ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ನೋಯ್ಡಾದ ಕಾರು ಗ್ರಾಹಕರೊಬ್ಬರು ಫೋಕ್ಸ್‌ವ್ಯಾಗನ್ ಹಾಗೂ ಆಡಿ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ನೋಯ್ಡಾ ನಿವಾಸಿ ಅನಿಲ್ ಜಿತ್ ಸಿಂಗ್ ಎಂಬುವವರು ಫೋಕ್ಸ್‌ವ್ಯಾಗನ್ ಹಾಗೂ ಆಡಿ ಕಂಪನಿಯ ಭಾರತದ ಎಕ್ಸಿಕ್ಯೂಟಿವ್ ಗಳು ಗ್ರಾಹಕರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ವಂಚನೆ ಹಾಗೂ ಕ್ರಿಮಿನಲ್ ಪಿತೂರಿ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಫೋಕ್ಸ್‌ವ್ಯಾಗನ್ ನಡೆಸಿದ ಜಾಗತಿಕ ಮಾಲಿನ್ಯ ನಿಯಮಗಳಲ್ಲಿ ಕಂಪನಿಯು ತನ್ನ ಕಾರುಗಳಲ್ಲಿ ನಕಲಿ ಸಾಧನಗಳನ್ನು ಬಳಸಿ ವಂಚನೆ ಎಸಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ನಕಲಿ ಸಾಧನಗಳನ್ನು ಬಳಸಿಕೊಂಡು ಕಂಪನಿಯು ತನ್ನ ಕಾರುಗಳಲ್ಲಿನ ಕಾರ್ಬನ್ ಹಾಗೂ ನೈಟ್ರೋಜನ್ ಹೊರಸೂಸುವಿಕೆಯನ್ನು ಮರೆಮಾಡಿದೆ.

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ಈ ಸಾಧನಗಳು ಇಲ್ಲದೇ ಇದ್ದಾಗ ಕಂಪನಿಯ ಕಾರುಗಳು ಅನುಮತಿ ನೀಡಲಾಗಿರುವ ಮಿತಿಗಿಂತ 10% - 40%ನಷ್ಟು ಹೆಚ್ಚು ಮಾಲಿನ್ಯವನ್ನು ಹೊರಹಾಕಿವೆ. 2018ರಲ್ಲಿ ತಾವು ಆಡಿ ಕಂಪನಿಯ ಏಳು ಕಾರುಗಳನ್ನು ಖರೀದಿಸಿದ್ದಾಗಿ ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ಕಾರಿನ ವಿತರಣೆಯನ್ನು ತೆಗೆದುಕೊಳ್ಳುವಾಗ, ಈ ಕಾರುಗಳಲ್ಲಿ ನಕಲಿ ಸಾಧನಗಳನ್ನು ಅಳವಡಿಸಲಾಗಿದೆಯೇ ಎಂದು ವಿಚಾರಿಸಲಾಗಿತ್ತು. ಭಾರತದಲ್ಲಿನ ಕಾನೂನು ಯುರೋಪ್ ಹಾಗೂ ಅಮೆರಿಕಾದಂತೆ ಕಟ್ಟು ನಿಟ್ಟಾಗಿ ಇಲ್ಲದ ಕಾರಣ ಈ ರೀತಿಯ ಸಾಧನಗಳನ್ನು ಈ ಕಾರುಗಳಲ್ಲಿ ಅಳವಡಿಸಿಲ್ಲ ಎಂದು ಅವರಿಗೆ ಕಂಪನಿಯವರು ಹೇಳಿದ್ದರು.

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ಭಾರತದಲ್ಲಿರುವ ಆಡಿ ಹಾಗೂ ಫೋಕ್ಸ್‌ವ್ಯಾಗನ್ ಕಾರುಗಳು ಅನುಮತಿ ನೀಡಲಾಗಿರುವ ಮಿತಿಗಿಂತ 5ರಿಂದ 8%ನಷ್ಟು ಹೆಚ್ಚು ನೈಟ್ರೋಜನ್ ಆಕ್ಸೈಡ್ ಅನ್ನು ಹೊರಸೂಸುತ್ತವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ಈ ಪ್ರಕರಣದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ ಜಿಟಿ) ಫೋಕ್ಸ್‌ವ್ಯಾಗನ್ ಕಂಪನಿಗೆ ರೂ.500 ಕೋಟಿಗಳ ದಂಡವನ್ನು ವಿಧಿಸಿದ ನಂತರ, ದೂರುದಾರರಿಗೆ ತಾವು ಮೋಸ ಹೋಗಿದ್ದು, ಕಷ್ಟಪಟ್ಟು ಸಂಪಾದಿಸಿದ ಹಣ ವ್ಯರ್ಥವಾಗಿದೆ ಎಂದೆನಿಸಿದೆ.

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ಈ ಕಂಪನಿಗಳು ವಾಹನಗಳ ಹೊರಸೂಸುವಿಕೆಯ ಬಗ್ಗೆ ತಪ್ಪು ಮಾಹಿತಿ ನೀಡಿವೆ. ಈ ಕಂಪನಿಯ ಕಾರುಗಳ ಒಳಗೆ ಅಳವಡಿಸಲಾಗಿರುವ ಈ ನಕಲಿ ಸಾಧನಗಳ ಬಗ್ಗೆ ತಿಳಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ಈ ಕಂಪನಿಯ ಅಧಿಕಾರಿಗಳು ತಮ್ಮ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ ಭಾರತದ ಮಾಲಿನ್ಯ ನಿಯಮಗಳನ್ನು ಕಡೆಗಣಿಸಿದ್ದಾರೆ. ಕಳಪೆ ಗುಣಮಟ್ಟದ ಕಾರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ಹೊರಸೂಸುವಿಕೆಯ ಮಾಹಿತಿಯನ್ನು ಮರೆಮಾಡಲು ಫೋಕ್ಸ್‌ವ್ಯಾಗನ್ ಕಂಪನಿಯ ಕಾರುಗಳಲ್ಲಿ ನಕಲಿ ಸಾಧನಗಳನ್ನು ಬಳಸಲಾಗುತ್ತಿದೆ ಎಂಬುದನ್ನು 2015ರಲ್ಲಿ ಅಮೆರಿಕಾದ ಎನ್ವಿರಾನ್ ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಪತ್ತೆಹಚ್ಚಿತ್ತು.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ಹೊರಸೂಸುವಿಕೆಯನ್ನು ಪರೀಕ್ಷಿಸುವ ಸಮಯದಲ್ಲಿ, ಕಾರಿನ ಎಂಜಿನ್‌ನ ಪರ್ಫಾಮೆನ್ಸ್ ಅನ್ನು ಕಡಿಮೆ ಮಾಡುವ ಮೂಲಕ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ರೀತಿಯ ಸಾಧನವನ್ನು ತಯಾರಿಸಲಾಗಿದೆ ಎಂಬುದು ಅಮೆರಿಕಾ ನ್ಯಾಯಾಲಯದ ತನಿಖೆಯಿಂದ ತಿಳಿದುಬಂದಿತ್ತು.

ಖ್ಯಾತ ಕಾರು ತಯಾರಕ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರು ಮಾಲೀಕ

ಆದರೆ ಕಾರುಗಳು ರಸ್ತೆಯ ಮೇಲೆ ಹೊರಟ ತಕ್ಷಣ, ಕಾರಿನ ಎಂಜಿನ್ ಪರ್ಫಾಮೆನ್ಸ್ ಹೆಚ್ಚಾಗಿ ಹೊರಸೂಸುವಿಕೆ ಹೆಚ್ಚಾಗುತ್ತದೆ. ಅಮೆರಿಕಾದಲ್ಲಿ ನಿಗದಿಪಡಿಸಿರುವುದಕ್ಕಿಂತ 30% - 40%ನಷ್ಟು ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದ್ದರೂ ಈ ಸಾಧನಗಳು ಅದನ್ನು ಮರೆ ಮಾಡುತ್ತಿದ್ದವು.

Most Read Articles

Kannada
English summary
Car owner files FIR against Volkswagen and Audi companies in India. Read in Kannada.
Story first published: Friday, July 17, 2020, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X