ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿವನ್ನು ಸರಳಗೊಳಿಸಲು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದುವರೆಗೆ ದಾಖಲೆ ಪ್ರಮಾಣದಲ್ಲಿ ಹೊಸ ಸೌಲಭ್ಯವನ್ನು ಅಳವಡಿಕೆ ಮಾಡಿದ್ದು, ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಅಳವಡಿಸಿಕೊಳ್ಳದ ವಾಹನ ಮಾಲೀಕರಿಗೆ ಮುಂದಿನ ಕೆಲವೇ ದಿನಗಳಲ್ಲಿ ದುಬಾರಿ ಶುಲ್ಕು ವಸೂಲಿ ಮಾಡುವ ಸೂಚನೆ ನೀಡಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

ಹಲವು ಗಡುವುಗಳ ನಂತರ ಈ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯಗೊಳಿಸಿದ್ದ ಕೇಂದ್ರ ಹೆದ್ದಾರಿ ಪ್ರಾಧಿಕಾರವು ಬರೋಬ್ಬರಿ 1 ಕೋಟಿಗೂ ಅಧಿಕ ವಾಹನಗಳಿಗೆ ಹೊಸ ಸೌಲಭ್ಯವನ್ನು ಅಳವಡಿಸಿತ್ತು. ಫಾಸ್ಟ್‌ಟ್ಯಾಗ್ ಜಾರಿಗೆ ತಂದ 6 ವರ್ಷಗಳ ನಂತರ 1 ಕೋಟಿ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದ ಹೆದ್ದಾರಿ ಪ್ರಾಧಿಕಾರವು ಇದೀಗ ಕೇವಲ 8 ತಿಂಗಳ ಅವಧಿಯಲ್ಲಿ 2 ಕೋಟಿಗೂ ಅಧಿಕ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಜೋಡಣೆ ಮಾಡಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

ಕರೋನಾ ವೈರಸ್ ಪರಿಣಾಮದಿಂದಾಗಿ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಒತ್ತು ನೀಡುತ್ತಿರುವ ವಾಹನ ಸವಾರರು ಫಾಸ್ಟ್‌ಟ್ಯಾಗ್ ‌ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದು, ಕಳೆದ ವರ್ಷದ ಅಕ್ಟೋಬರ್ ಅವಧಿಗಿಂತಲೂ ಇದೀಗ ಶೇ.400 ರಷ್ಟು ಹೊಸ ವಾಹನ ಸವಾರರು ಫಾಸ್ಟ್‌ಟ್ಯಾಗ್ ಖಾತೆ ತೆರಿದ್ದಾರೆ.

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

ಇನ್ನು ಟೋಲ್‌ಗಳಲ್ಲಿ ವಾಹನ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾದ ಫಾಸ್ಟ್‌‍ಟ್ಯಾಗ್ ಸೌಲಭ್ಯವು ಆರಂಭದ ದಿನಗಳಲ್ಲಿ ಕಾಣಾಂತರಗಳಿಂದ ವಾಹನ ಮಾಲೀಕರಿಗೆ ತೊಂದರೆ ಉಂಟಾದರೂ ಇದೀಗ ಕರೋನಾ ವೈರಸ್‌ ಪರಿಣಾಮ ಸುರಕ್ಷಿತ ಹಣಕಾಸು ವ್ಯವಹಾರಕ್ಕೆ ಫಾಸ್ಟ್‌ಟ್ಯಾಗ್ ಸಾಕಷ್ಟು ಉಪಯುಕ್ತವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

ಈ ಹಿನ್ನಲೆ ವಿವಿಧ ಕಾರಣಗಳಿಂದ ಫಾಸ್ಟ್‌ಟ್ಯಾಗ್ ಸೌಲಭ್ಯ ಬಳಕೆಯನ್ನು ಉತ್ತೇಜಿಸುತ್ತಿರುವ ಹೆದ್ದಾರಿ ಪ್ರಾಧಿಕಾರವು ಮುಂದಿನ ಕೆಲವೇ ದಿನಗಳಲ್ಲಿ ಪ್ರತಿ ವಾಹನಕ್ಕೂ ಹೊಸ ಸೌಲಭ್ಯ ಅಳವಡಿಸುವ ಗುರಿಹೊಂದಿದ್ದು, 2021ರ ಏಪ್ರಿಲ್ 1ರಿಂದ ವಾಹನ ವಿಮೆ ನವೀಕರಣಕ್ಕೆ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯಗೊಳಿಸಿರುವುದು ಕೂಡಾ ಮತ್ತೊಂದು ಮಹತ್ವದ ಕ್ರಮವಾಗಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

2021ರ ಏಪ್ರಿಲ್ 1ರಿಂದ ನಾಲ್ಕು ಚಕ್ರದ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆ ಪಡೆದುಕೊಳ್ಳುವಾಗ ಫಾಸ್ಟ್‌ಟ್ಯಾಗ್ ಸಂಖ್ಯೆಯನ್ನು ನೀಡಬೇಕೆಂಬ ಅಧಿಸೂಚನೆ ಹೊರಡಿಸಲಾಗಿದ್ದು, ಇದು ಕ್ಯಾಶ್‌ಲೆಸ್ ವ್ಯವಹಾರವನ್ನು ಉತ್ತೇಜಿಸಲು ಸಾಕಷ್ಟು ಸಹಕಾರಿಯಾಗಲಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

ಇನ್ನು ಫಾಸ್ಟ್‌ಟ್ಯಾಗ್ ಸೌಲಭ್ಯವು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗುವಾಗ ಟೋಲ್‌ಗಳಲ್ಲಿನ ಆರ್‌ಎಫ್‌ಐಡಿ ರಾಡರ್ ಮೂಲಕ ಆಟೋಮ್ಯಾಟಿಕ್ ಆಗಿ ಶುಲ್ಕ ಕಡಿತಗೊಳ್ಳುತ್ತದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ದೇಶದಲ್ಲಿರುವ ಅನೇಕ ಬ್ಯಾಂಕ್‌ಗಳು ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್‍ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

ಗ್ರಾಹಕರು ರೂ.100 ರಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದಾಗಿದ್ದು, ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಹೀಗಾಗಿ ಇದೊಂದು ಅತಿ ಸುಲಭವಾಗಿ ಉಪಯೋಗಿಸಬಹುದಾದ ಸೌಲಭ್ಯವಾಗಿದ್ದು, ಒಂದು ಫಾಸ್ಟ್‌ಟ್ಯಾಗ್ ಖಾತೆಯನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡುವಂತಿಲ್ಲ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಬಳಕೆದಾರರ ಸಂಖ್ಯೆಯಲ್ಲಿ ಹೊಸ ದಾಖಲೆ

ಇದರಿಂದ ವಾಹನ ಮಾಲೀಕರು ಹೊಸ ಸೌಲಭ್ಯವನ್ನು ವಿವಿಧ ವಾಹನಗಳಿಗೆ ಪ್ರತ್ಯೇಕ ಖಾತೆ ಹೊಂದಿರಬೇಕಿದ್ದು, ಆರಂಭದ ದಿನಗಳಲ್ಲಿ ಹೊಸ ಸೌಲಭ್ಯದಲ್ಲಿದ್ದ ಕೆಲವು ನ್ಯೂನತೆಗಳನ್ನು ಇದೀಗ ಪರಿಹರಿಸಿರುವುದು ಫಾಸ್ಟ್‌ಟ್ಯಾಗ್ ಬಳಕೆ ಇದೀಗ ಸುಲಭವಾಗಿದೆ.

Most Read Articles

Kannada
English summary
FASTag Users in India Crosses 2 Crore Mark, Registers 400 Percent Growth. Read in Kannada.
Story first published: Saturday, November 14, 2020, 20:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X