Just In
Don't Miss!
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- News
ಶಶಿಕಲಾಗೆ ಶ್ವಾಸಕೋಶ ಸೋಂಕು, ಕೊರೊನಾ ವರದಿ ನೆಗೆಟಿವ್
- Finance
ಬಜೆಟ್ 2021: ಆದಾಯ ತೆರಿಗೆ ಇಳಿಕೆ ಅನುಮಾನ; ವಿನಾಯಿತಿಗಳ ಕಡೆಗೆ ಗಮನ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಿರುವನಂತಪುರಂನಲ್ಲಿ ಅರ್ಬನ್ ರೀಟೆಲ್ ಸ್ಟೋರ್ ತೆರೆದ ಬಿಎಂಡಬ್ಲ್ಯು
ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾದ ಬಿಎಂಡಬ್ಲ್ಯು ಮೋಟಾರ್ಸ್ ಭಾರತದಲ್ಲಿ ಹೊಸ ಮಾದರಿಯ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ್ದು, ಹೈದ್ರಾಬಾದ್ ನಂತರ ತಿರುವನಂತಪುರಂನಲ್ಲಿ ಎರಡನೇ ಅರ್ಬನ್ ರೀಟೆಲ್ ಸ್ಟೋರ್ ಆರಂಭಿಸಿದೆ.

ಇವಿಎಂ ಆಟೋ ಕಾರ್ಟ್ ಕಂಪನಿಯೊಂದಿಗೆ ಹೊಸ ಅರ್ಬನ್ ರೀಟೆಲ್ ಸ್ಟೋರ್ ಆರಂಭಿಸಿರುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಹೊಸ ತಲೆಮಾರಿನ ಗ್ರಾಹಕರನ್ನು ಸೆಳೆಯುವ ಪ್ರಮುಖ ಯೋಜನೆ ರೂಪಿಸಿದ್ದು, ಒಂದೇ ಸೂರಿನಡಿ ವಾಹನ ಖರೀದಿಯೊಂದಿಗೆ ಆಕ್ಸೆಸರಿಸ್ ಮತ್ತು ಲೈಫ್‌ಸ್ಟೈಲ್ ಆಕ್ಸೆಸರಿಸ್‌ಗಳನ್ನು ಖರೀದಿ ಮಾಡಬಹುದಾದ ಸೌಲಭ್ಯ ಈ ವಾಹನ ಮಾರಾಟ ಮಳಿಗೆಯಲ್ಲಿ ಆರಂಭಿಸಲಾಗಿದೆ.

ಅರ್ಬನ್ ರೀಟೆಲ್ ಸ್ಟೋರ್ ಮೂಲಕ ಗ್ರಾಹಕರಿಗೆ ಬ್ರಾಂಡ್ ತಿಳುವಳಿಕೆ, ಉತ್ಪನ್ನಗಳ ಪ್ರದರ್ಶನಗೊಳಿಸುವುದರ ಜೊತೆಗೆ ಸಬ್ ಬ್ರಾಂಡ್ ಮಾದರಿಯಾದ ಮಿನಿ ಕಂಪನಿಯ ಲೈಫ್‌ಸ್ಟೈಲ್ ಆಕ್ಸೆಸರಿಸ್‌ಗಳನ್ನು ಸಹ ಒಂದೇ ಸೂರಿನಡಿ ಮಾರಾಟ ಮಾಡುತ್ತಿದೆ.

ಹಾಗೆಯೇ ಹೊಸ ವಾಹನ ಖರೀದಿಯನ್ನು ಮತ್ತಷ್ಟು ಸುಲಭವಾಗಿಸಲು ಮತ್ತೊಂದು ಹೊಸ ಯೋಜನೆ ರೂಪಿಸಿರುವ ಬಿಎಂಡಬ್ಲ್ಯು ಕಂಪನಿಯು ಒಂದೇ ಸೂರಿನಡಿ ಕಾರು ಮತ್ತು ಬೈಕ್ ಮಾರಾಟ ಮಾಡುವ ಹೊಸ ಯೋಜನೆಗೂ ಚಾಲನೆ ನೀಡಿದೆ.

ಹೊಸ ಯೋಜನೆ ಅಡಿ ತೆರೆಯಲಾಗುತ್ತಿರುವ ಹೊಸ ಶೋರೂಂಗಳಲ್ಲಿ ಕಾರು ಮತ್ತು ಬೈಕ್ ಎರಡು ಮಾದರಿಯ ವಾಹನ ಮಾರಾಟಕ್ಕೆ ಸಹಕಾರಿಯಾಗುವಂತೆ ಹೊಸ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ಇದರ ಭಾಗವಾಗಿ ಇದೀಗ ಅರ್ಬನ್ ರೀಟೆಲ್ ಮಳಿಗೆಯನ್ನು ಆರಂಭಿಸಲಾಗಿದ್ದು, ಇನ್ಮುಂದೆ ಹೊಸ ಬೈಕ್ ಖರೀದಿಗೆ ಅಥವಾ ಕಾರು ಖರೀದಿಗೆ ಬರುವ ಗ್ರಾಹಕರಿಗೆ ಒಂದೇ ಸೂರಿನಡಿ ವಿಶ್ವದರ್ಜೆ ಸೌಲಭ್ಯದಡಿ ಮಾರಾಟ ಮತ್ತು ಸೇವೆಗಳನ್ನು ನೀಡಲು ನಿರ್ಧರಿಸಲಾಗಿದೆ.

ಸದ್ಯಕ್ಕೆ ಕಾರ್ಯನಿರ್ವಹಣೆಯಲ್ಲಿರುವ ಶೋರೂಂಗಳು ಕೇವಲ ಬೈಕ್ ಅಥವಾ ಕಾರು ಮಾರಾಟದ ಸೌಲಭ್ಯವನ್ನು ಮಾತ್ರ ಹೊಂದಿದ್ದು, ಈ ಹಿನ್ನಲೆಯಲ್ಲಿ ಹೊಸ ಶೋರೂಂಗಳಲ್ಲಿ ಹೊಸ ಮಾದರಿಯ ವಾಹನ ಮಾರಾಟಕ್ಕೆ ಪ್ರಾಯೋಗಿಕವಾಗಿ ಬಿಎಂಡಬ್ಲ್ಯು ಕಂಪನಿಯು ಚಾಲನೆ ನೀಡಲಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬಿಎಂಡಬ್ಲ್ಯು ಫೆಸೆಲಿಟಿಸ್ ನೆಕ್ಸ್ಟ್ ಶೋರೂಂ ದೇಶದ ಪ್ರಮುಖ ನಗರಗಳಲ್ಲೂ ಶೀಘ್ರದಲ್ಲೇ ಆರಂಭಗೊಳ್ಳಲಿದ್ದು, ಗ್ರಾಹಕರಿಗೆ ಹೊಸ ಮಾದರಿಯ ವಾಹನ ಖರೀದಿ ಅನುಭವ ಒದಗಿಸುವ ಸಂಬಂಧ ಹಲವಾರು ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದೆ.

ಗ್ರಾಹಕರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ರೀತಿಯಲ್ಲಿ ಹೊಸ ಶೋರೂಂ ಅನ್ನು ವಿನ್ಯಾಸಗೊಳಿಸಲಾಗುತ್ತಿದ್ದು, ಹೊಸ ಬಗೆಯ ವಾಸ್ತುಶಿಲ್ಪ, ಆಕರ್ಷಕ ವಿನ್ಯಾಸ ಹಾಗೂ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೊಸ ಕಾನ್ಸೆಪ್ಟ್ ಅನ್ನು ತಯಾರಿಸಲಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಗ್ರಾಹಕರಿಗೆ ವೈಯಕ್ತಿಕವಾದ, ಭಾವನಾತ್ಮಕವಾದ ಹಾಗೂ ಪ್ರೀಮಿಯಂ ಬ್ರಾಂಡ್ ಅನುಭವವನ್ನು ನೀಡುವಲ್ಲಿ ಶೋರೂಂ ಪ್ರಮುಖ ಪಾತ್ರ ವಹಿಸಲಿದ್ದು, ಡಿಸ್ ಪ್ಲೇ ಏರಿಯಾ, ಬಿಎಂಡಬ್ಲ್ಯು ಲೈಫ್ ಸ್ಟೈಲ್ ಹಾಗೂ ಆಕ್ಸೆಸರಿಸ್ ಗಳ ವಿಭಾಗವನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿರುತ್ತದೆ.