನಮ್ಮ ಗ್ರಾಹಕರಿಗೆ ಉತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತೇವೆ, ಆದರೆ ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳು ಮತ್ತು ಕರೆನ್ಸಿ ಏರಿಳಿತಗಳು ನಮ್ಮ ವೆಚ್ಚ ರಚನೆಗಳ ಮೇಲೆ ಒತ್ತಡವನ್ನುಂಟು ಮಾಡಿವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2021ರಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಆಡಿ ಕಾರುಗಳು

2021ರ ಜನವರಿ 01 ರಿಂದ ನಮ್ಮ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆಯನ್ನು ಶೇ.2 ವರೆಗೆ ಬೆಲೆಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆಯನ್ನು ಏರಿಕೆ ಮಾಡುವುದು ಕಂಪನಿಗೆ ಅನಿವಾರ್ಯವಾಗಿದೆ ಎಂದರು.

2021ರಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಆಡಿ ಕಾರುಗಳು

ಅವರು ಮಾತನ್ನು ಮುಂದುವರೆಸಿ, ಕಂಪನಿಯು ಗ್ರಾಹಕರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದರಿಂದ ಸಾಧ್ಯವಾದಷ್ಟು ಸಣ್ಣ ಮಟ್ಟದ ಏರಿಕೆಯಾಗಲಿದೆ. ನಮ್ಮ ಗ್ರಾಹಕರಿಗೆ ಮಾಲೀಕತ್ವದ ಖಾತ್ರಿಪಡಿಸುವ ಹಲವಾರು ಸೇವೆಗೆ ಸಂಬಂಧಿಸಿದ ಪ್ಯಾಕೇಜ್‌ಗಳನ್ನು ನಾವು ನೀಡುತ್ತಿದ್ದೇವೆ ಎಂದು ಧಿಲ್ಲನ್ ಹೇಳಿದರು.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

2021ರಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಆಡಿ ಕಾರುಗಳು

2020ರಲ್ಲಿ ಮಾತ್ರ, ಜರ್ಮನ್ ಕಾರು ತಯಾರಕ ಆರು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಕ್ಯೂ8, ಎ8 ಎಲ್, ಆರ್‍ಎಸ್7, ಆರ್‍ಎಸ್ ಕ್ಯೂ8, ಕ್ಯೂ8 ಸೆಲೆಬ್ರೇಷನ್ ಮತ್ತು ಇತ್ತೀಚಿನ ಬಿಡುಗಡೆಗೊಂಡ ಕ್ಯೂ 2ಎಸ್‍ಯುವಿಯು ಒಳಗೊಂಡಿದೆ.

2021ರಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಆಡಿ ಕಾರುಗಳು

ಇನ್ನು ಆಡಿ ಕಂಪನಿಯು ತನ್ನ ಹೊಸ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ನಾಲ್ಕು ಡೋರಿನ ಕೂಪ್ ಆಗಿದೆ. ಇತ್ತೀಚೆಗೆ ಆಡಿ ಕಂಪನಿಯು ತನ್ನ ಕ್ಯೂ2 ಎಸ್‍ಯುವಿಯ ವರ್ಚುವಲ್ ಲಾಂಚ್ ಸಂದರ್ಭದಲ್ಲಿ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯ ಟೀಸರ್ ಚಿತ್ರ ಪ್ರದರ್ಶಿಸಿತ್ತು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

2021ರಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಆಡಿ ಕಾರುಗಳು

ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ವರದಿಗಳಾಗಿದೆ. ಇತ್ತೀಚಿಗೆ ಬಿಡುಗಡೆಗೊಳಿಸಿದ ಟೀಸರ್ ಚಿತ್ರದಲ್ಲಿ ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನ ಸಂಪೂರ್ಣ ವಿನ್ಯಾಸ ಬಹಿರಂಗವಾಗಿಲ್ಲದಿದ್ದರೂ ಕೆಲವು ಮಾಹಿತಿಗಳು ಬಹಿರಂಗವಾಗಿವೆ.

2021ರಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಆಡಿ ಕಾರುಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮುಂದಿನ ವರ್ಷದ ಆರಂಭದಿಂದ ಆಡಿ ಕಾರುಗಳು ದುಬಾರಿಯಾಗಲಿವೆ. ಇದರಿಂದ ಆಡಿ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಈ ದೀಪಾವಳಿ ಹಬ್ಬವು ಸೂಕ್ತ ಸಮಯವಾಗಿದೆ. ಅಲ್ಲದೇ ಆಡಿ ಕಂಪನಿಯು ದೀಪಾವಳಿ ಹಬ್ಬಕ್ಕೆ ಕೆಲವು ಆಫರ್ ಗಳನ್ನು ನೀಡುತ್ತಿದೆ.

Most Read Articles

Kannada
Read more on ಆಡಿ audi
English summary
Audi India To Hike Prices Across Entire Range From January 2021. Read In Kannada.
Story first published: Tuesday, November 10, 2020, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X