ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಗ್ರ್ಯಾಂಡ್ ಐ10 ನಿಯೋಸ್ ಆವೃತ್ತಿಯನ್ನು ಬಿಡುಗಡೆ ಮಾಡಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಹ್ಯುಂಡೈ ಸಂಸ್ಥೆಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಹೊಸ ಕಾರಿನಲ್ಲಿ ಮತ್ತೊಂದು ಹೊಸ ಎಂಜಿನ್ ಮಾದರಿಯನ್ನು ಪರಿಚಯಿಸುವ ಸುಳಿವು ನೀಡಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾಗಿರುವ ವೆನ್ಯೂ ಕಾರಿನ ಮಾದರಿಯಲ್ಲೇ ಗ್ರ್ಯಾಂಡ್ ಐ10 ನಿಯೋಸ್ ಆವೃತ್ತಿಯಲ್ಲೂ ಕೂಡಾ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಎಂಜಿನ್ ಪರಿಚಯಿಸುತ್ತಿರುವ ಹ್ಯುಂಡೈ ಸಂಸ್ಥೆಯು 100-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಹೊಸ 1.0-ಲೀಟರ್ ಪೆಟ್ರೋಲ್ ಎಂಜಿನ್ ಅಭಿವೃದ್ದಿ ಪಡಿಸಿದ್ದು, 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಹೊಸ ಪೆಟ್ರೋಲ್ ಆವೃತ್ತಿಯು ಮುಂದಿನ ವಾರದಲ್ಲಿ ಬಿಡುಗಡೆಯಾಗಲಿದ್ದು, ಸಾಮಾನ್ಯ ಗ್ರಾಂಡ್ ಐ10 ನಿಯೊಸ್ ಕಾರಿಗಿಂತಲೂ ಟರ್ಬೋ ಪೆಟ್ರೋಲ್ ಆವೃತ್ತಿಯು ಹಲವು ಪ್ರೀಮಿಯಂ ಫೀಚರ್ಸ್ ಜೊತೆ ಮಾರುಕಟ್ಟೆ ಪ್ರವೇಶಿಸಲಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಇನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿದಿರುವ ಗ್ರಾಂಡ್ ಐ10 ನಿಯೋಸ್ ಕಾರು ಹಳೆಯ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಉದ್ದಳತೆಯನ್ನು ಹೊಂದಿದ್ದು, ಗ್ರಾಂಡ್ ಐ10 ಮತ್ತು ಎಲೈಟ್ ಐ20 ನಡುವಿನ ಸ್ಥಾನ ಗಿಟ್ಟಿಸಿಕೊಂಡಿರುವ ಗ್ರಾಂಡ್ ಐ10 ನಿಯೋಸ್ ಆವೃತ್ತಿಯು ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ವಿಶೇಷ ಎನ್ನಿಸಲಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಗ್ರಾಂಡ್ ಐ10 ನಿಯೋಸ್ ಕಾರು ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟಾ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯಾದ ಎರಾ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.99 ಲಕ್ಷ ಬೆಲೆ ಹೊಂದಿದ್ದರೆ ಹೈ ಎಂಡ್ ಮಾದರಿಯಾದ ಆಸ್ಟಾ ಮ್ಯಾನುವಲ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ.7.99 ಲಕ್ಷ ಬೆಲೆ ಪಡೆದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಖರೀದಿಗೆ ಲಭ್ಯವಿರುವ ಗ್ರಾಂಡ್ ಐ10 ನಿಯೋಸ್ ಕಾರು ಹಳೆಯ ಆವೃತ್ತಿಗಿಂತಲೂ ಹೆಚ್ಚು ಸ್ಪೋರ್ಟಿ ಲುಕ್ ಪಡೆದುಕೊಂಡಿದ್ದು, ಮುಂಭಾಗದ ಗ್ರಿಲ್ ಡಿಸೈನ್ ಹೊಸ ಕಾರಿಗೆ ಹೆಚ್ಚಿನ ಮಟ್ಟದ ಪ್ರೀಮಿಯಂ ಲುಕ್ ನೀಡಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಹ್ಯುಂಡೈ ಸಂಸ್ಥೆಯು ಇದೇ ಮೊದಲ ಬಾರಿಗೆ ಗ್ರಾಂಡ್ ಐ10 ನಿಯೋಸ್ ಮೂಲಕ ತನ್ನ ನವೀಕೃತ ಕಾರುಗಳ ಮಾದರಿಗಳಲ್ಲಿ ಬಿಎಸ್- 6 ಎಂಜಿನ್ ಜೋಡಣೆಗೆ ಚಾಲನೆ ನೀಡಿದ್ದು, ಇದೀಗ ಬಿಡುಗಡೆಯಾಗಲಿರುವ ಟರ್ಬೋ ಪೆಟ್ರೋಲ್ ಕೂಡಾ ಬಿಎಸ್-6 ವೈಶಿಷ್ಟ್ಯತೆ ಹೊಂದಿರಲಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಎಂಜಿನ್ ಸಾಮಾರ್ಥ್ಯ

ಗ್ರಾಂಡ್ ಐ10 ನಿಯೋಸ್ ಕಾರು 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಮೂಲಕ 81-ಬಿಎಚ್‌ಪಿ, 114-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.2-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮೂಲಕ 76-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಇದರಲ್ಲಿ ಹೊಸದಾಗಿ ಬಿಡುಗಡೆಗೆ ಸಿದ್ದವಾಗಿರುವ ಟರ್ಬೋ ಎಂಜಿನ್ ಮಾದರಿಯು 100-ಬಿಎಚ್‌ಪಿ ಪ್ರೇರಿತ 1.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಿರಲಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 10 ವೆರಿಯೆಂಟ್‌ಗಳು ಆಯ್ಕೆಗೆ ಲಭ್ಯವಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಯನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಹೊಸ ಕಾರಿನ ಒಳಾಂಗಣ ವಿನ್ಯಾಸವು ಈ ಬಾರಿ ಹ್ಯಾಚ್‌ಬ್ಯಾಕ್ ಪ್ರಿಯರ ಆಕರ್ಷಣೆ ಕಾರಣವಾಗಲಿದ್ದು, ಡ್ಯುಯಲ್ ಟೋನ್ ಲೇಔಟ್, ಸಾಫ್ಟ್ ಟಚ್ ಮೆಟಿರಿಯಲ್ಸ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಪ್ಲೇ ಪ್ರೇರಣೆಯ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಜೋಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಹಾಗೆಯೇ ಹೊಸ ಕಾರಿನಲ್ಲಿ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್, ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್ ಸೌಲಭ್ಯಗಳಿದ್ದು, ಪ್ರಯಾಣಿಕ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಹೈ ಸ್ಪೀಡ್ ವಾರ್ನಿಂಗ್, ISOFIX ಚೈಲ್ಡ್ ಸೀಟ್ ಒದಗಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಪ್ರೀಮಿಯಂ ಲುಕ್ ಹೆಚ್ಚಿಸಲು ಟಾಪ್ ಎಂಡ್ ಮಾಡೆಲ್‌ಗಳಲ್ಲಿ 15-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ಶಾರ್ಕ್ ಫಿನ್ ಆಂಟೆನಾ, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್, ರಿಯರ್ ಕ್ರೊಮ್ ಗಾರ್ನಿಶ್ ಮತ್ತು ಲಗೇಜ್ ಲ್ಯಾಂಪ್ ಸೌಲಭ್ಯಗಳನ್ನು ನೀಡಲಾಗಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್ ಅನಾವರಣ

ಈ ಮೂಲಕ ಹ್ಯಾಚ್‌ಬ್ಯಾಕ್ ಮಾದರಿಗಳಲ್ಲೇ ಹೆಚ್ಚಿನ ಮಟ್ಟದ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಅತ್ಯುತ್ತಮ ಕಾರು ಮಾದರಿ ಇದಾಗಿದ್ದು, ಬಿಡುಗಡೆಯಾಗಲಿರುವ ಟರ್ಬೋ ಪೆಟ್ರೋಲ್ ಕಾರು ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಮತ್ತಷ್ಟು ಪೈಪೋಟಿಯಾಗಲಿದೆ ಎನ್ನಬಹುದು.

Most Read Articles

Kannada
English summary
Hyundai Motors has unveiled Grand i10 Nios Turbo Petrol model at auto expo. Read in Kannada.
Story first published: Thursday, February 6, 2020, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X