ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಇಗ್ನಿಸ್ ಫೇಸ್‍‍ಲಿಫ್ಟ್ ಕಾರ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಹೊಸ ಇಗ್ನಿಸ್ ಕಾರ್ ಅನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಈ ಹೊಸ ಕಾರಿನ ಮೊಟ್ಟ ಮೊದಲ ಜಾಹೀರಾತನ್ನು ಬಿಡುಗಡೆಗೊಳಿಸಿದೆ. ಈ ಜಾಹೀರಾತಿನಲ್ಲಿ ಮಾರುತಿ ಸುಜುಕಿ ಕಂಪನಿಯು ಈ ಕಾರ್ ಅನ್ನು ಹೊಸ ಅರ್ಬನ್ ಕಾಂಪ್ಯಾಕ್ಟ್ ಎಸ್‍ಯುವಿ ಎಂದು ಹೇಳಿದೆ.

ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಭಾರತದಲ್ಲಿ ಬಿಡುಗಡೆಗೊಳಿಸಲಾಗುವ ಇಗ್ನಿಸ್‍‍ನಲ್ಲಿ ಆಲ್ ಗ್ರಿಪ್ ಎ‍‍ಡಬ್ಲ್ಯುಡಿ ಸಿಸ್ಟಂ ಅನ್ನು ನೀಡಲಾಗುವುದಿಲ್ಲ. ಈ ಕಾರಿನಲ್ಲಿರುವ ವಿನ್ಯಾಸಗಳು ಹಾಗೂ ಲುಕ್ ಹೊಸ ಇಗ್ನಿಸ್ ಕಾರ್ ಅನ್ನು ಎಸ್‍‍ಯುವಿಯಂತೆ ಕಾಣುವಂತೆ ಮಾಡುತ್ತವೆ.

ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಹೊಸ ಇಗ್ನಿಸ್ ಕಾರಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳಿಂದಾಗಿ ಈ ಕಾರು ರಸ್ತೆಯಲ್ಲಿ ಚಲಿಸುವಾಗ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಫೇಸ್‍‍ಲಿಫ್ಟ್ ಇಗ್ನಿಸ್ ಕಾರಿನಲ್ಲಿ ಕಾಸ್ಮೆಟಿಕ್ ಅಪ್‍‍ಡೇಟ್‍‍ಗಳನ್ನು ಮಾಡಲಾಗಿದೆ.

ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಈ ಕಾಸ್ಮೆಟಿಕ್ ಅಪ್‍‍ಡೇಟ್‍‍ಗಳಲ್ಲಿ ವಿಟಾರ ಬ್ರಿಝಾದಲ್ಲಿರುವಂತಹ ಹೊಸ ಗ್ರಿಲ್ ಅಳವಡಿಸಲಾಗಿದೆ. ಹೊಸ ಕಾರಿಗೆ ಮಸ್ಕ್ಯುಲರ್ ಲುಕ್ ನೀಡಲು ಈ ಕಾರಿನಲ್ಲಿರುವ ಫಾಗ್ ಲ್ಯಾಂಪ್ ಹೌಸಿಂಗ್, ಬಂಪರ್ ಹಾಗೂ ಏರ್ ಡ್ಯಾಮ್‍‍‍ಗಳನ್ನು ಪರಿಷ್ಕರಿಸಲಾಗಿದೆ.

ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಹೊಸ ಮಾರುತಿ ಸುಜುಕಿ ಇಗ್ನಿಸ್ ಕಾರಿನಲ್ಲಿರುವ ಫ್ರೆಶ್ ಲುಕ್‍‍ನಿಂದಾಗಿ ಈ ಕಾರು ಇನ್ನೂ ಹಲವಾರು ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುವ ಸಾಧ್ಯತೆಗಳಿವೆ. ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಹೊಸ ಇಗ್ನಿಸ್ ಕಾರಿನಲ್ಲಿರುವ ಅಲಾಯ್ ವ್ಹೀಲ್‍‍‍ಗಳು ಕಾರಿನ ಸೈಡ್ ಪ್ರೊಫೈಲ್‍‍ಗೆ ಹೊಸ ಲುಕ್ ನೀಡುತ್ತವೆ.

ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಕಪ್ಪು ಬಣ್ಣವನ್ನು ಹೊಂದಿರುವ ಎ-ಪಿಲ್ಲರ್ ಹೊಸ ಕಾರಿಗೆ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಕಾರಿನ ಒಳಗೆ ಮಾರುಕಟ್ಟೆಯಲ್ಲಿರುವ ಇಗ್ನಿಸ್ ಹೊಂದಿರುವಂತಹ ಫೀಚರ್‍‍‍ಗಳನ್ನು ಮುಂದುವರೆಸಲಾಗಿದೆ. ಆದರೆ ಟಾಪ್ ಎಂಡ್ ಕಾರುಗಳಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ ಹೊಸ ಸ್ಮಾರ್ಟ್ ಪ್ಲೇ ಇನ್ಫೋಟೆನ್‍‍ಮೆಂಟ್ ಸಿಸ್ಟಂಗಳನ್ನು ನೀಡಲಾಗುವುದು.

ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಹೊಸ ಇಗ್ನಿಸ್ ಕಾರ್ ಅನ್ನು ಡ್ಯುಯಲ್ ಟೋನ್ ಬಣ್ಣದಲ್ಲಿ ಮಾರಾಟ ಮಾಡುವುದರ ಜೊತೆಗೆ, ಲುಸೆಂಟ್ ಆರೇಂಜ್ ಹಾಗೂ ಟಾರ್ಕಿಸ್ ಬ್ಲೂ ಎಂಬ ಎರಡು ಹೊಸ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಇದರ ಜೊತೆಗೆ ಕಸ್ಟಮೈಸ್ ಮಾಡಲಾದ ಐಕ್ರಿಯೇಟ್ ಆಯ್ಕೆಗಳನ್ನು ಸಹ ಹೊಸ ಇಗ್ನಿಸ್ ಕಾರಿನಲ್ಲಿ ನೀಡಲಾಗುವುದು.

ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಗ್ರಾಹಕರು ಕಾನ್ಫಿಗರೇಟರ್ ಅಥವಾ ಬಿಡಿಭಾಗಗಳೊಂದಿಗೆ ಈ ಕಾರು ಖರೀದಿಸುವ ಸಮಯದಲ್ಲಿ ಆನ್‍‍ಲೈನ್ ಮೂಲಕ ಕಸ್ಟಮೈಸ್ ಮಾಡಿಕೊಳ್ಳಬಹುದು. ಮಾರುತಿ ಸುಜುಕಿ ಕಂಪನಿಯು ಹೊಸ ಇಗ್ನಿಸ್ ಕಾರಿನಲ್ಲಿ 1.2 ಲೀಟರಿನ ನಾಲ್ಕು ಸಿಲಿಂಡರ್ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಿದೆ.

ಈ ಎಂಜಿನ್ 82 ಬಿ‍ಹೆಚ್‍‍ಪಿ ಪವರ್ ಹಾಗೂ 113 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅನ್ನು ಸ್ಟಾಂಡರ್ಡ್ ಆಗಿ ಹಾಗೂ 5 ಸ್ಪೀಡಿನ ಎ‍ಎಂಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಆಯ್ಕೆಯಾಗಿ ಹೊಂದಿರಲಿದೆ.

ಹೊರಬಂತು ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಮೊದಲ ವೀಡಿಯೊ

ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಈ ಕಾರಿನ ಬುಕ್ಕಿಂಗ್‍‍ಗಳನ್ನು ಆರಂಭಿಸಿದೆ. ಇವುಗಳ ವಿತರಣೆಯನ್ನು ಕಾರು ಬಿಡುಗಡೆಯಾದ ನಂತರ ಮಾಡಲಾಗುವುದು. ಬಿಡುಗಡೆಯಾದ ನಂತರ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೋ, ಹ್ಯುಂಡೈ ಗ್ರಾಂಡ್ ಐ 10 ನಿಯೋಸ್ ಹಾಗೂ ಫೋರ್ಡ್ ಫಿಗೊ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Maruti Suzuki Ignis Facelift first official TVC out. Read in Kannada.
Story first published: Monday, February 10, 2020, 15:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X