2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಕರೋನಾ ವೈರಸ್ ಚೀನಾದಲ್ಲಿ ಭಾರೀ ಪ್ರಮಾಣದ ಜೀವಹಾನಿಯನ್ನುಂಟು ಮಾಡಿದೆ. ಈ ಕರೋನಾ ವೈರಸ್ ಭೀತಿ ಪ್ರಪಂಚದದ್ಯಾಂತ ಆವರಿಸಿದೆ. ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯು ಬೇರೊಬ್ಬರನ್ನು ಸ್ಪರ್ಶಿಸಿದರೆ ಅವರಿಗೂ ಸಹ ಈ ವೈರಸ್ ತಗುಲುತ್ತದೆ ಎಂಬುದು ಈ ಭೀತಿಗೆ ಮುಖ್ಯ ಕಾರಣ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಈ ಕಾರಣಕ್ಕೆ ಚೀನಾ ದೇಶ ಮಾತ್ರವಲ್ಲದೇ ಚೀನಾದ ಸುತ್ತಮುತ್ತಲಿರುವ ದೇಶಗಳಲ್ಲಿಯೂ ಆತಂಕ ಎದುರಾಗಿದೆ. ಈ ವೈರಸ್ ತಗುಲಿದ 15 ದಿನಗಳಲ್ಲಿ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಗಳಿವೆ. ಈ ಮಾರಣಾಂತಿಕ ಕಾಯಿಲೆಗೆ ಇನ್ನೂ ಯಾವುದೇ ಔ‍‍ಷಧಿಯನ್ನು ಕಂಡು ಹಿಡಿದಿಲ್ಲ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಪ್ರಪಂಚದ ಬಹುತೇಕ ಎಲ್ಲಾ ದೇಶಗಳ ವಿಮಾನ ನಿಲ್ದಾಣಗಳಲ್ಲೂ ಅಲರ್ಟ್ ಘೋಷಿಸಲಾಗಿದೆ. ಹೊರ ದೇಶಗಳಿಂದ ದೇಶದೊಳಗೆ ಕಾಲಿಡುವ ಪ್ರತಿಯೊಬ್ಬರನ್ನೂ ಸಹ ಕೂಲಂಕುಷವಾಗಿ ಪರಿಶೀಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಈ ಸೋಂಕು ಕಾಣಿಸಿಕೊಂಡಿರುವ ಚೀನಾದೊಳಗೆ ಯಾರೂ ಕಾಲಿಡುತ್ತಿಲ್ಲ ಹಾಗೂ ಅಲ್ಲಿಂದ ಯಾರೂ ಹೊರಹೋಗುತ್ತಿಲ್ಲ. ಕರೋನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿರುವ ವುಹಾನ್ ಹಾಗೂ ಶಾಂಘೈ ನಗರಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ವುಹಾನ್ ನಗರವನ್ನು ಜನಸಂಪರ್ಕದಿಂದ ಹೊರಗಿಡಲಾಗಿದ್ದು, ಅಲ್ಲಿನ ಸ್ಥಿತಿಗತಿಯ ಮೇಲೆ ಕಣ್ಣಿಡಲಾಗಿದೆ. ಈ ಕಾರಣದಿಂದಾಗಿ ಅಲ್ಲಿರುವ ಜನರ ಜೀವನ ಅಸ್ತವ್ಯಸ್ತವಾಗಿದೆ. ಇದು ಇಷ್ಟಕ್ಕೆ ಸೀಮಿತವಾಗಿಲ್ಲ. ಮುಂದಿನ ವಾರ ನಡೆಯಲಿರುವ 2020ರ ಆಟೋ ಎಕ್ಸ್ ಪೋ ಮೇಲೂ ಇದರ ಪರಿಣಾಮ ಬೀರಿದೆ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಚೀನಾದ ಆಟೋ ಮೊಬೈಲ್ ಕಂಪನಿಗಳು ಮುಂದಿನ ವಾರ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಭಾಗವಹಿಸುವುದಿಲ್ಲವೆಂದು ತಿಳಿಸಿವೆ. ಇದರ ಜೊತೆಗೆ ಅವರಿಗಾಗಿ ಕಾಯ್ದಿರಿಸಲಾಗಿದ್ದ ಏರ್ ಟಿಕೆಟ್ ಹಾಗೂ ಪಾಸ್‍‍ಗಳನ್ನು ರದ್ದುಪಡಿಸಲಾಗಿದೆ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಕರೋನಾ ವೈರಸ್ ಕಾರಣದಿಂದಾಗಿ ಈ ರೀತಿ ಮಾಡಿರುವುದಾಗಿ ವರದಿಯಾಗಿದೆ. ಆಟೋ ಎಕ್ಸ್ ಪೋವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಭಾರತದಲ್ಲಿ ಆಯೋಜಿಸಲಾಗುತ್ತದೆ. ಈ ವರ್ಷದ ಆಟೋ ಎಕ್ಸ್ ಪೋ ಫೆಬ್ರವರಿ 7ರಿಂದ ಫೆಬ್ರವರಿ 12ರವರೆಗೆ ನೋಯ್ಡಾದಲ್ಲಿ ನಡೆಯಲಿದೆ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಈ ಆಟೋ ಎಕ್ಸ್ ಪೋದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ವಾಹನಗಳನ್ನು ಅನಾವರಣಗೊಳಿಸಲು ಹಾಗೂ ಪ್ರದರ್ಶಿಸಲು ಕಾತುರದಿಂದ ಕಾಯುತ್ತಿರುತ್ತವೆ. ಈ ಮೇಳದಲ್ಲಿ ಚೀನಾದ ಕಂಪನಿಗಳೂ ಸಹ ಭಾಗವಹಿಸುತ್ತಾ ಬಂದಿವೆ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಈ ಬಾರಿ ಚೀನಾ ಕಂಪನಿಗಳು ಭಾಗವಹಿಸಲು ಕರೋನಾ ವೈರಸ್‍‍ನ ಕರಿನೆರಳು ತಾಗಿದೆ. ಈ ವೈರಸ್ ತಗುಲಿರುವ ಸ್ಥಳಗಳಲ್ಲಿ ಜನಜೀವನ ಸ್ಥಬ್ದವಾಗಿದೆ. ಚೀನಾದ ಪ್ರಮುಖ ಆಟೋ ಮೊಬೈಲ್ ಕಂಪನಿಗಳಾದ ಎಂಜಿ, ಗ್ರೇಟ್ ವಾಲ್ ಮೋಟಾರ್ಸ್, ಬೋಟ್ ಮೋಟಾರ್ಸ್, ಸಂಕನ್‍‍ಗಳು ತಮ್ಮ ವಾಹನಗಳ ಬಿಡುಗಡೆಯನ್ನು ರದ್ದುಪಡಿಸಿವೆ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಈ ಕಂಪನಿಗಳು ಹೊಸ ವಾಹನಗಳನ್ನು ಬಿಡುಗಡೆಗೊಳಿಸುವುದರ ಜೊತೆಗೆ ಹಳೆಯ ವಾಹನಗಳ ಫೇಸ್ ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲಿವೆ. ಕರೋನಾ ವೈರಸ್ ಈ ಕಂಪನಿಗಳ ಯೋಜನೆಗಳನ್ನೆಲ್ಲಾ ಬುಡಮೇಲು ಮಾಡಿದೆ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಈ ವೈರಸ್ ಚೀನಾದಲ್ಲಿ ಸಾವಿರಾರು ಜನರ ಪ್ರಾಣ ತೆಗೆದಿದೆ. ವರದಿಗಳ ಪ್ರಕಾರ ಈ ವೈರಸ್ ಪ್ರಪಂಚದ 18ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಆದರೆ ಇದುವರೆಗೂ ಚೀನಾ ದೇಶ ಮಾತ್ರ ಈ ವೈರಸ್‍‍ನಿಂದ ಭಾರೀ ಪ್ರಮಾಣದ ಹಾನಿಗೊಳಗಾಗಿದೆ.

2020ರ ಆಟೋ ಎಕ್ಸ್‌ಪೋ ಮೇಲೂ ಬಿತ್ತು ಕರೋನಾ ಕರಿನೆರಳು..!

ಚೀನಾದ ಈ ನಿರ್ಧಾರದಿಂದಾಗಿ ಈ ಬಾರಿಯ ಆಟೋ ಎಕ್ಸ್ ಪೋದಲ್ಲಿ ಭಾರತದ ಕಂಪನಿಗಳ ಜೊತೆಗೆ ಕೆಲವು ಅಂತರ್‍‍ರಾಷ್ಟ್ರೀಯ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಿವೆ. ತಮ್ಮ ಹೊಸ ವಾಹನಗಳನ್ನು ಈ ಮೇಳದಲ್ಲಿ ಬಿಡುಗಡೆಗೊಳಿಸುವುದಾಗಿ ಈಗಾಗಲೇ ಹಲವು ಕಂಪನಿಗಳು ಘೋಷಿಸಿವೆ.

Most Read Articles

Kannada
English summary
Chinese companies to skip 2020 Auto Expo. Read in Kannada.
Story first published: Saturday, February 1, 2020, 16:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X