ಬಾಯ್ಕಟ್ ಚೀನಾ ಅಭಿಯಾನ: ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷದಿಂದಾಗಿ ದೇಶಾದ್ಯಂತ 'ಬಾಯ್ಕಟ್ ಚೀನಾ' ಅಭಿಯಾನ ಜೋರಾಗುತ್ತಿದ್ದು, ಚೀನಾ ಕಂಪನಿಗಳ ಬಿಡಿಭಾಗಗಳನ್ನೇ ನೆಚ್ಚಿಕೊಂಡಿರುವ ಭಾರತೀಯ ಆಟೋ ಕಂಪನಿಗಳಿಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಹತ್ವದ ಸೂಚನೆ ನೀಡಿದ್ದಾರೆ.

ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

ಹೊಸ ವಾಹನ ತಯಾರಿಕೆಗಾಗಿ ಚೀನಾದಲ್ಲಿ ಉತ್ಪಾದನೆಯಾದ ಬಿಡಿಭಾಗಗಳನ್ನೇ ನೆಚ್ಚಿಕೊಂಡಿರುವ ಭಾರತದ ಆಟೋ ಕಂಪನಿಗಳಿಗೆ ಕೆಲವು ಮಹತ್ವದ ಮಹತ್ವದ ಸೂಚನೆಗಳನ್ನು ನೀಡಿರುವ ಸಚಿವ ನಿತಿನ್ ಗಡ್ಕರಿ ಅವರು, ಸ್ವದೇಶಿ ನಿರ್ಮಾಣದ ಬಿಡಿಭಾಗಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿ ಅದರ ಬದಲಾಗಿ ಚೀನಾದಲ್ಲಿ ಉತ್ಪಾದನೆಯಾಗುವ ಬಿಡಿಭಾಗಗಳ ಮೇಲೆ ಹೆಚ್ಚು ಅವಲಂಬನೆಯಾಗುವುದು ಭವಿಷ್ಯದಲ್ಲಿ ಒಳ್ಳೆಯದಲ್ಲ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

ಸದ್ಯ ಭಾರತದಲ್ಲಿ ಉತ್ಪಾದನೆಯಾಗುವ ಬಹುತೇಕ ವಾಹನಗಳಲ್ಲಿ ಶೇ. 40ರಿಂದ ಶೇ.60 ರಷ್ಟು ಪ್ರಮಾಣದಲ್ಲಿ ಚೀನಿ ಕಂಪನಿಗಳ ಬಿಡಿಭಾಗಗಳೇ ಹೆಚ್ಚು ಬಳಕೆಯಾಗುತ್ತಿದ್ದು, ವಾಹನ ಬೆಲೆ ಇಳಿಕೆಗಾಗಿ ಅಗ್ಗದ ಬೆಲೆಯ ಚೀನಿ ಉತ್ಪನ್ನಗಳನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿದೆ.

ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

ಅದರಲ್ಲೂ ಎಲೆಕ್ಟ್ರಿಕ್ ವಾಹನ ಮಾದರಿಗಳು ಶೇ.90ರಷ್ಟು ಚೀನಿ ಬಿಡಿಭಾಗಗಳೊಂದಿಗೆ ಅಭಿವೃದ್ದಿಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಶೇ.100ರಷ್ಟು ಚೀನಿ ಮತ್ತು ತೈವಾನ್ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ.

ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

ಹೀಗಾಗಿ ಭವಿಷ್ಯದಲ್ಲಿ ಚೀನಿ ಮಾರುಕಟ್ಟೆಯ ಬಿಡಿಭಾಗಗಳಿಗೆ ಅವಲಂಬನೆಯಾಗುವುದನ್ನು ತಪ್ಪಿಸುವಂತೆ ಸಲಹೆ ನೀಡಿರುವ ನಿತಿನ್ ಗಡ್ಕರಿಯವರು ದೇಶಿಯ ಮಾರುಕಟ್ಟೆಯಲ್ಲಿನ ಬಿಡಿಭಾಗಗಳ ಬಳಕೆಯೊಂದಿಗೆ ಸ್ವದೇಶಿ ಕಂಪನಿಗಳಿಗೆ ಸಹಕರಿಸಿ ಎನ್ನುವ ಸಲಹೆ ನೀಡಿದ್ದಾರೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗಾಗಿ ವಿದೇಶಿ ಮಾರುಕಟ್ಟೆಯಲ್ಲಿನ ಬ್ಯಾಟರಿ ಸಂಪನ್ಮೂಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವತ್ತ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದು, ಸ್ಥಳೀಯ ಸಂಪನ್ಮೂಲದೊಂದಿಗೆ ಬಿಡಿಭಾಗಗಳು ಮತ್ತು ಬ್ಯಾಟರಿ ತಯಾರಿಕೆಗೆ ಸಿದ್ದತೆ ನಡೆಸಿವೆ.

ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

2021ರ ಸುಮಾರಿಗೆ ಹಲವಾರು ಅಂತರ್‌ರಾಷ್ಟ್ರೀಯ ಕಂಪನಿಗಳು ದೇಶಿಯ ಕಂಪನಿಗಳ ಜೊತೆಗೂಡಿ ಬ್ಯಾಟರಿ ಉತ್ಪಾದನಾ ಘಟಕಗಳನ್ನು ತೆರೆಯುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಬಿಡಿಭಾಗಗಳ ಬಳಕೆಯು ಎಲೆಕ್ಟ್ರಿಕ್ ವಾಹನ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡಲು ಸಹಕಾರಿಯಾಗಲಿವೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

ಇನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು 2030ಕ್ಕೆ ಶೇ.100ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ಹೊಂದಿದ್ದು, ಭವಿಷ್ಯದ ಗುರಿಗಾಗಿ ಈಗಿನಿಂದಲೇ ಹಲವಾರು ಕಠಿಣ ಕ್ರಮಗಳ ಮೂಲಕ ಹಂತ-ಹಂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸಲಾಗುತ್ತಿದೆ.

ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

ಹಾಗೆಯೇ ವಾಹನ ಖರೀದಿದಾರರನ್ನು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಸೆಳೆಯಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಫೇಮ್ 2 ಯೋಜನೆ ಅಡಿ ಈಗಾಗಲೇ ಕೇಂದ್ರ ಸರ್ಕಾರ ಮೂರು ವರ್ಷಗಳ ಅವಧಿಗಾಗಿ(2019-21) ರೂ. 10 ಸಾವಿರ ಕೋಟಿ ವಿನಿಯೊಗಿಸುತ್ತಿದೆ.

MOST READ: ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಭಾರತದ ಆಟೋ ಕಂಪನಿಗಳಿಗೆ ನಿತಿನ್ ಗಡ್ಕರಿ ಖಡಕ್ ವಾರ್ನ್

ಫೇಮ್ 2 ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡುವ ಆಟೋ ಕಂಪನಿಗಳಿಗೆ ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೂ ಕೂಡಾ ಆಕರ್ಷಕ ಸಬ್ಸಡಿ, ತೆರಿಗೆ ವಿನಾಯ್ತಿ, ಅತಿ ಕಡಿಮೆ ಜಿಎಸ್‌ಟಿ ಸೌಲಭ್ಯಗಳನ್ನು ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

Most Read Articles

Kannada
English summary
Electric Vehicle Parts Need To Be Manufactured Locally And Not Imported Says Union Minister. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X