ಹೊಸ ಸರ್ವೀಸ್ ಅಭಿಯಾನವನ್ನು ಆರಂಭಿಸಿದ ಆಡಿ ಇಂಡಿಯಾ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಇಂಡಿಯಾ ರೆಡಿ ಟು ಡ್ರೈವ್ ಅಭಿಯಾನವನ್ನು ಭಾರತದಲ್ಲಿ ಆರಂಭಿಸಿದೆ. ಈ ಅಭಿಯಾನದಲ್ಲಿ ಹಲವಾರು ಹೊಸ ಸೇವೆಗಳನ್ನು ಹಾಗೂ ಮಾರಾಟದ ನಂತರದ ಪ್ರಯೋಜನಗಳನ್ನು ನೀಡಲಾಗುವುದು. ಇವುಗಳಲ್ಲಿ ಬ್ರೇಕ್ ಪ್ಯಾಡ್, ಬ್ರೇಕ್ ಡಿಸ್ಕ್ ಹಾಗೂ ಬ್ರೇಕ್ ಪ್ಯಾಡ್ ಸೆನ್ಸಾರ್ ಗಳು ಸೇರಿವೆ.

ಹೊಸ ಸರ್ವೀಸ್ ಅಭಿಯಾನವನ್ನು ಆರಂಭಿಸಿದ ಆಡಿ ಇಂಡಿಯಾ

ಇದರ ಜೊತೆಗೆ ಆಡಿ ಕಂಪನಿಯು ಜಿನಿಯನ್ ಆಕ್ಸೆಸರಿಸ್, ಆನ್ ಲೈನ್ ಸರಕು, ಮೈ ಆಡಿ ಕನೆಕ್ಟ್ ಡಾಂಗಲ್, ಎಕ್ಸ್ ಟೆಂಡೆಡ್ ವಾರಂಟಿ, ಸರ್ವೀಸ್ ಪ್ಲಾನ್ ಹಾಗೂ ಸಮಗ್ರ ಸರ್ವೀಸ್ ವ್ಯಾಲ್ಯೂ ಪ್ಯಾಕೇಜ್‌ಗಳನ್ನು ನೀಡಲಿದೆ. ಇದರಿಂದಾಗಿ ಬ್ರೇಕ್ ಪ್ಯಾಡ್, ಬ್ರೇಕ್ ಡಿಸ್ಕ್ ಹಾಗೂ ಬ್ರೇಕ್ ಪ್ಯಾಡ್ ಸೆನ್ಸಾರ್ ಗಳ ಮೇಲೆ 20%ನಷ್ಟು ಉಳಿತಾಯವಾಗಲಿದೆ.

ಹೊಸ ಸರ್ವೀಸ್ ಅಭಿಯಾನವನ್ನು ಆರಂಭಿಸಿದ ಆಡಿ ಇಂಡಿಯಾ

ಆಡಿ ಕಂಪನಿಯು ಎಲ್ಲಾ ಮಾದರಿಗಳ ಜಿನಿಯನ್ ಆಕ್ಸೆಸರಿಸ್, ಆಡಿ ಕಲೆಕ್ಷನ್ ಹಾಗೂ ಆಡಿ ಸರಕುಗಳ ಮೇಲೆ 10%ನಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯನ್ನು ಕಂಪನಿಯ ಆನ್‌ಲೈನ್ ಆಡಿ ಶಾಪ್ ನಲ್ಲಿಯೂ ನೀಡಲಾಗುತ್ತದೆ. ಕಂಪನಿಯು ತನ್ನ ಆಯ್ದ ಕಾರುಗಳ ಮೇಲೆ ಮೈ ಆಡಿ ಕನೆಕ್ಟ್ ಮೂಲಕ 50%ನಷ್ಟು ರಿಯಾಯಿತಿಯನ್ನು ನೀಡುತ್ತಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೊಸ ಸರ್ವೀಸ್ ಅಭಿಯಾನವನ್ನು ಆರಂಭಿಸಿದ ಆಡಿ ಇಂಡಿಯಾ

ಇದರ ಜೊತೆಗೆ ಆಯ್ದ ಆಡಿ ಕಾರುಗಳ ಎಕ್ಸ್ ಟೆಂಡೆಡ್ ವಾರಂಟಿ ಹಾಗೂ ಸೇವಾ ಯೋಜನೆಗಳ ಮೇಲೆ 20%ನಷ್ಟು ರಿಯಾಯಿತಿ ನೀಡಲಾಗುವುದು. ಅಭಿಯಾನವನ್ನು ಆರಂಭಿಸಿದ ಐದು ವರ್ಷಗಳ ನಂತರ ಹಳೆಯ ಕಾರುಗಳಿಗೆ ಕಂಪನಿಯು ಸಪ್ಲಿಮೆಂಟರಿ ಲ್ಯೂಬ್ ಸೇವೆಯನ್ನು ನೀಡಲಿದೆ.

ಹೊಸ ಸರ್ವೀಸ್ ಅಭಿಯಾನವನ್ನು ಆರಂಭಿಸಿದ ಆಡಿ ಇಂಡಿಯಾ

ಈ ಅಭಿಯಾನದ ಬಗ್ಗೆ ಮಾತನಾಡಿರುವ ಆಡಿ ಇಂಡಿಯಾದ ಮುಖ್ಯಸ್ಥರಾದ ಬಲ್ಬೀರ್ ಸಿಂಗ್ ಧಿಲ್ಲಾನ್ ರವರು, ಆಡಿ ತನ್ನ ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಒಟ್ಟಾರೆ ವ್ಯವಹಾರ ತಂತ್ರದಡಿಯಲ್ಲಿ ಆಡಿ ಕಂಪನಿಯು ಈ ಅಭಿಯಾನವನ್ನು ಆರಂಭಿಸುತ್ತಿದೆ ಎಂದು ಹೇಳಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹೊಸ ಸರ್ವೀಸ್ ಅಭಿಯಾನವನ್ನು ಆರಂಭಿಸಿದ ಆಡಿ ಇಂಡಿಯಾ

ಆಡಿ ಕಂಪನಿಯು ಇತ್ತೀಚೆಗಷ್ಟೇ ತನ್ನ ಗ್ರಾಹಕರು ಹಾಗೂ ಅಭಿಮಾನಿಗಳಿಗಾಗಿ ಮೈ ಆಡಿ ಕನೆಕ್ಟ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ತನ್ನ ಡಿಜಿಟಲ್ ಯೋಜನೆಯ ಭಾಗವಾಗಿ ಕಂಪನಿಯು ಈ ಆ್ಯಪ್ ಮೂಲಕ ತನ್ನ ಗ್ರಾಹಕರಿಗೆ ಇತ್ತೀಚಿನ ಸೌಲಭ್ಯಗಳನ್ನು ಒದಗಿಸುತ್ತದೆ.

ಹೊಸ ಸರ್ವೀಸ್ ಅಭಿಯಾನವನ್ನು ಆರಂಭಿಸಿದ ಆಡಿ ಇಂಡಿಯಾ

ಮೈ ಆಡಿ ಕನೆಕ್ಟ್ ಅಪ್ಲಿಕೇಶನ್‌ನ ಹೊಸ ಆವೃತ್ತಿಯು ಗ್ರಾಹಕರ ಸುರಕ್ಷತೆ, ಚಾಲಕರ ನಡವಳಿಕೆ, ಜಿಯೋ ಲೊಕೇಷನ್ ಮಾಹಿತಿ ಹಾಗೂ ಸರ್ವೀಸ್ ಬುಕ್ಕಿಂಗ್‌ನಂತಹ ಫೀಚರ್ ಗಳನ್ನು ಒದಗಿಸುತ್ತದೆ. ಈ ಅಪ್ಲಿಕೇಶನ್‌ನ ಹೊಸ ಆವೃತ್ತಿಯಲ್ಲಿ ಅನೇಕ ಹೆಚ್ಚುವರಿ ಫೀಚರ್ ಗಳನ್ನು ಸೇರಿಸಲಾಗಿದೆ.

Most Read Articles

Kannada
Read more on ಆಡಿ audi
English summary
Audi India launches ready to drive campaign. Read in Kannada.
Story first published: Monday, August 17, 2020, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X