ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಮೊನ್ನೆಯಷ್ಟೇ ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಮರಾಜೋ ಆವೃತ್ತಿಯನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿ ಬಿಡುಗಡೆ ಮಾಡಿದ್ದು, ಬಿಡುಗಡೆ ಎರಡೇ ದಿನದಲ್ಲಿ ಹೊಸ ಕಾರು ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಎಂ2, ಎಂ4 ಪ್ಲಸ್ ಮತ್ತು ಎಂ6 ಪ್ಲಸ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರುವ ಮರಾಜೋ ಕಾರು ಖರೀದಿಯ ಮೇಲೆ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಮತ್ತು ಆಕರ್ಷಕ ಇಎಂಐ ಪಾವತಿ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಅಗಸ್ಟ್ ಅಂತ್ಯದ ತನಕ ಲಭ್ಯವಿರಲಿವೆ. ಹೊಸ ಕಾರು ಕೇವಲ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಬಿಎಸ್-6 ಎಮಿಷನ್ ನಂತರ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಬಿಎಸ್-4 ಮಾದರಿಗಿಂತ ಬಿಎಸ್-6 ಮರಾಜೋ ಕಾರು ಹೆಚ್ಚುವರಿಯಾಗಿ ರೂ. 1.26 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಇದೀಗ ನೀಡಲಾಗಿರುವ ಆಕರ್ಷಕ ಆಫರ್‌ಗಳು ಹೊಸ ಕಾರು ಖರೀದಿಯನ್ನು ಮತ್ತಷ್ಟು ಸುಲಭವಾಗಿಸಲಿವೆ.

ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಮಾಹಿತಿಗಳ ಪ್ರಕಾರ, ಮರಾಜೋ ಎಂ2 ಮಾದರಿಯ ಖರೀದಿ ಮೇಲೆ ರೂ.15 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡಲಾಗಿದ್ದು, ಕ್ಯಾಶ್ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದೆ.

ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಎಂ4 ಪ್ಲಸ್ ಮಾದರಿಯ ಮೇಲೂ ಗರಿಷ್ಠ ರೂ. 30 ಸಾವಿರ ತನಕ ಎಕ್ಸ್‌ಚೆಂಜ್ ಮತ್ತು ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಇಎಂಐ ಮರುಪಾವತಿ ದರಗಳು ಕೂಡಾ ಆಕರ್ಷಕವಾಗಿವೆ. ಗ್ರಾಹಕರ ಬೇಡಿಕೆಯೆಂತೆ ಗರಿಷ್ಠ ಮಟ್ಟದ ಸಾಲಸೌಲಭ್ಯಗಳನ್ನು ಸಹ ನೀಡಲಾಗುತ್ತಿದ್ದು, ಮರು ಪಾವತಿಗಳಿಗೆ ಗರಿಷ್ಠ ಕಾಲಾವಕಾಶವಿದೆ.

ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಇನ್ನು ಬಿಎಸ್-6 ಮರಾಜೋ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 11.25 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಎಸ್-6 ಎಂಜಿನ್ ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಹೊಸ ಎಮಿಷನ್‌ಗೆ ಅನುಗುಣವಾಗಿ ಬಿಎಸ್-4 ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದ ಮರಾಜೋ ಎಂ8 ವೆರಿಯೆಂಟ್ ಸ್ಥಗಿತಗೊಳಿಸಲಾಗಿದ್ದು, ಬಿಎಸ್-6 ಆವೃತ್ತಿಯಲ್ಲಿ ಇದೀಗ ಎಂ2, ಎಂ4 ಪ್ಲಸ್ ಮತ್ತು ಎಂ6 ಪ್ಲಸ್ ವೆರಿಯೆಂಟ್ ಮಾತ್ರವೇ ಖರೀದಿಗೆ ಲಭ್ಯವಿವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಮರಾಜೋ ಎಂ2 ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.25 ಲಕ್ಷ ಬೆಲೆ ಹೊಂದಿದ್ದರೆ, ಎಂ4 ಪ್ಲಸ್ ಮಾದರಿಯು ರೂ.12.37 ಲಕ್ಷ ಮತ್ತು ಎಂ6 ಪ್ಲಸ್ ಮಾದರಿಯು ರೂ. 13.51 ಲಕ್ಷದೊಂದಿಗೆ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಬಿಎಸ್-6 ಮರಾಜೋ ಕಾರು ಹೊಸ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಡೀಸೆಲ್ ಆಯ್ಕೆ ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 121-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಎಸ್-6 ಮರಾಜೋ ಕಾರಿನ ಮೇಲೂ ಡಿಸ್ಕೌಂಟ್ ಘೋಷಣೆ ಮಾಡಿದ ಮಹೀಂದ್ರಾ

ಬಿಎಸ್-6 ಎಮಿಷನ್ ನಂತರ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಹಲವು ಜನಪ್ರಿಯ ಡೀಸೆಲ್ ಕಾರುಗಳಲ್ಲಿ ಈ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ. ಹೀಗಾಗಿ ಮರಾಜೋ ಕಾರಿನಲ್ಲೂ ಕೂಡಾ ಪೆಟ್ರೋಲ್ ಮಾದರಿಯ ಬಿಡುಗಡೆಯ ನೀರಿಕ್ಷೆಯಿತ್ತು. ಆದರೆ ಸದ್ಯಕ್ಕೆ ಡೀಸೆಲ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಪೆಟ್ರೋಲ್ ಮಾದರಿಯು ಕೂಡಾ ರಸ್ತೆಗಿಳಿಯುವ ಸಾಧ್ಯತೆಗಳಿವೆ.

Most Read Articles

Kannada
English summary
Mahindra Marazzo BS6 Available With Cash Discount and Offers. Read in Kannada.
Story first published: Friday, August 28, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X