ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಗುಣಮಟ್ಟ, ಆಕರ್ಷಕ ಬೆಲೆಗಳಲ್ಲಿ ಹೆಚ್ಚು ಕಾರ್ಯಕ್ಷಮತೆಯುಳ್ಳ ಬ್ಯಾಟರಿ ಸಂಪನ್ಮೂಲ ಅಭಿವೃದ್ದಿಯು ಇದೀಗ ಸವಾಲಾಗಿ ಪರಿಣಮಿಸಿದೆ.

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಹೊಸ ಬದಲಾವಣೆಗೆ ಕಾರಣವಾಗುತ್ತಿರುವ ಹಲವು ಆಟೋ ಕಂಪನಿಗಳು ಜಾಗತಿಕವಾಗಿ ಗುರುತಿಸಿಕೊಳ್ಳುತ್ತಿದ್ದು, ಹ್ಯುಂಡೈ ಮೋಟಾರ್ಸ್, ಕಿಯಾ ಮೋಟಾರ್ಸ್ ಮತ್ತು ಎಲ್‌ಜಿ ಕೆಮೆಕಲ್ಸ್ ಕಂಪನಿಯು ಕೂಡಾ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗಾಗಿ ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡಲು ಜಾಗತಿಕ ಸ್ಪರ್ಧೆ ಏರ್ಪಡಿಸಿವೆ.

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ಹೌದು, ಸದ್ಯ ಎಲೆಕ್ಟ್ರಿಕ್ ವಾಹನಗಳ ಖರೀದಿ ಬಯಸುವ ಬಹುತೇಕ ಗ್ರಾಹಕರು ಹೆಚ್ಚಿನ ಮಟ್ಟದ ಬ್ಯಾಟರಿ ಕಾರ್ಯಕ್ಷಮತೆ ನೀರಿಕ್ಷೆ ಮಾಡುವುದಲ್ಲದೆ ಕೈಗೆಟುಕುವ ಬೆಲೆಯಲ್ಲಿ ಖರೀದಿ ಲಭ್ಯವಿರುವ ಇವಿ ವಾಹನಗಳತ್ತ ಹೆಚ್ಚು ಗಮನಹರಿಸುತ್ತಿದ್ದು, ಈ ನಿಟ್ಟಿನಲ್ಲಿ ಸ್ಟಾರ್ಟ್-ಅಪ್ ಆಟೋ ಕಂಪನಿಗಳು ಭಾರೀ ಆಕರ್ಷಕಣೆ ಮಾಡುತ್ತಿವೆ.

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ಈ ನಿಟ್ಟಿನಲ್ಲಿ ಸ್ಟಾರ್ಟ್-ಅಪ್ ಆಟೋ ಉತ್ಪಾದನಾ ಕಂಪನಿಗಳನ್ನು ಉತ್ತೇಜಿಸಲು ಮುಂದಾಗಿರುವ ಹ್ಯುಂಡೈ, ಕಿಯಾ ಮತ್ತು ಎಲ್‌ಜಿ ಕೆಮೆಕಲ್ಸ್ ಕಂಪನಿಗಳು ಜಾಗತಿಕ ಸ್ಪರ್ಧೆಯ ಮೂಲಕ ಅತ್ಯುತ್ತಮ ಸ್ಟಾರ್ಟ್-ಅಪ್ ಕಂಪನಿಗಳನ್ನು ಆಯ್ದುಕೊಂಡು ಅವುಗಳಲ್ಲಿ ಹೂಡಿಕೆಗೆ ಸಿದ್ದತೆ ನಡೆಸಿವೆ.

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ಇದಕ್ಕಾಗಿ ನ್ಯೂ ಎನರ್ಜಿ ನೆಕ್ಸಸ್ ಸಂಸ್ಥೆಯೊಂದಿಗೆ ಜಾಗತಿಕ ಸ್ಪರ್ಧೆಗೆ ಕರೆ ನೀಡಿರುವ ಹ್ಯುಂಡೈ, ಕಿಯಾ ಮತ್ತು ಎಲ್‌ಜಿ ಕೆಮೆಕಲ್ಸ್ ಕಂಪನಿಗಳು ವಿವಿಧ ಹಂತದ ಕಾರ್ಯಗಾರಗಳ ಮೂಲಕ ಶ್ರೇಷ್ಠ ಬ್ಯಾಟರಿ ಉತ್ಪಾದನಾ ಸ್ಟಾರ್ಟ್-ಅಪ್ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳಲ್ಲಿ ಹೂಡಿಕೆ ಮಾಡಲಿದೆ.

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ಈ ಜಾಗತಿಕ ಸ್ಪರ್ಧೆಯಲ್ಲಿ ಸ್ಟಾರ್ಟ್-ಅಪ್ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಬ್ಯಾಟರಿ ಉತ್ಪಾದನಾ ಕಂಪನಿಗಳಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಆಸಕ್ತರು ಜೂನ್ 22 ರಿಂದ ಆಗಸ್ಟ್ 28 ರವರೆಗೆ www.evbatterychallenge.com ಮೂಲಕ ಅರ್ಜಿ ಸಲ್ಲಿಸಬಹುದು.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಅರ್ಜಿದಾರ ಆಲೋಚನೆ ಮತ್ತು ವ್ಯವಹಾರದ ಕಾರ್ಯಸಾಧ್ಯತೆಗಳನ್ನು ಮೌಲ್ಯಮಾಪನ ಮಾಡಲಿದ್ದು, ಅಕ್ಟೋಬರ್‌ನಲ್ಲಿ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಅರ್ಜಿದಾರರ ವರ್ಚುವಲ್ ಸಂದರ್ಶನ ನಡೆಸಲಿದೆ.

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹ್ಯುಂಡೈ ಸಿಲಿಕಾನ್ ವ್ಯಾಲಿ ಕಛೇರಿಯಲ್ಲಿ ಎರಡು ದಿನಗಳ ಕಾಲ ಕಾರ್ಯಗಾರ ನಡೆಸಲಿದ್ದು, ಕಾರ್ಯಗಾರದಲ್ಲಿ ಸ್ಟಾರ್ಟ್-ಅಪ್ ಕಂಪನಿಗಳ ನವೀನ ತಂತ್ರಜ್ಞಾನ ಮತ್ತು ಯೋಜನೆಯ ಕಾರ್ಯಸಾಧ್ಯತೆಯ ಕುರಿತಂತೆ ಅಂತಿಮ ಆಯ್ಕೆ ಮಾಡಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ತದನಂತರ ಆಯ್ಕೆಯಾದ ಸ್ಟಾರ್ಟ್-ಅಪ್ ಕಂಪನಿಗಳಲ್ಲಿ ಹ್ಯುಂಡೈ, ಕಿಯಾ ಮತ್ತು ಎಲ್‌ಜಿ ಕೆಮೆಕಲ್ಸ್ ಕಂಪನಿಗಳು ಹೂಡಿಕೆ ಮಾಡುವುದರೊಂದಿಗೆ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಅತ್ಯುತ್ತಮ ಬ್ಯಾಟರಿ ಮಾದರಿಗಳನ್ನು ಸಿದ್ದಪಡಿಸಲಿವೆ.

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ಹ್ಯುಂಡೈ ಸಮೂಹ ಸಂಸ್ಥೆಗಳ ಭಾಗವಾಗಿರುವ ಹ್ಯುಂಡೈ ಮೋಟಾರ್ಸ್ ಮತ್ತು ಕಿಯಾ ಮೋಟಾರ್ಸ್ ಕಂಪನಿಗಳು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ 2025ರ ವೇಳೆ ಒಟ್ಟು 44 ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ವಾಣಿಜ್ಯ ವಾಹನಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಇವಿ ಮತ್ತು ಬ್ಯಾಟರಿ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆಗೆ ನಡೆದಿದೆ ಜಾಗತಿಕ ಸ್ಪರ್ಧೆ

ಇನ್ನು ಎಲ್‌ಜಿ ಕೆಮೆಕಲ್ಸ್ ಕಂಪನಿಯು ಸಹ ಇವಿ ವಾಹನಗಳಿಗೆ ಬ್ಯಾಟರಿ ಸಂಪನ್ಮೂಲ ಪೂರೈಕೆ ಮಾಡುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿದ್ದು, ಜಾಗತಿಕ ಸ್ಪರ್ಧೆಯ ಮೂಲಕ ಹೊಸ ಮಾದರಿಯ ತಂತ್ರಜ್ಞಾನ ಅಭಿವೃದ್ದಿ ಪಡಿಸುವ ಹೊಸ ಕಂಪನಿಗಳ ಉತ್ತೇಜನಕ್ಕೆ ಮುಂದಾಗಿವೆ.

Most Read Articles

Kannada
English summary
Hyundai, Kia Motors & LG Chem Launch Global Competition To Invest In EV & Battery Start-Ups. Read in Kannada.
Story first published: Tuesday, June 23, 2020, 20:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X