ಪ್ಯಾಲೇಸ್ ಆನ್ ವ್ಹೀಲ್ ಆಯ್ತು, ಈಗ ಆಫೀಸ್ ಆನ್ ವ್ಹೀಲ್ ಸರದಿ

ವಿದೇಶಗಳಲ್ಲಿರುವಂತೆ ಮೋಟಾರ್ ಹೌಸ್ ಹಾಗೂ ಕಾರವಾನ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲ. ಆದರೆ ನಿಧಾನವಾಗಿ ಇವುಗಳ ಬಳಕೆ ಹೆಚ್ಚಾಗುತ್ತಿದೆ. ಸದ್ಯಕ್ಕೆ ಭಾರತದಲ್ಲಿ ಮೋಟಾರ್ ಹೌಸ್ ಗಳನ್ನು ತಯಾರಿಸುವ ಯಾವುದೇ ಕಂಪನಿಗಳಿಲ್ಲ.

ಪ್ಯಾಲೇಸ್ ಆನ್ ವ್ಹೀಲ್ ಆಯ್ತು, ಈಗ ಆಫೀಸ್ ಆನ್ ವ್ಹೀಲ್ ಸರದಿ

ದೇಶದಲ್ಲಿ ಕಂಡುಬರುವ ಮೋಟಾರ್ ಹೌಸ್ ಗಳನ್ನು ಹೆಚ್ಚಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇಲ್ಲವೇ ದೊಡ್ಡ ವಾಹನಗಳನ್ನು ಮೋಟಾರ್ ಹೌಸ್ ಗಳ ರೀತಿಯಲ್ಲಿ ಮಾಡಿಫೈಗೊಳಿಸಲಾಗುತ್ತದೆ. ಇತ್ತೀಚೆಗೆ ಕೇರಳದಲ್ಲಿ ಮೋಟಾರ್ ಹೌಸಿನಂತೆ ಮಾಡಿಫೈಗೊಂಡ ವಾಹನದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಪ್ಯಾಲೇಸ್ ಆನ್ ವ್ಹೀಲ್ ಆಯ್ತು, ಈಗ ಆಫೀಸ್ ಆನ್ ವ್ಹೀಲ್ ಸರದಿ

ಫೋರ್ಸ್ ಟ್ರಾವೆಲರ್‌ ಅನ್ನು ಮೋಟಾರ್ ಹೌಸ್ ನಂತೆ ಮಾಡಿಫೈಗೊಳಿಸಲಾಗಿದೆ. ಜನರು ಈ ಮೋಟಾರ್ ಹೌಸ್ ಅನ್ನು ಚಲಿಸುವ ಕಚೇರಿ ಎಂದು ಕರೆಯುತ್ತಿದ್ದಾರೆ. ಈ ಮೋಟಾರ್ ಹೌಸ್, ಆಫೀಸ್ ನಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್ ಕಚೇರಿಯಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪ್ಯಾಲೇಸ್ ಆನ್ ವ್ಹೀಲ್ ಆಯ್ತು, ಈಗ ಆಫೀಸ್ ಆನ್ ವ್ಹೀಲ್ ಸರದಿ

ಈ ಮೋಟಾರ್ ಹೌಸ್ ಅನ್ನು ತಯಾರಿಸಿದ ಶ್ರೇಯಸ್ಸು ಕೇರಳದ ಜೋಶ್ ಕ್ರಿಯೇಷನ್ಸ್ ಗೆ ಸಲ್ಲಬೇಕು. ಫೋರ್ಸ್ ಟ್ರಾವೆಲರ್‌ ಅನ್ನು ಮೋಟಾರ್ ಹೌಸ್ ನಂತೆ ಮಾಡಿಫೈಗೊಳಿಸುತ್ತಿರುವ ಸಂಪೂರ್ಣ ವಿವರಗಳನ್ನು ವೀಡಿಯೊದಲ್ಲಿ ನೀಡಲಾಗಿದೆ. ಫೋರ್ಸ್ ಟ್ರಾವೆಲರ್ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಲಾಗಿದೆ.

ಪ್ಯಾಲೇಸ್ ಆನ್ ವ್ಹೀಲ್ ಆಯ್ತು, ಈಗ ಆಫೀಸ್ ಆನ್ ವ್ಹೀಲ್ ಸರದಿ

ಈ ವಾಹನವು ಹೋಂಡಾ ಡಬ್ಲ್ಯುಆರ್‌ವಿಯಲ್ಲಿರುವಂತಹ ಹೆಡ್‌ಲ್ಯಾಂಪ್ ಹಾಗೂ ಮುಂಭಾಗದಲ್ಲಿ ಮರ್ಸಿಡಿಸ್ ಬೆಂಝ್ ಲೋಗೋವನ್ನು ಹೊಂದಿದೆ. ಬಂಪರ್, ಹುಡ್, ಹೊಸ ಎಲ್ಇಡಿ ಫಾಗ್ ಲ್ಯಾಂಪ್ ಹಾಗೂ ಡಿಆರ್ ಎಲ್ ನೊಂದಿಗೆ ಗ್ರಿಲ್ ಅನ್ನು ಪರಿಷ್ಕರಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪ್ಯಾಲೇಸ್ ಆನ್ ವ್ಹೀಲ್ ಆಯ್ತು, ಈಗ ಆಫೀಸ್ ಆನ್ ವ್ಹೀಲ್ ಸರದಿ

ಇನ್ನು ಕ್ಯಾಬಿನ್ ಅನ್ನು ಕಚೇರಿಯಂತೆ ವಿನ್ಯಾಸಗೊಳಿಸಲಾಗಿದೆ. ಡ್ರೈವರ್ ಕ್ಯಾಬಿನ್ ವಾಹನದ ಉಳಿದ ಭಾಗಗಳಿಂದ ಪ್ರತ್ಯೇಕವಾಗಿದೆ. ಕ್ಯಾಬಿನ್ ಒಳಗೆ ಎಲೆಕ್ಟ್ರಾನಿಕ್ ಡೋರ್ ಅಳವಡಿಸಲಾಗಿದೆ. ಈ ಡೋರ್ ಅನ್ನು ಬಟನ್ ಪ್ರೆಸ್ ಮಾಡುವ ಮೂಲಕ ತೆರೆಯಬಹುದು ಹಾಗೂ ಮುಚ್ಚಬಹುದು.

ಪ್ಯಾಲೇಸ್ ಆನ್ ವ್ಹೀಲ್ ಆಯ್ತು, ಈಗ ಆಫೀಸ್ ಆನ್ ವ್ಹೀಲ್ ಸರದಿ

ಇದರ ಜೊತೆಗೆ 7 ಅಡಿ ಸೋಫಾ, ಟೇಬಲ್, ಚೇರ್, ಎಲ್‌ಸಿಡಿ ಟಿವಿ, ಎಲ್‌ಇಡಿ ಲೈಟ್, ಫ್ರಿಜ್, ಮೈಕ್ರೊವೇವ್ ಓವನ್, ಕಬೋರ್ಡ್ ಹಾಗೂ ಇತರ ಹಲವು ಸ್ಥಳಗಳನ್ನು ಈ ವಾಹನದೊಳಗೆ ಇಡಲಾಗಿದೆ. ಒಳಗಿನ ಕ್ಯಾಬಿನ್ ಪೂರ್ತಿಯಾಗಿ ಏರ್ ಕಂಡಿಷನ್ ಹೊಂದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಡ್ರೈವರ್ ಕ್ಯಾಬಿನ್‌ ಸಹ ಏರ್ ಕಂಡಿಷನ್ ಹೊಂದಿದೆ. ನಿರಂತರವಾದ ಎಲೆಕ್ಟ್ರಿಕ್ ಪೂರೈಕೆಗಾಗಿ ಈ ವಾಹನದೊಳಗೆ ಇನ್ವರ್ಟರ್, ಮನರಂಜನೆಗಾಗಿ ಸೋನಿ ಮ್ಯೂಸಿಕ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ಈ ವಾಹನದಲ್ಲಿರುವ ಸೋಫಾವನ್ನು ಹಾಸಿಗೆಯಾಗಿಯೂ ಬಳಸಬಹುದು.

ಪ್ಯಾಲೇಸ್ ಆನ್ ವ್ಹೀಲ್ ಆಯ್ತು, ಈಗ ಆಫೀಸ್ ಆನ್ ವ್ಹೀಲ್ ಸರದಿ

ಈ ವೀಡಿಯೊದಲ್ಲಿ ವಾಹನದ ಮಾಡಿಫೈಗಾಗಿ ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ತಿಳಿಸಿಲ್ಲ. ಆದರೆ ಈ ವಾಹನದಲ್ಲಿರುವ ಎಲ್ಲಾ ಫೀಚರ್ ಗಳನ್ನು ಗಮನಿಸಿದರೆ ಮಾಡಿಫೈಗಾಗಿ ರೂ.4 ಲಕ್ಷದಿಂದ ರೂ.5 ಲಕ್ಷಗಳವರೆಗೆ ಖರ್ಚಾಗಿರುವ ಸಾಧ್ಯತೆಗಳಿವೆ.

ಚಿತ್ರ ಕೃಪೆ: ಐ ಆಮ್ ಬ್ರೀಂಟೊ

Most Read Articles

Kannada
English summary
Force traveller converted as office on wheel. Read in Kannada.
Story first published: Tuesday, July 28, 2020, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X