ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ನೀತಿ ಆಯೋಗದ ಸಿ‍ಇ‍ಒ ಅಮಿತಾಬ್ ಕಾಂತ್‍‍ರವರು ಶುಕ್ರವಾರ ಮಾತನಾಡಿ, ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿಯಲ್ಲಿ ದೇಶಾದ್ಯಂತ 62 ನಗರಗಳಲ್ಲಿ 2,600 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯುವುದಾಗಿ ಹೇಳಿದರು.

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿಯೂ ಪ್ರಕಟಿಸಿರುವ ಅಮಿತಾಬ್ ಕಾಂತ್‍‍ರವರು ಎಲೆಕ್ಟ್ರಿಕ್ ವಾಹನಗಳ ಪರವಾಗಿ ಕೇಂದ್ರ ಸರ್ಕಾರವು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಈ ಯೋಜನೆಯಡಿಯಲ್ಲಿ ಪ್ರತಿ 4 ಕಿ.ಮೀಗೆ ಒಂದರಂತೆ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ. ಈ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯುವುದರಿಂದ ಜನರು ತಮ್ಮ ವಾಹನಗಳಲ್ಲಿ ಚಾರ್ಜ್ ಖಾಲಿಯಾದರೆ ಏನು ಮಾಡಬೇಕೆಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಕಳೆದ ತಿಂಗಳು ಈ ಬಗ್ಗೆ ಮಾತನಾಡಿದ್ದ ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿರವರು ಕೇಂದ್ರ ಸರ್ಕಾರವು ಇ-ಹೈವೇಗಳನ್ನು ನಿರ್ಮಿಸುವುದಾಗಿ ತಿಳಿಸಿದ್ದರು. ಇದರಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯುವುದು ಸಹ ಸೇರಿತ್ತು.

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಈ ಯೋಜನೆಯಡಿಯಲ್ಲಿ ನವದೆಹಲಿಯಿಂದ ಮುಂಬೈವರೆಗೂ 12 ಲೇನ್‍‍ನ ಎಕ್ಸ್ ಪ್ರೆಸ್‍‍ವೇಯನ್ನು ನಿರ್ಮಿಸಲಾಗುವುದು. ಈ ಎಕ್ಸ್ ಪ್ರೆಸ್‍‍ವೇನಲ್ಲಿ ಗುರುಗ್ರಾಮದವರೆಗಿನ ಮೊದಲ 10 ಕಿ.ಮೀನಲ್ಲಿ ಇ-ಹೈವೇಯನ್ನು ಅಭಿವೃದ್ಧಿಪಡಿಸಲಾಗುವುದು.

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಈ ರೀತಿಯ ಇ-ಹೈವೇಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮೆಂಟೆನೆನ್ಸ್ ಹಾಗೂ ಚಾರ್ಜಿಂಗ್‍‍ಗಾಗಿ ಸಂಪೂರ್ಣ ವ್ಯವಸ್ಥೆಯನ್ನು ಮಾಡಲಾಗುವುದು. ಈ ಹೈವೇ ಹರಿಯಾಣ, ರಾಜಸ್ತಾನ, ಗುಜರಾತ್ ಹಾಗೂ ಮಧ್ಯ ಪ್ರದೇಶದಲ್ಲಿರುವ ಹಿಂದುಳಿದ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ.

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಜನರು ಎಕ್ಸ್ ಪ್ರೆಸ್ ಹೈವೇಯಲ್ಲಿರುವ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಇಂಧನದಂತೆ ಬಳಸಬೇಕೆಂದು ಅಮಿತಾಬ್ ಕಾಂತ್‍‍ರವರು ಹೇಳಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚವು ರೈಲು ಹಾಗೂ ನೀರಿನಲ್ಲಿ ಚಲಿಸುವ ವಾಹನಗಳಿಗಿಂತ ಕಡಿಮೆಯಾಗಿರಲಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಡೀಸೆಲ್ - ಪೆಟ್ರೋಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ, ಹೆಚ್ಚಿನ ಉಳಿತಾಯವಾಗಲಿದೆ. ಇದರಿಂದಾಗಿ ಕಮರ್ಷಿಯಲ್ ಎಲೆಕ್ಟ್ರಿಕ್ ವಾಹನಗಳ ಲಾಭವೂ ಸಹ ಹೆಚ್ಚಾಗಲಿದೆ ಎಂದು ಅವರು ಹೇಳಿದರು.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಲಿದೆ. ಇದರಿಂದಾಗಿ ಚಾರ್ಜಿಂಗ್‍‍ಗೆ ಬೇಕಾಗಿರುವ ಮೂಲ ಸೌಕರ್ಯಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಲಿದೆ. ಈ ಕಾರಣಕ್ಕೆ ಸರ್ಕಾರವು ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅಮಿತಾಬ್ ಕಾಂತ್‍‍ರವರು ಹೇಳಿದರು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಒಳ್ಳೆಯ ಕ್ರಮವನ್ನು ಕೈಗೊಂಡಿದೆ. ಫೇಮ್ 2 ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಹಾಗೂ ತಯಾರಿಕೆಗಾಗಿ ರೂ.10,000 ಕೋಟಿಗಳನ್ನು ಹೂಡಿಕೆ ಮಾಡಲಿದೆ.

ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ ಕೇಂದ್ರ ಸರ್ಕಾರ

ಇದರಲ್ಲಿ ರೂ.1,000 ಕೋಟಿಯನ್ನು ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಸ್ಥಾಪಿಸಲು ಬಳಸಲಾಗುವುದು. ಈ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗಾಗಿ ಹಣಕಾಸಿನ ನೆರವನ್ನು ನೀಡಲಾಗುತ್ತದೆ.

Most Read Articles

Kannada
English summary
Central government to start 2,600 charging stations across the country - Read in Kannada
Story first published: Saturday, January 4, 2020, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X