ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಮಹಾಮಾರಿ ಕೊರೊನಾ ವೈರಸ್‌ ಸೋಂಕು ಭಾರತ ಸೇರಿ ವಿಶ್ವವ್ಯಾಪಿ ಹರಡುತ್ತಲೇ ಇದೆ. ಮಹಾಮಾರಿ ಕೊರೋನಾದಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಆಟೋಮೊಬೈಲ್ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ದೊಡ್ಡ ಮಟ್ಟದ ಅರ್ಧಿಕ ನಷ್ಟ ಸಂಭವಿಸಿದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಇದರಿಂದಾಗಿ ಹಲವಾರು ವಾಹನ ಉತ್ಪಾದನಾ ಕಂಪನಿಗಳು ತಮ್ಮ ಸರಣಿಯಲ್ಲಿರುವ ಕಾರು ಬಿಡುಗಡೆಯನ್ನು ಮುಂದೂಡಲಾಗಿದೆ, ಇದೀಗ ಜನಪ್ರಿಯ ಮಹೀಂದ್ರಾ ಕಂಪನಿಯು ತನ್ನ ಬಿಎಸ್-6 ಟಿಯುವಿ300 ಫೇಸ್‌ಲಿಫ್ಟ್ ಕಾರಿನ ಬಿಡುಗಡೆಯನ್ನು ತಾತ್ಕಲಿಕವಾಗಿ ಮುಂದೂಡಿದೆ. ಮಹೀಂದ್ರಾ ಕಂಪನಿಯು ತನ್ನ ಹೊಸ ಟಿಯುವಿ300 ಎಸ್‍ಯುವಿಯನ್ನು ಭಾರತೀಯ ರಸ್ತೆಗಳಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

2020ರ ಮಹೀಂದ್ರಾ ಟಿಯುವಿ 300 ಎಸ್‍ಯುವಿಯೊಂದಿಗೆ ತನ್ನ ಸರಣಿಯಲ್ಲಿರುವ ಟಿಯುವಿ 300 ಎಸ್‍ಯುವಿಯ ಬಿಡುಗಡೆಯು ವಿಳಂಬವಾಗಲಿದೆ. ಈ ಎರಡು ಟಿಯುವಿ 300 ಎಸ್‍ಯುವಿಗಳು ಹಲವಾರು ಫೀಚರ್ ಗಳು ಒಂದೇ ರೀತಿಯಲ್ಲಿದೆ.

MOST READ: ಇನ್ನಷ್ಟು ತಡವಾಗಲಿದೆ ಹೊಸ ಮಹೀಂದ್ರಾ ಎಕ್ಸ್‌ಯುವಿ 500 ಆಟೋಮ್ಯಾಟಿಕ್ ಆವೃತ್ತಿಯ ಬಿಡುಗಡೆ

ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಈ ಎರಡು ಮಾದರಿಗಳು ಕಳೆದ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ಎಸ್‍ಯುವಿಗಳ ಬಿಡುಗಡೆಯು ಮತ್ತಷ್ಟು ತಡವಾಗಿದೆ. ಎರಡು ಎಸ್‍ಯುವಿಗಳ ಹೊರಭಾಗದಲ್ಲಿ ಸಣ್ಣ ಮಟ್ಟದ ಕಾಸ್ಮೆಟಿಕ್ ನವೀಕರಣಗಳನ್ನು ನಡೆಸಿ ಬಿಡುಗಡೆಗೊಳಿಸಬಹುದು.

ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಹೊಸ ಟಿಯುವಿ300 ಮತ್ತು ಟಿಯುವಿ300 ಪ್ಲಸ್ ಎಸ್‍ಯುವಿಗಳ ಮುಂಭಾಗ ಹೊಸ ಗ್ರಿಲ್ ಸ್ಲಿಮ್ಮರ್ ಸ್ಲ್ಯಾಟ್‌ಗಳು, ನವೀಕರಿಸಿದ ಬಂಪರ್ ವಿನ್ಯಾಸ, ಸ್ಪೋರ್ಟಿಯರ್ ಏರ್ ಡ್ಯಾಮ್, ಹೊಸ ಹೆಡ್‌ಲ್ಯಾಂಪ್‌ಗಳು ಮತ್ತು ಹಿಂಭಾಗ ಟೈಲ್ ಲ್ಯಾಂಪ್‌ಗಳು ಹೊಂದಿರಲಿವೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಹೊಸ ಟಿಯುವಿ300 ಎಸ್‍ಯುವಿಗಳ ಇಂಟಿರಿಯರ್ ನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಇನ್ಪೋಟೇನೆಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಇದರೊಂದಿಗೆ ಈ ಎಸ್‍ಯುವಿಗಳು ನೂತನ ಪೀಚರ್ ಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಮಹೀಂದ್ರಾ ಟಿಯುವಿ 300 ಎಸ್‍ಯುವಿಯು ಹಿಂದಿನ ಮಾದರಿಯ ಅದೇ 1.5-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಅಳವಡಿಸಲಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಎಂಜಿನ್ 98 ಬಿಹೆಚ್‌ಪಿ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪವರ್ ಮತ್ತು ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

MOST READ: ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್

ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಇನ್ನು ಟಿಯುವಿ 300 ಪ್ಲಸ್ ಎಸ್‍ಯುವಿಯು ಕೂಡ ಹಿಂದಿನ ಮಾದರಿಯಂತೆ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಎಂಜಿನ್ 138 ಬಿಹೆಚ್‌ಪಿ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಈ ಎರಡು ಎಸ್‍ಯುವಿಗಳು ಇದರ ಹಿಂದಿನ ಮಾದರಿಗಳಿಗಿಂತ ತುಸು ದುಬಾರಿಯಾಗಿರಲಿದೆ. ಹಿಂದಿನ ಬಿಎಸ್-4 ಟಿಯುವಿ 300 ಮಾದರಿಯ ಬೆಲೆಯು ರೂ.8.54 ಲಕ್ಷದಿಂದ ರೂ.10.55 ಲಕ್ಷಗಳಾದರೆ, ಹೊಸ ಟಿಯುವಿ 300 ಪ್ಲಸ್‌ ಎಸ್‍ಯುವಿಯ ಬೆಲೆಯು ರೂ.9.93 ಲಕ್ಷದಿಂದ ರೂ.11.42 ಲಕ್ಷಗಳಾಗಿದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಟಿಯುವಿ300 ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಹೊಸ ಟಿಯುವಿ 300 ಪ್ಲಸ್ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಲಾಕ್ ಡೌನ್ ಸಡಿಲಿಕೆ ಬಳಿಕ ಮಹೀಂದ್ರಾ ಕಂಪನಿಯು ತನ್ನ ಘಟಕದಲ್ಲಿ ಉತ್ಪಾದನೆಯನ್ನು ಪುನಾರಂಭಿಸಿದೆ.

Most Read Articles

Kannada
English summary
Mahindra TUV300 BS6 Facelift Launch Delayed Due To Covid-19 Pandemic. Read in Kannnada.
Story first published: Saturday, May 16, 2020, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X