ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ಸ್ಥಗಿತಗೊಳಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಸ್ಪೋರ್ಟ್ಸ್ ಕಾರನ್ನು ಸ್ಥಗಿತಗೊಳಿಸಿ ಬಿಎಂಡಬ್ಲ್ಯು ಹಾಲ್ ಆಫ್ ಫೇಮ್‌ಗೆ ಸೇರಿಸಲು ಚಿಂತಿಸಿದೆ.

ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಬಿಎಂಡಬ್ಲ್ಯೂ ಕಂಪನಿಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರಿನ ಕೊನೆಯದಾಗಿ ಲೈಪ್‌ಜಿಗ್ ಕಾರ್ಖಾನೆಯಲ್ಲಿ ಉತ್ಪಾದಿಸಿ ಬಿಡುಗಡೆಗೊಳಿಸಿದ್ದರು. ಕೊನೆಯ ಯುನಿಟ್ ಗಳನ್ನು ಖಾಸಗಿ ಮಾಲೀಕರು ಖರೀದಿಸಿದ್ದಾರೆ. ಆರು ವರ್ಷಗಳಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರಿನ 20,500 ಯುನಿಟ್‌ಗಳನ್ನು ಉತ್ಪಾದಿಸಲಾಗಿತ್ತು. ಈ ಸ್ಪೋರ್ಟ್ಸ್ ಕಾರನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾರನ್ನು ಬಿಡುಗಡೆಗೊಳಿಸಲಾಗುವುದಿಲ್ಲ.

ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು 2014ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಈ ಕಾರಿನ ಎರಡು ಸೀಟುಗಳ ರೋಡ್ಸ್ಟರ್ ರೂಪಾಂತರದಲ್ಲಿಯು ಬಿಡುಗಡೆಗೊಳಿಸಿದ್ದರು. ಐ8 ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

2009ರ ಫ್ರಾಂಕ್‌ಫರ್ಟ್ ಆಟೋ ಎಕ್ಸ್ ಪೋದಲ್ಲಿ ಬ್ರ್ಯಾಂಡ್‌ನ ವಿಷನ್ ಎಫಿಶಿಯಂಟ್ ಡೈನಾಮಿಕ್ಸ್ ಕಾನ್ಸೆಪ್ಟ್ ಉತ್ಪಾದನಾ ಆವೃತ್ತಿಯಾಗಿ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ಪ್ರದರ್ಶಿಸಿದ್ದರು. ಈ ಕಾರನ್ನು ಬೆನೈಟ್ ಜಾಕೋಬ್ ಅವರು ವಿನ್ಯಾಸಗೊಳಿಸಿದ್ದಾರೆ.

ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು 1.5-ಲೀಟರ್ ಟ್ವಿನ್-ಪವರ್ ಟರ್ಬೊ ಮೂರು-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 228 ಬಿಹೆಚ್‍ಪಿ ಪವರ್ ಮತ್ತು 319 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಈ ಎಂಜಿನ್ ಅನ್ನು 96 ಕಿಲೋವ್ಯಾಟ್ ಮೋಟಾರ್ ಗೆ ಜೋಡಿಸಲಾಗಿದೆ. ಇದು 129 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ 7.1 ಕಿಲೋವ್ಯಾಟ್ ಬ್ಯಾಟರಿ ಯುನಿಟ್ ಅನ್ನು ಅಳವಡಿಸಲಾಗಿದೆ. ಬಿಎಂಡಬ್ಲ್ಯು 2018 ರಲ್ಲಿ ಬ್ಯಾಟರಿಯನ್ನು 11.8 ಕಿಲೋವ್ಯಾಟ್ ಆಗಿ ಅಪ್‌ಗ್ರೇಡ್ ಮಾಡಿದ್ದರು, ಈ ಯುನಿಟ್ 141 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಹೊಸ ಮತ್ತು ಕೊನೆಯ ಯುನಿಟ್ ನಲ್ಲಿ ಬಿಎಂಡಬ್ಲ್ಯು ಐ8 ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಈ ಮೋಟಾರ್ 369 ಬಿಹೆಚ್‍ಪಿ ಪವರ್ ಮತ್ತು 570 ಎನ್ಎಂ ಟಾರ್ಕ್ ಅನ್ನು ಉತ್ಪಾಸುತ್ತದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಬಿಎಂಡಬ್ಲ್ಯು ಐ8 ಉತ್ತಮ ಎಂಜಿನ್ ಕ್ಷಮೆತೆಯನ್ನು ಹೊಂದಿದೆ. ಈ ಸ್ಪೋರ್ಟ್ಸ್ ಕಾರು ಪ್ರತಿ ಲೀಟರ್ ಗೆ 10 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಕಾರು ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದರಲ್ಲಿರುವ ಎಲೆಕ್ಟ್ರಿ ಮೋಟಾರ್ 30 ಕಿ.ಮೀ ಮೈಲೇಜ್ ಅನ್ನು ಹೊಂದಿದೆ.

ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಡ್ರೈವಿಂಗ್ ಡೈನಾಮಿಕ್ಸ್ ಮತ್ತು ಉತ್ತಮ ದಕ್ಷತೆಯನ್ನು ಹೊಂದಿದೆ. ಬಿಎಂಡಬ್ಲ್ಯೂ ಕಂಪನಿಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ಸ್ಥಗಿತಗೊಳಿಸಿದ್ದು, ಇದನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಲಾಗುತ್ತದೆ.

Most Read Articles

Kannada
English summary
BMW i8 Hybrid Sports Car Discontinued: Last Unit Rolls Out From Leipzig Facility. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X