ಗಡಿ ತಗಾದೆ: ಚೀನಿ ಆಟೋ ಕಂಪನಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷವು ತಾರಕ್ಕೇರಿದ್ದು, ದೇಶಾದ್ಯಂತ 'ಬಾಯ್ಕಟ್ ಚೀನಾ' ಅಭಿಯಾನವು ಜೋರಾಗುತ್ತಿದೆ. ಜೊತೆಗೆ ಚೀನಿ ಕಂಪನಿಗಳ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸಲಾಗುತ್ತಿದ್ದು, ಇದರ ನಡುವೆ ಕೇಂದ್ರ ಸರ್ಕಾರವು ಭಾರತದಲ್ಲಿ ಹೊಸದಾಗಿ ಉದ್ಯಮ ವ್ಯವಹಾರಕ್ಕೆ ಮುಂದಾಗಿದ್ದ ಕೆಲವು ಚೀನಿ ಕಂಪನಿಗಳ ಯೋಜನೆಗಳಿಗೆ ಬ್ರೇಕ್ ಹಾಕಿದೆ.

ಗಡಿ ತಗಾದೆ: ಚೀನಿ ಆಟೋ ಕಂಪನಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಹೌದು, ಚೀನಾ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಗ್ರೇಟ್ ವಾಲ್ ಮೋಟಾರ್ಸ್ ಸೇರಿದಂತೆ ವಿವಿಧ ತಾಂತ್ರಿಕ ಉತ್ಪಾದನಾ ಕಂಪನಿಗಳು ಭಾರತದಲ್ಲಿ ಹೊಸದಾಗಿ ಹೂಡಿಕೆಗೆ ಮುಂದಾಗಿದ್ದವು. ಆದರೆ ಗಡಿ ತಗಾದೆ ತೆಗೆದಿರುವ ಚೀನಾಕ್ಕೆ ಬುದ್ದಿಕಲಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಚೀನಿ ಕಂಪನಿಗಳಿಗೆ ಶಾಕ್ ಕೊಟ್ಟಿದೆ. ಹೊಸ ಹೂಡಿಕೆಗೆ ಮುಂದಾಗಿದ್ದ ಹಲವು ಚೀನಿ ಕಂಪನಿಗಳ ಹೂಡಿಕೆಗೆ ತಡೆ ಹಿಡಿಯಲಾಗಿದೆ.

ಗಡಿ ತಗಾದೆ: ಚೀನಿ ಆಟೋ ಕಂಪನಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಪುಣೆಯ ಬಳಿಯ ತೆಲಗಾಂವ್‌ನಲ್ಲಿ ಹೊಸ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡುವ ತವಕದಲ್ಲಿದ್ದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯ ಯೋಜನೆಗೆ ಬ್ರೇಕ್ ಹಾಕಲಾಗಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಒಟ್ಟು 12 ಪ್ರಮುಖ ಕಂಪನಿಗಳ ಹೂಡಿಕೆಯ ಒಪ್ಪಿಗೆಯನ್ನು ಹಿಂಪಡೆಯಲಾಗಿದೆ.

ಗಡಿ ತಗಾದೆ: ಚೀನಿ ಆಟೋ ಕಂಪನಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಗಡಿ ತಗಾದೆಗೂ ಮುನ್ನ ಹೂಡಿಕೆ ಒಪ್ಪಿಸಿದ್ದ ಮಾಹಾರಾಷ್ಟ್ರ ಸರ್ಕಾರವು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಹೊಸ ಕಂಪನಿಗಳ ಜೊತೆಗೆ ಈಗಾಗಲೇ ಕಾರ್ಯನಿರ್ವಹಣೆಯಲ್ಲಿದ್ದು ಉದ್ಯಮ ವಿಸ್ತರಣೆಯ ತವಕದಲ್ಲಿದ್ದ ಕಂಪನಿಗಳ ಹೂಡಿಕೆಗೂ ಬ್ರೇಕ್ ಹಾಕಲಾಗಿದೆ.

ಗಡಿ ತಗಾದೆ: ಚೀನಿ ಆಟೋ ಕಂಪನಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಮಾಹಿತಿಗಳ ಪ್ರಕಾರ, ಮಹಾರಾಷ್ಟ್ರ ಒಂದರಲ್ಲೇ ಸುಮಾರು ರೂ. 5 ಸಾವಿರ ಕೋಟಿ ಮೌಲ್ಯದ ಹೂಡಿಕೆಗೆ ಮುಂದಾಗಿದ್ದ ವಿವಿಧ ಚೀನಿ ಕಂಪನಿಗಳ ಯೋಜನೆಗಳಿಗೆ ಬ್ರೇಕ್ ಹಾಕಲಾಗಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಚೀನಿ ಕಂಪನಿಗಳ ಯೋಜನೆಗಳಿಗೆ ನೀಡಿರುವುದಾಗಿ ಮಾಹಾರಾಷ್ಟ್ರ ರಾಜ್ಯದ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಸ್ಪಷ್ಟಪಡಿಸಿದ್ದಾರೆ.

ಗಡಿ ತಗಾದೆ: ಚೀನಿ ಆಟೋ ಕಂಪನಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ತಡೆಹಿಡಿಯಲಾದ ಚೀನಿ ಕಂಪನಿಗಳ ಯೋಜನೆಗಳಲ್ಲಿ ಬಹುತೇಕ ಯೋಜನೆಗಳು ಆಟೋ ಕಂಪನಿಗಳಿಗೆ ಸಂಬಂಧಿಸಿದ ಯೋಜನೆಗಳಾಗಿದ್ದು, ಹೊಸದಾಗಿ ಕಾರು ಮಾರಾಟ ಆರಂಭಿಸುವ ತನಕದಲ್ಲಿದ್ದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಗಳಿಗೆ ಮೊದಲ ಹಂತದಲ್ಲೇ ದೊಡ್ಡಮಟ್ಟದ ಹಿನ್ನಡೆ ಉಂಟಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಗಡಿ ತಗಾದೆ: ಚೀನಿ ಆಟೋ ಕಂಪನಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಮೊದಲ ಹಂತದಲ್ಲಿ 1 ಬಿಲಿಯನ್ ಯುಎಸ್‌ಡಿ(ರೂ. 7 ಸಾವಿರ ಕೋಟಿ) ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಮಹಾರಾಷ್ಟ್ರದ ತಲೆಗಾಂವ್‌ನಲ್ಲಿ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲು ಸಿದ್ದವಾಗಿತ್ತು.

ಗಡಿ ತಗಾದೆ: ಚೀನಿ ಆಟೋ ಕಂಪನಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಇದರ ಜೊತಗೆ ನಮ್ಮ ಬೆಂಗಳೂರಿನಲ್ಲಿ ಆರ್‌ಡಿ(ಸಂಶೋಧನೆ ಮತ್ತು ಅಭಿವೃದ್ದಿ) ಕೇಂದ್ರವನ್ನು ತೆರೆಯಲು ಯೋಜನೆ ರೂಪಿಸಿದ್ದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಮೊದಲ ಹಂತದಲ್ಲೇ ಸ್ಥಳೀಯವಾಗಿ ಸುಮಾರು 3 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿಕೊಂಡಿತ್ತು.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಗಡಿ ತಗಾದೆ: ಚೀನಿ ಆಟೋ ಕಂಪನಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಆದರೆ ಗಡಿಯಲ್ಲಿ ತಗಾದೆ ತೆಗೆಯುವ ಮೂಲಕ ಪದೆ ಪದೆ ಅಶಾಂತಿ ಸೃಷ್ಠಿಸುತ್ತಿರುವ ಚೀನಿ ಸೇನೆಯು ಭಾರತದ ವ್ಯಾಪಾರ ಅಭಿವೃದ್ದಿಗೂ ಅಡ್ಡಿ ಉಂಟು ಮಾಡುತ್ತಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಭಾರತವು ಸಹ ಚೀನಿ ಕಂಪನಿಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

Most Read Articles

Kannada
English summary
GMW & Other Chinese Projects Worth Rs 5,000 Crore Put On Hold By Maharastra Government. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X