2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಮಾರುತಿ ಬಲೆನೊ

2020-21ರ ಮೊದಲ ತ್ರೈಮಾಸಿಕ ಅವಧಿಯು ಕೊನೆಗೊಂಡಿದ್ದು, ಮೊದಲ ತ್ರೈಮಾಸಿಕ ಅವಧಿಯಲ್ಲಿ ಹೊಸ ವಾಹನಗಳ ಮಾರಾಟ ಕುರಿತಂತೆ ಲೆಕ್ಕಾಚಾರ ಶುರುವಾಗಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟ ವಿಭಾಗದಲ್ಲಿ ಸತತ ಮುಂಚೂಣಿ ಸಾಧಿಸುತ್ತಿರುವ ಮಾರುತಿ ಬಲೆನೊ ಆವೃತ್ತಿಯೇ ಇದೀಗ ಮತ್ತೊಮ್ಮೆ ಮುನ್ನಡೆ ಕಾಯ್ದುಕೊಂಡಿದೆ.

2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಮಾರುತಿ ಬಲೆನೊ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್‌ಟ್ರೊಜ್ ಮತ್ತು ಹ್ಯುಂಡೈ ಐ20 ಕಾರುಗಳ ನಡುವೆ ತೀವ್ರ ಪೈಪೋಟಿಯಿದ್ದು, 2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 18,304 ಯನಿಟ್ ಹ್ಯಾಚ್‌ಬ್ಯಾಕ್ ಕಾರುಗಳು ಮಾರಾಟಗೊಂಡಿವೆ. ಇದರಲ್ಲಿ ಬಲೆನೊ ಕಾರು ಮೊದಲ ಸ್ಥಾನದಲ್ಲಿ, ಎರಡನೇ ಸ್ಥಾನದಲ್ಲಿ ಟಾಟಾ ಆಲ್‌ಟ್ರೊಜ್ ಮತ್ತು ಮೂರನೇ ಸ್ಥಾನದಲ್ಲಿ ಹ್ಯುಂಡೈ ಐ20 ಕಾರು ಮಾದರಿಯಿದೆ.

2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಮಾರುತಿ ಬಲೆನೊ

2020-21ರ ಮೊದಲ ತ್ರೈಮಾಸಿಕ ಅವಧಿಯ ಮೊದಲ ತಿಂಗಳಿನಲ್ಲಿಯೇ ಕರೋನಾ ವೈರಸ್ ಪರಿಣಾಮ ವಿಧಿಸಲಾದ ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದ ನಷ್ಟ ಉಂಟಾಗಿದ್ದು, ಇದೀಗ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಕಾರು ಮಾರಾಟಕ್ಕೆ ಮರುಚಾಲನೆ ನೀಡಲಾಗಿದೆ.

2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಮಾರುತಿ ಬಲೆನೊ

ಮೊದಲ ತ್ರೈಮಾಸಿಕ ಅವಧಿಯಲ್ಲಿ ಮೇ ಮತ್ತು ಜೂನ್ ಅವಧಿಯೊಳಗೆ ಮಾತ್ರವೇ ವಾಹನ ಮಾರಾಟ ಪ್ರಕ್ರಿಯೆ ನಡೆದಿದ್ದು, ಕಾರು ಮಾರಾಟ ಕಂಪನಿಗಳು ಸಂಕಷ್ಟಕರ ಪರಿಸ್ಥಿತಿಯಲ್ಲೂ ವಿವಿಧ ಮಾದರಿಯ ಆಫರ್‌ಗಳ ಮೂಲಕ ಕಾರು ಮಾರಾಟವನ್ನು ಕೈಗೊಳ್ಳುತ್ತಿವೆ.

2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಮಾರುತಿ ಬಲೆನೊ

ಮಾರುತಿ ಸುಜುಕಿಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಲೆನೊ ಕಾರು 5,887 ಯುನಿಟ್ ಮಾರಾಟದೊಂದಿಗೆ ಮೊದಲ ಸ್ಥಾನದಲ್ಲಿದ್ದು, ಹ್ಯಾಚ್‌ಬ್ಯಾಕ್ ಶ್ರೇಣಿ ಕಾರು ಮಾರಾಟದಲ್ಲಿ ಶೇ.32ರಷ್ಟು ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ.

2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಮಾರುತಿ ಬಲೆನೊ

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಮಾರುತಿ ಬಲೆನೊ ನಂತರ ಟಾಟಾ ಆಲ್‌ಟ್ರೊಜ್ ಕಾರು ಎರಡನೇ ಸ್ಥಾನದಲ್ಲಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 4,483 ಯುನಿಟ್ ಮಾರಾಟದೊಂದಿಗೆ ಶೇ.24ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಮಾರುತಿ ಬಲೆನೊ

ಹ್ಯುಂಡೈ ಐ20 ಮಾದರಿಯು ಬಲೆನೊ ಮತ್ತು ಆಲ್‌ಟ್ರೊಜ್ ನಂತರ ಮೂರನೇ ಸ್ಥಾನದಲ್ಲಿದ್ದು, ಈ ಕಾರು ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 3,596 ಯುನಿಟ್ ಮಾರಾಟದೊಂದಿಗೆ ಶೇ.20ರಷ್ಟು ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ.

2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಮಾರುತಿ ಬಲೆನೊ

ಸದ್ಯ ಮಾರುಕಟ್ಟೆಯಲ್ಲಿನ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಬಲೆನೊ ಕಾರು ಪ್ರಾಬಲ್ಯ ಹೊಂದಿದ್ದರೂ ಇತ್ತೀಚೆಗೆ ಬಿಡುಗಡೆಯಾಗಿರುವ ಟಾಟಾ ಆಲ್‌ಟ್ರೊಜ್ ಅತಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವುದಲ್ಲದೆ ಹ್ಯುಂಡೈ ಐ20 ಮಾದರಿಗೂ ಪೈಪೋಟಿ ನೀಡುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

2020-21ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಮಾರುತಿ ಬಲೆನೊ

ಹ್ಯುಂಡೈ ಕಂಪನಿಯು ಸದ್ಯ ಐ20 ಮಾದರಿಯನ್ನು ನ್ಯೂ ಜನರೇಷನ್ ಮಾದರಿಯೊಂದಿಗೆ ಬಿಡುಗಡೆ ಮಾಡುತ್ತಿರುವುದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಮತ್ತಷ್ಟು ಸ್ಪರ್ಧೆ ಏರ್ಪಡಲಿದ್ದು, ಕರೋನಾ ವೈರಸ್ ಭೀತಿಯ ನಡುವೆಯೂ ಹೊಸ ಕಾರು ಮಾರಾಟವು ಚೇತರಿಕೆ ಕಾಣುತ್ತಿರುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಸಮಾಧಾನ ತಂದಿದೆ.

Most Read Articles

Kannada
English summary
Maruti Suzuki Baleno Leads Segment Sales In The First Quarter Of 2020-21. Read in Kannada.
Story first published: Thursday, July 23, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X